ಡ್ರೆಸ್​ ಸರಿಮಾಡಿಕೊಳ್ಳೊಷ್ಟ್ರಲ್ಲಿ ಆಗಬಾರದ್ದು ಆಗೋಯ್ತು! ಎಲ್ಲಾ ಆದ್ಮೇಲೆ ಇನ್ನೇನು ಮಾಡೋದು ಕೇಳ್ತಿದ್ದಾರೆ ಟ್ರೋಲಿಗರು

By Suchethana D  |  First Published Sep 30, 2024, 8:22 PM IST

ಇಫಾ ಕಾರ್ಯಕ್ರಮದಲ್ಲಿ ಅನ್​ಕನ್​ಫರ್ಟ್​ ಎನ್ನುವ ಡ್ರೆಸ್​ ತೊಟ್ಟು, ಡ್ರೆಸ್​ ಸರಿ ಮಾಡಿಕೊಳ್ಳುವಲ್ಲೇ ಕಾಲ ಕಳೆದ ನಟಿ, ಬಿಗ್​ಬಾಸ್​ ಖ್ಯಾತಿಯ ಸೋನಿಯಾ ಬನ್ಸಾಲ್​ ಸಕತ್​ ಟ್ರೋಲ್​ಗೆ ಒಳಗಾಗಿದ್ದಾರೆ. 
 


ಚಿತ್ರ ನಟಿಯರು ಎಂದರೆ ಹಾಗೆ ಅಲ್ವೆ? ಫಂಕ್ಷನ್​ಗಳಿಗೆ ಹೋಗುವಾಗ ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್​ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್​ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಕೆಲವೊಮ್ಮೆ ಹೀಗೆ ಆದರೆ ಟ್ರೋಲ್​ ಆಗಿ ಸಕತ್​ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್​ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ. ಡ್ರೆಸ್​ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.

ಇದೀಗ ನಟಿ, ಬಿಗ್​ಬಾಸ್​ ಖ್ಯಾತಿಯ ಸೋನಿಯಾ ಬನ್ಸಾಲ್​ಗೂ ಇದೇ ರೀತಿ ಆಗಿದೆ. IIFA ಕಾರ್ಯಕ್ರಮವೊಂದರಲ್ಲಿ ನೆಲ ಗುಡಿಸೋ ಡ್ರೆಸ್​​ ಹಾಕಿಕೊಂಡು ಬಂದಿರೋ ನಟಿ, ಮೇಲುಗಡೆ ಧಾರಾಳವಾಗಿ ದೇಹ ಪ್ರದರ್ಶನ ಮಾಡಿದ್ದಾರೆ. ಆದರೆ ಡ್ರೆಸ್​ ಸರಿ ಮಾಡಿಕೊಳ್ಳುವ ಸಲುವಾಗಿ ಕೆಳಗೆ ಬಿದ್ದಾಗ ಡ್ರೆಸ್​ ಎಲ್ಲಿ ಉದುರಿ ಹೋಗಿ ಬಿಡತ್ತೋ ಎಂದು ಮೇಲ್ಭಾಗ ಪದೇ ಪದೇ ಸರಿ ಮಾಡಿಕೊಂಡಿದ್ದಾರೆ. ಡ್ರೆಸ್​ ಹಾಕಿಕೊಂಡು ಬಂದಿರೋದೇ ದೇಹಸಿರಿಯನ್ನು ತೋರಿಸುವುದಕ್ಕಾಗಿ ಅಂತಿರೋ ಟೈಮ್​ನಲ್ಲಿ ವಿನಾ ಕಾರಣ, ಎಲ್ಲರ ದೃಷ್ಟಿ ಹೋಗಲಿ ಎಂದು ಮೇಲೆ ಎಳೆದುಕೊಂಡು ಈಗ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಡ್ರೆಸ್​ ಸರಿಮಾಡಿಕೊಳ್ಳೊಷ್ಟ್ರಲ್ಲಿ ಆಗಬಾರದ್ದು ಆಗೋಯ್ತು! ಎಲ್ಲಾ ನೋಡಿ ಆದ್ಮೇಲೆ ಇನ್ನೇನು ಸರಿ ಮಾಡಿಕೊಳ್ಳೋದು ಕೇಳ್ತಿದ್ದಾರೆ  ಟ್ರೋಲಿಗರು.

Tap to resize

Latest Videos

undefined

ನಟ ಬಾಲಚಂದ್ರ ಗುಂಪು ರತಿಕ್ರೀಡೆ ನಡೆಸ್ತಿದ್ರು, ಆ ಕೋಣೆಯಲ್ಲಿ ನನ್ನನ್ನು... ಮೀನು ಭಯಂಕರ ಆರೋಪ! 

