ಕಾರ್ತಿಕ್ ಆರ್ಯನ್‌ ತುಂಬಾ ಇಷ್ಟವಾಗೋಕೆ ಈ ಗುಣಗಳೇ ಕಾರಣ

By Shruiti G Krishna  |  First Published Jun 22, 2022, 1:04 PM IST

ಕಾರ್ತಿಕ್ ಆರ್ಯನ್ (Kartik Aaryan) ಬಲಿವುಡ್‌ನ (Bollywood) ಸ್ಟಾರ್ ನಟರ ಸಾಲಲ್ಲಿ ನಿಲ್ಲುವ ನಟ.  ಈ ಹ್ಯಾಂಡ್‌ಸಮ್ ಹಂಕ್ ಅಪಾರ ಸಂಖ್ಯೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಭಿನಯದ ಜೊತೆಗೆ ಕಾರ್ತಿಕ್ ಸರಳ ವ್ಯಕ್ತತ್ವಕ್ಕೆ ಅಭಿಮಾನಿಗಳ ಹೃದಯ ಗೆದ್ದಿದೆ. 


ಕಾರ್ತಿಕ್ ಆರ್ಯನ್ (Kartik Aaryan) ಬಾಲಿವುಡ್‌ನ (Bollywood) ಸ್ಟಾರ್ ನಟರ ಸಾಲಲ್ಲಿ ನಿಲ್ಲುವ ನಟ.  ಈ ಹ್ಯಾಂಡ್‌ಸಮ್ ಹಂಕ್ ಅಪಾರ ಸಂಖ್ಯೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಭಿನಯದ ಜೊತೆಗೆ ಕಾರ್ತಿಕ್ ಸರಳ ವ್ಯಕ್ತಿತ್ವ ಕೂಡ ಅಭಿಮಾನಿಗಳ ಹೃದಯ ಗೆದ್ದಿದೆ. ಇತ್ತೀಚಿಗಷ್ಟೆ ಕಾರ್ತಿಕ್ ಭೂಲ್ ಭಲೈಯಾ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ರಿಲೀಸ್ ಆದ ದಿನವೇ ಬಿಡುಗಡೆಯಾಗಿತ್ತು. ಕಂಗನಾ ಸಿನಿಮಾ ಮುಂದೆ ಗೆದ್ದು ಬೀಗುವ ಮೂಲಕ ಬಾಲಿವುಡ್‌ಅನ್ನು ಸರಣಿ ಸೋಲಿನಿಂದ ಪಾರು ಮಾಡಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಉತ್ತಮ ಕಮಾಯಿ ಮಾಡಿತ್ತು. ಕಾಶ್ಮೀರ್ ಪೈಲ್ಸ್ ಸಿನಿಮಾ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಹಿಂದಿ ಸಿನಿಮಾ  ಕಮಾಲ್  ಮಾಡಿತ್ತು. 

ಇದೀಗ ಭೂಲ್ ಭುಲೈಯಾ-2 (bhool bhulaiyaa 2) ಸಿನಿಮಾ ಮೂಲಕ ಕಾರ್ತಿಕ್ ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ. ಅಭಿನಯ ಮಾತ್ರವಲ್ಲದೇ ಅವರ ಸರಳ ಮತ್ತು ವಿನಮ್ರ ವ್ಯಕ್ತಿತ್ವ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿತ್ತು. ಕಾರ್ತಿಕ್ ಅಭಿಮಾನಿಗಳ ಜೊತೆ ನಡೆದುಕೊಳ್ಳುವ ರೀತಿ, ಸಾರ್ವಜನಿಕ ಸ್ಥಳಗಳಲ್ಲಿ ಅಭಿಮಾನಿಗಳ ಜೊತೆ ಮಾತನಾಡುವುದು ಈ ಸರಳತೆ ಮೂಲಕ ಆಗಾಗ ಗಮನ ಸೆಳೆಯುತ್ತಿರುತ್ತಾರೆ. ಸೆಲೆಬ್ರಿಟಿ ಆದ್ಮೇಲೆ, ನೇಮ್ ಫೇಮ್ ಬಂದಮೇಲೆ ಸಾಮಾನ್ಯ ಜನರನ್ನು ಮಾತನಾಡಿಸುವುದಿರಲಿ ಅವರನ್ನು ನೋಡುವ ರೀತಿಯೆ ಬದಲಾಗಿರುತ್ತದೆ. ಅಭಿಮಾನಿಗಳು ಪ್ರೀತಿಯಿಂದ ಬಂದು ನೆಚ್ಚಿನ ನಟನನ್ನು ನೋಡಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದೆ ಬಂದರೆ ತುಂಬಾ ವರಟಾಗಿ ನಡೆದುಕೊಳ್ಳುತ್ತಾರೆ. ಅಲ್ಲದೆ ಅಭಿಮಾನಿಗಳು ಕೂಗುತ್ತಿದ್ದರು ಅತ್ತ ತಿರುಗಿಯೂ ನೋಡದೆ ಹಾಗೆ ಹೋಗುತ್ತಾರೆ.

