ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಮನೆಗೆ ಅತಿಥಿಯಾಗಿ ಬಂದ ನಟಿ ಟಬು ಮದುವೆ ವಿಷಯದ ಕುರಿತು ಹೇಳಿದ್ದಾರೆ. ಅವರು ಹೇಳಿದ್ದೇನು?
ಹಿಂದಿನ ಬಿಗ್ಬಾಸ್ 17ನೇ ಸಂಚಿಕೆ ಶುರುವಾಗಿ ಹಲವಾರು ವಾರಗಳು ಕಳೆದಿವೆ. ಇನ್ನೇನು ಫಿನಾಲೆ ಸಮೀಪಿಸುತ್ತಿದೆ. ಕಳೆದ 16 ಸಂಚಿಕೆಗಳಂತೆಯೇ ಈ ಬಾರಿಯೂ ಬಿಗ್ಬಾಸ್ ಅನ್ನು ನಟ ಸಲ್ಮಾನ್ ಖಾನ್ ಅವರೇ ಹೋಸ್ಟ್ ಮಾಡುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ 58 ವರ್ಷದ ಸಲ್ಮಾನ್ ಖಾನ್ ಅವರು ಬಾಲಿವುಡ್‌ನ ಮೋಸ್ಟ್ ಎಲಿಬಿಜಲ್ ಬ್ಯಾಚುಲರ್ ಎಂದೇ ಫೇಮಸ್ ಆಗಿರುವವರು. ಇವರ ಹೆಸರು ನಟಿ ಐಶ್ವರ್ಯ ರೈ ಸೇರಿದಂತೆ ಹಲವರ ಜೊತೆ ಥಳಕು ಹಾಕಿಕೊಂಡಿದ್ದರೂ ಇವರಿನ್ನೂ ಮದುವೆಯಾಗಿಲ್ಲ. ಇದಾಗಲೇ ಕೆಲವು ನಟಿಯರು ಸಲ್ಮಾನ್ ಖಾನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನೂ ಮಾಡಿದ್ದಿದೆ. ಅದೇನೇ ಇದ್ದರೂ ಸಲ್ಮಾನ್ ಮತ್ತು ಐಶ್ವರ್ಯ ಅವರು ಮದುವೆಯಾಗುವ ಹಂತಕ್ಕೆ ತಲುಪಿದ್ದರು. ಆದರೆ ಇಬ್ಬರ ನಡುವೆ ಬಿರುಕು ಉಂಟಾಗಿ, ಐಶ್ವರ್ಯ ರೈ ಕೊನೆಗೆ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಐಶ್ವರ್ಯ ತಮಗೆ ಮೋಸ ಮಾಡಿದ್ದಾರೆ ಎಂದು ಸಲ್ಮಾನ್ ಖಾನ್ ತೀರಾ ಇತ್ತೀಚಿನವರೆಗೂ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ.
ಅದೇ ಇನ್ನೊಂದೆಡೆ ಬಾಲಿವುಡ್‌ನ ಸ್ವೀಟ್ ಬೇಬಿ ಎಂದೇ ಫೇಮಸ್ ಆಗಿರುವ ನಟಿ ಟಬು. ಬಾಲಿವುಡ್‌ನ ಎವರ್‌ಗ್ರೀನ್ ನಟಿಯರಲ್ಲಿ ಒಬ್ಬರು ಟಬು. ಕಳೆದ ನವೆಂಬರ್ನಲ್ಲಿ ಅವರು 52ನೇ ವಯಸ್ಸಿಗೆ ಕಾಲಿಟ್ಟರು. ವಯಸ್ಸು ಇಷ್ಟಾದರೂ ಇಂದಿಗೂ ಅವರಿಗೆ ಬಾಲಿವುಡ್‌ನಲ್ಲಿ ಸಕತ್ ಡಿಮ್ಯಾಂಡ್ ಇದೆ, ಮಾತ್ರವಲ್ಲದೇ ಯಾವ ನಾಯಕನ ತಾಯಿಯಾಗಿಯೂ ನಟಿಸುವ ಕಾಲ ಬಂದಿಲ್ಲ, ನಾಯಕಿಯಾಗಿಯೇ ನಟಿಸುತ್ತಿರುವ ಹೆಮ್ಮೆ ಇವರದ್ದು. ದೃಶ್ಯಂ 2 ರಲ್ಲಿ ತಮ್ಮ ಮಗನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗುವ ಪ್ರತಿಸ್ಪರ್ಧಿಯಾಗಿ ಅವರು ಕಾಣಿಸಿಕೊಂಡರೆ ಭೂಲ್ ಭುಲೈಯಾ 2 ರಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು, ಎರಡೂ ಪಾತ್ರಗಳು ಪರಸ್ಪರ ಭಿನ್ನವಾಗಿವೆ. ಹೀಗೆ ಎಲ್ಲಾ ಪಾತ್ರಗಳಲ್ಲಿ ಟಬು ಅವರದ್ದು ಎತ್ತಿದ ಕೈ. ಇಂತಿಪ್ಪ ನಟಿ ಇಂದಿಗೂ ಸಿಂಗಲ್. ಮದುವೆಯಾಗುವ ಗೋಜಿಗೆ ಹೋಗಲಿಲ್ಲ, ಅದರ ಆಸೆಯೂ ಅವರಿಗೆ ಇಲ್ಲವಂತೆ. ಸಿಂಗಲ್ ಆಗಿರುವುದನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಟಬುವಿಗೆ ಇಂದಿಗೂ ಖುಷಿಯಿದೆ ಎನ್ನುತ್ತಾರೆ.
