ರಾಮನ ಪಾತ್ರ ಮಾಡ್ತಿರೋ ರಣಬೀರ್ ಕಪೂರ್‌ಗೆ ದೇವರ ಮೇಲಿದೆ ನಂಬಿಕೆ ಹೇಗಿದೆ?

By Roopa Hegde  |  First Published Jul 31, 2024, 10:47 AM IST

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಕ್ರಿಶ್ಚಿಯನ್ ಧರ್ಮದ ಮೇಲೆ ನಂಬಿಕೆ ಇಟ್ಟಿದ್ದಾರೆ ಅನ್ನೋದು ಇತ್ತೀಚಿಗಷ್ಟೆ ಬಹಿರಂಗವಾಗಿದೆ. ಈಗ ಕಪೂರ್ ಕುಡಿ ರಣಬೀರ್ ಕಪೂರ್ ಸರದಿ. ಅವರು ಯಾವ ಧರ್ಮದ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂಬುದನ್ನು ಬಾಯ್ಬಿಟ್ಟಿದ್ದಾರೆ.
 


ರಾಮಾಯಣ ಚಿತ್ರದ ಮೂಲಕ ಸದ್ಯ ಸುದ್ದಿಯಲ್ಲಿರುವ ಬಾಲಿವುಡ್ ನಟ ರಣಬೀರ್ ಕಪೂರ್ (Bollywood Actor Ranbir Kapoor) ತಮ್ಮ ಧರ್ಮದ ಬಗ್ಗೆ ಮಾತನಾಡಿದ್ದಾರೆ. ರಣಬೀರ್ ಕಪೂರ್ ತಾನು ಯಾವ ಧರ್ಮದ ಮೇಲೆ ನಂಬಿಕೆ ಇಟ್ಟಿದ್ದೇನೆ, ದೇವರು ಹಾಗೂ ನನ್ನ ಮಧ್ಯೆ ಯಾವ ಸಂಬಂಧವಿದೆ ಎಂಬುದನ್ನು ಹೇಳಿದ್ದಾರೆ. ಸನಾತನ ಧರ್ಮದಲ್ಲಿ ದೃಢ ನಂಬಿಕೆ ಹೊಂದಿದ್ದೇನೆ ಎಂದು ರಣಬೀರ್ ಕಪೂರ್ ಬಹಿರಂಗಪಡಿಸಿದ್ದಾರೆ. ಅದ್ರ ಬಗ್ಗೆ ಆಳವಾದ ಅಧ್ಯಯನ ಕೂಡ ನಡೆಸ್ತಿದ್ದಾರೆ. 

ನಿಖಿಲ್ ಕಾಮತ್ ಜೊತೆ ಮಾತನಾಡಿದ ರಣಬೀರ್ ಕಪೂರ್ (Ranbir Kapoor), ದೇವರ ಮೇಲೆ ತಮಗಿರುವ ನಂಬಿಕೆ ಬಗ್ಗೆ ಎಲ್ಲರ ಮುಂದೆ ಹೇಳಿದ್ದಾರೆ. ತಂದೆ ರಿಷಿ ಕಪೂರ್ (Rishi Kapoor) ಬಗ್ಗೆಯೂ ರಣಬೀರ್ ಇಲ್ಲಿ ಮಾತನಾಡಿದ್ದಾರೆ. ನಾನು ಸನಾತನ (Sanatana) ಧರ್ಮದಲ್ಲಿ ಬಹಳಷ್ಟು ನಂಬಿಕೆಯನ್ನು ಹೊಂದಲು ಪ್ರಾರಂಭಿಸಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ನಾನು ಅದರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಲು ಆಳವಾದ ಅಧ್ಯಯನ ನಡೆಸುತ್ತಿದ್ದೇನೆ. ಅದರ ಪರಿಣಾಮಗಳು ಏನು ಎಂಬುದು ನನಗೆ ಈಗ ಅರಿವಾಗ್ತಿದೆ. ಅದರ ಮೇಲೆ ಭರವಸೆ ಹೆಚ್ಚಾಗಿದೆ.  ನೀವು ಸನಾತನ ಧರ್ಮವನ್ನು ನಂಬಿ ಇಲ್ಲ ಬಿಡಿ, ಅದು ನಿಮಗೆ ಬಿಟ್ಟಿದ್ದು. ಒಂದ್ವೇಳೆ ನೀವು ಅದನ್ನು ನಂಬುವುದಾದ್ರೆ  ಅದು ನಿಮಗೆ ಉತ್ತಮ ವ್ಯವಸ್ಥೆ, ಉತ್ತಮ ಮೌಲ್ಯಗಳನ್ನು ನೀಡುತ್ತದೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. 

Tap to resize

Latest Videos

ಮಾಲಾಶ್ರೀ-ರವಿಚಂದ್ರನ್ ಮಧ್ಯೆ 'ರಾಮಾಚಾರಿ' ವೇಳೆ ಯಾಕೆ ಸಮಸ್ಯೆ ಆಗಿತ್ತು, ಪರೊಹಾರ ಹೇಗಾಯ್ತು..?

