
ಪಾಪ ಪ್ರಿಯಾಂಕ ಚೋಪ್ರಾ ಜೋನಸ್ ಅನ್ನೋದನ್ನು ಹೆಸರಿನಿಂದ ತೆಗೆದದ್ದೇ ತಡ, ವಿಚ್ಚೇದನೆ ವದಂತಿ ಜೋರಾಯ್ತು. ಆದ್ರೆ ದೇಸಿ ಗರ್ಲ್ ಸೂಪರ್ ಕೂಲ್. ಯಾವುದಕ್ಕೂ ತೆಲೆಕೆಡಿಸಿಕೊಳ್ಳಲ್ಲ. ತನ್ನ ಪ್ರೀತಿಯ ಗಂಡನೊಂದಿಗೆ ಮೂರನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಚಂದದ ಹೂಗಳು, ಕ್ಯಾಂಡಲ್ ಲೈಟ್, ಸಿಂಪಲ್ ಡೆಕೊರೆಷನ್ ಮಧ್ಯೆ ರೊಮ್ಯಾಂಟಿಕ್ ಡಿನ್ನರ್ ಮಾಡಿದ್ದಾರೆ ಜೋಡಿ. ಇದರ ವಿಡಿಯೋ ಫೋಟೋಗಳನ್ನು ಕೂಡಾ ಶೇರ್ ಮಾಡಿದ್ದಾರೆ.
ಮದುವೆಯ ವಾರ್ಷಿಕೋತ್ಸವದಂದು ನಿಮ್ಮ ಪ್ರೀತಿಪಾತ್ರರನ್ನು ಅವರ ನೆಚ್ಚಿನ ಗಿಫ್ಟ್ ಜೊತೆ ಸರ್ಪೈಸ್ ನೀಡಿ ನಿಮ್ಮ ಬಂಧವನ್ನು ಆಚರಿಸಲು ಪರಿಪೂರ್ಣ ಸಂದರ್ಭ. ನಿಮ್ಮ ವಿವಾಹ ವಾರ್ಷಿಕೋತ್ಸವ ಸಮೀಪಿಸಿದ್ಯಾ ? ಆಚರಿಸೋಕೆ ಐಡಿಯಾ ಹುಡುಕ್ತಿದ್ದೀರಾ ? ಪಿಗ್ಗಿ-ನಿಕ್ ಜೋಡಿಯ ಪರ್ಫೆಕ್ಟ್ ಆನಿವರ್ಸರಿ ಸಂಭ್ರಮ ಆಪ್ತವಾಗಿತ್ತು. ಸೆಲೆಬ್ರಿಟಿ ಕಪಲ್ ಫೋಟೊ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ತಮ್ಮ ಮೂರನೇ ವಾರ್ಷಿಕೋತ್ಸವವನ್ನು ಆಚರಿಸಿದ ಪಾಪ್ ತಾರೆ ನಿಕ್ ಜೋನಾಸ್ ಅವರು ಪತ್ನಿಗೆ ಸರ್ಪೈಸ್ ಕೊಟ್ಟಿದ್ದಾರೆ. ಅವರು ಕ್ವಾಂಟಿಕೋ ನಟಿಯನ್ನು ಅವರ ಕನಸಿನ ಸೆಟಪ್ ಮೂಲಕ ಖುಷಿಪಡಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಬ್ಯುಟಿ ಗುಟ್ಟು ರಟ್ಟು!
ಅವರು ಹಂಚಿಕೊಂಡ ಕಿರು ವೀಡಿಯೊದಲ್ಲಿ, ಪ್ರಿಯಾಂಕಾ ಅವರು ಬಣ್ಣ ಬಣ್ಣದ ಹೂವಿನ ಜೋಡಣೆಯೊಂದಿಗೆ ಸಣ್ಣ ಟೇಬಲ್‌ನಲ್ಲಿ ಕುಳಿತುಕೊಂಡಿದ್ದರು/ ದಂಪತಿಗಳ ವಿಶೇಷ ದಿನಕ್ಕಾಗಿ ಕೋಣೆಯ ಒಂದು ಮೂಲೆಯಲ್ಲಿ, ಮೇಣದಬತ್ತಿಗಳು ಮತ್ತು ಬಿಳಿ ಬೆಳಕಿನಲ್ಲಿ ಫಾರೆವರ್ ಎಂದು ಬರೆಯುವ ಬೃಹತ್ ಚಿಹ್ನೆ ಇತ್ತು.
