ನಾನು ಯಾರೊಂದಿಗೂ ಮಾತನಾಡಲೂ ಇಷ್ಟಪಡುತ್ತಿರಲಿಲ್ಲ. ಕಾರಣ ಅವರ ಮೇಲೆ ನನಗೆ ಕೋಪ ಅಥವಾ ಬೇಸರವಿತ್ತು ಎಂದೇನೂ ಅಲ್ಲ. ನಾನು ಹೇಳುವುದು ಅವರಿಗೆ ಅರ್ಥವಾಗುತ್ತಿರಲಿಲ್ಲ, ನನ್ನ ಸಮಸ್ಯೆ ಹಾಗೇ ಉಳಿಯುತ್ತಿತ್ತು ಹೊರತೂ ಪರಿಹಾರ ಆಗುತ್ತಿರಲಿಲ್ಲ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ತಮ್ಮ ಲೈಫ್‌ನಲ್ಲಿ ನಡೆದ ಹಳೆಯ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ. ಹಲವು ವರ್ಷಗಳ ಹಿಂದೆ ಅವರು 'ಡಿಪ್ರೆಶನ್' ಖಾಯಿಲೆಯಿಂದ ಬಳಲುತ್ತಿದ್ದರು. ಅದರಿಂದ ಚೇತರಿಸಿಕೊಂಡ ಬಳಿಕ ನಟಿ ದೀಪಿಕಾ ಆ ದಿನಗಳ (Depression)ಬಗ್ಗೆ ಮಾತನಾಡಿದ್ದಾರೆ. 'ನನಗೆ ಬೆಳಿಗ್ಗೆ ಏಳುವುದು ಇಷ್ಟವೇ ಆಗುತ್ತಿರಲಿಲ್ಲ. ಹಾಸಿಗೆಯಿಂದ ಎದ್ದರೆ ನಾನು ಮತ್ತೊಂದು ದಿನವನ್ನು ನೋವು-ದುಃಖದಿಂದ ಕಳೆಯಬೇಕಿತ್ತು. ಆ ಕಾರಣಕ್ಕೆ ನಾನು ಬೆಳಗಾಗಿದ್ದರೂ ಹಾಸಿಗೆಯಿಂದ ಎದ್ದೇಳುತ್ತಲೇ ಇರಲಿಲ್ಲ.
ನಾನು ಯಾರೊಂದಿಗೂ ಮಾತನಾಡಲೂ ಇಷ್ಟಪಡುತ್ತಿರಲಿಲ್ಲ. ಕಾರಣ ಅವರ ಮೇಲೆ ನನಗೆ ಕೋಪ ಅಥವಾ ಬೇಸರವಿತ್ತು ಎಂದೇನೂ ಅಲ್ಲ. ನಾನು ಹೇಳುವುದು ಅವರಿಗೆ ಅರ್ಥವಾಗುತ್ತಿರಲಿಲ್ಲ, ನನ್ನ ಸಮಸ್ಯೆ ಹಾಗೇ ಉಳಿಯುತ್ತಿತ್ತು ಹೊರತೂ ಪರಿಹಾರ ಆಗುತ್ತಿರಲಿಲ್ಲ. ಯಾರನ್ನೇ ನೋಡಿದರೂ ನಾನು ನೋಡದಂತೆ ಇರುತ್ತಿದ್ದೆ, ಯಾರಾದರೂ ಮಾತನಾಡಿದರೆ ಕೇಳಿಸಿಕೊಂಡಿಲ್ಲ ಎಂಬಂತೆ ನಾಟಕವಾಡುತ್ತಿದ್ದೆ. ಏಕೆಂದರೆ, ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ನನಗೆ ಬಲವಾಗಿ ಅನ್ನಿಸುತ್ತಿತ್ತು. ಇಡೀ ದಿನ ಕಣ್ಣೀರು ಹಾಕುವುದೇ ನನ್ನ ಕಾಯಕ ಆಗಿತ್ತು.
