ಸದಾ ನಟಿಯರ ಮೈಗೆ ಅಂಟಿಕೊಂಡೇ, ತಬ್ಬಿಕೊಂಡೇ ಇರೋ ಡ್ರಗ್ಸ್ ಪ್ರೇಮಿ ಎನಿಸಿಕೊಂಡಿರೋ ಓರಿ ಬಿಗ್ಬಾಸ್ಗೆ ಹೋಗಲಿದ್ದಾರೆಯೆ?
ನೋಡಲು ವಿಚಿತ್ರ ಆದ್ರೂ ಈ ವ್ಯಕ್ತಿ ಸೆಲೆಬ್ರಿಟಿಗಳಿಗೆ ಅದರಲ್ಲಿಯೂ ಹೆಚ್ಚಾಗಿ ಬಾಲಿವುಡ್ ನಟಿಯರಿಗೆ ಅಚ್ಚುಮೆಚ್ಚು. ನಟಿಯರ ಮೈ ಕೈಗಳನ್ನು ಮುಟ್ಟುತ್ತಲೇ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ನಟಿಯರು ಕೂಡ ಅಷ್ಟೇ ಸಲೀಸಾಗಿ ಖುಷಿಯಿಂದ ಈ ವ್ಯಕ್ತಿಯನ್ನು ಕಂಡರೆ ಓಡೋಡಿ ಬರುತ್ತಾರೆ. ಬಹುತೇಕ ಎಲ್ಲಾ ಖ್ಯಾತ ಬಾಲಿವುಡ್ ನಟಿಯರ ಜೊತೆ ಇವರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ನಟಿಯರು ಮಾತ್ರವಲ್ಲದೇ ನಟರು ಹಾಗೂ ಉದ್ಯಮಿಗಳೂ ಇವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಹೌದು. ಈ ವ್ಯಕ್ತಿಯ ಹೆಸರು ಓರಿ. ಪಾರ್ಟಿಗಳಂತೂ ಓರಿ ಇಲ್ಲದೆ ಅಪೂರ್ಣ ಎಂದೇ ಹೇಳುವಷ್ಟರ ಮಟ್ಟಿಗೆ ಓರಿ ಎಲ್ಲರಿಗೂ ಬೇಕು. ಹೊಸ ವಿಷಯ ಏನಪ್ಪಾ ಎಂದರೆ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ಬಾಸ್ ಸೀಸನ್ 17 ಮನೆಯೊಳಕ್ಕೆ ಓರಿ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿಯಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆಯಲಿದ್ದಾರೆ ಎನ್ನಲಾಗಿದೆ. ಓರಿ ನಾಳೆ ಬಿಗ್ಬಾಸ್ ಸೆಟ್‌ನಲ್ಲಿರುತ್ತಾರೆ ಮತ್ತು ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಅವರೊಂದಿಗೆ ಷೋನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಇಷ್ಟೆಲ್ಲಾ ಪ್ರಚಾರ ಗಿಟ್ಟಿಸುತ್ತಿರೋ ಓರಿ ಕುರಿತು ಒಂದಿಷ್ಟು ಹೇಳಲೇಬೇಕು. ಓರಿ ಎಂದು ಕರೆಯಲ್ಪಡುವ ಈ ಯುವಕನ ಹೆಸರು ಓರ್ಹನ್ ಅವತ್ರಮಣಿ. ಬಾಲಿವುಡ್ ನಟ-ನಟಿಯರ ಜೊತೆ ಸದಾ ಇವರ ಒಡನಾಟ ಇದ್ದು, ಪಾರ್ಟಿಗೂ ಓರಿ ಬೇಕೇ ಬೇಕು. ಇತ್ತೀಚೆಗೆ ನೀತಾ ಅಂಬಾನಿ ಜೊತೆಗಿದ್ದ ಓರಿ ಫೊಟೋ ವೈರಲ್ ಆಗಿತ್ತು. ಅದಾದ ಮೇಲೆ ಓರಿ ಕುರಿತು ಸಾಕಷ್ಟು ಕುತೂಹಲ ಕೆರಳಿಸಿತ್ತು. ಈ ನಡುವೆ, ಈ ವ್ಯಕ್ತಿಯ ಕುರಿತು ಒಂದಿಷ್ಟು ಮಾಹಿತಿಗಳನ್ನು ಮಾಧ್ಯಮಗಳು ಬಿತ್ತರಿಸಿವೆ. ಓರಿಯ ಕುರಿತು ವಿಜಯ್ ಪಟೇಲ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಟ್ವಿಟ್ ಮಾಡಿದ್ದರು. ಸಾಮಾನ್ಯನಂತೆ ಕಾಣುವ ಈತ ಬಾಲಿವುಡ್‌ನಲ್ಲಿ ತುಂಬಾ ಪ್ರಭಾವಿಯಂತೆ ಕಾಣುತ್ತಾನೆ. ಬಹುತೇಕ ಬಾಲಿವುಡ್‌ನ ಎಲ್ಲರೂ ಆತನ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಹಾಗಿರುವಾಗ ಆತನ ಬಗ್ಗೆ ಕೆಲವೊಂದು ವಿಷಯ ತಿಳಿಸುತ್ತೇನೆ ಎಂದಾಗಲೇ ಇವರ ಬಗ್ಗೆ ಕೆಲವು ಇಂಟರೆಸ್ಟಿಂಗ್ ವಿಷ್ಯಗಳು ಹೊರಬಂದಿದ್ದವು.
