Shah Rukh Khan​ ಮನೆಯಲ್ಲಿ ಎಂಟು ಗಂಟೆ ಅಡಗಿಕುಳಿತಿದ್ದ ಆಗಂತುಕರು!

By Suvarna News  |  First Published Mar 8, 2023, 6:07 PM IST

ಶಾರುಖ್​ ಮನೆಯೊಳಕ್ಕೆ ಇಬ್ಬರು ಆಗಂತುಕರು ಅವಿತುಕೊಂಡಿರುವುದು ಭಾರಿ ಕೋಲಾಹಲ ಸೃಷ್ಟಿಸಿದೆ. ಇವರು ಶಾರುಖ್​ ಬಂಗಲೆಯೊಳಕ್ಕೆ ಬಂದದ್ದು ಹೇಗೆ?
 


ಶಾರುಖ್ ಖಾನ್ (Shah Rukh Khan) ಮನೆಯೊಳಗೆ ಕೆಲ ದಿನಗಳ ಹಿಂದೆ  ಇಬ್ಬರು ಯುವಕರು ನುಗ್ಗಿರುವ ಸುದ್ದಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಮುಂಬೈನ ಬಾಂದ್ರಾದಲ್ಲಿರುವ ಶಾರುಖ್ ಅವರ ಮನೆ ಮನ್ನತ್​ಗೆ ಇಬ್ಬರು ಯುವಕರು ನುಗ್ಗಿದ್ದು ಭಾರಿ ಆತಂಕ ಸೃಷ್ಟಿಸಿತ್ತು. ಈ ಇಬ್ಬರು ಯುವಕರ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿತ್ತು. ರಾತ್ರಿ 3 ಗಂಟೆಗೆ ‘ಮನ್ನತ್​’ ಬಂಗಲೆಯ ಕಾಂಪೌಂಡ್​ ಹಾರಿ ಇಬ್ಬರು ಅಭಿಮಾನಿಗಳು ಒಳಗೆ ಬಂದರು. ಮರುದಿನ ಬೆಳಗ್ಗೆ 10.30ರ ಸುಮಾರಿಗೆ ಅವರಿಬ್ಬರನ್ನು ಮೇಕಪ್​ ರೂಮ್​ನಲ್ಲಿ ನೋಡಿ ಶಾರುಖ್​ ಖಾನ್​ಗೆ ಅಚ್ಚರಿ ಆಗಿತ್ತು. ಶಾರುಖ್ ಖಾನ್​ ಅವರ ದೊಡ್ಡ ಬಂಗಲೆಯಲ್ಲಿ ಸಾಕಷ್ಟು ಕೊಠಡಿಗಳಿದ್ದು,  ಅನೇಕ ಸಂದರ್ಶನಗಳನ್ನು ಈ ಮನೆಯಲ್ಲೇ ಮಾಡಲಾಗುತ್ತದೆ. ಪ್ರಚಾರಕ್ಕೆ ಸಂಬಂಧಿಸಿದ ವಿಡಿಯೋಗಳ ಶೂಟಿಂಗ್ ಕೂಡ ಇಲ್ಲಿ ನಡೆಯುತ್ತದೆ. ಶಾರುಖ್​ ಖಾನ್​​ ಅವರಿಗಾಗಿ ಪ್ರತ್ಯೇಕ ಮೇಕಪ್​ ರೂಂ (Make up room) ಇದೆ. ಅಲ್ಲಿಯೇ ಇವರಿಬ್ಬರನ್ನು ಶಾರುಖ್​ ಕಂಡಿದ್ದರು.

