ಬಾಬಿ ಡಿಯೋಲ್​ @56: ಕಾಲಿವುಡ್​ಗೆ ನಟನ ಎಂಟ್ರಿ- ಅನಿಮಲ್​ಗಿಂತಲೂ ಭೀಕರ ರೂಪದ ಪೋಸ್ಟರ್​ ರಿಲೀಸ್​

By Suvarna News  |  First Published Jan 27, 2024, 4:56 PM IST

ಇಂದು ಬಾಲಿವುಡ್ ನಟ ಬಾಬಿ ಡಿಯೋಲ್​ 56ನೇ ಹುಟ್ಟುಹಬ್ಬ: ಕಾಲಿವುಡ್​ಗೆ  ಎಂಟ್ರಿ ಕೊಟ್ಟಿರುವ ನಟನ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ಯಾವುದೀ ಚಿತ್ರ?
 


​ಬಾಬಿ ಡಿಯೋಲ್​ ಅನಿಮಲ್​ ಚಿತ್ರದಲ್ಲಿ ತಮ್ಮ ಮೂವರು ಪತ್ನಿಯರ ಮೇಲೆ ಇನ್ನಿಲ್ಲದ ದೌರ್ಜನ್ಯ ಎಸಗಿ, ಹೆಣ್ಣುಮಕ್ಕಳ ಮೇಲೆ ಅಟ್ಟಹಾಸ, ಅತ್ಯಾಚಾರ ಮಾಡಿ ಲಕ್ಷಾಂತರ ಸಿನಿ ಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ.  ಅನಿಮಲ್​ ಚಿತ್ರದಲ್ಲಿ  ಅಬ್ರಾರ್​ ಹಖ್ ಪಾತ್ರ ಮಾಡಿರುವ ಬಾಬಿ ಡಿಯೋಲ್​ರ​  ಭಯಾನಕ ರೂಪ, ಮಿತಿಮೀರಿದ ಕ್ರೌರ್ಯವನ್ನು ಇವರ ಅಭಿಮಾನಿಗಳು ಮನಃಪೂರ್ವಕವಾಗಿ ಸ್ವೀಕರಿಸಿ ಅನಿಮಲ್​ ಚಿತ್ರವನ್ನು ಬ್ಲಾಕ್​ಬಸ್ಟರ್​ ಪಟ್ಟಿಗೆ ಸೇರಿಸಿದ್ದಾರೆ. ತಮ್ಮ ಪಾತ್ರವನ್ನು ಸಮರ್ಥಿಸಿಕೊಂಡಿದ್ದ ಬಾಬಿ ಡಿಯೋಲ್​, ‘ನನ್ನ ಆ ಪಾತ್ರವನ್ನು ನಾನು ವಿಲನ್​ ಎಂದು ಪರಿಗಣಿಸುವುದಿಲ್ಲ. ಅವನು ಫ್ಯಾಮಿಲಿ ಮ್ಯಾನ್​. ಆತನಿಗೆ ಮೂವರು ಹೆಂಡತಿಯರು. ಹಾಗಾಗಿ ಅವನು ರೊಮ್ಯಾಂಟಿಕ್​ ವ್ಯಕ್ತಿ. ಕುಟುಂಬಕ್ಕಾಗಿ ಅವನು ಪ್ರಾಣ ತೆಗೆಯಬಲ್ಲ ಮತ್ತು ಪ್ರಾಣ ಕೊಡಬಲ್ಲ’ ಎಂದಿದ್ದಾರೆ.  ಹೆಣ್ಣಿನ ಮೇಲೆ ಮಿತಿಮೀರಿದ ದೌರ್ಜನ್ಯದ ಕುರಿತು ಒಂದು ವರ್ಗದಿಂದ ಭಾರಿ ಆಕ್ರೋಶ ವ್ಯಕ್ತವಾದರೂ ಈ ಚಿತ್ರ ಸಾವಿರ ಕೋಟಿ ರೂಪಾಯಿ ಸಮೀಪದಲ್ಲಿ ಕಲೆಕ್ಷನ್​ ಮಾಡಿದೆ. ಇದರಿಂದ ಒಂದಾದ ಮೇಲೊಂದರಂತೆ ಫ್ಲಾಪ್​ ಚಿತ್ರ ಕೊಡುತ್ತಿದ್ದ ಬಾಬಿ ಡಿಯೋಲ್​ಗೆ ಜೀವ ಸಿಕ್ಕಿದೆ. 

