ಸನ್ನಿ ಲಿಯೋನ್ ಬಾಲ್ಯದಲ್ಲಿ ಬಹಳಷ್ಟು ಧೈರ್ಯಶಾಲಿ ಹುಡುಗಿಯಾಗಿದ್ದರು. ಮನೆಯಲ್ಲಿ ಬಡತನ ಇದ್ದಿತ್ತಾದ್ದರಿಂದ ಶ್ರೀಮಂತೆಯಾಗಬೇಕು ಎಂದು ತಮ್ಮ ಬಾಲ್ಯದ ದಿನಗಳಲ್ಲೇ ಸನ್ನಿ ಲಿಯೋನ್ ಕನಸು ಕಂಡಿದ್ದರು.
ನೀಲಿ ಚಿತ್ರತಾರೆ ಸನ್ನಿ ಲಿಯೋನ್ (Sunny Leone) ಜಗತ್ತಿನ ಬಹುತೇಕ ಎಲ್ಲರಿಗೂ ಗೊತ್ತು. ತಮ್ಮ ಮಾದಕ ಮೈಮಾಟದ ಮೂಲಕ ಹದಿಹರೆಯದ ಹುಡುಗರ ಮೈಚಳಿಗೆ ಕಾವು ಕೊಡುವ ಈ ನಟಿ, ತಮ್ಮ ಒಂದೇ ಒಂದು ಫೋಟೋದಿಂದ ಎಂಥವರ ನಿದ್ದೆಯನ್ನೂ ಕೆಡಿಸಬಲ್ಲರು. ಇಂಥ ನಟಿ ಸನ್ನಿ ಲಿಯೋನ್ ಇಂದು ಜಗತ್ತಿನಾದ್ಯಂತ ಖ್ಯಾತರಾಗಿರುವುದು ಎಲ್ಲರಿಗೂ ಗೊತ್ತು. ಈಗಂತೂ ಗಂಡ-ಫ್ಯಾಮಿಲಿ-ದತ್ತು ಮಕ್ಕಳು ಹಾಗೂ ಸಮಾಜ ಸೇವೆಗಳ ಮೂಲಕ ನಟಿ ಸನ್ನಿ ಲಿಯೋನ್ ಸಾಕಷ್ಟು ಸದ್ದು ಮಾಡುತ್ತಲೇ ಇರುತ್ತಾರೆ.
ಮಾದಕ ನಟಿ ಸನ್ನಿ ಲಿಯೋನ್ ಬಾಲ್ಯ ಹೇಗಿತ್ತು? ಶಿಕ್ಷಣವನ್ನು ಎಲ್ಲಿ ಪಡೆದರು. ಎಲ್ಲಿ ಕೆಲಸ ಮಾಡಿದ್ದರು ಎಂಬಿತ್ಯಾದಿ ವವರಗಳು ಇದೀಗ ಬಹಿರಂಗವಾಗಿವೆ. ಹಾಗಿದ್ದರೆ ಓವರ್ ಟು ಸನ್ನಿ ಲಿಯೋನ್ ಎನ್ನಬಹುದು. ಹೌದು ನಟಿ ಸನ್ನಿ ಲಿಯೋನ್ ಕೆನಡಾದಲ್ಲಿ ಹುಟ್ಟಿ ಬೆಳೆದವರು. ಅಮೆರಿಕಾ ಹಾಗೂ ಕೆನಡಾದ ಪೌರತ್ವ ಪಡೆದಿರುವ ನಟಿ ಸನ್ನಿ ಲಿಯೋನ್ ಹುಟ್ಟಿನ ನಂಟು ಭಾರತದಲ್ಲೂ ಇದೆ. ಕಾರಣ, ಪಂಜಾಬ್ ಸಿಖ್ ಕುಟುಂಬದ ತಾಯಿ ಹಾಗೂ ಕೆನಡಾದ ತಂದೆಗೆ ಜನಿಸಿದ ಮಗಳು ಸನ್ನಿ ಲಿಯೋನ್.
