ಅಚ್ಚರಿ ಎನ್ನುವಂತೆ ನಾನು ನನ್ನ ಮದುವೆ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟ ತಕ್ಷಣ ನನ್ನನ್ನು ಮದುವೆ ಆಗುತ್ತೇನೆ ಎಂದು ಒಬ್ಬರು ಬಂದುಬಿಟ್ಟರು. ಅದನ್ನೇ ನಾನು 'ದೈವೀ ಇಚ್ಚೆ' ಎನ್ನುವುದು.
ಕೇರಳ ಮೂಲದ ವಿದ್ಯಾ ವಾಲನ್ ಬಾಲಿವುಡ್ ಚಿತ್ರರಂಗದಲ್ಲಿ ಸಖತ್ ಫೇಮಸ್ ಆಗಿ, ಈಗ ಸುಖ ಸಾಂಸಾರಿಕ ಜೀವನ ನಡೆಸುತ್ತಿರುವುದು ಗೊತ್ತೇ ಇದೆ. ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು 2012ರಲ್ಲಿ ಮದುವೆಯಾಗಿರುವ ನಟಿ ವಿದ್ಯಾ ಬಾಲನ್ ಮದುವೆ ಆಗದಿರಲು ನಿರ್ಧರಿಸಿದ್ದರಂತೆ. ಈ ಬಗ್ಗೆ ಸ್ವತಃ ನಟಿ ವಿದ್ಯಾ ಬಾಲನ್ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ. ಬಾಲಿವುಡ್ ಇಂಟರ್‌ವ್ಯೂ ಒಂದರಲ್ಲಿ ನಟಿ ವಿದ್ಯಾ ಬಾಲನ್ ಮನಬಿಚ್ಚಿ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ವಿದ್ಯಾ ಬಾಲನ್ 'ನಾನು 'ಪರಿಣೀತಾ' ಚಿತ್ರದ ಮೂಲಕ 26ನೇ ವಯಸ್ಸಿಗೆ ಸಿನಿಮಾರಂಗಕ್ಕೆ ಬಂದೆ. ಬಳಿಕ ಚಿತ್ರಂಗದಲ್ಲಿ ನಾನು ಸಕ್ರಿಯಳಾಗಿದ್ದು 30ನೇ ವಯಸ್ಸಿನಲ್ಲಿ ಸಕ್ಸಸ್ ಪಡದೆ. ನಾನು ಯಶಸ್ವಿ ನಟಿಯಾದ ಬಳಿಕ ನನ್ನ ಮದುವೆಯಾಗದಿರುವ ನಿರ್ಧಾರ ಬದಲಿಸಿ ಹಲವರ ಜತೆ ಡೇಟಿಂಗ್ ಮಾಡಿದೆ. ಆದರೆ, ಅದ್ಯಾವುದೂ ವರ್ಕೌಟ್ ಆಗಲಿಲ್ಲ. ಬಳಿಕ ನಾನು ಮದುವೆಯ ಬಗ್ಗೆ ಯೋಚನೆಯನ್ನೇ ಬಿಟ್ಟುಬಿಟ್ಟೆ.
ಮತ್ತೆ ಹೆದರಿಸಲು ಬರ್ತಿದಾರೆ ಅದೇ ಜೋಡಿ; ಯಾವುದಕ್ಕೂ ಎಲ್ರೂ ಹುಶಾರಾಗಿರಿ ಆಯ್ತಾ!
ಆದರೆ ಅಚ್ಚರಿ ಎನ್ನುವಂತೆ ನಾನು ನನ್ನ ಮದುವೆ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟ ತಕ್ಷಣ ನನ್ನನ್ನು ಮದುವೆ ಆಗುತ್ತೇನೆ ಎಂದು ಒಬ್ಬರು ಬಂದುಬಿಟ್ಟರು. ಅದನ್ನೇ ನಾನು 'ದೈವೀ ಇಚ್ಚೆ' ಎನ್ನುವುದು. ನನ್ನ ಬಗ್ಗೆ ನಾನು ಯೋಚಿಸುವುದನ್ನು ಬಿಟ್ಟ ಕ್ಷಣ ದೇವರು ನನ್ನ ಬಗ್ಗೆ ಯೋಚಿಸಲು ಆರಂಭಿಸಿದ್ದಾರೆ. ನನ್ನ ಜೀವನದ ಬಗ್ಗೆ ದೇವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ಶುರು ಮಾಡಿದ್ದಾನೆ. ಹೀಗಾಗಿ ಸೂಕ್ತ ವ್ಯಕ್ತಿಯನ್ನ ದೇವರೇ ಕಳುಹಿಸಿದ್ದಾನೆ ಎನ್ನಬೇಕು.
ಜನುಮದ ಜೋಡಿ 'ಕನಕ' ಯಾಕೆ ಕೈ ಸುಟ್ಕೊಂಡ್ರು; ಎಲ್ಲಿದಾರೆ ಶಿಲ್ಪಾ, ಏನ್ಮಾಡ್ತಿದಾರೆ..?!
ನನ್ನ ಆಯ್ಕೆಯನ್ನು ನಾನು ಕೈ ಬಿಟ್ಟ ತಕ್ಷಣ ನನ್ನನ್ನು ಕೈ ಹಿಡಿಯಲು ಬಂದ ವ್ಯಕ್ತಿಯೊಂದಿಗೆ ನಾನು ಮದುವೆಯಾಗಿದ್ದೇನೆ. ಯಾವುದೇ ಸಮಸ್ಯೆ ಇಲ್ಲದೇ ಸುಖವಾಗಿ ಸಂಸಾರ ಮಾಡುತ್ತಿದ್ದೇನೆ" ಎಂದಿದ್ದಾರೆ ನಟಿ ವಿದ್ಯಾ ಬಾಲನ್. ಒಟ್ಟಿನಲ್ಲಿ, ಮದುವೆಯೇ ಆಗಬಾರದು ಎಂದುಕೊಂಡಿದ್ದ ನಟಿ ವಿದ್ಯಾ ಬಾಲನ್ ತಮ್ಮ ಪ್ರೀತಿಯನ್ನು ಹುಡುಕಿಕೊಂಡು ಬಂದ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ಮದುವೆ ಆಗಿದ್ದಾರೆ. ಅವರ ಮಾತಿನಲ್ಲೇ ಹೇಳುವುದಾದರೆ ಇದು ದೇವರ ಇಷ್ಟ, ದೈವೀ ಪ್ರೇರಣೆ ಎನ್ನಬೇಕು.
ವಿಜಯಲಕ್ಷ್ಮೀ ದರ್ಶನ್ ಜತೆ ಕಿತ್ತಾಡಿದ ಪವಿತ್ರಾ ಗೌಡ; ಯಾರಿವರು, ಏನ್ ಕೆಲ್ಸ ಮಾಡ್ತಿದಾರೆ..?!