23 ವರ್ಷದ ಕನ್ನಡ ನಟಿಯನ್ನು ಪ್ರೀತಿಸ್ತಿದ್ದಾರಾ ಬಾಲಿವುಡ್‌ ನಟ Kartik Aaryan? ವೈರಲ್‌ ವಿಡಿಯೋದಲ್ಲಿ ಇದ್ದವರಾರು?

Published : Mar 05, 2025, 12:51 PM ISTUpdated : Mar 05, 2025, 07:50 PM IST
23 ವರ್ಷದ ಕನ್ನಡ ನಟಿಯನ್ನು ಪ್ರೀತಿಸ್ತಿದ್ದಾರಾ ಬಾಲಿವುಡ್‌ ನಟ Kartik Aaryan? ವೈರಲ್‌ ವಿಡಿಯೋದಲ್ಲಿ ಇದ್ದವರಾರು?

ಸಾರಾಂಶ

‌ಸಾರಾ ಅಲಿ ಖಾನ್‌ ಜೊತೆ ಬ್ರೇಕಪ್‌ ಆದ್ಮೇಲೆ ಬಾಲಿವುಡ್‌ ನಟ ಕಾರ್ತಿಕ್ ಆರ್ಯನ್‌ ಅವರು ವರ್ಷಗಳ ಕಾಲ ಸಿಂಗಲ್‌ ಆಗಿರೋದಾಗಿ ಹೇಳಿಕೊಂಡಿದ್ದರು. ಈಗ ಕಾರ್ತಿಕ್‌ ಮನೆಯ ಖಾಸಗಿ ಪಾರ್ಟಿಯಲ್ಲಿ ಕನ್ನಡ ನಟಿಯೋರ್ವರು ಕಾಣಿಸಿಕೊಂಡಿರೋದು ಸಾಕಷ್ಟು ಅನುಮಾನ ಮೂಡಿಸಿದೆ. ಅವರು ಯಾರು?   

ಬಾಲಿವುಡ್‌ ನಟ ಕಾರ್ತಿಕ್‌ ಆರ್ಯನ್‌ಗೆ ಈಗ 34ರ ಹರೆಯ. ಒಂದರ ಬೆನ್ನಲ್ಲೆ ಒಂದರಂತೆ ಸಿನಿಮಾಗಳಲ್ಲಿ ಹಿಟ್‌ ನೀಡುತ್ತಿರುವ ಕಾರ್ತಿಕ್‌ ಆರ್ಯನ್‌, ಲವ್‌ನಲ್ಲಿ ಕೂಡ ಮರಳಿ ಯತ್ನವ ಮಾಡು ಎನ್ನುವ ಮಂತ್ರ ಉಪಯೋಗಿಸಿದ್ದಾರೆ. ಈಗ ಅವರಿಗೆ ಮತ್ತೆ ಲವ್‌ ಹುಟ್ಟಿದೆ ಎನ್ನುವ ಮಾತು ಶುರು ಆಗಿದೆ. ಕನ್ನಡ ಮೂಲದ ನಟಿ ಜೊತೆ ಕಾರ್ತಿಕ್‌ ಆರ್ಯನ್‌ ಪ್ರೀತಿಯಲ್ಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

ಲವ್‌ ಲೈಫ್‌ ಬಗ್ಗೆ ಏನಂದ್ರು? 
ಈ ಹಿಂದೆ ಲವ್‌ ಲೈಫ್‌ ಬಗ್ಗೆ ಮಾತನಾಡಿದ್ದ ನಟ, “ಕೆಲಸದ ವಿಚಾರಕ್ಕೆ ನೀವು ಸಾಕಷ್ಟು ಜನರನ್ನು ಭೇಟಿ ಮಾಡ್ತೀರಿ. ಅದೇ ವಿಚಾರದಲ್ಲಿ ದಿನವೆಲ್ಲ ಕಳೆಯುತ್ತದೆ. ನೀವು ಸಾಕಷ್ಟು ದುಡಿಯಬಹುದು, ಹೆಸರು ಗಳಿಸಬಹುದು. ಆದರೆ ನೀವು ಪ್ರೀತಿಯನ್ನು ಖರೀದಿ ಮಾಡಲು ಸಾಧ್ಯವಿಲ್ಲ. ನಾನು ಯಾರನ್ನೂ ಡೇಟ್‌ ಮಾಡ್ತಿಲ್ಲ. ನಾನು ಸಿನಿಮಾದಲ್ಲಿ ರೊಮ್ಯಾಂಟಿಕ್‌ ಹೀರೋ ಆದರೂ ಕೂಡ ರಿಯಲ್‌ ಆಗಿ ಲವ್‌ ವಿಚಾರದಲ್ಲಿ ನಾನು ದುರಾದೃಷ್ಟವಂತ. ಸಮಯ ಬಂದಾಗ ನಾನು ಸರಿಯಾದ ಸಂಗಾತಿಯನ್ನು ಹುಡುಕಿಕೊಳ್ಳಬೇಕು” ಎಂದು ಹೇಳಿದ್ದಾರೆ. 