Tap to resize

Latest Videos

ಆದರೆ ಕಾರ್ತಿಕ್ ಆರ್ಯನ್ ಹಾಗಲ್ಲ ಎಲ್ಲರಿಗಿಂತ ವಿಭಿನ್ನ. ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ ಅವರ ಜೊತೆ ಫೋಟೋಗೆ ಪೋಸ್ ನೀಡಿ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸುತ್ತಾರೆ. ಕಾರ್ತಿಕ್ ಅವರ ಕೆಲವು ಈ ವಿಶೇಷ ಗುಣಗಳೇ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿವೆ. ಅಂತ ಕೆಲವು ಘಟನೆಗಳು ಇಲ್ಲಿದೆ. 

ಸಿನಿಮಾ ಸಕ್ಸಸ್ ಬೆನ್ನಲ್ಲೇ ಇಷ್ಟು ದುಬಾರಿಯಾದ್ರಾ ಕಾರ್ತಿಕ್ ಆರ್ಯನ್; ಪಡೆಯುವ ಸಂಭಾವನೆ ಎಷ್ಟು?

ರಸ್ತೆ ಬದಿ ಭೂಲ್ ಭುಲೈಯಾ-2 ಸಕ್ಸಸ್  ಸಂಭ್ರಮ

ಹೌದು, ಕಾರ್ತಿಕ್ ಭೂಲ್ ಭುಲೈಯಾ-2 ಸಿನಿಮಾದ ಸಕ್ಸಸ್ ಅನ್ನು ರಸ್ತೆ ಬದಿಯ ಚಿಕ್ಕ ಸ್ಟಾಲ್ ನಲ್ಲಿ ಆಚರಣೆ ಮಾಡಿದ್ದರು. ಸಾಮಾನ್ಯವಾಗಿ ಸಿನಿ ಸೆಲೆಬ್ರಿಟಿಗಳು ಸಿನಿಮಾ ಸಕ್ಸಸ್ ಅನ್ನ ಅದ್ದೂರಿಯಾಗಿ ಐಷಾರಾಮಿ ಹೋಟೆಲ್‌ನಲ್ಲಿ ಆಚರಣೆ ಮಾಡುತ್ತಾರೆ. ಆದರೆ ಕಾರ್ತಿಕ್ ರಸ್ತೆ ಬದಿ ಸೆಲೆಬ್ರೇಟ್ ಮಾಡಿದ್ದಾರೆ. ಕಾರ್ತಿಕ್ ರಸ್ತೆ ಬದಿಯ ಚಿಕ್ಕ ಸ್ಟಾಲ್‌ನಲ್ಲಿ ಆಹಾರ ಸೇವಿಸುತ್ತಾ ಸಂಭ್ರಮಸಿದ ವಿಡಿಯೋ ವೈರಲ್ ಆಗಿತ್ತು.