ಸೆಟ್ಟೇರಿತು ಬುಚ್ಚಿಬಾಬು-ರಾಮ್ ಚರಣ್ ಜೋಡಿ ಸಿನಿಮಾ; ಬಲಗಾಲಿಟ್ಟು ಬಂದ್ರು ಜಾಹ್ನವಿ ಕಪೂರ್
ನಿಜ ಹೇಳಬೇಕು ಎಂದರೆ ನಾನು ಮತ್ತೆ ಮೊದಲಿನಂತೆ ಬದುಕುತ್ತೇನೆ, ಮತ್ತೆ ಸಿನಿಮಾ ನಟನೆ ಮಾಡುತ್ತೇನೆ ಎಂದು ಆ ಸಮಯದಲ್ಲಿ ನಾನು ಅಂದುಕೊಂಡೇ ಇರಲಿಲ್ಲ. ನಾನು ಡಿಪ್ರೆಶನ್‌ಗೆ ಹೋಗಿದ್ದ ಆ ದಿನಗಳು ನನ್ನ ಜೀವನದಲ್ಲಿ ಹಾಗೇ ಇರುತ್ತವೆ, ಬದಲಾಗುವುದಿಲ್ಲ ಎಂದೇ ನಾನು ಭಾವಿಸಿದ್ದೆ. ಹಾಗಾಗಿಯೇ ನನಗೆ ಭವಿಷ್ಯ ಕತ್ತಲು ಎನಿಸುತ್ತಿತ್ತು. ಭವಿಷ್ಯ ಎನ್ನುವುದಕ್ಕಿಂತ 'ವರ್ತಮಾನ ಹಾಗು ಭವಿಷ್ಯ ಎರಡೂ ಒಂದೇ ಎನಿಸುತ್ತಿತ್ತು. ಮನೆಯವರು ಅದೆಷ್ಟೇ ಧೈರ್ಯ ಹೇಳಿದರೂ ಅದು ನನ್ನ ಕಿವಿ ದಾಟಿ ಮೆದುಳನ್ನು ತಲುಪುತ್ತಲೇ ಇರಲಿಲ್ಲ' ಎಂದಿದ್ದಾರೆ ನಟಿ ದೀಪಿಕಾ ಪಡುಕೋಣೆ.
ಡ್ಯಾಡಿಯೇ ಮಗಳನ್ನು 'ಮಂಕಿ' ಎಂದಿದ್ರು, ಆಕೆ ತುಂಬಾ ಕೋಪಗೊಂಡಿದ್ರು; ಏನಿದು ಪ್ರಿಯಾಂಕಾ ಚೋಪ್ರಾ ಕಥೆ?
ಸದ್ಯ ನಟಿ ದೀಪಿಕಾ ಬಾಲಿವುಡ್ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಮೊದಲಿನಂತೆ ಹೆಚ್ಚು ಸಿನಿಮಾಗಳನ್ನು ಮಾಡದೇ ತುಂಬಾ ಚೂಸಿಯಾಗಿದ್ದಾರೆ. ಇದೀಗ ದೀಪಿಕಾ ಪ್ರಗ್ನಂಟ್ ಎಂಬ ಸುದ್ದಿ ಸಹ ಬಂದಿದೆ. ಆ ಸುದ್ದಿ ನಿಜವೇ ಆಗಿದ್ದರೆ, ಇನ್ನು ಅವರು ಸದ್ಯ ಸಿನಿಮಾ ಶೂಟಿಂಗ್ ಮಾಡುವುದು ಕಷ್ಟವೇ ಆಗುತ್ತದೆ. ಒಟ್ಟಿನಲ್ಲಿ, ನಟಿ ದೀಪಿಕಾ ಪಡುಕೋಣೆ ಅವರ ಹಳೆಯ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಈಗ ವೈರಲ್ ಆಗುತ್ತಿದೆ.
ಸೈನ್ಸ್ ಬಿಟ್ಟು ಆರ್ಟ್ಸ್ ಓದಿದ್ಯಾಕೆ ಖ್ಯಾತ ಗಾಯಕ; ಮುಖ್ಯವಾದ ಘಟನೆ ಹಂಚಿಕೊಂಡ್ರು ಅರಿಜಿತ್ ಸಿಂಗ್!