ನೋಡಲು ವಿಚಿತ್ರ ಅನಿಸೋ ಈ ಓರಿ ನೋಡಿದ್ರೆ ಬಾಲಿವುಡ್ ಮಂದಿ ಹಿಂಗ್ಯಾಕೆ ಆಡ್ತಾರೆ? ಡ್ರಗ್ ಪೆಡ್ಲರ್ ಅಂತನಾ?
ಈತನ ನಿಜವಾದ ಹೆಸರು ಒರ್ಹಾನ್ ಅವತ್ರಮಣಿ, ಎಲ್ಲರೂ ಓರಿ ಎಂದು ಅಡ್ಡ ಹೆಸರಿನಿಂದ ಕರೆಯುತ್ತಾರೆ. ಮಾಧ್ಯಮಗಳ ವರದಿಯಂತೆ ಈತನ ತಂದೆ ಹೆಸರು ಜಾರ್ಜ್ ಅವತ್ರಮಣಿ, ಆದರೆ ಇದು ನಿಜವಲ್ಲ, ಈತನ ತಂದೆಯ ಹೆಸರು ಸೂರಜ್ ಅವತ್ರಮಣಿ. ತಾಯಿ ಶಹನಾಜ್ ಅವತ್ರಮಣಿ. ಓರಿ ಅವತ್ರಮಣಿದು ತುಂಬಾ ಶ್ರೀಮಂತ ಹಿನ್ನೆಲೆ ಇರುವ ಕುಟುಂಬ. ಓರಿ ಲಿಂಕ್ಡ್ ಇನ್ ಪ್ರೊಫೈಲ್ ಪ್ರಕಾರ ಅವರು ಮುಂಬೈನ ಸಾಮಾಜಿಕ ಕಾರ್ಯಕರ್ತ. ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಚೇರ್ ಪರ್ಸನ್ ಆಫೀಸ್ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದಾರೆ. ರಿಯಲ್ ಎಸ್ಟೇಟ್ , ಹೊಟೇಲ್ ಉದ್ಯಮ, ಮದ್ಯ ಉದ್ಯಮದಲ್ಲಿ (Liquor Business) ಹೆಸರು ಮಾಡಿದ್ದು, ಶ್ರೀಮಂತಿಕೆಗೇನು ಕೊರತೆ ಇಲ್ಲ. ಭಾರತದ ಬಹುತೇಕ ಶ್ರೀಮಂತರ ಮಕ್ಕಳಂತೆ ಈತನೂ ಅಮೆರಿಕದಲ್ಲಿ ಶಿಕ್ಷಣ ಮುಗಿಸಿದ್ದಾರೆ.
