ಜಿಮ್ ಟ್ರೈನರ್ ತಬ್ಬಿಕೊಂಡು ಭಾವುಕ ಪೋಸ್ಟ್ ಶೇರ್ ಮಾಡಿದ ನಟಿ ಸಮಂತಾ

By Shruthi Krishna  |  First Published Nov 13, 2022, 3:26 PM IST

ಯಶೋದ ಸಕ್ಸಸ್‌ನ ಖುಷಿಯಲ್ಲಿರುವ ನಟಿ ಸಮಂತಾ ಜಿಮ್ ಟ್ರೈನರ್ ತಬ್ಬಿಕೊಂಡು ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ.   


ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಸದ್ಯ ಯಶೋದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಶೋದ ಸಿನಿಮಾದಲ್ಲಿ ಸಮಂತಾ ಸಿಕ್ಕಾಪಟ್ಟೆ ಆಕ್ಷನ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಅನಾರೋಗ್ಯದ ನಡುವೆಯೂ ಸಮಂತಾ ಯಶೋದ ಶೂಟಿಂಗ್ ಮಾಡಿ ಮುಗಿಸಿದ್ದರು. ಸಮಂತಾ ಯಶಸ್ವಿಯಾಗಿ ಚಿತ್ರೀಕರಣ ಮಾಡಿ ಮುಗಿಸಲು ಕಾರಣರಾದ ಜಿಮ್ ಟ್ರೈಲರ್ ಜುನೈದ್ ಶೇಕ್ ಬಗ್ಗೆ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. 

ಸಮಂತಾ ತನ್ನ ಜಿಮ್ ಟ್ರೈನರ್ ಜುನೈದ್ ಅವರನ್ನು ತಬ್ಬಿಕೊಂಡು ಧನ್ಯವಾದ ತಿಳಿಸಿದ್ದಾರೆ. ತನ್ನ ನೆಚ್ಚಿನ ಜಿಲೇಬಿ ತಿನ್ನಲು ನನಗೆ ಅನುಮತಿ ನೀಡಿದರು ಎಂದು ಹೇಳಿದ್ದಾರೆ. ತನ್ನ ಫೇವರಿಟ್ ಜಿಲೇಬಿ ತಿಂದು ಯಶೋದ ಸಕ್ಸಸ್ ಆಚರಣೆ ಮಾಡಿರುವುದಾಗಿ ಸಮಂತಾ ಹೇಳಿದ್ದಾರೆ. 'ಜುನೈದ್ ನನಗೆ ಜಿಲೇಬಿ ತಿನ್ನಲು ಅನುಮತಿ ನೀಡಿದರು. ಯಶೋದ ಸಕ್ಸಸ್ ಆಚರಣೆ ಮಾಡಿದೆವು. ಅದರಲ್ಲೂ ಅಕ್ಷನ್ ದೃಶ್ಯಗಳು. ಕಳೆದ ಕೆಲವು ತಿಂಗಳಿಂದ ನನ್ನ ಜೊತೆ ಇದ್ದ ಕೆಲವೇ ಕೆಲವರಲ್ಲಿ ನೀವು ಒಬ್ಬರು' ಎಂದು ಹೇಳಿದ್ದಾರೆ. 

Tap to resize

Latest Videos

'ಕಷ್ಟದ ದಿನಗಳಲ್ಲಿ, ಕಣ್ಣೀರಿನ ಸಮಯದಲ್ಲಿ ಎಲ್ಲಾ ಸಮಯದಲ್ಲೂ ಜೊತೆಯಲ್ಲಿ ಇದ್ದೀರಿ. ನನ್ನನ್ನು ಅರ್ಧದಲ್ಲೇ ಕೈ ಬಿಟ್ಟಿಲ್ಲ. ನನಗೆ ಗೊತ್ತು ನೀವು ಯಾವತ್ತು ನನ್ನನ್ನು ಬಿಟ್ಟುು ಕೊಡಲ್ಲ ಎಂದು' ಹೇಳಿದ್ದಾರೆ.  ಸಮಂತಾ ಪೋಸ್ಟ್‌ಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ. ಸಮಂತಾ ಪೋಸ್ಟ್‌ಗೆ ಅನೇಕ ಸೆಲೆಬ್ರಿಟಿಗಳು ಸಹ ಕಾಮೆಂಟ್ ಮಾಡಿ ಧೈರ್ಯ ತುಂಬಿದ್ದಾದರೆ. ವರು ಧವನ್, ಕೃತಿ ಕರಬಂದ, ದಿಯಾ ಮಿರ್ಜಾ ಸೇರಿದಂತೆ ಅನೇಕರು ಕಾಮೆಂಟ್ ಮಾಡಿ ಧೈರ್ಯ ತುಂಬಿದ್ದಾರೆ. 

ನಾನಿನ್ನೂ ಸತ್ತಿಲ್ಲ; ಅನಾರೋಗ್ಯದ ಬಗ್ಗೆ ನಟಿ ಸಮಂತಾ ಕಣ್ಣೀರು

ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೂ ಯಶೋದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದರು. ಇದೀಗ ಮತ್ತೆ ವರ್ಕೌಟ್ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಕೂಡ ಪೋಸ್ಟ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಸಮಂತಾ ತನ್ನ ಅನಾರೋಗ್ಯದ ಬಗ್ಗೆ ಮಾತನಾಡಿದ್ದರು. ನಾನಿನ್ನೂ ಸತ್ತಿಲ್ಲ, ನನಗೆ ಬಂದಿರುವುದು ಮಾರಣಾಂತಿಕ ಕಾಯಿಲೆಯಲ್ಲ ಎಂದು ಹೇಳಿದ್ದರು. ಅನಾರೋಗ್ಯದ ಬಗ್ಗೆ ಹೇಳುವಾಗ ಸಮಂತಾ ಕಣ್ಣೀರಾಕಿದ್ದರು.

Samantha ಜೀವನ ಎಷ್ಟೇ ಖರಾಬ್ ಆಗಿರಲಿ ಇದನ್ನು ತಲೆಯಲ್ಲಿಟ್ಟುಕೊಳ್ಳಿ: ಮೊದಲ ಬಾರಿ ಮುಖ ತೋರಿಸಿದ ಸ್ಯಾಮ್

'ನನ್ನ ಸ್ಥಿತಿ ಜೀವಕ್ಕೆ ಅಪಾಯಕಾರಿ ಎಂದು ಅನೇಕ ವರದಿಗಳನ್ನು ನೋಡಿದೆ. ಆದರೆ ಇದು ಜೀವಕ್ಕೆ ಅಪಾಯಕಾರಿಯಲ್ಲ. ನಾನು ಇನ್ನೂ ಸತ್ತಿಲ್ಲ. ಇಂಥ ಹೆಡ್ ಲೈನ್ ಗಳು ತುಂಬಾ ಅಗತ್ಯ ಎಂದು ಭಾವಿಸಿಲ್ಲ' ಎಂದು ಹೇಳಿದರು. ಬಳಿಕ ನಾನು ವಿನ್ ಆಗುತ್ತೀನಿ ಅಂತ ಹೇಳಿದರು. ಸಮಂತಾ ಭಾವುಕ ಸಂದರ್ಶನದ ವಿಡಿಯೋ ವೈರಲ್ ಆಗಿತ್ತು. ಅಭಿಮಾನಿಗಳು ಧೈರ್ಯ ತುಂಬಿ ಸಂದೇಶ ಕಳುಹಿಸಿದ್ದರು. 

click me!