ಮದುವೆಯಾಗಿದ್ದು ಬಿಟ್ಟಿರಲು ಅಲ್ಲ, ನಿಕ್ ಜತೆಗಿರದೇ ರಾತ್ರಿ ಕಳೆಯಲಾರೆ; ಪ್ರಿಯಾಂಕಾ ಚೋಪ್ರಾ
ಸನ್ನಿ ಲಿಯೋನ್ ಬಾಲ್ಯದಲ್ಲಿ ಬಹಳಷ್ಟು ಧೈರ್ಯಶಾಲಿ ಹುಡುಗಿಯಾಗಿದ್ದರು. ಮನೆಯಲ್ಲಿ ಬಡತನ ಇದ್ದಿತ್ತಾದ್ದರಿಂದ ಶ್ರೀಮಂತೆಯಾಗಬೇಕು ಎಂದು ತಮ್ಮ ಬಾಲ್ಯದ ದಿನಗಳಲ್ಲೇ ಸನ್ನಿ ಲಿಯೋನ್ ಕನಸು ಕಂಡಿದ್ದರು. ಹೀಗಾಗಿ ಶಿಕ್ಷಣ ಪಡೆಯುತ್ತಿದ್ದಾಗಲೇ ಬೇಕರಿಯಲ್ಲಿ ಹಾಗೂ ಪೆಟ್ರೋಲ್ ಬಂಕ್‌ಗಳಲ್ಲಿ ಕೆಲಸ ಮಾಡಿದ್ದರು ಸನ್ನಿ ಲಿಯೋನ್. ಕೆನಡಾದಲ್ಲಿ ನೆಲೆಸಿದ್ದ ಸನ್ನಿ ಕುಟುಂಬ ಅಷ್ಟೇನೂ ಶ್ರೀಮಂತ ಆಗಿರಲಿಲ್ಲ. ಹೀಗಾಗಿ ಪದೇ ಪದೇ ಕೆಲಸ ಬದಲಾಯಿಸುತ್ತ ಪೆನ್ಸಿಲ್ ತಯಾರಿಕೆ ಕಂಪನಿಯಲ್ಲಿ ಕೂಡ ಕೆಲಸ ಮಾಡಿದ್ದರಂತೆ.
ಅಸಿಸ್ಟಂಟ್ ಡೈರೆಕ್ಟರ್ ಕೆಲಸ ಕೇಳ್ಕೊಂಡು ಬಂದಿದ್ರು ಕಿಚ್ಚ ಸುದೀಪ್; ರಿಜೆಕ್ಟ್ ಮಾಡದ್ಯಾಕೆ ಉಪೇಂದ್ರ?
ಬಳಿಕ, ಗೆಳತಿಯ ಸಹಾಯದಿಂದ ಖ್ಯಾತ 'ಪೆಂಟೋಸ್ ಮ್ಯಾಗಝೀನ್'ಗೆ ಕವರ್ ಪೇಜ್ ಫೋಟೋಗೆ ಪೋಸ್ ಕೊಟ್ಟರು. ನಂತರ, ತೀರಾ ಗ್ಲಾಮರಸ್ ಹಾಗು ಅರೆನಗ್ನ ಫೋಟೋಗಳ ಮೂಲಕ ಸಾಕಷ್ಟು ಜನಪ್ರಿಯರಾದರು. ತಮ್ಮ ವಿಶಿಷ್ಠ ಮಾದಕ ಎನಿಸುವ ಮೈಮಾಟದ ಮೂಲಕ ಅವರು ಗ್ಲಾಮರಸ್ ಜಗತ್ತಿಗೆ ಕಾಲಿಟ್ಟರು. ಆದರೂ ಕೂಡ ಸಕ್ಸಸ್ ಅಂದುಕೊಂಡಷ್ಟು ಸಿಗಲಿಲ್ಲ.
ತೆಲುಗು ಸೀರಿಯಲ್‌ನಲ್ಲಿ ಕನ್ನಡಿಗ ಸಿದ್ದಾರ್ಥ್ ಮಿಂಚು; ಮನೆಮಾತಾದ ಹ್ಯಾಂಡ್‌ಸಮ್ ಬಾಯ್!
ಬಳಿಕ ಸನ್ನಿ ಲಿಯೋನ್ ಪೋರ್ನ್ ಜಗತ್ತಿಗೆ ಎಂಟ್ರಿ ಕೊಟ್ಟು ರಾತ್ರೋರಾತ್ರಿ ಭಾರೀ ಫೇಮಸ್ ಆಗಿಬಿಟ್ಟರು. ಅಲ್ಲಿಂದ ಮುಂದೆ ಸನ್ನಿ ಲಿಯೋನ್ ತಿರುಗಿ ನೋಡಲಿಲ್ಲ. ಆದರೆ, ಪ್ರತಿಯೊಂದರಿಂದ ಪಾಠ ಕಲಿತು ಲೈಫ್‌ನಲ್ಲಿ ಬೇರೆಯದೇ ಇಮೇಜ್ ಪಡೆದುಕೊಂಡು ಮತ್ತೆ ಗೌರವ ಗಳಿಸಿಕೊಂಡರು ನಟಿ ಸನ್ನಿ ಲಿಯೋನ್!