14ರ ಹರೆಯದಲ್ಲಿ 55ರ ಕೆಲಸದಾಕೆ ಜೊತೆ ಸಂಬಂಧ ಹೊಂದಿದ್ರು ಖ್ಯಾತ ನಟ

Published : Feb 13, 2025, 03:38 PM ISTUpdated : Feb 13, 2025, 03:42 PM IST
14ರ ಹರೆಯದಲ್ಲಿ 55ರ ಕೆಲಸದಾಕೆ ಜೊತೆ ಸಂಬಂಧ ಹೊಂದಿದ್ರು ಖ್ಯಾತ ನಟ

ಸಾರಾಂಶ

Bollywood Actor Controversy Life: ಬಾಲಿವುಡ್ ನಟ 6ನೇ ವಯಸ್ಸಿನಲ್ಲಿ ಟೀ ಕಪ್ ತೊಳೆಯುವುದರಿಂದ ಹಿಡಿದು 14ನೇ ವಯಸ್ಸಿನಲ್ಲಿ 55 ವರ್ಷದ ಮಹಿಳೆಯೊಂದಿಗಿನ ಸಂಬಂಧದವರೆಗೆ, ಅವರ ಜೀವನದ ಕೆಲವು ಅಪರಿಚಿತ ಅಂಶಗಳನ್ನು ಬಹಿರಂಗಪಡಿಸುತ್ತದೆ.

ಮುಂಬೈ: ಇಂದು ಸೂಪರ್ ಸ್ಟಾರ್ ಆಗಿರೋ ಕಲಾವಿದರು ತಮ್ಮ ಜೀವನದಲ್ಲಿ  ನಡೆದಿರುವ ಘಟನೆಗಳ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ. ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿ, ಒಳ್ಳೆಯ ಅಪ್ಪ, ಅಣ್ಣ, ಮನೆ ಮೆಚ್ಚಿದ ಮಗನಾಗಿ ಕಾಣಿಸಿಕೊಳ್ಳುವ ನಟರ ಜೀವನ ತೆರೆ ಮೇಲೆ ತೋರಿಸಿದಂತಿರಲ್ಲ. ಬಹುತೇಕ ಕಲಾವಿದರ ಜೀವನ ರೀಲ್ ಮತ್ತು ರಿಯಲ್ ಲೈಫ್‌ಗೂ ತುಂಬಾನೇ ವ್ಯತ್ಯಾಸವಿರುತ್ತದೆ. ಇಂತಹ ಕಲಾವಿದರ ಜೀವನದ  ರಹಸ್ಯಗಳನ್ನು ತಿಳಿದರೆ ಜನರು ಒಂದು ಕ್ಷಣ ಶಾಕ್ ಆಗುತ್ತಾರೆ. ಇಂದಿನ ಲೆಜೆಂಡ್ ಅಂತ ಗುರುತಿಸಿಕೊಳ್ಳುವ ನಟರು ತುಂಬಾನೇ ಕಷ್ಟದಿಂದ ಈ ಸ್ಥಾನಕ್ಕೆ ತಲುಪಿದ್ದಾರೆ. ಇಂದು ನಾವು ಹೇಳುತ್ತಿರುವ ಹಿರಿಯ ನಟ 6ನೇ ವಯಸ್ಸಿನಲ್ಲಿ ಟೀ  ಕಪ್‌ಗಳನ್ನು ತೊಳೆಯುತ್ತಿದ್ದರು. 14ನೇ ಹರೆಯದಲ್ಲಿ 55ರ ಕೆಲಸದಾಕೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದರು. 

