Singer Kalpana: ಆತ್ಮಹತ್ಯೆಗೆ ಯತ್ನಿಸಿದ್ರಾ ಸ್ಟಾರ್ ಗಾಯಕಿ? ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆ

Published : Mar 05, 2025, 10:17 AM ISTUpdated : Mar 05, 2025, 10:21 AM IST
Singer Kalpana: ಆತ್ಮಹತ್ಯೆಗೆ ಯತ್ನಿಸಿದ್ರಾ ಸ್ಟಾರ್ ಗಾಯಕಿ? ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆ

ಸಾರಾಂಶ

ಗಾಯಕಿ ಕಲ್ಪನಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಕಲ್ಪನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಗಾಯಕಿ ಪತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ,

ಹೈದರಾಬಾದ್‌: ಟಾಲಿವುಡ್ ಅಂಗಳದ ಸ್ಟಾರ್ ಸಿಂಗರ್ ಕಲ್ಪನಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಪ್ರಕರಣ ಬೆಳಕಿಗೆ ಬಂದಿದೆ. ಎರಡು ದಿನದಿಂದ ಗಾಯಕಿ ಕಲ್ಪನಾ ಮನೆಯಿಂದ ಹೊರ ಬರದಿದ್ದಾಗ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆತ್ಮಹತ್ಯೆಗೆ ಯತ್ನಿಸಿದ್ದ ಗಾಯಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿಜಾಂಪೇಟೆಯ ವರ್ಟೆಕ್ಸ್ ಪ್ರಿವಿಲೇಜ್‌ನಲ್ಲಿ ಗಾಯಕಿ ಕಲ್ಪನಾ ವಾಸವಾಗಿದ್ದರು. ಪೊಲೀಸರು ಬಂದು ಬೆಲ್ ಮಾಡಿದಾಗಲೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಾಗಿಲು ಒಡೆದು ಒಳಗೆ ಹೋಗಿ ನೋಡಿದ್ರೆ ಕಲ್ಪನಾ ಬೆಡ್ ಮೇಲೆ ಪ್ರಜ್ಞೆ ಇಲ್ಲದೇ ಬಿದ್ದಿರೋದು ಗಮನಕ್ಕೆ ಬಂದಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. 

ಗಾಯಕಿ ಕಲ್ಪನಾ ಆತ್ಮಹತ್ಯೆಗೆ ಮುಂದಾಗಿದ್ರು ಎಂಬ ಅನುಮಾನಗಳಿವೆ. ಸದ್ಯ ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಆದ್ರೆ ಗಾಯಕಿ ಕಲ್ಪನಾ ಅವರ ಈ ನಿರ್ಧಾರಕ್ಕೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಕಲ್ಪನಾ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಲ್ಪನಾ ರಿಫ್ರೆಶ್‌ಮೆಂಟ್‌ಗೋಸ್ಕರ ಒಂದಷ್ಟು ಮಾತ್ರೆ ತಗೊಳ್ತಿದ್ರಂತೆ, ಅದರ ಡೋಸ್ ಜಾಸ್ತಿಯಾದಕ್ಕೆ ಏನಾದ್ರೂ ಆಗಿದ್ಯಾ ಎಂಬ ಅನುಮಾನ ಸಹ ಮೂಡಿದೆ.

ಇದನ್ನೂ ಓದಿ: ಮದುವೆಗೆ ಮುನ್ನವೇ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಬ್ರೇಕಪ್? Instagram pics ಎಲ್ಲ ಡಿಲೀಟ್?

ಎರಡು ದಿನದ ಹಿಂದೆಯಷ್ಟೇ ಗಂಡ ಮತ್ತೆ ಇನ್ನುಳಿದ ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕಲ್ಪನಾ ಒಬ್ಬರೇ ಮನೆಯಲ್ಲಿದ್ದರು.  ಎರಡು ದಿನದಿಂದ ಕಲ್ಪನಾ ಮನೆಯಿಂದ ಹೊರಗೆ ಬಂದಿರಲಿಲ್ಲ. ಅನುಮಾನ ಬಂದು ಸ್ಥಳೀಯರು ಪೊಲೀಸರಿಗೆ ಹೇಳಿದ್ದಾರೆ.  ಎರಡು ದಿನದಿಂದ ಅವರು ಮನೆಯಲ್ಲಿರುವ ವಿಷಯ ಬಹುಶಃ ಎಲ್ಲರಿಗೂ ಗೊತ್ತಿತ್ತು. ಕುಟುಂಬದ ಯಾವ ಸದಸ್ಯರು ಕಲ್ಪನಾರಿಗೆ ಕಾಲ್ ಮಾಡಿರಲಿಲ್ಲವಾ ಎಂಬ ಅನುಮಾನ ಮೂಡಿದೆ.  ಸದ್ಯಕ್ಕೆ ಪೊಲೀಸರು ಕಲ್ಪನಾ ಗಂಡನ್ನ ವಿಚಾರಣೆ ಮಾಡ್ತಿದ್ದಾರೆ. 

ಇದನ್ನೂ ಓದಿ: ಹೆಂಡ್ತಿಗೂ ನಂಗೂ 10 ವರ್ಷ ವ್ಯತ್ಯಾಸ, ಮೂರ್ನಾಲ್ಕು ಸಲ ಕಠಿಣವಾದ ಜಗಳ ಆಗಿರಬಹುದು: ಮುಖ್ಯಮಂತ್ರಿ ಚಂದ್ರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!