ಕಷ್ಟದ ಸಮಯದಲ್ಲಿ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಮಾಡಿದ್ದ ಸಹಾಯ ನೆನೆದು ಸಲ್ಮಾನ್ ಕಣ್ಣೀರಾಗಿದ್ದಾರೆ. ಈ ಘಟನೆ ಇತ್ತೀಚಿಗಷ್ಟೆ ನಡೆದ IIFA 2022 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದಿದೆ.
ಬಾಲಿವುಡ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್(Salman Khan) ಇಂದು ದೊಡ್ಡ ನಟನಾಗಿ ಗುರುತಿಸಿಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಬಿಮಾನಿ ಬಳಗ ಸಂಪಾದಿಸಿದ್ದಾರೆ. ದೇಶ ವಿದೇಶಗಗಳಲ್ಲಿ ಸಲ್ಮಾನ್ ಖಾನ್ ಇಷ್ಟ ಪಡುವ, ಆರಾಧಿಸುವ ಅಭಿಮಾನಿಗಳಿದ್ದಾರೆ. ಇಂದು ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟರ ಲಿಸ್ಟ್ ನಲ್ಲಿ ಸಲ್ಮಾನ್ ಹೆಸರು ಕೂಡ ಇದೆ. ಇಂದು ಸುಖದ ಸುಪತ್ತಿಗೆಯ ಮೇಲಿರುವ ಸಲ್ಮಾನ್ ವೃತ್ತಿ ಜೀವನದ ಪ್ರಾರಂಭದಲ್ಲಿ ತೀರ ಕಷ್ಟ ಅನುಭವಿಸಿದ್ದರು. ಕಷ್ಟದ ಸಮಯದಲ್ಲಿ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಮಾಡಿದ್ದ ಸಹಾಯ ನೆನೆದು ಸಲ್ಮಾನ್ ಕಣ್ಣೀರಾಗಿದ್ದಾರೆ. ಈ ಘಟನೆ ಇತ್ತೀಚಿಗಷ್ಟೆ ನಡೆದ IIFA 2022 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದಿದೆ.
ಜೂನ್ 3 ಮತ್ತು 4ರಂದು IIFA 2022 ಸಮಾರಂಭ ಅದ್ದೂರಿಯಾಗಿ ನೆರವೇರಿತು. 22ನೇ IIFA ಪ್ರಶಸ್ತಿ ಸಮಾರಂಭ ಅಬುಧಾಬಿಯಲ್ಲಿ ನೆರವೇರಿತು. ಈ ಸಮಾರಂಭವನ್ನು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೋಸ್ಟ್ ಮಾಡಿದ್ದರು. ಆ ಸಮಾರಂಭದಲ್ಲಿ ಸಲ್ಮಾನ್ ಖಾನ್ ಹಳೆಯ ದಿನಗಳನ್ನು ಮೆಲುಕು ಹಾಕಿದ್ದರು. ಸಲ್ಮಾನ್ ಖಾನ್ ಕಷ್ಟದ ದಿನಗಳನ್ನು ನೆನೆದು ಭಾವಿಕರಾದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಷ್ಟದ ಸಮಯದಲ್ಲಿ ಅನೇಕ ಸ್ಟಾರ್ ಸಹಾಯ ಮಾಡಿದ್ದರು ಎಂದು ಬಹಿರಂಗ ಪಡಿಸಿದರು. ಮೈ ನೇ ಪ್ಯಾರ್ ಕಿಯಾ ಸಿನಿಮಾ ಬಳಿಕ ಕೆಲಸವಿಲ್ಲದೆ ಜೀವನ ತುಂಬಾ ಕಷ್ಟವಾಗಿತ್ತು ಎಂದು ಸಲ್ಮಾನ್ ಹೇಳಿದರು. ಟಿ ಶರ್ಟ್ ತೆಗೆದುಕೊಳ್ಳುವಷ್ಟು ಹಣ ಕೂಡ ಇರಲಿಲ್ಲ ಎನ್ನುವುದನ್ನು ಬಹಿರಂಗ ಬಡಿಸಿದರು. ಬಟ್ಟೆ ತೆಗೆದುಕೊಳ್ಳಲು ಶಾಪ್‌ಗೆ ಹೋದಾಗ ಪ್ಯಾಂಟ್ ತೆಗೆದುಕೊಂಡ ಸಲ್ಮಾನ್ ಖಾನ್ ಟಿ ಶರ್ಟ್‌ಗೆ ಹಣವಿಲ್ಲದೆ ಹಾಗೆ ವಾಪಾಸ್ ಆಗುತ್ತಿದ್ದರು. ಅದೇ ಶಾಪ್‌ನಲ್ಲಿದ್ದ ಸುನಿಲ್ ಶೆಟ್ಟಿ ಅದನ್ನು ಗಮನಿಸಿ ಟಿ ಶರ್ಟ್ ಗಿಫ್ಟ್ ಮಾಡಿದ್ದರು ಎಂದು ಹೇಳಿದ್ದರು.