ಲಕ್ಷದ್ವೀಪದಲ್ಲಿ ಮೋದಿ: ಉಡುಪಿ ಬೀಚ್ಗೂ ಬಂತು ಶುಕ್ರದೆಸೆ- ಅಮಿತಾಭ್, ಸೆಹ್ವಾಗ್ ಹೇಳಿದ್ದೇನು?
ನಾನು ಒಂದು ವೇಳೆ ಮದುವೆಯಾಗಿದ್ದರೆ ಎಲ್ಲವನ್ನೂ ತ್ಯಜಿಸಬೇಕಿತ್ತು. ಕೆಲವು ನಟಿಯರು ಮದುವೆಯಾದ ಬಳಿಕ ಗಂಡ, ಸಂಸಾರ ಎಂದು ನಟನಾವೃತ್ತಿಯನ್ನು ಅನಿವಾರ್ಯವಾಗಿ ತೊರೆದಿದ್ದಾರೆ. ಇಂಥ ಅನ್ಯಾಯ ನನಗೂ ಆಗುತ್ತಿತ್ತು ಎಂದಿರುವನ ನಟಿ, ನನ್ನ ನಟನಾ ವೃತ್ತಿಯೇ ನನಗೆ ಜೀವ. ಜಗತ್ತನ್ನು ಸುತ್ತುವ ಬಯಕೆ ಇದೆ. ಆದರೆ ಒಬ್ಬ ವ್ಯಕ್ತಿಗಾಗಿ ಇವೆಲ್ಲವನ್ನೂ ತ್ಯಜಿಸುವ ಇಚ್ಛೆ ನನಗಿಲ್ಲ ಎಂದಿದ್ದಾರೆ. ಒಂಟಿತನದ ಜೀವನವನ್ನು ಸುಲಭವಾಗಿ ನಿಭಾಯಿಸಬಹುದು, ಆದರೆ ದುರ್ದೈವವಶಾತ್ ತಪ್ಪು ಸಂಗಾತಿ ಆಯ್ಕೆ ಮಾಡಿಕೊಂಡರೆ ಅದಕ್ಕಿಂತ ಭಯಾನಕ ಮತ್ತೊಂದಿಲ್ಲ. ಆದ್ದರಿಂದ ಒಂಟಿ ಜೀವನವೇ ಲೇಸು ಎಂದಿದ್ದಾರೆ. ಹಿಂದೊಮ್ಮೆ ನಟಿ, ಮದುವೆಯಿಲ್ಲದೆ ಮಗುವನ್ನು ಹೊಂದುವ ಬಗ್ಗೆ ಯೋಚಿಸಿದ್ದೇನೆ ಎಂದು ಹಿಂದೊಮ್ಮೆ ಹೇಳಿದ್ದರು.
ಇದೀಗ ಇವರಿಬ್ಬರೂ ಮದುವೆಯ ಕುರಿತು ಬಿಗ್ಬಾಸ್ನಲ್ಲಿ ಮಾತನಾಡಿದ್ದಾರೆ. ಈ ವಾರದ ಬಿಗ್ಬಾಸ್ಗೆ ಟಬು ಅತಿಥಿಯಾಗಿ ಆಗಮಿಸಿದ್ದಾರೆ. ಬಿಗ್ಬಾಸ್ನಲ್ಲಿ ಕಿತ್ತಾಟ ಮಾಡುತ್ತಾ ಕಾಂಟ್ರವರ್ಸಿಯಿಂದಲೇ ಫೇಮಸ್ ಆಗುತ್ತಿರುವ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಅವರನ್ನು ಟಬು ಮಾತನಾಡಿಸಿದ್ದಾರೆ. ವಿಕ್ಕಿ ಅವರ ಮದುವೆಯ ಕುರಿತು ಕೇಳಿದ ಸಂದರ್ಭದಲ್ಲಿ ವಿಕ್ಕಿ ಅವರು, ನಾವಿಬ್ಬರೂ ಮೊದಲೇ ಮದ್ವೆಯಾಗಿದ್ದರೂ ಸಲ್ಮಾನ್ ಖಾನ್ ಬಿಗ್ಬಾಸ್ ಮನೆಯಲ್ಲಿ ಮತ್ತೆ ಮದ್ವೆ ಮಾಡಿಸಿದರು. ಅವರು ಮದುವೆಯಾಗಿಲ್ಲ ಎನ್ನುವ ಕಾರಣಕ್ಕೆ ಅವರ ಪಾಲಿನ ಮದುವೆಯನ್ನೂ ನಮಗೇ ಮಾಡಿಸುತ್ತಾರೆ ಎಂದರು. ಅದಕ್ಕೆ ಉತ್ತರಿಸಿದ ಟಬು, ನಾವಿಬ್ಬರೂ ಮದುವೆಯಾಗಿಲ್ಲ ಎಂದು ನಮ್ಮ ಪಾಲಿನದ್ದೂ ನಿಮ್ಮ ಬಳಿ ಮಾಡಿಸುತ್ತಿದ್ದೇವೆ. ನೀವು ಇದಾಗಲೇ ದೂರ ಹೋಗಿಬಿಟ್ಟಿದ್ದೀರಿ. ನಾವಿಬ್ಬರೂ ಇನ್ನೂ ಇಲ್ಲೇ ಇದ್ದೇವೆ ಎಂದು ತಮಾಷೆ ಮಾಡಿ ಮದುವೆಯ ಕುರಿತು ಪರೋಕ್ಷವಾಗಿ ಮಾತನಾಡಿದರು. ಈಗ ಇದರ ಅರ್ಥವೇನು ಎಂದು ಸಲ್ಲುಭಾಯಿ, ಟಬು ಫ್ಯಾನ್ಸ್ ತಲೆ ಕೆರೆದುಕೊಳ್ಳುತ್ತಿದ್ದಾರೆ.