ಆ ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಕುತೂಹಲದ ಮಾಹಿತಿ ಈಗ ಬಹಿರಂಗಗೊಂಡಿದೆ. ಅದೇನೆಂದರೆ, ಈ ಆಗಂತುಕರು ಶಾರುಖ್​ ಮನೆಯಲ್ಲಿ 8 ಗಂಟೆಗಳ ಕಾಲ ಬಚ್ಚಿಟ್ಟುಕೊಂಡಿದ್ದಂತೆ! ಈ ಸುದ್ದಿಯನ್ನು ಪೊಲೀಸರು ರಿವೀಲ್ ಮಾಡಿದ್ದಾರೆ.  18 ಹಾಗೂ 19 ವರ್ಷದ ಯುವಕರು ಗುಜರಾತ್​ನ (Gujarath) ಭರೂಚ್ ಗ್ರಾಮದ ಈ ಯುವಕರು ಶಾರುಖ್​ ಅಭಿಮಾನಿಗಳಂತೆ.  ನಟನಿಗೆ ಸರ್ಪೈಸ್ ಕೊಡಲು ಮನೆಯೊಳಗೆ ಪ್ರವೇಶಿಸಿ ಬಚ್ಚಿಟ್ಟುಕೊಂಡಿದ್ದರು ಎಂಬ ಹೇಳಿಕೆ ನೀಡಿದ್ದಾರೆ.

Tap to resize

Latest Videos

Gauri Khan: ಭಾರಿ ಸುದ್ದಿಯಾಗ್ತಿದೆ ಶಾರುಖ್​ ಮನೆ ಡಸ್ಟ್‌ಬಿನ್​! ಯಾಕೆ ಅಂತೀರಾ?
  
ಮನ್ನತ್​ನ ಮೂರನೇ ಫ್ಲೋರ್​ನಲ್ಲಿರುವ ಶಾರುಖ್ ಖಾನ್ ಅವರ ಮೇಕಪ್ ರೂಮ್​ನಲ್ಲಿ ಇಬ್ಬರೂ ಅಡಗಿಕೊಂಡಿದ್ದರು ಎನ್ನಲಾಗಿದೆ. ಈಗ ಅಲ್ಲಿ ಕೆಲವು ರಿಪೇರಿಗಳನ್ನು ಮಾಡಲಾಗುತ್ತಿದೆ. ರಿಪೇರಿಯಾಗುತ್ತಿದ್ದ ಭಾಗವನ್ನು ಬಳಸಿ ಇಬ್ಬರೂ ರಾತ್ರಿ 2 ಗಂಟೆಗೆ ಮನೆಯೊಳಗೆ ಹತ್ತಿದ್ದಾರೆ ಎನ್ನಲಾಗಿದೆ. ಗುಜರಾತ್​ನಿಂದ ಮುಂಬೈಗೆ ಬಂದ ಇಬ್ಬರು ಅಭಿಮಾನಿಗಳು ರಾತ್ರಿ 3 ಗಂಟೆಗೆ ಶಾರುಖ್​ ಮನೆಯ ಕಾಂಪೌಂಡ್​ ಹಾರಿ ಒಳಗೆ ಬಂದರು. ರಾತ್ರಿ ಆಗಿದ್ದರಿಂದ ಯಾರ ಕಣ್ಣಿಗೂ ಕಾಣದಂತೆ ಮನೆಯೊಳಗೆ ಹೊಕ್ಕಿದ್ದಾರೆ. ನಂತರ, ಶಾರುಖ್​ ಅವರ ಮೇಕಪ್​ ರೂಂ ಒಳಗೆ ಅಡಗಿ ಕುಳಿತುಕೊಂಡರು. ಬೆಳಗ್ಗೆ 10.30ರ ಸುಮಾರಿಗೆ ಅವರಿಬ್ಬರನ್ನು ನೋಡಿ ಶಾರುಖ್​ ಖಾನ್​ಗೆ ಅಚ್ಚರಿ ಆಯಿತು. ಸದ್ಯ ಆ ಹುಚ್ಚು ಅಭಿಮಾನಿಗಳ ವಿರುದ್ಧ ಕೇಸ್​ ದಾಖಲಾಗಿದೆ ಎಂದು ಪೊಲೀಸರು (Police) ಹೇಳಿದ್ದಾರೆ.
 
