ಆಕೆ ಇನ್ನೂ ಮೊದಲ ಪತಿ ಜೊತೆಯೇ ಇದ್ದಾಳೆ; ಪತ್ನಿ ಅರೋಪಗಳಿಗೆ ನವಾಜುದ್ದೀನ್ ಸಿದ್ದಿಕಿ ತಿರುಗೇಟು

Published : Feb 08, 2023, 12:38 PM IST
ಆಕೆ ಇನ್ನೂ ಮೊದಲ ಪತಿ ಜೊತೆಯೇ ಇದ್ದಾಳೆ;  ಪತ್ನಿ ಅರೋಪಗಳಿಗೆ ನವಾಜುದ್ದೀನ್ ಸಿದ್ದಿಕಿ ತಿರುಗೇಟು

ಸಾರಾಂಶ

ನವಾಜುದ್ದೀನ್ ಸಿದ್ದಿಕಿ ಲಾಯರ್‌ ಹೇಳಿಕೆ ವೈರಲ್. ಮೊದಲ ಪತಿ ಬಗ್ಗೆ ತಿಳಿದುಕೊಳ್ಳದಷ್ಟು ದಡ್ಡ ಆಗಿದ್ದು ಯಾಕೆ ಎಂದ ನೆಟ್ಟಿಗರು....   

1999ರಲ್ಲಿ ಅಮಿರ್‌ ಖಾನ್ ನಟನೆಯ ಸರ್ಫರೋಶ್ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನವಾಜುದ್ದೀನ್ ಸಿದ್ದಕಿ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಜರ್ನಿ ಆರಂಭಿಸಿರುವ ಸಿದ್ದಕಿ ಏಷ್ಯಾ ಫಿಲ್ಮ್‌ ಅವಾರ್ಡ್‌, ಏಪ್ಯಾ ಪ್ಯಾಸಿಫಿಲ್ ಸ್ಕ್ರೀನ್ ಅವಾರ್ಡ್‌, ಐಐಎಫ್‌ಎ ಅವಾರ್ಡ್‌,ಇಂಟರ್‌ನ್ಯಾಷನಲ್‌ emmy ಅವಾರ್ಡ್‌, ಫಿಲ್ಮ್‌ಫೇರ್‌ ಅವಾರ್ಡ್‌, ನ್ಯಾಷನ್‌ ಅವಾರ್ಡ್‌,ಪ್ರೊಡ್ಯೂಸರ್‌ ಗೈಡ್‌ ಫಿಲ್ಮ್‌ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ತಮ್ಮ ಪ್ರತಿಭೆಯಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿ ಕೋಟಿಯಲ್ಲಿ ಆಸ್ತಿ ಮಾಡಿರುವ ಸಿದ್ದಕಿ ವೈಯಕ್ತಿಕ ವಿಚಾರ ರಸ್ತೆಗೆ ಬಂದು ನಿಂತಿದೆ. ಈಗ ಲಾಯರ್‌ ಕೊಡುತ್ತಿರುವ ಹೇಳಿಕೆ ವೈರಲ್ ಆಗುತ್ತಿದೆ.

 ನವಾಜುದ್ದೀನ್ ಸಿದ್ದಿಕಿ ಮತ್ತು ಆಲಿಯಾ 2011ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಶೋರಾ ಮತ್ತು ಯಾನಿ ಎನ್ನುವ ಮುದ್ದಾ ಮಕ್ಕಳಿದ್ದಾರೆ. ಮದುವೆ ವಿಚಾರ ರಸ್ತೆ ಬಂದು ನಿಂತಾಗಿನಿಂದ ಸಿದ್ದಕಿ ಹೋಟೆಲ್‌ ರೂಮ್‌ನಲ್ಲಿ ವಾಸಿಸುತ್ತಿದ್ದಾರೆ. ಸೊಸೆ ಆಲಿಯಾ ಆಸ್ತಿ ವಿಚಾರಕ್ಕೆ ಜಗಳ ಮಾಡುತ್ತಿದ್ದಾಳೆ ಎಂದು ಸಿದ್ದಕಿ ತಾಯಿ ದೂರು ದಾಖಲಿಸಿದ್ದಾರೆ. 