ಪ್ರತಿ ದಿನ ಎರಡು ಬಾರಿ ಪೂಜೆ ಮಾಡ್ತಿದ್ದ ರಿಷಿ ಕಪೂರ್ : ದೇವರ ಬಗ್ಗೆ ಮಾತನಾಡಿದ ರಣಬೀರ್ ಕಪೂರ್, ನಾನು ಬೆಳೆಯುತ್ತಿರುವ ಸಮಯದಲ್ಲಿ ನನ್ನ ತಂದೆ  ರಿಷಿ ಕಪೂರ್ ತುಂಬಾ ಧರ್ಮನಿಷ್ಠರಾಗಿದ್ದರು. ಅವರು ದಿನಕ್ಕೆ ಎರಡು ಪೂಜೆಗಳನ್ನು ಮಾಡುತ್ತಿದ್ದರು ಎಂದಿದ್ದಾರೆ. ನಾವು ಪ್ರತಿ ಹಬ್ಬವನ್ನು ಆಚರಿಸುತ್ತೇವೆ. ನಮ್ಮ ಮನೆಯಲ್ಲಿ ನವರಾತ್ರಿ ಆಚರಣೆ ನಡೆಯುತ್ತಿತ್ತು. ಆದ್ದರಿಂದ ನನಗೆ ದೇವರು ತುಂಬಾ ದೊಡ್ಡ ವಿಷಯವಾಗಿತ್ತು. ಅದೇ ವಾತಾವರಣದಲ್ಲಿ ನಾನು ಬೆಳೆದೆ ಎಂದಿದ್ದಾರೆ. ಈ ಧರ್ಮನಿಷ್ಠೆ ನನ್ನ ತಂದೆಗೆ ಶಾಂತತೆಯನ್ನು ನೀಡಿತ್ತು ಎನ್ನುವ ರಣಬೀರ್ ಕಪೂರ್, ತಾಯಿ ನೀತು ಕಪೂರ್ ಕಡಿಮೆ ಧಾರ್ಮಿಕರು ಎಂದಿದ್ದಾರೆ.

ಹೆತ್ತವರನ್ನು ಮಕ್ಕಳು ಅನುಸರಿಸುತ್ತಾರೆ. ಹಾಗಾಗಿಯೇ ದೇವರ ಬಗ್ಗೆ ನನಗೆ ಒಳ್ಳೆಯ ಭಾವನೆ ಇದೆ. ನನ್ನ ಅಭಿವ್ಯಕ್ತಿ ಶಕ್ತಿ ತುಂಬಾ ಪ್ರಬಲವಾಗಿದೆ ಎಂದು ನಾನು ಬಹಳ ಹಿಂದೆಯೇ ಅರಿತುಕೊಂಡೆ. ನಾನು ದೇವರಲ್ಲಿ ಏನನ್ನಾದರೂ ಕೇಳಿದರೆ, ನಾನು ಅದನ್ನು ಬಹಳ ಸುಲಭವಾಗಿ ಪಡೆಯುತ್ತಿದ್ದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ನಾನು ಕೇಳುವುದನ್ನು ನಿಲ್ಲಿಸಿದೆ. ಚಿಕ್ಕವನಾಗಿದ್ದಾಗ  ನಾನು ಪ್ರತಿದಿನ ರಾತ್ರಿ ದೇವರಿಗೆ ಧನ್ಯವಾದ ಹೇಳಿ ಮಲಗುತ್ತಿದ್ದೆ. ಅದೇ ರೂಢಿ ಈಗಲೂ ಇದೆ ಎಂದು ರಣಬೀರ್ ಹೇಳಿದ್ದಾರೆ. 

ನನ್ನ ಚಿತ್ರ ಹಿಟ್ ಆಗಬೇಕು ಅಥವಾ ನಾನು ಏನನ್ನಾದರೂ ಖರೀದಿಸಬೇಕು ಎಂದಾಗ ನಾನು ದೇವರ ಮುಂದೆ ಹೋಗಿ ಬೇಡಿಕೊಂಡಿಲ್ಲ. ಆದ್ರೂ ನನಗೆ ದೇವರು ಎಲ್ಲವನ್ನು ನೀಡಿದ್ದಾನೆ. ನಾನು ಯಾವ ಜಾಗದಲ್ಲಿದ್ದೇನೋ ಅಲ್ಲಿ ನಾನು ಖುಷಿಯಾಗಿದ್ದೇನೆ. ಹಾಗಾಗಿ ನಾನು ದೇವರಿಗೆ ಕೃತಜ್ಞ ಎನ್ನುತ್ತಾರೆ ರಣಬೀರ್ ಕಪೂರ್. 

ಗಂಡು ಮಕ್ಕಳಾಗಿ ನಾವು ಚತ್ರಿ ಹಿಡಿಯಬೇಕು; ವಿಷ್ಣುವರ್ಧನ್ ಗೌರವ ಕೊಟ್ಟ ಘಟನೆ ಹಂಚಿಕೊಂಡ ಆಂಕರ್ ಅನುಶ್ರೀ, ನಟ ಅಭಿಜಿತ್!

ರಣಬೀರ್ ಕಪೂರ್, ರಾಮಾಯಣ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಎಲ್ಲಿಯೂ ಹೇಳಿಲ್ಲ. ಆದ್ರೆ ಸೀತೆ ಪಾತ್ರದಲ್ಲಿರುವ ಸಾಯಿ ಪಲ್ಲವಿ ಜೊತೆ  ರಾಮನ ಉಡುಪಿನಲ್ಲಿರುವ ಅವರ ಫೋಟೋಗಳು ವೈರಲ್ ಆಗ್ತಿವೆ.  ರಾಮಾಯಣ ಮಾತ್ರವಲ್ಲದೆ, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಅವರೊಂದಿಗೆ ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಅಂಡ್ ವಾರ್  ಚಿತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. 

click me!