ಚಿತ್ರೀಕರಣ ಸಮಯದಲ್ಲಿ ನಟ ರಣಬೀರ್ ಕಪೂರ್ ದುಬಾರಿ ಬೆಲೆಯ ರಮ್ ಕುಡಿಸಿದ್ರು ಎಂದು ಹಿರಿಯ ನಟ ಸೌರಭ್ ಶುಕ್ಲಾ ಬಹಿರಂಗ ಪಡಿಸಿದ್ದಾರೆ.
ಚಿತ್ರೀಕರಣ ಸಮಯದಲ್ಲಿ ನಟ ರಣಬೀರ್ ಕಪೂರ್ ದುಬಾರಿ ಬೆಲೆಯ ರಮ್ ಕುಡಿಸಿದ್ರು ಎಂದು ಹಿರಿಯ ನಟ ಸೌರಭ್ ಶುಕ್ಲಾ ಬಹಿರಂಗ ಪಡಿಸಿದ್ದಾರೆ. ಲೇಹ್ ಲಡಾಖ್ ನಲ್ಲಿ ಶಂಶೇರಾ ಶೂಟಿಂಗ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ ಹಿರಿಯ ನಟ ಸೌರಭ್. ರಣಬೀರ್ ಕಪೂರ್ ಜೊತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸೌರಭ್ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಶಂಶೇರಾ ಸಿನಿಮಾ ಶೂಟಿಂಗ್ ವೇಳೆ ನಾಗಾರ್ಜುನ್ ಮತ್ತು ರಣಬೀರ್ ಅವರು ಕುಡಿಯುತ್ತಿದ್ದ ರಮ್ ಅನ್ನೇ ತಾನು ಕುಡಿಯುತ್ತಿದ್ದೆ ಎಂದು ಹೇಳಿದ್ದಾರೆ. ಸೌರಭ್ ಶುಕ್ಲ ಕುಡಿದ ಬಳಿಕವೇ ರಣಬೀರ್ ಬಾಟಲಿಯನ್ನು ಖಾಲಿ ಮಾಡುತ್ತಿದ್ದರು ಎಂದು ಹೇಳಿದರು.
ಸೌರಭ್ ಶುಕ್ಲಾ ಅವರ ಬ್ರಾಂಡ್ ಓಲ್ಡ್ ಮಾಂಕ್ ಅಂತೆ. ಕಡಿಮೆ ಬೆಲೆಯಲ್ಲಿ ಸಿಗುವ ಕಾರಣ ಅದನ್ನೆ ಹೆಚ್ಚಾಗಿ ಇಷ್ಟಪಡುವುದು ಎಂದು ಸೌರಭ್ ಬಹಿರಂಗ ಪಡಿಸಿದರು. ರಮ್ ಮತ್ತು ಕೋಕ್ ಕುಡಿಯುವ ಬಗ್ಗೆ ಮಾತನಾಡಿದ ಸೌರಭ್, 'ನಾನು ಕೂಡ ದುಬಾರಿ ರಮ್ ಕುಡಿಯುತ್ತೇನೆ. ಅದರ ಬೆಲೆ 30 ಸಾವಿರ. ರಣಬೀರ್ ಕಪೂರ್ ನನಗೆ ಕುಡಿಸಿದ್ರು. ನಾಗಾರ್ಜುನ್ ಅವರು ನನಗೆ ಮೊದಲು ಕುಡಿಯುವಂತೆ ಮಾಡಿದರು' ಎಂದು ಹೇಳಿದರು.
ಲೇಹ್ ನಲ್ಲಿದ್ದಾಗಾ ಸರ್ ನೀವು ಏನು ಕುಡಿಯುತ್ತೀರಿ ಎಂದು ರಣಬೀರ್ ಕೇಳಿದರು. ನಾನು ಓಲ್ಡ್ ಮಾಂಕ್ ಎಂದು ಹೇಳಿದೆ. ನಾನು ಏನಾದರೂ ಇನ್ನು ಒಳ್ಳೆಯದನ್ನು ಕುಡಿಸುತ್ತೇನೆ ಎಂದು ಹೇಳಿದರು. ಬಳಿಕ ನಾವಿಬ್ಬರೂ ತುಂಬಾ ಕುಡಿದೆವು. ಬಾಟಲಿ ಮುಗಿದ ಬಳಿಕ ಇದು ಕಡಿಮೆ ಎಂದು ಹೇಳಿದರು. ಆಗ ನಾನು ಅವರಿಗೆ ಓಲ್ಡ್ ಮಾಂಕ್ ಕುಡಿತೀರಾ ಎಂದು ಕೇಳಿದೆ. ಹೌದು ಎಂದರು. ಆಗ ನಾನು ಅವರಿಗೆ ಓಲ್ಡ್ ಮಾಂಕ್ ಕುಡಿಸಿದೆ' ಎಂದು ಹೇಳಿದರು.
ಆಲಿಯಾ ರಣಬೀರ್ ದಾಖಲೆ ಮುರಿದ ಸಿದ್ಧಾರ್ಥ್ ಮಲ್ಹೋತ್ರ- ಕಿಯಾರಾ ದಂಪತಿ
ಸೌರಭ್ ಶುಕ್ಲಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕ್: ದಿ ರಿಯಲ್ ಹೀರೋ, ಲಕ್ ಬೈ ಚಾನ್ಸ್ ಮತ್ತು ಜಾಲಿ ಎಲ್‌ಎಲ್‌ಬಿ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಶಂಶೇರಾ, ದೃಶ್ಯಂ 2 ಮತ್ತು ಬೇಡಿಯಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
ಏನ್ ಗುರು ಎಲ್ಲಾ ಫೋಟೋದಲ್ಲೂ ಮುತ್ತು ಕೊಡ್ತಿರ್ತೀರಾ?; ಆಲಿಯಾ- ರಣಬೀರ್ ಕಾಲೆಳೆದ ನೆಟ್ಟಿಗರು
ರಣಬೀರ್ ಸದ್ಯ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದ್ದು ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾಗೆ ಸೌತ್ ನಿರ್ದೇಶಕ ಸಂದೀಪ್ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಣ್ಬೀರ್ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಸದ್ಯ ಅನಿಮಲ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.