ಹೃತಿಕ್​ ರೋಷನ್​, ಸಭಾ ಸಂಬಂಧದ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ಜಗನ್ನಾಥ್ ಗುರೂಜಿ

By Suvarna NewsFirst Published Apr 23, 2023, 5:12 PM IST
Highlights

ಹೃತಿಕ್ ರೋಷನ್ ಅವರು ಗಾಯಕಿ ಸಭಾ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಇದೆ. ಇದರ ಬೆನ್ನಲ್ಲೇ ಇವರ ವೈವಾಹಿಕ ಜೀವನ ಹೇಗಿರಲಿದೆ ಎಂದು ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ. 
 

ನಟಿ ಕಂಗನಾ ರಣಾವತ್​ಗೆ ಕೈಕೊಟ್ಟು, ಪತ್ನಿ ಸೂಸೆನ್​ಗೆ ಡಿವೋರ್ಸ್​ ಕೊಟ್ಟ ಮೇಲೆ ಬಾಲಿವುಡ್ (Bollywood) ನಟ ಹೃತಿಕ್ ರೋಷನ್ (Hrithik Roshan) ಮತ್ತು ಗಾಯಕಿ ಸಬಾ ಅಜಾದ್ (Saba Azad) ಲವ್ ವಿಚಾರ ಇದೀಗ ಗುಟ್ಟಾಗಿಯೇನು ಉಳಿದಿಲ್ಲ.  ಕೆಲ ತಿಂಗಳ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ತಿಳಿಸಿದ್ದರು.  ಇದರ ವಿಡಿಯೋ ಭಾರಿ ಸದ್ದು ಮಾಡಿತ್ತು. ಸಬಾ ಜೊತೆ ಡೇಟಿಂಗ್ ಮಾಡುತ್ತಾ ಕೆಲ ವರ್ಷಗಳೇ ಆಗಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಜೋಡಿ ಮಾತ್ರ ತುಟಿಕ್​ ಪಿಟಿಕ್​ ಅಂದಿರಲಿಲ್ಲ.   ಇದರ ನಡುವೆಯೇ ಮತ್ತೊಂದೆಡೆ ಸಬಾ ಜೊತೆಗಿನ ಮದುವೆ ವಿಚಾರ ಸದ್ದು ಮಾಡುತ್ತಿದೆ. ಗಾಯಕಿಯಾದ ಸಬಾ  ಈಗಾಗಲೇ ಹಲವಾರು ಚಲನಚಿತ್ರಗಳು ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದಾರೆ. ಸಂಗೀತ ಮತ್ತು ಫಿಟ್​ನೆಸ್​ ಮೇಲಿನ ಪ್ರೀತಿ ಸೇರಿದಂತೆ ಹೃತಿಕ್ ಮತ್ತು ಸಬಾಗೆ ಸಾಮ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಇವರ ಮದುವೆ ಯಾವಾಗ, ಮದುವೆಯಾದರೆ ಭವಿಷ್ಯ ಏನು ಎಂಬ ಬಗ್ಗೆ ಹೃತಿಕ್​ ಫ್ಯಾನ್ಸ್​ ಕೇಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದಾಗಲೇ ಹಲವಾರು ಮಂದಿ ನಟಿಯರ ಜೊತೆ ಡೇಟಿಂಗ್​ ಮಾಡುತ್ತಿದ್ದರು ಎನ್ನುವ ಸುದ್ದಿಯಲ್ಲಿದ್ದ ಹೃತಿಕ್​  ಕೊನೆಗೂ ಸಬಾ ಅವರನ್ನು ಮದುವೆಯಾಗುತ್ತಾರಾ? ಈ ಅಂತರ್​ಧರ್ಮೀಯ ವಿವಾಹ ಸಕ್ಸಸ್​ ಆಗುತ್ತದೆಯೆ ಎನ್ನುವ ಕುತೂಹಲ ಬಿಗ್​-ಟೌನ್​ನಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.

