Vijay Birthday; ಬಾಸ್ ಆದ ವಿಜಯ್, ಹೊಸ ಸಿನಿಮಾದ ಟೈಟಲ್, ಫಸ್ಟ್ ಲುಕ್ ರಿಲೀಸ್

Published : Jun 22, 2022, 12:05 PM ISTUpdated : Jun 22, 2022, 12:08 PM IST
Vijay Birthday; ಬಾಸ್ ಆದ ವಿಜಯ್, ಹೊಸ ಸಿನಿಮಾದ ಟೈಟಲ್, ಫಸ್ಟ್ ಲುಕ್ ರಿಲೀಸ್

ಸಾರಾಂಶ

ತಮಿಳುನಾಡಿನ ಸ್ಟಾರ್ ನಟ, ದಳಪತಿ ವಿಜಯ್ (Vijay)ಅವರಿಗೆ ಇಂದು (ಜೂನ್ 22) ಹುಟ್ಟುಹಬ್ಬದ (Birthday) ಸಂಭ್ರಮ. 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ವಿಜಯ್ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿಬರುತ್ತಿದೆ. 

ತಮಿಳುನಾಡಿನ ಸ್ಟಾರ್ ನಟ, ದಳಪತಿ ವಿಜಯ್ (Vijay)ಅವರಿಗೆ ಇಂದು (ಜೂನ್ 22) ಹುಟ್ಟುಹಬ್ಬದ (Birthday) ಸಂಭ್ರಮ. 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ವಿಜಯ್ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಫೋಟೋ, ವಿಡಿಯೋ ಶೇರ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಜಯ್ ಕಡೆಯಿಂದ ಏನು ಗಿಫ್ಟ್ ಸಿಗಲಿದೆ ಎಂದು ಅಭಿಮಾನಿಗಳು ಕಾತರರಾಗಿದ್ದರು. ಅದರಂತೆ ಇಂದು  ವಿಜಯ್ ನಟನೆಯ ಹೊಸ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. 

ವಿಜಯ್ ನಟನೆಯ ಮುಂದಿನ ಸಿನಿಮಾಗೆ ದಳಪತಿ 66 (Thalapathy 66) ಎಂದು ಕರೆಯಲಾಗಿತ್ತು. ಇದೀಗ ಸಿನಿಮಾಗೆ 'ವರಿಸು' (Varisu) ಎಂದು ಟೈಟಲ್ ಇಡಲಾಗಿದೆ. ಕ್ಯಾಚಿ ಟೈಟಲ್ ಜೊತೆಗೆ ವಿಜಯ್ ಲುಕ್ ಅಭಿಮಾನಿಗಳಲ್ಲಿ ಕಿಕ್ ಏರಿಸಿದೆ. ಪೋಸ್ಟರ್ ನಲ್ಲಿ ವಿಜಯ್ ಮತ್ತಷ್ಟು ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಸೂಟ್‌ನಲ್ಲಿ ಕಾಣಿಸಿಕೊಂಡಿರುವ ವಿಜಯ್‌ ಹೊಸ ಲುಕ್ ಅಭಿಮಾನಿಗಳ ಮನಗೆದ್ದಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೋಸ್ಟರ್‌ನಲ್ಲಿ ದಿ ಬಾಸ್ ರಿಟರ್ನ್ಸ್ ಎಂದು ಬರೆಯಲಾಗಿದೆ.   

ವರಿಸು ಸಿನಿಮಾ ನಿರ್ದೇಶಕ ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ. ವಿಜಯ್ ತಾಯ್ನಾಡಿಗೆ ಪಾಲಾಸ್ ಆಗಿರುವ ಎನ್ ಆರ್ ಐ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಂದಹಾಗೆ ನಿರ್ದೇಶಕ ವಂಶಿ ಸಾರಥ್ಯದಲ್ಲಿ ಬಂದ ಮಹರ್ಶಿ ಸಿನಿಮಾ ಕೂಡ ಹೀಗೆ ಇತ್ತು. ಮಹೇಶ್ ಬಾಬು ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಮಹೇಶ್ ಬಾಬು ತನ್ನ ತಾಯ್ನಾಡಿಗಾಗಿ ದಿದೇಶದಿಂದ ವಾಪಾಸ್ ಆಗುತ್ತಾರೆ. 2019ರಲ್ಲಿ ಈ ಸಿನಿಮಾ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಅದೇ ಸಿನಿಮಾದ ಹಾಗೆ ವರಿಸು ಕೂಡ ಇರಲಿದೆ ಎನ್ನಲಾಗುತ್ತಿದೆ. 

ಎಂ ಎಸ್ ಧೋನಿ ಮೊದಲ ಸಿನಿಮಾದಲ್ಲಿ ದಳಪತಿ ವಿಜಯ್ ಹೀರೋ

ಅಂದಹಾಗೆ ವರಿಸು ಸಿನಿಮಾದ ಚಿತ್ರೀಕರಣ ಸದ್ಯ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಅಂದಹಾಗೆ ಸಿನಿಮಾ ತಮಿಳು ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಅಂದಹಾಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಅನೇಕ ತಾಂತ್ರಿಕ ವರ್ಗ ತೆಲುಗಿನವರಾಗಿದ್ದಾರೆ. ವರಿಸು ಸಿನಿಮಾದಲ್ಲಿ ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ ವಿಜಯ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ  ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗಿರುವ ರಶ್ಮಿಕಾ ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇನ್ನು ರಶ್ಮಿಕಾ ನಟನೆಯ ಎರಡನೇ ತಮಿಲು ಸಿನಿಮಾ ಇದಾಗಿದೆ.


KGF 2 ಬಳಿಕ ಮತ್ತೊಂದು ಸೌತ್ ಸ್ಟಾರ್ ಸಿನಿಮಾದಲ್ಲಿ ಅಧೀರ; ದಕ್ಷಿಣದಲ್ಲಿ ಹೆಚ್ಚಿದ ಸಂಜಯ್ ದತ್ ಬೇಡಿಕೆ

 

ಇನ್ನು ಉಳಿದಂತೆ ಈ ಸಿನಿಮಾದಲ್ಲಿ ಯೋಗಿ ಬಾಬಾ, ಶರತ್ ಕುಮಾರ್, ಪ್ರಭು, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ನಟ ವಿಜಯ್ ಈ ಕೊನನೆಯದಾಗಿ ಬೀಸ್ಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.ಈ ಸಿನಿಮಾ ಕೆಜಿಎಫ್-2 ರಿಲೀಸ್‌ಗೂ ಒಂದು ದಿನ ಮೊದಲು ರಿಲೀಸ್ ಆಗಿತ್ತು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇದೀಗ ವರಿಸುಗಾಗಿ ಅಭಿಮಾನಿಗಲು ಕಾತರದಿಂದ ಕಾಯುತ್ತಿದ್ದಾರೆ.        

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?