ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್ ಘೋಷಣೆ; ಮಾಜಿ ಪ್ರಧಾನಿ ಪಾತ್ರ ಮಾಡೋರ್ಯಾರು?

By Shruiti G KrishnaFirst Published Jun 29, 2022, 3:38 PM IST
Highlights

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ತೆರೆಮೇಲೆ ಬರ್ತಿದೆ. ಅಂದಹಾಗೆ ಅಟಲ್ ಜೀವನವನ್ನು ತೆರೆಮೇಲೆ ತರುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಜನ್ಹಿತ್ ಮೇ ಜಾರಿ ಖ್ಯಾತಿಯ ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಪ್ರಧಾನಿ ನರೇಂದ್ರ ಮೋದಿ (2019) ಚಿತ್ರವನ್ನು ನಿರ್ಮಿಸಿದ್ದ ಸಂದೀಪ್ ಸಿಂಗ್ ಉಲ್ಲೇಖ್.

ಬಾಲಿವುಡ್‌ನಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್  (Biopic ) ರಿಲೀಸ್ ಆಗಿವೆ, ಇನ್ನು ಕೆಲವು ಬಯೋಪಿಕ್ ಚಿತ್ರೀಕರಣ ಹಂತದಲ್ಲಿದೆ. ಅನೇಕ ಬಯೋಪಿಕ‌ಗಳೂ ಅಭಿಮಾನಿಗಳ ಹೃದಯ ಗೆದ್ದಿವೆ, ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿವೆ. ಸಿನಿಮಾ, ಕ್ರೀಡೆ, ರಾಜಕೀಯ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಸಾಧಕರ ಬಯೋಪಿಕ್ ಗಳು ನಿರ್ಮಾಣ ಆಗಿ ರಿಲೀಸ್ ಆಗಿದೆ. ಇದೀಗ ಮತ್ತೊಂದು ಬಯೋಪಿಕ್ ಅನೌನ್ಸ್ ಆಗಿದೆ. ಹೌದು ಅದು ಮತ್ಯಾರು ಅಲ್ಲ ಮಾಜಿ ಪ್ರಧಾನಿ, ಅಜಾತ ಶತ್ರು ಎಂದೇ ಗುರುತಿಸಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee).

ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ತೆರೆಮೇಲೆ ಬರ್ತಿದೆ ಎಂದು ಘೋಷಣೆ ಆಗುತ್ತಿದ್ದಂತೆ ರಾಜಕೀಯ ಮತ್ತು ಸಿನಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಂದಹಾಗೆ ಅಟಲ್ ಜೀವನವನ್ನು ತೆರೆಮೇಲೆ ತರುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಜನ್ಹಿತ್ ಮೇ ಜಾರಿ ಖ್ಯಾತಿಯ ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಪ್ರಧಾನಿ ನರೇಂದ್ರ ಮೋದಿ (2019) ಚಿತ್ರವನ್ನು ನಿರ್ಮಿಸಿದ್ದ ಸಂದೀಪ್ ಸಿಂಗ್ ಉಲ್ಲೇಖ್.

Latest Videos

ಅಂದಹಾಗೆ ವಾಜಪೇಯಿ ಬಯೋಪಿಕ್ ಅನ್ನು ಉಲ್ಲೇಖ್ ಎನ್ ಪಿ ಅವರ ಹೆಚ್ಚು ಮಾರಾಟವಾದ ಪುಸ್ತಕ ದಿ ಅನ್‌ಟೋಲ್ಡ್ ವಾಜಪೇಯಿ: ಪೊಲಿಟಿಷಿಯನ್ ಮತ್ತು ಪ್ಯಾರಡಾಕ್ಸ್ ಅನ್ನು ಆದರಿಸಿದೆ. ಅಂದಹಾಗೆ ಸಿನಿಮಾಗೆ 'ಮೇ ರಹೂ ಯಾ ನಾ ರಹೂ, ಯೇ ದೇಶ್ ರೇಹನಾ ಚಾಯಿಯೇ-ಅಟಲ್' ಎಂದು ಟೈಟಲ್ ಇಡಲಾಗಿದೆ. ಈ ಸಾಲು ಅಟಲ್ ಅವರ ಹೇಳಿದ್ದ ಜನಪ್ರಿಯ ಸಾಲಾಗಿದೆ. 