ಅವರ  ಕುತೂಹಲವನ್ನು ತಣಿಸಿದ್ದಾರೆ. ಸೆಲೆಬ್ರಿಟಿ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ (). ಇವರಿಬ್ಬರ ಜಾತಕ ನೋಡಿರುವ  ಪಂಡಿತ್ ಜಗನ್ನಾಥ್ ಗುರೂಜಿ (Pandit Jagannath Guruji) ಅವರು,  ಇವರಿಬ್ಬರ ಸಂಬಂಧವನ್ನು ವಿಶ್ಲೇಷಿಸಿ ಅವರ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಸಹ ಹಂಚಿಕೊಂಡಿದ್ದಾರೆ. ಅಸಲಿಗೆ ಅವರು ಇಬ್ಬರ ಫೋಟೋ ನೋಡಿ ಈ ದಾಂಪತ್ಯದ ಭವಿಷ್ಯವನ್ನು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಗುರೂಜಿ ಹೇಳಿದ್ದೇನೆಂದರೆ, ಫೋಟೋದಲ್ಲಿ ನೋಡಿ ಹೇಳುವುದಾದರೆ, ಹೃತಿಕ್ ರೋಷನ್ ಅವರ ದೇಹದ ಭಂಗಿ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಅರ್ಥೈಸುತ್ತದೆ. ಅವರು  ನೇರವಾದ ಭಂಗಿಯು  ಆತ್ಮವಿಶ್ವಾಸದ ಪ್ರತೀಕವಾಗಿವೆ.  ಅವರು ತಮ್ಮ ಎದೆಯನ್ನು ಹೊರಗೆ ಮತ್ತು ಭುಜಗಳನ್ನು ಹಿಂದಕ್ಕೆ ಇರಿಸಿಕೊಂಡಿರುವುದು ಫೋಟೋದಲ್ಲಿ ಕಾಣಬಹುದು. ಇದು ಪ್ರಾಬಲ್ಯದ ಗುಣಗಳನ್ನು ತೋರಿಸುತ್ತಿದೆ ಎಂದಿದ್ದಾರೆ. ಸಿನಿ ರಂಗದಲ್ಲಿಯೂ  ಅವರ ಯಶಸ್ಸು ಮತ್ತು ಖ್ಯಾತಿಗೆ ಅವರ ಈ ಭಂಗಿಯೇ ಕಾರಣವಾಗಿರಬಹುದು, ಅದಕ್ಕೆ ಇವರನ್ನು ಬಾಲಿವುಡ್ ನ ಉನ್ನತ ನಟರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಎಂದಿದ್ದಾರೆ.

Latest Videos

ಕಂಗನಾ, ಹೃತಿಕ್​ ರೋಷನ್​ ಲವ್​ ಸ್ಟೋರಿಗೆ ಸಾಕ್ಷಿಯಾಯ್ತು ಎಲಾನ್​ ಮಸ್ಕ್​ ಟ್ವೀಟ್​!
 
ಇನ್ನು ಸಬಾ ಆಜಾದ್ ಅವರ ಫೋಟೋ (Photo) ಗಮನಿಸಿರುವ ಗುರೂಜಿ, ಸಬಾ ಅವರ ದೇಹದ ಭಂಗಿಯು ಹೆಚ್ಚು ಅಧೀನವಾಗಿದೆ, ಅವರ ಭುಜಗಳನ್ನು ಮುಂದಕ್ಕೆ ಬಾಗಿಸಿ ಮತ್ತು ತಲೆಯನ್ನು ಹೃತಿಕ್ ಕಡೆಗೆ ವಾಲಿಸಿದ್ದಾರೆ. ಭಾವನಾತ್ಮಕ ಬೆಂಬಲಕ್ಕಾಗಿ ಈಕೆ ಹೃತಿಕ್ ಮೇಲೆ ಹೆಚ್ಚು ಅವಲಂಬಿತರಾಗಿರಲಿದ್ದಾರೆ ಎಂದಿದ್ದಾರೆ. ಇದರ ಹೊರತಾಗಿಯೂ  ಅಧೀನ ಭಂಗಿಯು ಆತ್ಮವಿಶ್ವಾಸ ಅಥವಾ ಸ್ವಾತಂತ್ರ್ಯದ ಕೊರತೆಯನ್ನು ಅರ್ಥೈಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ ಎಂದು ಪಂಡಿತ್ ಜಗನ್ನಾಥ್ ಗುರೂಜಿ ಸಮಜಾಯಿಷಿ ಕೊಟ್ಟಿದ್ದಾರೆ.  ಇನ್ನು ಇವರ ದಾಂಪತ್ಯ ಜೀವನದ ಭವಿಷ್ಯ ನುಡಿದಿರುವ ಗುರೂಜಿ ಅವರು,  'ಹೃತಿಕ್ ಮತ್ತು ಸಬಾ ಪರಸ್ಪರ ಕೈಹಿಡಿದು  ದೈಹಿಕ ನಿಕಟತೆ ಮತ್ತು ವಾತ್ಸಲ್ಯದ ಪ್ರಜ್ಞೆಯನ್ನು ಪ್ರದರ್ಶಿಸುತ್ತಿದ್ದಾರೆ. ಹೃತಿಕ್ ಅವರ ಸೊಂಟವನ್ನು ಹಿಡಿದು, ಕಾಳಜಿ, ಪ್ರೀತಿ ಮತ್ತು ವಾತ್ಸಲ್ಯವನ್ನು ಸೂಚಿಸುವ ಮೂಲಕ ಸಬಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಎಂದಿದ್ದಾರೆ.