ಇನ್ನು ಉದ್ದದ ಗೌನ್​ ನೋಡಿದ ಮತ್ತೆ ಕೆಲವರು,  ಗುಡಿಸಲು ಬೇರೆ ಜನರು ಇದ್ರಲ್ಲಾ, ನೀವ್ಯಾಕೆ ಗೌನ್​ನಿಂದ ಗುಡಿಸಲು ಹೋದ್ರಿ ಎಂದು ಒಬ್ಬಾತ ಪ್ರಶ್ನಿಸಿದ್ದಾರೆ. ಮತ್ತೋರ್ವ ಏನಮ್ಮಾ ತಾಯಿ, ಮೇಲೆ ಕೆಳಗೆ ಸರಿ ಮಾಡಿಕೊಂಡೇ ಮುಗೀತಿಲ್ವಲ್ಲಾ ನಿಂದು, ಮೊದ್ಲೇ ಎಲ್ಲಾ ಸರಿಯಾಗಿ ಪ್ರಾಕ್ಟೀಸ್​  ಮಾಡಿ ಬರಬಾರದಾ ಎಂದು ಕೇಳಿದ್ದಾರೆ.  ಇನ್ನು ಕೆಲವರು ಇವೆಲ್ಲಾ ಅಟೆನ್ಷನ್​ ಸೀಕಿಂಗ್​ ಸ್ಟಂಟ್​ಗಳು ಅಷ್ಟೇ.  ಇನ್ನು ಕೆಲವರು ಇನ್ನೊಬ್ಬರನ್ನು ನೋಡಿ ಹೀಗೆಲ್ಲಾ ಡ್ರೆಸ್​ ಮಾಡಿಕೊಳ್ಳೋದು ಸರಿಯಲ್ಲ, ನಿಮಗೆ ಸೂಟ್​ ಆಗತ್ತಾ ಅಂತ ನೋಡಿಕೊಂಡು ಡ್ರೆಸ್​ ಹೊಲಿಸಿಕೊಳ್ಳಬೇಕಮ್ಮಾ ಎಂದಿದ್ದಾರೆ.  

ಇನ್ನು ನಟಿಯ ಕುರಿತು ಹೇಳುವುದಾದರೆ, ಸೋನಿಯಾ ಅವರಿಗೆ ಈಗ 27 ವರ್ಷ ವಯಸ್ಸು. ಇವರು ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.  ‘ಗೇಮ್ 100 ಕೋಟಿ ಕಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ, ನಂತರ ‘ನಾಟಿ ಗ್ಯಾಂಗ್’, ‘ಡಬ್ಕಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ನಟನೆಯ  'ಶೂರ್ವೀರ್' ವೆಬ್ ಸರಣಿಯಲ್ಲಿ ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಇಷ್ಟೇ ಅಲ್ಲದೇ ನಟಿ, ಈ ವರ್ಷ  ತೆಲುಗಿನ 'ಧೀರ' ಮತ್ತು 'ಯೆಸ್ ಬಾಸ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ, ಅವರು ರಿಯಾಲಿಟಿ ಶೋ ಬಿಗ್ ಬಾಸ್ 17 ರಲ್ಲಿ ಕಾಣಿಸಿಕೊಂಡರು. ಆದರೆ ಎಲಿಮಿನೇಟ್​ ಆದ  ಮೊದಲ ಸ್ಪರ್ಧಿಯಾಗಿದ್ದರು.  'ಬಿಗ್ ಬಾಸ್ 17' ರಿಯಾಲಿಟಿ  ಷೋನಲ್ಲಿ  ಕಾಣಿಸಿಕೊಂಡಿದ್ದ ಸೋನಿಯಾ ಬನ್ಸಾಲ್ ತಮ್ಮ ಕ್ಯೂಟ್‌ನೆಸ್ ಮತ್ತು ಸ್ಟೈಲ್‌ನಿಂದ ಎಲ್ಲರನ್ನೂ ಹುಚ್ಚೆಬ್ಬಿಸಿದರು. ಷೋನಲ್ಲಿ ನಟಿಯ ಮ್ಯಾಜಿಕ್ ಹೆಚ್ಚು ಕಾಲ ಉಳಿಯದಿದ್ದರೂ,  ಮನೆಯಿಂದ ಹೊರಬಂದ ನಂತರ  ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ.  

ದೇವಲೋಕದ ಅಪ್ಸರೆ ನನ್ನನ್ನು ಬಿಟ್ಟು ಮುದುಕನನ್ನು ಮದ್ವೆಯಾದ್ಲು! ರಾಮ್‌ ಗೋಪಾಲ್‌ ವರ್ಮಾ ಮಾತು ಮತ್ತೆ ಮುನ್ನೆಲೆಗೆ

click me!