ಪ್ರಾರಂಭದಲ್ಲಿ ಕಾರ್ತಿಕ್ ಪಟ್ಟ ಕಷ್ಟಗಳ ಬಗ್ಗೆ ಬಹಿರಂಗ ಪಡಿಸಿದ್ದರು. ಕಷ್ಟದ ದಿನಗಳ ಬಗ್ಗೆ ಹಂಚಿಕೊಂಡಿದ್ದ ಕಾರ್ತಿಕ್ ವಿಡಿಯೋ ವೈರಲ್ ಆಗಿತ್ತು. 12 ಜನ ರೂಮ್‌ಮೇಟ್‌ಗಳ ಜೊತೆ ಕಾರ್ತಿಕ್ ಹೇಗೆ ವಾಸವಿದ್ದರು, ಆಡಿಷನ್‌ಗಾಗಿ ವಿಡಿಯೋಗಳನ್ನು ಸರ್ಚ್ ಮಾಡುತ್ತಿದ್ದರು ಎನ್ನುವ ಬಗ್ಗೆ ಬಹಿರಂಗ ಪಡಿಸಿದ್ದರು. ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಕಾರ್ತಿಕ್ ಆರ್ಯನ್ ಹೆತ್ತವರಿಗಾಗಿ ಕಾರನ್ನು ಖರೀದಿ ಮಾಡಿದ್ದರು. ಜೊತೆಗೆ ಮನೆಗೆ ಬೇಕಾಗಿದ್ದ ಗೃಉಪಯೋಗಿ ವಸ್ತುಗಳನ್ನು ಖರೀಸಿದ್ದರು. ಕಾರ್ತಿಕ್ ಪಕ್ಕ ದೇಸಿ ಬಾಯ್ ನಡವಳಿಕೆ ಅಭಿಮಾನಿಗಳಿಗೆ ಇಷ್ಟವಾಗಿದೆ. 

ಕರಣ್ ಜೋಹರ್ ಅಭಿಮಾನಿಗಳು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಾರೆ. ಅಭಿಮಾನಿಗಳ ಜೊತೆ ಸೆಲ್ಪಿಗೆ ಪೋಸ್ ನೀಡುವುದು, ಡಾನ್ಸ್ ಮಾಡುವುದು ಹೀಗೆ ಅಭಿಮಾನಿಗಳ ಜೊತೆ ಕಾರ್ತಿಕ್ ನಡೆದುಕೊಳ್ಳುವ  ರೀತಿ ಅಭಿಮಾನಿಗಳ ಹೃದಯ ಗೆದ್ದಿದೆ.

ಯಾವುದೇ ವ್ಯಕ್ತಿಗಳ ಜೊತೆ ಕಾರ್ತಿಕ್ ವಿನಮ್ರತೆಯಿಂದ ಮಾತನಾಡುತ್ತಾರೆ. ಅಭಿಮಾನಿಗಳು, ಅಧಿಕಾರಿಗಳು ಯಾರೆ ಆಗಿರಲಿ. ಏರ್ಪೋರ್ಟ್‌ನಲ್ಲಿ ಕಾರ್ತಿಕ್ ಸಿಬ್ಬಂದಿಗಳ ಜೊತೆ ನಡೆದುಕೊಂಡ ರೀತಿ ಸಹ ಮೆಚ್ಚುಗೆಗೆ ಪಾತ್ರವಾಗಿತ್ತು.

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ತುಂಬಾ ದುಬಾರಿ ಎನ್ನುವ ಕಾರಣಕ್ಕೆ ಬ್ಯುಸಿನೆಸ್ ಕ್ಲಾಸ್ ಬಿಟ್ಟು ಎಕಾನಮಿ ಕ್ಲಾಸ್‌ನಲ್ಲಿ ಟ್ರಾವೆಲ್ ಮಾಡಿದ್ದರು. ಬ್ಯುಸಿನೆಸ್ ಕ್ಲಾಸ್ ತುಂಬಾ ದುಬಾರಿ ಎಂದು ಹೇಳಿದ್ದರು.  ಇನ್ನು ಭೂಲ್ ಬುಲೈಯಾ-2 ಸಕ್ಸಸ್ ಬಳಿಕ ಸಂಬಾವನೆ ಏರಿಸಿಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಆ ವಿಚಾರವನ್ನು ಕಾರ್ತಿಕ್ ತಳ್ಳಿ ಹಾಕಿದ್ದರು.

Promotion hua hai life mein
Increment nahi 😂
Baseless 🙏🏻 https://t.co/qQ3xFYREgr

— Kartik Aaryan (@TheAaryanKartik)
click me!