ಅವರ ದೈಹಿಕ ವಾತ್ಸಲ್ಯದ ಪ್ರದರ್ಶನವು ಯಾವುದೇ ಸಂಬಂಧದ ಒಂದು ಪ್ರಮುಖ ಅಂಶವಾಗಿದೆ. ಆದರೆ ಈ ಸಂದರ್ಭದಲ್ಲಿ, ಸಬಾ ಸ್ವಲ್ಪ ನಾಚಿಕೆಪಡುವಂತೆ ಕಾಣುತ್ತಿದೆ ಅಂತ ಗುರೂಜಿ ಹೇಳಿದ್ದಾರೆ. ಫೋಟೋದಲ್ಲಿ  ಹೃತಿಕ್ ಮತ್ತು ಸಬಾ ಅವರು ವಿಭಿನ್ನವಾಗಿ ನಿಂತಿರುವ ಬಗ್ಗೆ ಗಮನ ಸೆಳೆದಿರುವ ಗುರೂಜಿ,  ಹೃತಿಕ್ ಅವರ ಪಾದಗಳನ್ನು ನೆಲದ ಮೇಲೆ ಭದ್ರವಾಗಿ ಇಟ್ಟಿದ್ದಾರೆ, ಆದರೆ ಸಬಾ ಅವರ ಪಾದಗಳು ಸ್ವಲ್ಪ ಒಳಕ್ಕೆ ತಿರುಗಿದಂತೆ ಕಾಣುತ್ತವೆ, ಇದು ಹೆಚ್ಚು ತಾತ್ಕಾಲಿಕ ನಿಲುವನ್ನು ಸೂಚಿಸುತ್ತದೆ. ಇದನ್ನು ಹೃತಿಕ್ ಸಂಬಂಧದಲ್ಲಿ ಹೆಚ್ಚು ಆತ್ಮವಿಶ್ವಾಸ (Self Confidence) ಮತ್ತು ದೃಢವಾಗಿರುತ್ತಾರೆ ಎಂದು ವ್ಯಾಖ್ಯಾನಿಸಬಹುದು, ಆದರೆ ಸಬಾ ಹೆಚ್ಚು ಹಿಂಜರಿಯುತ್ತಾರೆ ಅಥವಾ ಅನಿಶ್ಚಿತರಾಗಿದ್ದಾರೆ. ಇದರ ಹೊರತಾಗಿಯೂ ವಿಭಿನ್ನ ಪಾದಗಳ ಸ್ಥಾನಗಳು ಸಂಬಂಧದಲ್ಲಿ ಶಕ್ತಿಯ ಅಸಮತೋಲನವನ್ನು ಸೂಚಿಸುವುದಿಲ್ಲ. ಇವರಿಬ್ಬರ ವಿಭಿನ್ನ ಪಾದಗಳ ಸ್ಥಾನಗಳು ಅವರ ವೈಯಕ್ತಿಕ ವ್ಯಕ್ತಿತ್ವಗಳು ಮತ್ತು ತಮ್ಮನ್ನು ತಾವು ವ್ಯಕ್ತಪಡಿಸುವ ವಿಧಾನಗಳ ಪ್ರತಿಬಿಂಬವಾಗಿರಬಹುದು ಎಂದಿದ್ದಾರೆ.

ಬೈಕಾಟ್​ ಹೃತಿಕ್​ ರೋಷನ್​ ಎಂದು ನೆಟ್ಟಿಗರು ಗರಂ: ಅಷ್ಟಕ್ಕೂ ಆಗಿದ್ದೇನು?
 

click me!