ಲಾಯರ್ ಹೇಳಿಕೆ:

'2001ರಲ್ಲಿ ಆಲಿಯಾ ಉರ್ಫ್‌ ಅಂಜಲಿ ಕುಮಾರಿ 8ನೇ ಕ್ಲಾಸ್‌ ಫೇಲ್‌ ಆಗಿ ವಿನಯ್ ಭಾರ್ಗವ್‌ ಜೊತೆ ಮದುವೆ ಮಾಡಿಕೊಂಡರು. ಮುಂಬೈಗೆ ಕಾಲಿಟ್ಟ ಮೇಲೆ ಅಂಜನಾ ಪಾಂಡೆ ಆಗಿ ಬದಲಾಯಿಸಿಕೊಂಡರು 2010ರಲ್ಲಿ ಅಂಜನಾ ಆನಂದ್ ಆಗಿ ಬದಲಾಯಿಸಿಕೊಂಡರು. ಒಂದು ಸಮಯದಲ್ಲಿ ಇಸ್ಲಾಂಗೆ ಬದಲಾಗಿ ಜೈನಬ್ ಎಂದು ಹೆಸರಿಟ್ಟುಕೊಂಡರು. ಇದೆಲ್ಲಾ ಆದ ಮೇಲೆ  ನವಾಜುದ್ದೀನ್ ಸಿದ್ದಿಕಿ ಅವರನ್ನು ಮದುವೆ ಮಾಡಿಕೊಂಡು 2011ರಲ್ಲಿ ಪರಸ್ಪರ ಒಪ್ಪಿಗೆ ಮೇಲೆ ದೂರವಾದರು. ಸಿದ್ದಕಿ ವೃತ್ತಿ ಜೀವನ ಉತ್ತುಂಗಕ್ಕೆ ಏರಿದಾಗ ಜೈನಬ್‌ ಮತ್ತೆ ಹಿಂತಿರುಗಿ ಬರುತ್ತಾರೆ. 2020ರಲ್ಲಿ ಮತ್ತೊಮ್ಮೆ ಡಿವೋರ್ಸ್‌ ನೋಟಿಸ್‌ ಕಳುಹಿಸಿದ್ದರು. ಇಬ್ಬರು ಆಗಲೇ ದೂರವಾಗಿದ್ದ ಕಾರಣ ಮತ್ತೊಮ್ಮೆ  ಕಳುಹಿಸಿರುವ ನೋಟಿಸ್‌ಗೆ ಯಾವ ಅರ್ಥವಿಲ್ಲ' ಎಂದು ಲಾಯರ್ ಇಂಡಿಯಾ ಟುಡೇಗೆ ಹೇಳಿದ್ದಾರೆ. 

Nawazuddin Siddiqui: ಪತ್ನಿಗೆ ಊಟ ಕೊಡದೆ ಚಿತ್ರಹಿಂಸೆ ಕೊಟ್ಟ ಬಾಲಿವುಡ್ ಸ್ಟಾರ್ ಹೀರೋ!