ಗುಲಾಬಿ, ಬಿಳಿ, ಹಳದಿ ಮತ್ತು ಹೂವಿನ ಅಲಂಕಾರ ಮನ ಸೆಳೆಯುವಂತಿದೆ. ಇನ್ನಷ್ಟು ಗಮನವನ್ನು ಸೆಳೆದದ್ದು ಸುಂದರವಾದ ಬಿಳಿ ಗರಿಗಳಿಂದ ಪ್ಯಾನೆಲ್ ಮಾಡಿದ ಸಂಪೂರ್ಣ ಗೋಡೆ ಮತ್ತು ಸುಂದರವಾದ ಕರ್ಸಿವ್ ಅಕ್ಷರಗಳಲ್ಲಿ 'ಯಾವಾಗಲೂ ಮತ್ತು ಎಂದೆಂದಿಗೂ' ಎಂಬರ್ಥದ ಚಿಹ್ನೆ.
ಪತ್ನಿ ಡ್ರೆಸ್ ಸರಿಮಾಡಿದ ನಿಕ್
ಚಿನ್ನದ ಬಣ್ಣದ ಸ್ಟ್ಯಾಂಡ್‌ಗಳಲ್ಲಿ ಹೊಂದಿಸಲಾದ ರೋಮ್ಯಾಂಟಿಕ್, ಗಾಢ-ಕೆಂಪು ಬಣ್ಣದ ಮೇಣದಬತ್ತಿಗಳನ್ನು ಸಹ ರೊಮ್ಯಾಂಟಿಕ್ ಆಗಿವೆ. ಅದರಲ್ಲಿ ಅತ್ಯಂತ ಚಂದದ ಸಂದೇಶವಿರುವ ಕಾರ್ಡ್ ಕೂಡ ಇತ್ತು. ನಿನ್ನನ್ನು ಕಂಡುಕೊಂಡೆ, ನಿನ್ನನ್ನು ಮದುವೆಯಾದೆ, ನಿನ್ನನ್ನು ಉಳಿಸಿಕೊಂಡಿದ್ದೇನೆ ಎಂದು ಬರೆಯಲಾಗಿತ್ತು. ಇತ್ತೀಚೆಗೆ ಜೋಡಿ British Fashion Awards 2021 ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಧರಿಸಿದ ಭಾರಿ ಉಡುಪನ್ನು ನಿಭಾಯಿಸಲು ಪ್ರಿಯಾಂಕಾರಿಗೆ ತುಂಬಾ ಕಷ್ಟವಾಯಿತು. ನಿಕ್ ಜೋನಾಸ್ ಪ್ರಿಯಾಂಕಾ ಚೋಪ್ರಾ ಅವರ ಡ್ರೆಸ್ ಫಿಕ್ಸ್ ಮಾಡುತ್ತಿರುವುದು ಕಂಡುಬಂದಿತ್ತು. ನಿಕ್ ಮತ್ತು ಪ್ರಿಯಾಂಕರ ಈ ಸಮಯದ ವಿಡಿಯೋ ವೈರಲ್ ಆಗಿದೆ.
ಗಂಡನ ಹೆಸರು ಬಿಟ್ಟು ಸುದ್ದಿಯಾಗಿದ್ದ ನಟಿ
ಗಂಡನ ಹೆಸರು ಕೈ ಬಿಟ್ಟು ಸುದ್ದಿ ಮಾಡಿದ್ದ ಪ್ರಿಯಾಂಕಾ ಚೋಪ್ರಾ(Priyanka Chopra) ಜೋನಾಸ್( Nick Jonas) ತಮ್ಮ ಇನ್ ಸ್ಟಾಗ್ರಾಂ (Social Media) ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದು ಹಲವು ವದಂತಿಗಳಿಗೆ ಕಾರಣವಾಗಿತ್ತು. ಹಾಗಾಗಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಸ್ಟಾರ್ ನಿಕ್ ಜೋನಾಸ್ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿತು.
ಇತ್ತೀಚಿಗಷ್ಟೆ ಹೊಸ ಮನೆಗೆ ಸ್ಥಳಾಂತರಗೊಂಡಿದ್ದ ಪ್ರಿಯಾಂಕಾ ದೀಪಾವಳಿಯನ್ನು ಅಲ್ಲಿಯೇ ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪತಿಯ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಈ ಬಾರಿಯ ದೀಪಾವಳಿ ತುಂಬಾ ಸ್ಪೆಷಲ್ ಎಂದು ತಿಳಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.