Threat letter ಸಿಧು ಮೂಸೆವಾಲ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಹಾಗೂ ತಂದೆಗೆ ಬೆದರಿಕೆ ಪತ್ರ!
ಈ ಘಟನೆ ನೆನಪು ಮಾಡಿಕೊಳ್ಳುತ್ತಾ ಸಲ್ಮಾನ್ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಸುನಿಲ್ ಶೆಟ್ಟಿ ಪುತ್ರ ಅಹನ್ ಶೆಟ್ಟಿ ಬಳಿ ತೆರಳಿದರು. ಸಲ್ಮಾನ್ ಖಾನ್ ಈ ಘಟನೆ ವಿವರಿಸುತ್ತಾ ಕಣ್ಣಲ್ಲಿ ನೀರು ಹಾಕಿದರು. ಇದನ್ನು ಗಮನಿಸಿದ ಅಹನ್ ಎದ್ದು ನಿಂತು ಸಲ್ಮಾನ್ ಖಾನ್ ಅವರನ್ನು ಹಗ್ ಮಾಡಿ ಸಮಾಧಾನ ಮಾಡಿದರು. ಬಳಿಕ ಮತ್ತೆ ಮಾತು ಮುಂದುವರೆಸಿದ ಸಲ್ಮಾನ್, 'ಸುನಿಲ್ ಶೆಟ್ಟಿ ನನ್ನ ಪರ್ಸ್ ನೋಡಿದರು. ಬಳಿಕ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಕೆಲವು ಬಟ್ಟೆಗಳನ್ನು ಗಿಫ್ಟ್ ಮಾಡಿದರು' ಎಂದು ಹೇಳಿದ್ದಾರೆ.
Salman ಜೊತೆಯ ಸೂಪರ್‌ಹಿಟ್ ಚಿತ್ರಗಳ ಈ ನಟಿ ಆತ್ಮಹತ್ಯೆಗೆ ಯತ್ನಿಸಿದ್ದರು!
ಬಳಿಕ ಬಾಲಿವುಡ್‌ನಲ್ಲಿ ಸಹಾಯ ಮಾಡಿದ ಮತ್ತೋರ್ವ ವ್ಯಕ್ತಿಯನ್ನು ನೆನಪಿಸಿಕೊಂಡರು. 'ಖ್ಯಾತ ನಿರ್ಮಾಪಕ ಬೋನಿ ಕಪೂರ್ ನನ್ನ ಜೀವನದುದ್ದಕ್ಕೂ ನನಗೆ ಸಹಾಯ ಮಾಡಿದರು. ಟೈಮ್ ನನ್ನ ಪರವಾಗಿ ಇಲ್ಲದ ಸಮಯದಲ್ಲಿ ಬೋನಿ ಕಪೂರ್ ತುಂಬಾ ಸಹಾಯ ಮಾಡಿದ್ದರು' ಎಂದು ಸಲ್ಮಾನ್ ಖಾನ್ ಹೇಳಿದ್ದರು.
ಸಲ್ಮಾನ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಅಂತಿಮ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಗಾಡ್ ಫಾದರ್, ಕಭಿ ಈದ್ ಕಭಿ ದಿವಾಳಿ, ಟೈಗರ್-3 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.