ಆಲಿಯಾ ತಮ್ಮ ಹುಟ್ಟಿದ ದಿನಾಂಕವನ್ನು ಮಾರ್ಸ್ಕ್‌ ಶೀಟ್‌ ಮತ್ತು ಪಾಸ್‌ಪೋರ್ಟ್‌ನಲ್ಲಿ ಸುಳ್ಳು ನೀಡಿದ್ದಾರಂತೆ. '2008-2009ರಲ್ಲಿ ರಾಹುಲ್‌ ಎಂಬುವವರನ್ನು ಅಂಜಲಿ ಪ್ರೀತಿಸಿ ಮದುವೆ ಮಾಡಿಕೊಂಡಿರು.  ಗೋರೆಗಾಂವ್, ಮುಂಬೈನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಅಂಜನಾ ಮತ್ತು ರಾಹುಲ್ ವಾಸಿಸುತ್ತಿದ್ದಾರೆ. ಅಂಜನಾ ದೊಡ್ಡ ಮಟ್ಟದಲ್ಲಿ ಹಣ ಮಾಡಬೇಕು ಆಸ್ತೆ ಮಾಡಬೇಕು ಎಂದು ಗ್ಯಾಂಗ್ ಕಟ್ಟಿಕೊಂಡು ಪ್ಲ್ಯಾನ್ ಮಾಡುತ್ತಿದ್ದಾರೆ. ಈ ಪ್ಲ್ಯಾನ್‌ನಲ್ಲಿ ಅಂಜನಾ ಸಹೋದರಿ ಅರ್ಚನಾ ಪಾಂಡೆನೂ ಇದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿರುವ ತಮ್ಮ ಕನಸುಗಳನ್ನು ಅಂಜನಾ ನನಸು ಮಾಡಿಕೊಳ್ಳುತ್ತಿದ್ದರು. ಜಬಲ್‌ಪುರ್‌ನಲ್ಲಿ ಸಹೋದರಿ ಅರ್ಚನಾ ವಿನಯ್‌ ಭಾರ್ಗವ್‌ನ ಮದುವೆ ಮಾಡಿಕೊಂಡರು. ರಾಜ್‌ಕುಮಾರ್ ಶುಕ್ಲಾನ ಮದುವೆ ಮಾಡಿಕೊಂಡಿರುವ ಅರ್ಚನಾ ಭಾರ್ಗವ್‌ ವಿಚ್ಛೇದನ ನೀಡಿಲ್ಲ ಆದರೂ ಒಟ್ಟಿಗಿದ್ದಾರೆ. ವಿಜಯ್ ಕೂಡ ಅಂಜನಾ ತಮ್ಮ ಹೆಂಡತಿ ಎಂದು ರೈಲ್ವೆ ಡಿಪಾರ್ಟ್‌ಮೆಂಟ್‌ನಲ್ಲಿ ರಿಜಿಸ್ಟರ್ ಮಾಡಿಸಿರುವ ರೆಕಾರ್ಡ್‌ಗಳು ಸಿಕ್ಕಿದೆ. ಈ ಮೂವರು ಮೋಸ ಮಾಡಿ ರೈಲ್ವೆ ಡಿಪಾರ್ಟ್‌ಮೆಂಟ್‌ ಸೌಲ್ಯಭಗಳನ್ನು ಬಳಸಿಕೊಂಡಿದ್ದಾರೆ' ಎಂದು ಲಾಯರ್ ಹೇಳಿದ್ದಾರೆ.

ಕಳೆದ ತಿಂಗಳು ಆಲಿಯಾ ಲಾಯರ್‌ 'ಆಲಿಯಾಗೆ ಆಹಾ ಕೊಟ್ಟಿಲ್ಲ ಬಾತ್‌ರೂಮ್‌ ಬಳಸಲು ಬಿಟ್ಟಿಲ್ಲ' ಎನ್ನುವ ಆರೋಪ ಮಾಡಿದ್ದಾರೆ. ಶ್ರೀ 'ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬ ಸದಸ್ಯರು ನನ್ನ ಕಕ್ಷಿದಾರರಾದ ಆಲಿಯಾ ಸಿದ್ದಿಕಿ ಅವರನ್ನು ಮನೆಯಿಂದ ಹೊರಹಾಕಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾರೆ. ಆಕೆಯ ವಿರುದ್ಧ ಕ್ರಿಮಿನಲ್ ದೂರು ಕೂಡ ದಾಖಲಿಸಿದ್ದಾರೆ. ಪೊಲೀಸರ ಮೂಲಕ ಅವರು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರತಿದಿನ ರಾತ್ರಿ ಆಕೆಯನ್ನು ಪೊಲೀಸ್ ಠಾಣೆಗೆ ಕರೆಯುತ್ತಿದ್ದರು' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

2500 ರೂಪಾಯಿ ಕೊಡದ ನಿರ್ಮಾಪಕನಿಂದ ನವಾಜುದ್ದೀನ್ ಸಿದ್ದಿಕಿ ವಸೂಲಿ ಮಾಡಿದ್ದು ಹೀಗೆ!

ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ವೈಫಲ್ಯಗಳನ್ನು ನೇರವಾಗಿ ಹೇಳಿಲ್ಲವಾದರೂ, ಪೊಲೀಸ್ ಅಧಿಕಾರಿಗಳು ತನ್ನ ಕಕ್ಷಿದಾರರಿಗೆ ಯಾವುದೇ ರಕ್ಷಣೆ ನೀಡಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. ಆಲಿಯಾ ನೀಡಿದ ಐಪಿಸಿ ಸೆಕ್ಷನ್ 509ರ ಅಡಿಯಲ್ಲಿ ನೀಡಿದ ದೂರಿನ ಮೇರಿಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?