ಉಪೇಂದ್ರರ A ಸಿನಿಮಾ ರೀಮೇಕ್‌ಗೆ ನಿರ್ಧರಿಸಿದ್ರು ಶಾರುಖ್‌ ಖಾನ್, ಯಾಕೆ ಮಾಡ್ಲಿಲ್ಲ?

Published : May 20, 2024, 07:32 PM ISTUpdated : May 20, 2024, 07:36 PM IST
ಉಪೇಂದ್ರರ A ಸಿನಿಮಾ ರೀಮೇಕ್‌ಗೆ ನಿರ್ಧರಿಸಿದ್ರು ಶಾರುಖ್‌ ಖಾನ್, ಯಾಕೆ ಮಾಡ್ಲಿಲ್ಲ?

ಸಾರಾಂಶ

ನಟ ಶಾರುಖ್ ಖಾನ್ 'A' ಚಿತ್ರದಿಂದ ಅದೆಷ್ಟು ಇಂಪ್ರೆಸ್ ಆಗಿದ್ದರು ಎಂದರೆ ಈ ಚಿತ್ರವನ್ನು ರೀಮೇಕ್ ಮಾಡಲು ನಿರ್ಧರಿಸಿದ್ದರು. ಆದರೆ, ರೀಮೇಕ್ ಮಾಡಲು ಯಾಕೆ ಸಾಧ್ಯವಾಗಲಿಲ್ಲ ಎಂಬುದಕ್ಕೆ ಹಲವಾರು ಕಾರಣಗಳಿವೆ. 

ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆ-ನಿರ್ದೇಶನದ 'A'ಸಿನಿಮಾ ಮತ್ತೆ ರಿಲೀಸ್ ಆಗಿದ್ದು ಗೊತ್ತೇ ಇದೆ. 25 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಎ ಸಿನಿಮಾ ಅಮದು ಬ್ಲಾಕ್ ಬಸ್ಟರ್ ಹಿಟ್ ಎನಿಸಿತ್ತು. ಈಗ ರೀರಿಲೀಸ್ ಕಂಡಿರುವ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಸಿನಿಮಾದಲ್ಲಿ ನಟ ಉಪೇಂದ್ರ ಮೊಟ್ಟಮೊದಲ ಬಾರಿಗೆ ತೆರೆ ಮೇಲೆ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿಯವರೆಗೂ ನಿರ್ದೇಶಕರಾಗಿದ್ದ ಉಪೇಂದ್ರ ಅವರನ್ನು A ಚಿತ್ರದ ಮೂಲಕ ಕನ್ನಡ ಸಿನಿಪ್ರೇಕ್ಷಕರು ಹೀರೋ ಪಟ್ಟಕ್ಕೆ ಏರಿಸಿದ್ದಾರೆ. 

ಅಂದು, 1998ರಲ್ಲಿ (12 February 1998) ರಂದು ಬಿಡುಗಡೆ ಕಂಡಿದ್ದ ಉಪೇಂದ್ರ ನಟನೆ-ನಿರ್ದೇಶನದ ಎ ಚಿತ್ರವನ್ನು ಮೆಚ್ಚಿ ಇಡೀ ಭಾರತದಿಂದ ಬಹಳಷ್ಟು ಕಾಲ್ ಹಾಗೂ ಸಂದೇಶಗಳು ಬಂದಿದ್ದವು. ಅಂದು ಬಾಲಿವುಡ್ ಚಿತ್ರರಂಗ ತುಂಬಾ ಉತ್ತುಂಗದಲ್ಲಿತ್ತು. ಉಪೇಂದ್ರರ ಈ ಸಿನಿಮಾ ನೋಡಿ ಹಲವು ಬಾಲಿವುಡ್ ನಟನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರು ಬಹಳವಾಗಿ ಮೆಚ್ಚಿಕೊಂಡಿದ್ದರು. ಮುಖ್ಯವಾಗಿ ನಟ ಶಾರುಖ್ ಖಾನ್ (Shah Rukh Khan) ಈ 'A' ಚಿತ್ರದಿಂದ ಅದೆಷ್ಟು ಇಂಪ್ರೆಸ್ ಆಗಿದ್ದರು ಎಂದರೆ ಈ ಚಿತ್ರವನ್ನು ರೀಮೇಕ್ ಮಾಡಲು ನಿರ್ಧರಿಸಿದ್ದರು. 

ಪೋರ್ನ್‌ ಸ್ಟಾರ್ ಖ್ಯಾತಿಗೂ ಮೊದಲು ಸನ್ನಿ ಲಿಯೋನ್ ಏನ್ಮಾಡ್ತಿದ್ರು..?

