Priyanka Choudari: ಶಾರುಖ್​ ಖಾನ್​ ಮುಂಬರುವ ಚಿತ್ರದಲ್ಲಿ ಬಿಗ್​ಬಾಸ್​ ಬೆಡಗಿ?

Published : Feb 21, 2023, 02:55 PM ISTUpdated : Feb 21, 2023, 03:20 PM IST
Priyanka Choudari: ಶಾರುಖ್​ ಖಾನ್​ ಮುಂಬರುವ ಚಿತ್ರದಲ್ಲಿ ಬಿಗ್​ಬಾಸ್​ ಬೆಡಗಿ?

ಸಾರಾಂಶ

ಬಿಗ್​ಬಾಸ್​ 16ರಲ್ಲಿ ಸಾಕಷ್ಟು ಹಲ್​ಚಲ್​ ಮಾಡಿರುವ ನಟಿ ಪ್ರಿಯಾಂಕಾ ಚೌಧರಿ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆಯೇ? ಏನೆಂದರು ನಟಿ?  

ಹಿಂದಿಯ ಬಿಗ್​ಬಾಸ್ ಸೀಸನ್​ 16 (Bigg Boss) ನೋಡುಗರಿಗೆ ಸುಂದರಿ​ ಪ್ರಿಯಾಂಕಾ ಚಾಹರ್ ಚೌಧರಿ (Priyanka Chahar Choudhary ) ತೀರಾ ಪರಿಚಿತರು. ಇವರು ನಟಿ ಕೂಡ. ಬಿಗ್ ಬಾಸ್​ಗೆ ಭಾಗವಹಿಸಿದ ನಂತರ ಅವರ ಯಶಸ್ಸು ಹೆಚ್ಚಾಯಿತು. ಪ್ರಿಯಾಂಕಾ ಅವರೇ ಬಹುತೇಕ ಗೆಲ್ಲುತ್ತಾರೆ ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದರು. ಅಷ್ಟು  ಪ್ರಬಲವಾದ ಸ್ಪರ್ಧೆ ಒಡ್ಡಿದ್ದರು.  ಆದಾಗ್ಯೂ, ಅವರು 3 ನೇ ಸ್ಥಾನದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಯಿತು.  ಪ್ರಿಯಾಂಕಾ ಅವರಿಗೆ  ಬಿಗ್ ಬಾಸ್ 16 ಟ್ರೋಫಿ ಸಿಗಲಿಲ್ಲವಾದರೂ ಅಪಾರ ಅಭಿಮಾನಿಗಳನ್ನು ಪಡೆದುಕೊಂಡರು. ಇವರು ಬಿಗ್​ಬಾಸ್​ ಮನೆಯಿಂದ ತೆರಳುತ್ತಿದ್ದಂತೆಯೇ ಅತ್ತ ಇವರ ಒಂದು ವಿಷಯ ಭಾರಿ ವೈರಲ್​ ಆಯಿತು. ಅದೇನೆಂದರೆ  ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಡುಂಕಿಯಲ್ಲಿ ಪ್ರಿಯಾಂಕಾಗೆ ಪಾತ್ರವನ್ನು ನೀಡಲಾಗಿದೆ ಎಂಬ ಸುದ್ದಿಯದು.

ಇದಕ್ಕೆ ಪೂರಕ ಎನ್ನುವಂತೆ ಹಿಂದಿನ ಬಿಗ್​ಬಾಸ್​ ನಡೆಸಿಕೊಡುತ್ತಿರುವ  ಸಲ್ಮಾನ್ ಖಾನ್ ಅವರು ಪ್ರಿಯಾಂಕಾ ಚಾಹರ್ ಚೌಧರಿ ಅವರಿಗೆ ಹೊರಗೆ ಹೋದಾಗ ಹೊಸ ವಿಷಯ ಎದುರಾಗಲಿದೆ ಎಂದಿದ್ದರು. ಅವರಿಗೆ  ಮನರಂಜನೆ ಸಿಗಲಿದೆ ಎಂದಿದ್ದರು. ಕಾಕತಾಳೀಯ ಎಂಬಂತೆ  ಅದೇ ಇನ್ನೊಂದೆಡೆ ಶಾರುಖ್​ ಖಾನ್​ ಚಿತ್ರದಲ್ಲಿ ಇವರಿಗೆ ಆಫರ್​ ಬಂದಿದೆ ಎಂಬ ಸುದ್ದಿ ಹರಿದಾಡುತ್ತಿದೆ.  ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಶಾರುಖ್ ಖಾನ್ (ShahRukhKhan) ಮತ್ತು ತಾಪ್ಸಿ ಪನ್ನು ಅಭಿನಯದ ಡುಂಕಿಯಲ್ಲಿ ಪ್ರಿಯಾಂಕಾಗೆ ಪಾತ್ರವನ್ನು ನೀಡಲಾಗಿದೆ ಎಂಬ ಸುದ್ದಿ ಇತ್ತು. ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮತ್ತು ನಿರ್ಮಾಣದ `ಡುಂಕಿ’ (Dunki) ಚಿತ್ರದಲ್ಲಿ ಶಾರುಖ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ನೆರವೇರಿದ್ದು, ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಇದರ ಚಿತ್ರೀಕರಣ ದುಬೈನಲ್ಲಿ ಮುಗಿದಿದೆ. ಸೌದಿ ಅರೇಬಿಯಾ ಶೂಟಿಂಗ್​ ಮುಗಿಸಿದ ಬಳಿಕ  ರೆಡ್​ ಸಿ ಇಂಟರ್​​ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಉದ್ಘಾಟನೆ ಮೂಲಕ ತಮ್ಮ ಸಿನಿಮಾ ಶೂಟಿಂಗ್​ ಅನ್ನು ಸೌದಿಯಲ್ಲಿ ಶಾರುಖ್​ ಆರಂಭಿಸಿದ್ದರು.

