
ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ಖ್ಯಾತ ಹಿರಿಯ ನಟಿಯನ್ನು ತಮ್ಮ ಸಿನಿಮಾಗೆ ಬೇಡ. ಅದರಲ್ಲೂ ಅವರು ನನ್ನ ತಾಯಿ ಪಾತ್ರಕ್ಕೆ ಬೇಡ ಎಂದು ಹೇಳಿದ್ದರು. ಹಿರಿಯ ನಟಿಯ ಬದಲಾಗಿ ಬೇರೊಬ್ಬ ಕಲಾವಿದರನ್ನು ಚಿತ್ರಕ್ಕೆ ಕರೆದುಕೊಂಡು ಬರಲು ಮುಂದಾಗಿದ್ದರು. ತಬು ಅವರನ್ನು ಭೇಟಿಯಾದಾಗ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಆದ್ರೆ ನಾನು ಈ ಪಾತ್ರಕ್ಕೆ ಸೂಟ್ ಆಗಲ್ಲ ಎಂದು ಆಯುಷ್ಮಾನ್ ರಿಜೆಕ್ಟ್ ಮಾಡಿದ್ದ ನಟಿ ಹೆಸರನ್ನು ಸೂಚಿಸಿದ್ದರು. ಕೊನೆಗೆ ಆ ಸಿನಿಮಾಗೆ ಆ ನಟಿಯೇ ಆಯ್ಕೆಯಾಗಿದ್ದರು. ಚಿತ್ರವೂ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು.
2018ರಲ್ಲಿ ಬಿಡುಗಡೆಯಾದ ಬಧಾಯಿ ಹೋ ಸಿನಿಮಾ 7.9 ರೇಟಿಂಗ್ ಪಡೆದುಕೊಂಡಿದೆ. ನೀನಾ ಗುಪ್ತಾ, ಗಜರಾಜ್ ರಾವ್, ಆಯುಷ್ಮಾನಾ ಖುರಾನಾ, ಸುರೇಖಾ ಸಿಕ್ರಿ, ಸಾನ್ಯಾ ಮಲ್ಹೋತ್ರಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು. ಕಾಮಿಡಿ-ಡ್ರಾಮಾ ಕಥೆಯನ್ನು ಹೊಂದಿದ್ದ ಬಧಾಯಿ ಹೋ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿಯೂ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ತನ್ನ ತಾಯಿ ಪಾತ್ರಕ್ಕೆ ನೀನಾ ಗುಪ್ತಾ ಬೇಡಬೆಂದು ಆಯುಷ್ಮಾನಾ ಖುರಾನಾ ರಿಜೆಕ್ಟ್ ಮಾಡಿದರು. ಈ ವಿಷಯವನ್ನು ಕಾರ್ಯಕ್ರಮವೊಂದರಲ್ಲಿ ನೀನಾ ಗುಪ್ತಾ ಅವರೇ ರಿವೀಲ್ ಮಾಡಿದ್ದಾರೆ.
ಬಧಾಯಿ ಹೋ ಸಿನಿಮಾಕ್ಕೆ ನಾನು ಮೊದಲ ಆಯ್ಕೆಯಾಗಿದ್ದೆ. ಆದ್ರೆ ಚಿತ್ರದ ಹೀರೋ ಆಯುಷ್ಮಾನ್ ಖುರಾನಾ ನನ್ನನ್ನು ರಿಜೆಕ್ಟ್ ಮಾಡಿ ತಬು ಬಳಿ ಹೋಗಿದ್ದರು. ಅಲ್ಲಿಯೂ ನನ್ನ ಹೆಸರನ್ನು ಸೂಚಿಸಲಾಗಿತ್ತು. ಆನಂತರ ಆಯುಷ್ಮಾನ್ ಖುರಾನಾ ಅವರಿಗೆ ನನ್ನ ಕಿರುಚಿತ್ರವೊಂದನ್ನ ತೋರಿಸಲಾಗಿತ್ತು. ಆಗ ನನ್ನ ಪಾತ್ರವನ್ನು ನೋಡಿ ಒಪ್ಪಿಕೊಂಡರು. ನಾನು ತುಂಬಾ ಗ್ಲಾಮರ್ ಎಂಬ ಕಾರಣ ನೀಡಿ ರಿಜೆಕ್ಟ್ ಮಾಡಲಾಗಿತ್ತು.