ಸಿನಿಮಾ 100 ಕೋಟಿ ಗಳಿಸಿದ್ರೂ ಕನ್ನಡದ ನಟಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ರೈಟರ್

ಸಾರಾ ಅಲಿ ಖಾನ್‌ ಜೊತೆ ಲವ್! 
ಇಮ್ತಿಯಾಜ್‌ ಅಲಿ ಅವರ ʼಲವ್‌ ಆಜ್‌ ಕಲ್ʼ‌ ಸಿನಿಮಾ ಟೈಮ್‌ನಲ್ಲಿ ನಟಿ ಸಾರಾ ಅಲಿ ಖಾನ್‌, ಕಾರ್ತಿಕ್‌ ಆರ್ಯನ್‌ ಮಧ್ಯೆ ಲವ್‌ ಹುಟ್ಟಿತು ಎಂದು ಹೇಳಲಾಗಿತ್ತು. ಇವರಿಬ್ಬರು ವರ್ಷಗಳ ಕಾಲ ಪ್ರೀತಿಯಲ್ಲಿದ್ದರು. ಈ ಪ್ರೀತಿ ವಿಚಾರವನ್ನು ಕಾರ್ತಿಕ್‌ ಎಂದೂ ಒಪ್ಪಲಿಲ್ಲ, ತಿರಸ್ಕಾರ ಕೂಡ ಮಾಡಲಿಲ್ಲ. ಈ ಸಿನಿಮಾ ರಿಲೀಸ್‌ ಆಗಿ ಕೆಲ ಸಮಯದ ನಂತರ ಕಾರ್ತಿಕ್‌ ಒಂದೂವರೆ ವರ್ಷಗಳ ಕಾಲ ಸಿಂಗಲ್‌ ಆಗಿದ್ದೆ ಎಂದು ಅವರು ಒಪ್ಪಿಕೊಂಡಿದ್ದರು.‌

ಅನನ್ಯಾ ಪಾಂಡೆ ಜೊತೆಯೂ ಲವ್
ನಟಿ ಅನನ್ಯಾ ಪಾಂಡೆ ಜೊತೆಗೆ ಕಾರ್ತಿಕ್‌ ಡೇಟ್‌ ಮಾಡಿದ್ದರು ಎನ್ನಲಾಗಿತ್ತು. ʼಪತಿ ಪತ್ನಿ ಔರ್‌ ವೋʼ ಎನ್ನುವ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು. ಆಗ ಪ್ರೀತಿ ಹುಟ್ಟಿಕೊಂಡಿದೆ ಎನ್ನಲಾಗಿದೆ. 

ಆಶಿಕಿ-3ಗೆ ಶ್ರೀಲೀಲಾ ಹೀರೋಯಿನ್: ಬಾಲಿವುಡ್​ನಲ್ಲಿ 'ಕಿಸ್ಸಿಕ್'​ ಬೆಡಗಿ ಹವಾ

ಕಾರ್ತಿಕ್‌ ಮನೆಯಲ್ಲಿ ಶ್ರೀಲೀಲಾ! 
ಇತ್ತೀಚೆಗೆ ಕಾರ್ತಿಕ್‌ ಆರ್ಯನ್‌ ಅವರ ಮನೆಯಲ್ಲಿ ಪಾರ್ಟಿ ಮಾಡಲಾಗಿತ್ತು. ಕಾರ್ತಿಕ್‌ ಅರ್ಯನ್‌ ಸಹೋದರಿ ಕೃತಿಕಾ ಮೆಡಿಕಲ್‌ ರಂಗದಲ್ಲಿ ಮಾಡಿದ ಸಾಧನೆ ಸಲುವಾಗಿ ಪಾರ್ಟಿ ಆಯೋಜಿಸಲಾಗಿತ್ತು. ಆ ಪಾರ್ಟಿಯಲ್ಲಿ ಕಾರ್ತಿಕ್‌ ಜೊತೆ ಶ್ರೀಲೀಲಾ ಡ್ಯಾನ್ಸ್‌ ಮಾಡಿದ್ದರು. ಈ ವಿಡಿಯೋ ಈಗ ಭಾರೀ ವೈರಲ್‌ ಆಗುತ್ತಿದೆ. ಕಾರ್ತಿಕ್‌ ಆರ್ಯನ್‌ ಜೊತೆ ಶ್ರೀಲೀಲಾ ಅವರು ʼಆಶಿಕಿ 3ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಕಾರಣದಿಂದ ಪಾರ್ಟಿಗೆ ಬಂದಿರಬಹುದು. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಈ ಜೋಡಿ ಪ್ರೀತಿ ಮಾಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಕನ್ನಡ, ತೆಲುಗು, ಹಿಂದಿ ಸಿನಿಮಾಗಳಲ್ಲಿ ಹೆಜ್ಜೆ ಇಟ್ಟಿರುವ ಶ್ರೀಲೀಲಾ ಈಗ ಪರಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ. ಈ ʼಕಿಸ್ʼ‌ ಸಿನಿಮಾ ಬೆಡಗಿ ʼಪುಷ್ಪ 2ʼ ಚಿತ್ರದಲ್ಲಿಯೂ ಡ್ಯಾನ್ಸ್‌ ಮಾಡಿದ್ದರು. ಅಂದಹಾಗೆ ಈಗ ಶ್ರೀಲೀಲಾ ಅವರ ಕೈಯಲ್ಲಿ ಮೂರು ತೆಲುಗು ಸಿನಿಮಾಗಳು, ಒಂದು ಹಿಂದಿ, ಒಂದು ತಮಿಳು ಸಿನಿಮಾ ಇವೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!