ಅಂದಹಾಗೆ ಅಟಲ್ ಬಯೋಪಿಕ್ ಬಗ್ಗೆ ನಿರ್ಮಾಪಕ ವಿನೋದ್ ಭಾನುಶಾಲಿ, ನಾನು ಪಾಜಿಪೇಯಿ ಅವರ ದೊಡ್ಡ ಅಭಿಮಾನಿ. ಹುಟ್ಟು ನಾಯಕ, ಒಬ್ಬ ರಾಜನೀತಿಜ್ಞ ಸರ್ವಶ್ರೇಷ್ಠತೆ, ದಾರ್ಶನಿಕ. ನಮ್ಮ ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಅಪ್ರತಿಮವಾಗಿದೆ ಮತ್ತು ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಅವರ ಪರಂಪರೆಯನ್ನು ಬೆಳ್ಳಿತೆರೆಗೆ ತರುತ್ತಿರುವುದು ನಮ್ಮ ದೊಡ್ಡ ಗೌರವವಾಗಿದೆ' ಎಂದು ಹೇಳಿದರು. 

ಮಿಥಾಲಿ ರಾಜ್ ಜೀವನಾಧಾರಿತ 'ಶಬ್ಬಾಶ್ ಮಿಥೂ' ಸಿನೆಮಾದ ಟ್ರೇಲರ್ ರಿಲೀಸ್‌..!

ನಿರ್ಮಾಪಕ ಸಂದೀಪ್ ಸಸಿಂಗ್ ಮಾತನಾಡಿ, ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಗ್ರೇಟ್ ನಾಯಕ. ತಮ್ಮ ಮಾತುಗಳಿಂದ ಶತ್ರುಗಳನ್ನು ಗೆಲ್ಲುತ್ತಿದ್ದರು. ಅವರು ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸಿದರು. ಒಬ್ಬ ಚಲನಚಿತ್ರ ನಿರ್ಮಾಪಕನಾಗಿ, ಅಂತಹ ಹೇಳಲಾಗದ ಕಥೆಗಳನ್ನು ಸಂವಹನ ಮಾಡಲು ಸಿನಿಮಾ ಅತ್ಯುತ್ತಮ ಮಾಧ್ಯಮ ಎಂದು ನಾನು ಭಾವಿಸುತ್ತೇನೆ, ಅದು ಅವರ ರಾಜಕೀಯ ಸಿದ್ಧಾಂತಗಳನ್ನು ಮಾತ್ರವಲ್ಲದೆ ಅವರ ಮಾನವೀಯ ಮತ್ತು ಕಾವ್ಯಾತ್ಮಕ ಅಂಶಗಳನ್ನು ಅನಾವರಣಗೊಳಿಸುತ್ತದೆ, ಅದು ಅವರನ್ನು ಅತ್ಯಂತ ಪ್ರೀತಿಯ ಅಜಾತ ಶತ್ರು ಮತ್ತು ಭಾರತದ ಅತ್ಯಂತ ಜನಪ್ರಿಯ ನಾಯಕನನ್ನಾಗಿ ಮಾಡಿದೆ. ಪ್ರಗತಿಪರ ಪ್ರಧಾನಿ' ಎಂದು ಹೇಳಿದರು.

ತೆರೆ ಮೇಲೆ ಬರ್ತಿದೆ ಕಬೀರ್‌ ಬೇಡಿ ಮೊದಲ ಹೆಂಡತಿ ಪ್ರೋತಿಮಾ ಬಯೋಪಿಕ್; ಪುತ್ರಿನೇ ನಾಯಕಿ?

ಅಂದಹಾಗೆ ಸದ್ಯ ಸಿನಿಮಾ ಅನೌನ್ಸ್ ಮಾಡಲಾಗಿದ್ದು ಮುಂದಿನ ವರ್ಷದ ಪ್ರಾರಂಭದಲ್ಲಿ ಸಿನಿಮಾ  ಚಿತ್ರೀಕರಣ ಪ್ರಾರಂಭವಾಗಲಿದೆ. ಅವರ 99ನೇ ಹುಟ್ಟುಹಬ್ಬದ ದಿನ ಈ ಸಿನಿಮಾ ರಿಲೀಸ್ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಅಂದಹಾಗೆ ವಾಜಪೇಯಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ. ಸದ್ಯ ಸಿನಿಮಾದ ಅನೌನ್ಸ್ ಆಗಿದ್ದು ಕೇಳಿಯೇ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು ಸಿನಿಮಾ ಹೇಗೆ ಮೂಡಿಬರಲಿದೆ ತೆರೆಮೇಲೆ ಅಟಲ್ ಆಗಿ ಯಾರು ಮಿಂಚಲಿದ್ದಾರೆ ಎನ್ನುವುದು ಶೀಘ್ರದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.   

click me!