ಮೂಲಗಳ ಪ್ರಕಾರ ಸುಮಾರು 8 ಗಂಟೆಗಳ ಕಾಲ ಶಾರುಖ್ ಖಾನ್ ಅವರ ಪರ್ಸನಲ್ ಮೇಕಪ್ ರೂಂನಲ್ಲಿ ಈ ಇಬ್ಬರು ಆರೋಪಿಗಳು ಕಾಯುತ್ತಿದ್ದರು ಎನ್ನಲಾಗಿದೆ. ವಿಚಾರ ಬಹಿರಂಗವಾದಾಗ ಇಬ್ಬರನ್ನೂ ಮುಂಬೈನ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಶಾರುಖ್ ಮ್ಯಾನೇಜರ್ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸ್ ಎಫ್‌ಐಆರ್ ಪ್ರಕಾರ, ಮನ್ನತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸತೀಶ್ (Satish) ಎಂಬಾತ ಶಾರುಖ್ ಖಾನ್ ಅವರ ಮೇಕಪ್ ರೂಂ ಅನ್ನು ಸ್ವಚ್ಛಗೊಳಿಸಲು ಅಲ್ಲಿಗೆ ಬಂದಾಗ, ಈ ಇಬ್ಬರು ಅಲ್ಲಿ ಅಡಗಿಕೊಂಡಿದ್ದನ್ನು ನೋಡಿದ್ದಾರೆ. ಅದರ ನಂತರ ಸತೀಶ್ ಅವರಿಬ್ಬರನ್ನೂ ಹಿಡಿದು ಅಲ್ಲಿಂದ ಮನೆಯ ಲಾಬಿಗೆ ಕರೆದೊಯ್ದಿದ್ದಾರೆ. ಆಗ ಮಾತ್ರ ಶಾರುಖ್ ಖಾನ್ ಈ ಇಬ್ಬರನ್ನು ನೋಡಿ ಇದ್ದಕ್ಕಿದ್ದಂತೆ ಆಘಾತಕ್ಕೊಳಗಾದರು. ಇದಾದ ನಂತರ ಮನ್ನತ್ ನ ಸಿಬ್ಬಂದಿ ಬಂದು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.

Rajkumar Hirani: ಶಾರುಖ್​ ಕುರಿತ ಸೀಕ್ರೇಟ್​ ಬಹಿರಂಗಗೊಳಿಸಿದ ನಿರ್ಮಾಪಕ !

ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ (Custody) ತೆಗೆದುಕೊಂಡು ವಿಚಾರಣೆ ಮಾಡಿದಾಗ ಈ ವಿಷಯ ತಿಳಿದುಬಂದಿದೆ. ಈ ಯುವಕರು  ಮಾರ್ಚ್​ 1ರಂದೇ ಮುಂಬೈಗೆ ಬಂದಿದ್ದರು. ಶಾರುಖ್ ಅವರ ಮನೆಯನ್ನು ಪರಿಶೀಲಿಸಿದ್ದಾರೆ. ನಂತರ ರಾತ್ರಿ 3 ಗಂಟೆಗೆ ‘ಮನ್ನತ್​’ ಬಂಗಲೆಯ ಕಾಂಪೌಂಡ್​ ಹಾರಿ ಇಬ್ಬರು ಅಭಿಮಾನಿಗಳು ಒಳಗೆ ಬಂದರು. ಮರುದಿನ ಬೆಳಗ್ಗೆ 10.30ರ ಸುಮಾರಿಗೆ ಅವರಿಬ್ಬರನ್ನು ಮೇಕಪ್​ ರೂಮ್​ನಲ್ಲಿ ನೋಡಿದ್ದಾರೆ. ಮನ್ನತ್ ಕಂಪೌಂಡ್ ಹಾರುವಾಗ ಇಬ್ಬರ ಮೂಗಿಗೂ ಗಾಯವಾಗಿದೆ. ಇಬ್ಬರನ್ನೂ ಪೊಲೀಸರ ವಶಕ್ಕೆ ನೀಡುವ ಮುನ್ನ ಶಾರುಖ್ ಮನೆಯ ಸಹಾಯಕರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದರು. ಅವರ ಪೋಷಕರು ಮುಂಬೈಗೆ ಬಂದು ತಲಾ 10 ಸಾವಿರ ಬಾಂಡ್ ಇಟ್ಟು ಅವರನ್ನು ಜಾಮೀನಿನ (Bail) ಮೇಲೆ ಬಿಡಿಸಿಕೊಂಡು ಹೋಗಿದ್ದಾರೆ.

click me!