ಶಾರುಖ್ ಖಾನ್ ಈ ಚಿತ್ರವನ್ನು ರೀಮೇಕ್ ಮಾಡಲು ಯಾಕೆ ಸಾಧ್ಯವಾಗಲಿಲ್ಲ ಎಂಬುದಕ್ಕೆ ಹಲವಾರು ಕಾರಣಗಳಿವೆ. ಈ ಚಿತ್ರದ ರೀಮೇಕ್ ಹಕ್ಕು ಸಿಗಬೇಕಲ್ಲ? ಸಿಕ್ಕರೂ ಕೂಡ ಅದನ್ನು ಬಾಲಿವುಡ್‌ನಲ್ಲಿ ಮಾಡುವಾಗ ಬಹಳಷ್ಟು ಬಜೆಟ್ ಸುರಿಯಲೇಬೇಕಲ್ಲ. ಜತೆಗೆ ಕೇಳಿಬಂದ ಇನ್ನೊಂದು ಮುಖ್ಯವಾದ ಕಾರಣ ಎಂದರೆ, ನಟ ಶಾರುಖ್ ಖಾನ್ ಡೇಟ್ಸ್ ಸಮಸ್ಯೆ. ಈ ಎಲ್ಲ ಕಾರಣಗಳೂ ಸೇರಿ, ಉಪೇಂದ್ರ ನಟನೆ-ನಿರ್ದೇಶನದ ಎ ಚಿತ್ರವು ಬಾಲಿವುಡ್‌ನಲ್ಲಿ ರೀಮೇಕ್ ಆಗಿ ಬರಲಿಲ್ಲ. 

ಮದುವೆಯಾಗಿದ್ದು ಬಿಟ್ಟಿರಲು ಅಲ್ಲ, ನಿಕ್ ಜತೆಗಿರದೇ ರಾತ್ರಿ ಕಳೆಯಲಾರೆ; ಪ್ರಿಯಾಂಕಾ ಚೋಪ್ರಾ

ಎ ಚಿತ್ರದ ರೀರಿಲೀಸ್ ವೇಳೆ ಸಂದರ್ಶನವೊಂದರಲ್ಲಿ ಮಾತನಾಡುತ್ತ, ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಉಪೇಂದ್ರ 'A ಸಿನಿಮಾ ಬಿಡುಗಡೆಯಾದ ಮರುದಿನವೇ ನಡೆದ ಈ ಒಂದು ಘಟನೆ ನನಗೆ ಈಗಲೂ ಜ್ಞಾಪಕದಲ್ಲಿದೆ. ಅಂದು ನಟ ಸುದೀಪ್ ನನ್ನ ಮುಂದೆ ಬಂದು ನನಗೆ ನಿಮ್ಮ ಜತೆ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಲು ಒಂದು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು. ನೀವು ಆರು ಅಡಿ ಇದ್ದೀರಾ, ನೋಡೋದಕ್ಕೆ ಚೆನ್ನಾಗಿಯೂ ಇದ್ದೀರಾ, ಹೀರೋ ಆಗಿ' ಎಂದಿದ್ದೆ. ಕನ್ನಡದ ಹಾಗೂ ಬೇರೆ ಬೇರೆ ನಟನಟಿಯರು ಅವಕಾಶ ಕೇಳಿಕೊಂಡು ಬಂದಿದ್ದರು. ಹಾಗೇ ಬೇರೆ ಭಾಷೆಯ ನಿರ್ದೇಶಕರು ಸಹ  ಮೆಚ್ಚಿ ಮಾತನಾಡಿದ್ದರು. 

ಅಸಿಸ್ಟಂಟ್ ಡೈರೆಕ್ಟರ್ ಕೆಲಸ ಕೇಳ್ಕೊಂಡು ಬಂದಿದ್ರು ಕಿಚ್ಚ ಸುದೀಪ್‌; ರಿಜೆಕ್ಟ್ ಮಾಡದ್ಯಾಕೆ ಉಪೇಂದ್ರ?

ನಟ-ನಿರ್ದೇಶಕ ಉಪೇಂದ್ರ ಮಾತನಾಡುತ್ತ 'ಈ ಚಿತ್ರವನ್ನು ನಾನು ಕೇವಲ ಚಿತ್ರಕತೆಯಲ್ಲಿ ಆಟವಾಡಿದ್ದೇನೆ ಎನ್ನಬಹುದು. ನಿಜವಾಗಿಯೂ ಹೇಳಬೇಕೆಂದರೆ, ಅಂದು ನನ್ನ ಈ ಎ ಸಿನಿಮಾವನ್ನು ನೋಡಿದ ಹಲವರು ನಿಮ್ಮ ಸಿನಿಮಾ ನೋಡಿ ನಮಗೆ ನಟನಾಗಬೇಕು, ನಿರ್ದೇಶಕನಾಗಬೇಕು ಎನಿಸಿದೆ ಅಂದಿದ್ದರು. ಅದು ನನಗೆ ಸಿಕ್ಕ ದೊಡ್ಡ ಬಹುಮಾನ ಎನ್ನಬಹುದು. ಜೊತೆಗೆ, ಕನ್ನಡ ಸಿನಿಪ್ರೇಮಿಗಳು ಈ ಸಿನಿಮಾ ಮೂಲಕ ನನ್ನ ನಟನೆಯನ್ನೂ ಒಪ್ಪಿಕೊಂಡು ಹರಸಿರುವುದು ಇಂದಿಗೂ ನಾನು ನಟನಾಗಿ ಸಿನಿರಂಗದಲ್ಲಿ ಇರಲು ಸಹಾಯ ಮಾಡಿದೆ. 

ತೆಲುಗು ಸೀರಿಯಲ್‌ನಲ್ಲಿ ಕನ್ನಡಿಗ ಸಿದ್ದಾರ್ಥ್ ಮಿಂಚು; ಮನೆಮಾತಾದ ಹ್ಯಾಂಡ್‌ಸಮ್ ಬಾಯ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?