ಬಾಲಿವುಡ್‌ ಹಿರಿಯ ನಟ ಓಂ ಪುರಿ ಅವರ ಜೀವನ ಎಲ್ಲ ಕಲಾವಿದರಂತೆ ಇರಲಿಲ್ಲ. ಓಂ ಪುರಿ ಅವರ ಜೀವನಕ್ಕೆ ಸಂಬಂಧಿಸಿದ ವಿಷಯಗಳು ಇಂದಿಗೂ ಚರ್ಚೆಯಲ್ಲಿರುತ್ತವೆ. ಹಿಂದಿ ಸೇರಿದಂತೆ ಹಲವು  ಭಾಷೆಗಳಲ್ಲಿ ನಟಿಸಿರುವ ಓಂ ಪುರಿ 2018ರಲ್ಲಿ ನಿಧನರಾಗಿದ್ದಾರೆ. 1950 ರ ಅಕ್ಟೋಬರ್ 18 ರಂದು ಹರಿಯಾಣದ ಅಂಬಾಲದ ಬಡ ಕುಟುಂಬಬವೊಂದರಲ್ಲಿ ಜನಿಸಿದ ಓಂ ಪುರಿ ಬಾಲ್ಯದಲ್ಲಿ ಕೆಲಸ ಮಾಡಲು ಆರಂಭಿಸಿದ್ದರು. ಓಂ ಪುರಿ ಅವರು 6 ವರ್ಷದವರಿದ್ದಾಗ ಇವರ ತಂದೆ ಕಳ್ಳತನ ಪ್ರಕರಣದಲ್ಲಿ ಜೈಲು ಸೇರುತ್ತಾರೆ. ಕುಟುಂಬದ ಜವಾಬ್ದಾರಿಯೆಲ್ಲಾ  6 ವರ್ಷದ ಓಂ ಪುರಿ ಹೆಗಲ ಮೇಲೆ ಬೀಳುತ್ತದೆ. ಕುಟುಂಬದ ನಿರ್ವಹಣೆ  ಹೋಟೆಲ್‌ನಲ್ಲಿ ಟೀ ಕಪ್ ತೊಳೆಯುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 

ಇದನ್ನೂ ಓದಿ: ಇಂಗ್ಲಿಷ್ ಸಿನಿಮಾ ಮೀರಿಸುವಂತಹ 9 ಬ್ರಿಲಿಯಂಟ್ ಥ್ರಿಲ್ಲರ್‌ ಮಲಯಾಳಂ ಚಿತ್ರಗಳು

ಓಂ ಪುರಿಯವರ ಜೀವನ ಸಾಕಷ್ಟು ವಿವಾದತ್ಮಕ ವಿಷಯಗಳಿಂದಲೇ ತುಂಬಿಕೊಂಡಿತ್ತು. ತಮ್ಮ 14ನೇ ವಯಸ್ಸಿನಲ್ಲಿ 55 ವರ್ಷದ ಮನೆಕೆಲಸದಾಕೆ ಜೊತೆ ದೈಹಿಕ ಸಂಬಂಧ ಹೊಂದಿದ್ದರು ಎಂಬ ವಿಷಯವನ್ನು  ಓಂ ಪುರಿಯವರ ಪತ್ನಿಯೇ ರಿವೀಲ್ ಮಾಡಿದ್ದರು. ಓಂ ಪುರಿಯವರ ಮಾಜಿ ಪತ್ನಿ ನಂದಿತಾ ಪುರಿ ತಮ್ಮ  'Unlikely Hero: Om Puri' ಪುಸ್ತಕದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಇದನ್ನು ಸ್ವತಃ ಓಂ ಪುರಿ ಒಪ್ಪಿಕೊಂಡಿದ್ದರು ಎಂಬ ಮಾತನ್ನು ಸಹ ಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು. 

ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕವಾಗಿ ಓಂ ಪುರಿ ಮಾತನಾಡಿದ್ದರು. ಈ ವಿಷಯದಲ್ಲಿ 55 ವರ್ಷದ ಮಹಿಳೆಯ ತಪ್ಪೋ ಅಥವಾ 14 ವರ್ಷದ ಬಾಲಕನ ತಪ್ಪೋ ಎಂದು ಕೇಳಿದ್ದರು. ಈ ಮೂಲಕ ತಮ್ಮದು ಯಾವುದೇ ತಪ್ಪಿಲ್ಲ ಎಂದು ಓಂ ಪುರಿ ಸಮರ್ಥಿಸಿಕೊಂಡಿದ್ದರು.  ಒಮ್ಮೆ ದೈಹಿಕ ಸಂಬಂಧ ಹೊಂದಿದ್ದ ನಂತರ, ಆ ನಂತರವೂ ಹಲವು ಬಾರಿ ಆ ಮಹಿಳೆ ಜೊತೆ ಓಂ ಪುರಿ ದೈಹಿಕ ಸಂಬಂಧ ಹೊಂದಿದ್ದರುಉ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:  17 ವರ್ಷದಲ್ಲಿ ಹಿಟ್ ಆಗಿದ್ದು 2 ಸಿನಿಮಾ; ಲೆಜೆಂಡರಿ ಸಿಂಗರ್ ಮೊಮ್ಮಗನಾಗಿರೋ ಸ್ಪುರದ್ರೂಪಿಯ ಸೋಲಿನ ಕಥೆ 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?