ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ಹೃದಯಾಘಾತದಿಂದ ನಿಧನ

Published : Mar 09, 2023, 09:09 AM ISTUpdated : Mar 09, 2023, 09:38 AM IST
ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ಹೃದಯಾಘಾತದಿಂದ ನಿಧನ

ಸಾರಾಂಶ

ಹೃದಯಾಘಾತದಿಂದ ಕೊನೆಯುಸಿರೆಳೆದ ಬಾಲಿವುಡ್ ಖ್ಯಾತ ನಿರ್ದೇಸಕ ಹಾಗೂ ನಟ. ನಿಧನ ವಾರ್ತೆಯನ್ನು ತಿಳಿಸಿದ ಅನುಪಲ್ ಖೇರ್....  

ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಸತೀಶ್ ಕೌಶಿಕ್ ಭಾನುವಾರ ರಾತ್ರಿ 8 ಗಂಟೆಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಟ ಅನುಪಮ್ ಖೇರ್‌ ಟ್ವಿಟರ್‌ನಲ್ಲಿ ಸತೀಶ್ ಇನ್ನಿಲ್ಲ ಎನ್ನುವ ವಿಚಾರವನ್ನು ಪೋಸ್ಟ್‌ ಮಾಡಿದ್ದಾರೆ. ಕಂಗನಾ ರಣಾವತ್ ಎಮರ್ಜೆನ್ಸಿ ಸಿನಿಮಾದಲ್ಲಿ ಸತೀಶ್ ಮತ್ತು ಅನುಪಮ್ ಖೇರ್‌ ಒಟ್ಟಿಗೆ ಅಭಿನಯಿಸಿದ್ದಾರೆ. 

ಸತೀಶ್‌ಗೆ ಎದೆ ನೋವು ಕಾಣಿಸಿಕೊಂಡಿತ್ತು ತಕ್ಷಣವೇ ಕುಟುಂಬಸ್ಥರು ನವ ದೆಹಲಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಆದರೆ ನಡು ರಸ್ತೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ನೇಹಿತರು ಮತ್ತು ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ ಸತೀಶ್ ದೇಹವನ್ನು ಮುಂಬೈ ನಿವಾಸಕ್ಕೆ ತರಲಿದ್ದಾರೆ  ಅಂತ್ಯ ಸಂಸ್ಕಾರವನ್ನು ಯಾರಿ ರಸ್ತೆ, ಮುಂಬೈನ ವರ್ಸೋವಾ ನಿವಾಸದಲ್ಲಿ ನಡೆಯಲಿದೆ. 

ಸತೀಶ್ ಕೊನೆಯ ಪೋಸ್ಟ್:

ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟಿವ್ ಆಗಿರುವ ಸತೀಶ್ ಮಾರ್ಚ್‌ 7ರಂದು ಅಖ್ತರ್ ಮತ್ತು ಶಬಾನಾ ಅಜ್ಮಿಯ ಹೋಳಿ ಬಾಷ್ ಪಾರ್ಟಿಯಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು. ಪ್ರತಿಯೊಬ್ಬರನ್ನು ತಬ್ಬಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಿಚ್ಚಾ ಚಡ್ಡ ಮತ್ತು ಅಲಿ ಫಾಜಿಲ್ ಕೂಡ ಇದ್ದರು. 'ಕಲರ್‌ಫುಲ್‌ ತಮಾಷೆ ತುಂಬಿದ ಪಾರ್ಟಿ ಇದು. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ. 

ಗಣ್ಯರ ಸಂತಾಪ:

'ನನಗೆ ಗೊತ್ತು ಸಾವು ಈ ಪ್ರಪಂಚದ ಅಂತಿಮ ಸತ್ಯ. ಆದರೆ ಕನಸಿನಲ್ಲೂ ಕಲ್ಪನೆ ಮಾಡಿಕೊಂಡಿರಲಿಲ್ಲ ನನ್ನ ಆಪ್ತ ಸ್ನೇಹಿತನ ಬಗ್ಗೆ ಈ ರೀತಿ ಬರೆಯುವ ಸಮಯ ಬರುತ್ತದೆ ಎಂದು. ನಮ್ಮ 45 ವರ್ಷದ ಸ್ನೇಹಕ್ಕೆ ಇದ್ದಕ್ಕಿದ್ದಂತೆ ಅಂತಮ ಸಮಯ ಬಂದಿದೆ. ಸತೀಶ್ ನೀನಿಲ್ಲದ ನನ್ನ ಜೀವನ ಹೀಗಿದಂತೆ ಇರುವುದಿಲ್ಲ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಅನುಪಮ್ ಖೇರ್ ಬರೆದುಕೊಂಡಿದ್ದಾರೆ. 

' ಬೆಳಗ್ಗೆನೇ ನೋವಾಗುವ ವಾರ್ತೆ ಕೇಳಿಸಿಕೊಳ್ಳುತ್ತಿರುವೆ. ನನ್ನ ದೊಡ್ಡ ಚಿಯರ್‌ಲೀಡರ್‌ ಅದ್ಭುತ ನಟ ಹಾಗೂ ನಿರ್ದೇಶಕ ಸತೀಶ್ ಕೌಶಿಕ್‌ ಜೀ ವೈಯಕ್ತಿಕವಾಗಿಯೂ ಪ್ರಾಮಾಣಿಕ ಒಳ್ಳೆಯ ವ್ಯಕ್ತಿ. ಎಮರ್ಜೆನ್ಸ್‌ ಸಿನಿಮಾದಲ್ಲಿ ಅವರಿಗೆ ಆಕ್ಷನ್‌ ಕಟ್ ಹೇಳಿದ ಖುಷಿ ನನಗಿದೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುವೆ' ಎಂದು ಕಂಗನಾ ರಣಾವತ್ ಟ್ವೀಟ್ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?