ಚಿತ್ರದ ಕಥೆ ಏನು?
ಮೊಮ್ಮಕ್ಕಳನ್ನು ಕಾಣುವ ಸಮಯದಲ್ಲಿ ನಾಯಕನ ತಾಯಿ ಗರ್ಭಿಣಿಯಾಗುತ್ತಾರೆ. ನಾಯಕ ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ತಾಯಿ ಗರ್ಭಿಣಿ ಅನ್ನೋ ವಿಷಯ ಗೊತ್ತಾಗುತ್ತದೆ. ಇಳಿವಯಸ್ಸಿನಲ್ಲಿ ಗುಡ್‌ನ್ಯೂಸ್ ನೀಡಿದ ದಂಪತಿ ಸಮಾಜವನ್ನು ಹೇಗೆ ಎದುರಿಸುತ್ತಾರೆ? ಕುಟುಂಬಸ್ಥರ ವ್ಯಂಗ್ಯ ಮಾತುಗಳನ್ನು ಹೇಗೆ ಸವಾಲಾಗಿ ಸ್ವೀಕರಿಸುತ್ತಾರೆ ಎಂಬುವುದೇ ಚಿತ್ರದ ಕಥೆ.
ಇಂತಹ ಸೀರಿಯಸ್ ಕಥೆಯನ್ನು ತಮಾಷೆಯಾಗಿ ತೋರಿಸುವಲ್ಲಿ ನಿರ್ದೇಶಕ ಅಮಿತ್ ರವೀಂದ್ರನಾಥ್ ಶರ್ಮಾ ಗೆದ್ದಿದ್ದಾರೆ. ಕೇವಲ 29 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಬಧಾಯಿ ಹೋ, ಬಾಕ್ಸ್ ಆಫಿಸ್‌ನಲ್ಲಿ 221 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ನೀನಾ ಗುಪ್ತಾ ಮತ್ತು ಗಜರಾಜ್ ರಾವ್ ಅವರ ಸಿನಿ ಕೆರಿಯರ್‌ನಲ್ಲಿ ಬಧಾಯಿ ಹೋ ಸಿನಿಮಾ ಬಹುದೊಡ್ಡ ಗೆಲುವು ಆಗಿತ್ತು. ಬಧಾಯಿ ಹೋ ಬಳಿಕ ಇಬ್ಬರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ವಯಸ್ಸು 70 ಆದ್ರೂ ನೀನಾ ಗುಪ್ತಾ ಸಿಕ್ಕಾಪಟ್ಟೆ ಗ್ಲಾಮರ್
ನಟಿ ನೀನಾ ಗುಪ್ತಾ ವಯಸ್ಸು 70 ಆದ್ರೂ ಸಿಕ್ಕಾಪಟ್ಟೆ ಗ್ಲಾಮರ್ ಆಗಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಳ್ಳುವ ನೀನಾ ಗುಪ್ತಾ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇತ್ತೀಚಿನ ಬರ್ತ್ ಡೇ ಪಾರ್ಟಿಯಲ್ಲಿ ನೀನಾ ಗುಪ್ತಾ ಧರಿಸಿದ್ದ ಉಡುಪು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಲಾಫ್ಟರ್ ಶೆಫ್ ಕಾರ್ಯಕ್ರಮಕ್ಕೆ ತೆರಳಿದಾಗ, ನಿಮ್ಮ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಲು ಮನಸ್ಸು ಆಗಲ್ಲ. ನನಗಿಂತ ತುಂಬಾ ಚಿಕ್ಕವರಂತೆ ಕಾಣಿಸುತ್ತೀರಿ ಎಂದು ಹಾಸ್ಯ ನಟ ಕಷ್ಣ ಅಭಿಷೇಕ್ ತಮಾಷೆ ಮಾಡಿದ್ದರು.
ಇದನ್ನೂ ಓದಿ: ಹಣವೇ ಸರ್ವಸ್ವ, ಇದೇ ಬದುಕು ಎನ್ನೋದೇ ಸತ್ಯ- ಮಕ್ಕಳಿಗೂ ಇದನ್ನೇ ಹೇಳಿಕೊಡಿ ಎಂದ ನಟಿ ನೀನಾ ಗುಪ್ತಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.