Bigg Boss 16; ಹಿಂದಿ ಬಿಗ್ ಬಾಸ್ ಗೆದ್ದ ಎಂಸಿ ಸ್ಟಾನ್‌ ಯಾರು, ಸಿಕ್ಕ ಬಹುಮಾನದ ಮೊತ್ತವೆಷ್ಟು?

ಈ ಚಿತ್ರದಲ್ಲಿ ಪ್ರಿಯಾಂಕಾ ಅವರಿಗೆ ರೋಲ್​ ದಕ್ಕಿದೆ. ಇದಕ್ಕಾಗಿ ಆಫರ್​ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ಇದೀಗ ಈ ಬಗ್ಗೆ ಖುದ್ದು ನಟಿ ಪ್ರಿಯಾಂಕಾ ಮೌನ ಮುರಿದಿದ್ದಾರೆ. ಈ ಗಾಳಿಸುದ್ದಿಯಲ್ಲಿ ಸತ್ಯಾಂಶ ಇಲ್ಲ. ನನಗೆ ಯಾವುದೇ ದೃಢೀಕರಣ ಮಾಹಿತಿ ಬಂದಿಲ್ಲ ಎಂದಿದ್ದಾರೆ. ಆದರೆ ಇದು ನಿಜ ಆಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.   
ಈ ಸುದ್ದಿ ಕೇಳಿ ಖುಷಿಯಲ್ಲಿ ತೇಲಿ ಹೋಗಿದ್ದೇನೆ. ಆದರೆ ಸದ್ಯ ನನಗೆ ಯಾವುದೇ ಆಫರ್​ ಬಂದಿಲ್ಲ. ಬಂದರೆ ಅದರಷ್ಟು ಒಳ್ಳೆಯ ವಿಷಯ ಮತ್ತೊಂದಿಲ್ಲ, ನನ್ನಷ್ಟು ಅದೃಷ್ಟಶಾಲಿ ಬೇರೆ ಯಾರೂ ಇಲ್ಲ.  ನಾನು ಅದರ ಬಗ್ಗೆ ಕೆಲವು ದೃಢೀಕರಣಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಮತ್ತೊಂದೆಡೆ, ಪ್ರಿಯಾಂಕಾ ಚಾಹರ್ ಚೌಧರಿ ಬಿಗ್​ಬಾಸ್ ಮನೆಯಿಂದ ಹೊರ ಬಂದ ಮೇಲೆ ಹೊರಗೆ ಸುತ್ತಾಟದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ನಟ ಅಂಕಿತ್​ (Ankith) ಜೊತೆಯಲ್ಲಿ ಇವರ ಸಂಗೀತ ವಿಡಿಯೋ ಶೀಘ್ರ ರಿಲೀಸ್​ ಆಗಲಿದ್ದು, ಇಬ್ಬರನ್ನೂ ಒಟ್ಟಿಗೇ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ತಮ್ಮಿಬ್ಬರನ್ನು  ಶೀಘ್ರದಲ್ಲೇ  ಒಟ್ಟಿಗೆ ನೋಡಬಹುದು ಎಂದೂ ಪ್ರಿಯಾಂಕಾ  ಖಚಿತಪಡಿಸಿದ್ದಾರೆ.  ಒಟ್ಟಿನಲ್ಲಿ ಬಾಲಿವುಡ್​ಗೆ ಇನ್ನೊಂದು ಪ್ರಿಯಾಂಕಾ ಸೇರ್ಪಡೆಯಾಗುತ್ತಾರೆಯೆ ಎಂದು ಜನರು ಕಾಯುತ್ತಿದ್ದಾರೆ. ಸದ್ಯ ಬಾಲಿವುಡ್​ನಲ್ಲಿ (Bollywood) ಪ್ರಿಯಾಂಕಾ ಚೋಪ್ರಾ ಇದ್ದರೆ, ಸ್ಯಾಂಡಲ್​ವುಡ್​ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿಯೂ ಪ್ರಿಯಾಂಕಾ ಹೆಸರಿನ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಪ್ರಿಯಾಂಕಾ, ಹಳೆಯ ಪ್ರಿಯಾಂಕಾ ಚೋಪ್ರಾ ಅವರಿಗೆ ಪೈಪೋಟಿ ನೀಡಲಿದ್ದಾರೆಯೇ ಎಂದು ಕಾದು ನೋಡಬೇಕಿದೆ. 

Unkissed Girl: ಅನ್​ಕಿಸ್ಡ್ ಗರ್ಲ್ ಆಫ್ ಇಂಡಿಯಾ ಬಿರುದು ಪಡೆದ ಬಾಲಿವುಡ್​ ತಾರೆಯ ರೋಚಕ ಕಥೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?