ನ್ಯೂಯಾರ್ಕ್ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ನಲ್ಲಿ ಫೈನ್ ಆರ್ಟ್ಸ್ ಆ್ಯಂಡ್ ಕಮ್ಯುನಿಕೇಷನ್ ಡಿಸೈನ್ನಲ್ಲಿ ಪದವಿ ಪಡೆದಿದ್ದಾರೆ ಓರಿ. ಅವರಿಗೆ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಪ್ರತಿಭೆ ಕಷ್ಟಪಟ್ಟು ದುಡಿಯದಿದ್ದರೆ, ಕಠಿಣ ಶ್ರಮ ಪ್ರತಿಭೆಯನ್ನೂ ಸೋಲಿಸುತ್ತದೆ ಎಂದು ಅವರು ಬಯೋದಲ್ಲಿ ಬರೆದಿದ್ದಾರೆ. ಅಂಬಾನಿ ಕುಟುಂಬದ ಸೊಸೆ ರಾಧಿಕಾ ಮರ್ಚೆಂಟ್‌ಗೆ ಈತ ಉತ್ತಮ ಗೆಳೆಯ. 2005ರಿಂದಲೂ ಬಹಳ ಆತ್ಮೀಯವಾಗಿದ್ದಾರೆ ಓರಿ ಹಾಗೂ ರಾಧಿಕಾ ಮರ್ಚೆಂಟ್. ಮಿಥಿಲಾ ಪವಾರ್ ಅವರಿಗೂ ಈ ಓರಿ ಬೆಸ್ಟ್ ಫ್ರೆಂಡ್ , ಮಿಥಿಲಾ ಅವರು ಪ್ರಭಾವಿ ಪವಾರ್ ಕುಟುಂಬಕ್ಕೆ ಸೇರಿದ ಶ್ರೀನಿವಾಸ ಪವಾರ್ ಅವರ ಮಗಳು. ಅವರು ಕೃಷಿ ಹಾಗೂ ರಾಸಾಯನಿಕ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಮಹಾರಾಷ್ಟ್ರದ ರಾಜಕಾರಣಿ ಅಜಿತ್ ಪವಾರ್ ಅವರ ಸಂಬಂಧಿ.
ತಾನು ಬಹಳಷ್ಟು ಕಷ್ಟ ಪಟ್ಟು ಕೆಲಸ ಮಾಡುವುದಾಗಿ ಓರಿ ಹೇಳಿದ್ದಾರೆ. ತನ್ನ ಉದ್ಯೋಗ ಮಾತ್ರವಲ್ಲದೆ ತನಗಾಗಿಯೂ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಜಿಮ್, ಯೋಗ, ಮಸಾಜ್ ಎಂದಿದ್ದಾರೆ. 2015ರಲ್ಲಿ ಹ್ಯೂಮನ್ಸ್ ಆಫ್ ಬಾಂಬೆ ಈ ಓರಿ ಬಗ್ಗೆ ಸಣ್ಣದಾದ ವರದಿಯೊಂದನ್ನು ಪ್ರಕಟಿಸಿತ್ತು. ಇದರಲ್ಲಿ ಇವರು ತಾನು ಡ್ರಗ್ ಚಟಕ್ಕೆ ತುತ್ತಾಗಿದ್ದೆ ಎಂದು ಹೇಳಿಕೊಂಡಿದ್ದರು. ಫೇಸ್‌ಬುಕ್‌ನಲ್ಲಿ ಇಮ್ತಿಯಾಜ್ ಕತ್ರಿ ಜೊತೆಗೂ ಇರುವ ಫೋಟೋವಿದೆ. ಈ ಇಮ್ತಿಯಾಜ್ ಕತ್ರಿ ಮೇಲೆ ಶಾರೂಖ್ ಖಾನ್ ಪುತ್ರ ಆರ್ಯಾನ್ ಖಾನ್ ಹಾಗೂ ದಿ. ಸುಶಾಂತ್ ಸಿಂಗ್ ರಾಜಪುತ್‌ಗೆ ಡ್ರಗ್ ಪೂರೈಸಿದ ಆರೋಪವಿದೆ. ಈಗ ನಿಮಗೆ ಈ ಓರಿ ಏಕೆ ಇಷ್ಟೊಂದು ಪ್ರಭಾವಿ ಎಂದು ತಿಳಿದಿರಬಹುದು ಹಾಗೂ ಆತ ಹೇಗೆ ಭಾರತದ ಮುಂದಿನ ತಲೆಮಾರಿನ ಜನರಿಗೆ ಅಷ್ಟು ಆತ್ಮೀಯನಾದ ಎಂಬುದರ ಅರಿವಾಗಬಹುದು ಎಂದು ಬರೆದುಕೊಂಡಿದ್ದಾರೆ ವಿಜಯ್ ಪಟೇಲ್. ಹೀಗಾಗಿಯೇ ಸುಶಾಂತ್ ಸಿಂಗ್ ಸಾವು ಮತ್ತು ಆರ್ಯನ್ ಖಾನ್ ಅವರ ಡ್ರಗ್ಸ್ ಪ್ರಕರಣದ ಹಿಂದಿನ ಸತ್ಯ ಹೊರಬರುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.