ಈ ಒಂದು ಭಯಾನಕ ರೂಪ ಸಕ್ಸಸ್​ ಆಗುತ್ತಿದ್ದಂತೆಯೇ ಅವರ ಹುಟ್ಟುಹಬ್ಬವಾಗಿರುವ ಇಂದು ಅಂದರೆ ಜನವರಿ 27ರಂದು ಅನಿಮಲ್​ಗಿಂತಲೂ ಭೀಕರ ಎನ್ನುವಂಥ ಪೋಸ್ಟರ್​ ಒಂದು ರಿಲೀಸ್​ ಆಗಿದೆ. ಇಂದು ನಟನಿಗೆ 56ನೇ ಹುಟ್ಟುಹಬ್ಬದ ಸಂಭ್ರಮ.  ಅಂದಹಾಗೆ ಇದು ಕಂಗುವ ಚಿತ್ರದ ಲುಕ್​. ಬಾಬಿಯ ಉಧೀರನ್ ಲುಕ್. ಈ ಸಿನಿಮಾದಲ್ಲಿನ ಅವರ ಲುಕ್ ಸಖತ್ ಭಯಾನಕವಾಗಿದೆ. ಈಚೆಗಷ್ಟೇ ಕಂಗುವಾ  ನಾಯಕ ಸೂರ್ಯ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದರು. ಅದರಲ್ಲಿ ಸೂರ್ಯ ಅವರ ಲುಕ್​ ಸಕತ್​ ಆಗಿದೆ. ಚಿತ್ರದಲ್ಲಿ ವಿಲನ್​ ಆಗಿ ಕಾಣುತ್ತಿರುವ ಬಾಬಿ ಡಿಯೋಲ್​ ಲುಕ್​ ಮಾತ್ರ ಭಯಾನಕವಾಗಿದೆ. 

Tap to resize

Latest Videos

ಮೂರು ಪತ್ನಿಯರ ಮೇಲೆ ಕ್ರೌರ್ಯ ಮೆರೆದಿದ್ದು ತಪ್ಪಲ್ಲ: ಅಬ್ರಾರ್​ ಹಖ್ ರೊಮ್ಯಾಂಟಿಕ್​ ವ್ಯಕ್ತಿ ಎಂದ ಬಾಬಿ ಡಿಯೋಲ್​!

ಈ ಚಿತ್ರ  38 ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಇದಾಗಲೇ ಘೋಷಣೆ ಮಾಡಿದೆ.  ಸಿನಿಮಾದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲ. ಆಗಲೇ ಭರ್ಜರಿ ವ್ಯಾಪಾರ ಕೂಡ ಆರಂಭಿಸಿದೆ.  ಭಾರೀ ಮೊತ್ತಕ್ಕೆ ಓಟಿಟಿಗೆ ಸೇಲ್ ಆಗುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಮೂಲಗಳ ಪ್ರಕಾರ ಅಮೆಜಾನ್ ಪ್ರೈಮ್ ಸಂಸ್ಥೆಯು ಕಂಗುವ ಸಿನಿಮಾದ ಓಟಿಟಿ (OTT) ಹಕ್ಕನ್ನು ಬರೋಬ್ಬರಿ 80 ಕೋಟಿಗೆ ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ.  ಈ ಮಾಹಿತಿಯನ್ನು ಚಿತ್ರತಂಡವೇ ಬಹಿರಂಗ ಪಡಿಸಿದೆ ಎಂದು ಕೆಲ ಮಾಧ್ಯಮಗಳ ವರದಿ ಮಾಡಿವೆ. ಈಗ ರಿಲೀಸ್​ ಆಗಿರುವ ಬಾಬಿ ಡಿಯೋಲ್​ ಪೋಸ್ಟರ್​ನಲ್ಲಿ ನೂರಾರು ಜನರ ಮಧ್ಯೆ ಬಾಬಿ ಡಿಯೋಲ್ ಅವರು ನಿಂತಿದ್ದಾರೆ. ಅವರ ಹಿಂಭಾಗದಲ್ಲಿ ಜಿಂಕೆಯ ಕೋಡುಗಳು ಇವೆ. ಇದರಲ್ಲಿ ಇವರ ಪಾತ್ರದ ಹೆಸರು ಉಧೀರನ್.   

ಅಂದಹಾಗೆ, ‘ಕಂಗುವ’ ಚಿತ್ರವನ್ನು ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸೂರ್ಯ, ದಿಶಾ ಪಟಾಣಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ತಮಿಳಿನಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈ ಚಿತ್ರದಲ್ಲಿ ದೊಡ್ಡ ಪಾತ್ರವರ್ಗ ಇದೆ. ಈ ಸಿನಿಮಾದಲ್ಲಿ ಸೂರ್ಯ ಅವರು ಹಲವು ಗೆಟಪ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಬಿ ಡಿಯೋಲ್​ನ ಅವತಾರ ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಅಂದಹಾಗೆ, ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.

ಹೆಣ್ಣೆಂದರೆ 'ಅನಿಮಲ್'​ ನಿರ್ದೇಶಕನ ದೃಷ್ಟಿಯಲ್ಲಿ ಹೀಗಂತೆ! ಯಾವುದ್ರಿಂದ ಹೊಡಿಬೇಕು ನಿಂಗೆ ಕೇಳ್ತಿದ್ದಾರೆ ನೆಟ್ಟಿಗರು

Happy birthday brother..
Thank you for the warm friendship. It was awesome to see you transform in full glory as the mighty in our Guys watch out for him! pic.twitter.com/e3cPBkdMcS

— Suriya Sivakumar (@Suriya_offl)
click me!