
ಬಾಲಿವುಡ್ 'ಕಿಂಗ್ ಖಾನ್' ಖ್ಯಾತಿಯ ನಟ ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಮಾತನಾಡುತ್ತ 'ಅಲ್ಲಾಹ್ ಹಾಗೂ ಇಸ್ಲಾಂ' ಬಗ್ಗೆ ಮಾತನಾಡಿದ್ದಾರೆ. 'ನಾನು ಇಸ್ಲಾಂನಲ್ಲಿ ನಂಬಿಕೆ ಹೊಂದಿದ್ದೇನೆ, ಏಕೆಂದರೆ ನಾನು ಇಸ್ಲಾಂ ಧರ್ಮ ಅನುಸರಿಸುವ ಕುಟುಂಬದಲ್ಲಿ ಹುಟ್ಟಿದ್ದೇನೆ. ನಾವು ಅರ್ಥ ಮಾಡಕೊಳ್ಳಲೇಬೇಕಾದ ಕೆಲವು ಕುರಾನ್‌ನ ವಾಕ್ಯಗಳನ್ನು ನಾನು ಹೇಳುತ್ತೇನೆ. 'ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು ಒಂದು ಮಾನವ ಜೀವವನ್ನು ರಕ್ಷಿಸಿದವನು ಎಲ್ಲ ಮಾನವಕುಲವನ್ನು ರಕ್ಷಿಸಿದಂತೆ' ಎಂಬ ಕುರಾನಿನ ಉಪದೇಶವನ್ನು ಉಲ್ಲೇಖಿಸಿದ್ದಾರೆ.
ಕುರಾನ್ ಅಲ್ಲಾಹನ ವತಿಯಿಂದ ಬಂದಿದೆ ಎಂಬುದನ್ನು ಜಗತ್ತು ನಂಬುತ್ತದೆ. ನೀವು ಕುರಾನ್ ನಂಬಿದ್ದರೆ, ನೀವು ಇಸ್ಲಾಂ ನಂಬಿದ್ದರೆ ಅಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ, 'ಯುದ್ಧ ಅಥವಾ ಯಾವುದೇ ಅನಿವಾರ್ಯ ಸಂದರ್ಭದಲ್ಲಿ ಕೂಡ ನೀವು ಮಹಿಳೆಯರನ್ನು, ಮಕ್ಕಳನ್ನು, ಪ್ರಾಣಿಗಳನ್ನು ಕೊಲ್ಲುವಂತಿಲ್ಲ ಹಾಗು ಬೆಳೆಗಳನ್ನು ನಾಶಪಡಿಸುವಂತಿಲ್ಲ. ಇದನ್ನು ಕುರಾನ್‌ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ದಯವಿಟ್ಟು ಯುವಜನರು ಅಲ್ಲಾಹನ ಕುರಾನ್‌ಅನ್ನು ಸರಿಯಾಗಿ ಓದಿಕೊಂಡು ಅದನ್ನೇ ಪ್ರಚಾರ ಮಾಡಬೇಕು ಎಂದು ನಾನು ವಿನಂತಿಸಿಕೊಳ್ಳುತ್ತೇನೆ' ಎಂದಿದ್ದಾರೆ ನಟ ಶಾರುಖ್ ಖಾನ್.
ರೌಡಿಸಂ ಕಥೆ ಹೇಳಲು ಹೊರಟ ಸಿಂಹ-ಪ್ರತಾಪ್ ಸಿಂಹ; ಸ್ಯಾಂಡಲ್‌ವುಡ್‌ನಲ್ಲಿ ಬರಲಿದೆ 'ಓಂ ಕಾಳಿ'
ಕಳೆದ ವರ್ಷದಿಂದೀಚೆ ಬಿಡುಗಡೆಯಾದ 'ಜವಾನ್, ಪಠಾಣ್ ಹಾಗೂ ಡಂಕಿ ಚಿತ್ರಗಳ ಮೂಲಕ ನಟ ಶಾರುಖ್ ಖಾನ್ ಮತ್ತೆ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಐದು ವರ್ಷಗಳ ಹಿಂದೆ ತೆರೆಗೆ ಬಂದಿದ್ದ 'ಜೀರೋ' ಚಿತ್ರದ ಸೋಲಿನಿಂದ ಕಂಗೆಟ್ಟು ನಟ ಶಾರುಖ್, ಸಿನಿಮಾ ನಟನೆಯನ್ನು ಕಡಿಮೆ ಮಾಡಿದ್ದರು. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದ ನಟ ಶಾರುಖ್ 'ಜೀರೋ' ಸೋಲಿನ ಬಳಿಕ ನಾನು ಸಿನಿಮಾರಂಗದಿಂದ ದೂರವಾಗಬೇಕು ಎಂದೇ ನಿರ್ಧರಿಸಿದ್ದೆ. ಆ ಸಮಯದಲ್ಲಿ ನಾನು ಅಕ್ಷರಶಃ ಸಿನಿಮಾ ಸಹವಾಸ ಬಿಟ್ಟು ಲೈಫ್‌ನ ಬೇರೆ ಬೇರೆ ಆಂಗಲ್ ಕಡೆ ದೃಷ್ಟಿ ಹಾಯಿಸಿದ್ದೆ.
ಸೆಟ್ಟೇರಿತು ಬುಚ್ಚಿಬಾಬು-ರಾಮ್ ಚರಣ್ ಜೋಡಿ ಸಿನಿಮಾ; ಬಲಗಾಲಿಟ್ಟು ಬಂದ್ರು ಜಾಹ್ನವಿ ಕಪೂರ್
ಕುಟುಂಬದ ಜತೆ ಕಾಲ ಕಳೆಯುವುದು, ಟೂರ್ ಏಂಜಾಯ್ ಮಾಡುವುದು, ನನ್ನ ರೆಡ್ ಚಿಲ್ಲೀಸ್ ಪ್ರೊಡಕ್ಷನ್ ಹೌಸ ನೋಡಿಕೊಳ್ಳುವುದು ಹಾಗೂ ಆಪ್ತರ ಜತೆ ಕಾಲ ಕಳೆಯುವುದು ನನ್ನ ದೈನಂದಿನ ಕೆಲಸವಾಗಿತ್ತು. ಸಿನಿಮಾ ಕಥೆಗಳನ್ನು ಕೇಳುತ್ತಿದ್ದೆನಾದರೂ ಯಾವುದಕ್ಕೂ 'ಓಕೆ' ಎಂದು ಸಹಿ ಹಾಕುತ್ತಿರಲಿಲ್ಲ. ನಾನು ಜೀರೋ ಬಳಿಕ ಸಿನಿಮಾ ಮಾಡಬೇಕು ಎಂದು ಅಂದುಕೊಂಡಿರಲೇ ಇಲ್ಲ' ಎಂದಿದ್ದಾರೆ ನಟ ಶಾರುಖ್ ಖಾನ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.