Swara Bhasker to Join Politics ? TMC ಸೇರಲು ನಟಿಗೆ ಅಹ್ವಾನ ಕೊಟ್ಟ ದೀದಿ

By Suvarna NewsFirst Published Dec 2, 2021, 7:56 PM IST
Highlights

ಎರಡು ದಿನದ ಮುಂಬೈ ಭೇಟಿಯಲ್ಲಿ ಟಿಎಂಸಿ(TMC) ನಾಯಕಿ ಮಮತಾ ಬ್ಯಾನರ್ಜಿ(Mamata Banerjee) ಅವರು ನಟಿ ಸ್ವರಾ ಭಾಸ್ಕರ್(Swara bhasker) ಅವರನ್ನು ಭೇಟಿಯಾಗಿದ್ದು ರಾಜಕೀಯಕ್ಕೆ ಸೇರುವಂತೆ ಆಹ್ವಾನ ಕೊಟ್ಟಿದ್ದಾರೆ. ನಟಿ ಏನಂದ್ರು ? ಟಿಎಂಸಿ ಸೇರ್ತಾರಾ ಸ್ವರಾ ಭಾಸ್ಕರ್ ?

ಪಶ್ಚಿಮ ಬಂಗಾಳ(West Bengal) ಸಿಎಂ ಮಮತಾ ಬ್ಯಾನರ್ಜಿ(Mamata Banerjee) ಅವರು ನಟಿ ಸ್ವರಾ ಭಾಸ್ಕರ್(Swara Bhasker) ಅವರನ್ನು ಭೇಟಿಯಾಗಿದ್ದು ರಾಜಕೀಯಕ್ಕೆ ಆಹ್ವಾನಿಸಿದ್ದಾರೆ. ಎರಡು ದಿನಗಳ ಪ್ರವಾಸದಲ್ಲಿ ಮುಂಬೈಗೆ(Mumbai) ಆಗಮಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (West Bengal CM Mamata Banerjee) ಅವರು ಬುಧವಾರ ನಾರಿಮನ್ ಪಾಯಿಂಟ್‌ನ ವೈಬಿ ಚವಾಣ್ ಸೆಂಟರ್‌ನಲ್ಲಿ ಸಮಾಜದ ವಿವಿಧ ವರ್ಗಗಳೊಂದಿಗೆ ಸಭೆ ನಡೆಸಿದರು. ಇದರಲ್ಲಿ ಚಿತ್ರರಂಗದ ಗಣ್ಯರು, ಸಮಾಜಸೇವಕರು ಮತ್ತಿತರರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಿಎಂ ಹಾಗೂ ನಟಿಯ ಮಧ್ಯೆ ರಾಜಕೀಯ ಎಂಟ್ರಿ ಕುರಿತು ಮಾತುಕತೆಯಾಗಿದೆ.

ಪ್ರತಿಯೊಬ್ಬ ಸೆಲೆಬ್ರಿಟಿಗಳು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಿಲ್ಲ. ವಿವಾದಗಳನ್ನು ಎದುರಿಸಬಹುದೆಂಬ ಭಯದಿಂದ ದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಕಂಗನಾ ರಣಾವತ್, ರಿಚಾ ಚಡ್ಡಾ, ಸ್ವರಾ ಭಾಸ್ಕರ್‌ನಂತಹ ಕೆಲವರು ಇದಕ್ಕೆ ಅಪವಾದ. ಪದೇ ಪದೇ, ಅವರು ಎಲ್ಲಾ ಚರ್ಚಾಸ್ಪದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ ನಟಿ.

ಸಿವಿಲ್ ಸೊಸೈಟಿ ಮೀಟಿಂಗ್‌ನಲ್ಲಿ ಜಾವೆದ್ ಅಖ್ತರ್, ಮಹೇಶ್ ಭಟ್ಟ್: 3ನೇ ಸಾಲಿನಲ್ಲಿ ಕೈ ನಾಯಕ!

ಹಾಗಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಂಬೈ ಭೇಟಿಯ ಸಂದರ್ಭದಲ್ಲಿ ಭೇಟಿಯಾಗಿ ಶುಭಾಶಯ ಕೋರಿದಾಗ, ಸ್ವರಾ ಅವರು ಉಪಸ್ಥಿತರಿದ್ದರು. ವೇದಿಕೆಯ ಮೇಲೆ ಕುಳಿತಿದ್ದ ಮಮತಾ ಅವರನ್ನು ಉದ್ದೇಶಿಸಿ ಮಾತನಾಡಿದ ಸ್ವರಾ, ಸಭಿಕರ ನಡುವೆ ಸುಮಾರು 4 ನಿಮಿಷಗಳ ಕಾಲ ಮಾತನಾಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ಸ್ವರಾ ಅವರಿಂದ ಪ್ರಭಾವಿತರಾದರು. ಅವರು ತಾಳ್ಮೆಯಿಂದ ಸ್ವರಾ ಮಾತನ್ನು ಆಲಿಸಿ ನಂತರ ನೀವೇಕೆ ರಾಜಕೀಯಕ್ಕೆ ಸೇರಬಾರದು? ನೀವು ಸ್ಟ್ರಾಂಗ್ ಮಹಿಳೆ ಎಂದು ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by Swara Bhasker (@reallyswara)

ಸ್ವರಾ ಭಾಸ್ಕರ್ ಅವರು ಮಮತಾ ಬ್ಯಾನರ್ಜಿಯವರ ಅಭಿನಂದನೆಗೆ ಪ್ರತಿಕ್ರಿಯಿಸಿ, ನನ್ನನ್ನು ಅಭಿನಂಧಿಸಿದ್ದು ಅವರ ಕೃಪೆಯಾಗಿದೆ ಎಂದು ಹೇಳಿದ್ದಾರೆ. ಕಾನೂನಿನ ದುರುಪಯೋಗಕ್ಕಾಗಿ ತಾನು ನಿಲ್ಲುವುದಿಲ್ಲ ಎಂದು ಅವರು ಎಲ್ಲರಿಗೂ ಭರವಸೆ ನೀಡುವುದನ್ನು ಕೇಳಲು ನನಗೆ ಸಂತೋಷವಾಯಿತು ಎಂದು ಅವರು ಹೇಳಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಗ್ಗೆಯೂ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ. ಶಾರುಖ್ ಖಾನ್ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಅವರು ಹೇಳಿದರು.

ಸ್ವರಾ ಅವರನ್ನು ಹೊರತುಪಡಿಸಿ, ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್, ಗೀತರಚನೆಕಾರ ಜಾವೇದ್ ಅಖ್ತರ್, ನಟರಾದ ಶತ್ರುಘ್ನ ಸಿನ್ಹಾ, ರಿಚಾ ಚಡ್ಡಾ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

click me!