ಸದಾ ಫೋನಲ್ಲೇ ಇರ್ತಿದ್ದ, ಐ ಲವ್‌ ಯು ಮೀ ಟೂ ಅಂತಿದ್ದ: ವಿದ್ಯಾ ಬಾಲನ್ ಮಾತಿಗೆ ಶಾಕ್ ಆದ ನಟ

Published : Oct 27, 2024, 04:33 PM IST
ಸದಾ ಫೋನಲ್ಲೇ ಇರ್ತಿದ್ದ, ಐ ಲವ್‌ ಯು ಮೀ ಟೂ ಅಂತಿದ್ದ: ವಿದ್ಯಾ ಬಾಲನ್ ಮಾತಿಗೆ ಶಾಕ್ ಆದ ನಟ

ಸಾರಾಂಶ

ಕಾರ್ತಿಕ್ ಆರ್ಯನ್ ಅವರ ಪ್ರೇಮ ಸಂಬಂಧದ ಬಗ್ಗೆ ನಟಿ ವಿದ್ಯಾ ಬಾಲನ್ ಸುಳಿವು ನೀಡಿದ್ದಾರೆ. 'ಭೂಲ್ ಭುಲೈಯಾ 3' ಸೆಟ್‌ನಲ್ಲಿ ಕಾರ್ತಿಕ್ ಆರ್ಯನ್ ಸದಾ ಫೋನ್‌ನಲ್ಲಿ 'ಐ ಲವ್ ಯೂ' ಎಂದು ಹೇಳುತ್ತಿದ್ದರು ಎಂದು ವಿದ್ಯಾ ಬಾಲನ್ ಬಹಿರಂಗಪಡಿಸಿದ್ದಾರೆ.

ತಮ್ಮ ಪ್ರೇಮ ಸಂಬಂಧಗಳಿಂದಾಗಿ ಆಗಾಗ ಸುದ್ದಿಯಲ್ಲಿರುವ ಬಾಲಿವುಡ್ ನಟ ಕಾರ್ತಿಕ್ ಅರ್ಯನ್ ಅವರ ಪ್ರೇಮ ಸಂಬಂಧದ ಬಗ್ಗೆ ನಟಿ ವಿದ್ಯಾ ಬಾಲನ್ ಸ್ಪೋಟಕ ಸುಳಿವು ನೀಡಿದ್ದಾರೆ.  ಭೂಲ್ ಭುಲೈಯಾ 3ಯಲ್ಲಿ ಕಾರ್ತಿಕ್ ಆರ್ಯನ್ ಹಾಗೂ ವಿದ್ಯಾ ಬಾಲನ್ ಜೊತೆಯಾಗಿ ನಟಿಸುತ್ತಿದ್ದು, ಸೆಟ್‌ನಲ್ಲಿ ಕಾರ್ತಿಕ್ ಆರ್ಯನ್ ಏನು ಮಾಡ್ತಿದ್ದರು ಎಂಬ ವಿಚಾರವನ್ನು  ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ ವಿದ್ಯಾಬಾಲನ್, ಸೆಟ್‌ನಲ್ಲಿ ಸದಾ ಫೋನ್‌ನಲ್ಲೇ ಇರ್ತಿದ್ದ ಕಾರ್ತಿಕ್ ಆರ್ಯನ್‌, ಯಾರದೋ ಜೊತೆ ಮಾತನಾಡುತ್ತಿದ್ದು, ಕರೆ ಬಂದಾಗಲೆಲ್ಲ, ಐ ಲವ್ ಯೂ ಮೀಟೂ ಐಲವ್ ಯೂ ಮೀಟೂ ಇದ್ದನೇ ಹೇಳ್ತಿದ್ದ ಎಂದು ನಟಿ ವಿದ್ಯಾ ಬಾಲನ್ ಹೇಳಿದ್ದಾರೆ. 

ದ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋಗೆ ನಟಿ ವಿದ್ಯಾ ಬಾಲನ್ ಹಾಗೂ ಕಾರ್ತಿಕ್‌ ಆರ್ಯನ್, ತೃಪ್ತಿ ದಿಮ್ರಿ  ತಮ್ಮ ಮುಂದಿನ ಚಿತ್ರದ ಪ್ರಮೋಷನ್‌ಗಾಗಿ ಆಗಮಿಸಿದ್ದು, ಇದರ ಪ್ರೋಮೋ ಬಿಡುಗಡೆಯಾಗಿದೆ. ಇದರಲ್ಲಿ ನಟಿ ವಿದ್ಯಾ ಬಾಲನ್ ಅವರು ನಟ ಕಾರ್ತಿಕ್ ಆರ್ಯನ್ ಅವರ ಪ್ರಣಯ ಸಂಬಂಧದ ಬಗ್ಗೆ ಹೊಸ ಗುಲ್ಲೆಬಿಸಿದ್ದಾರೆ. ಭುಮ್ ಭೂಲಯ್ಯ 3 ಸಿನಿಮಾ ಸೆಟ್‌ನಲ್ಲಿ ಸದಾ ಫೋನ್‌ನಲ್ಲೇ ಇರ್ತಿದ್ದ ಕಾರ್ತಿಕ್ ಆರ್ಯನ್ ಫೋನ್‌ನಲ್ಲಿ ಐ ಲವ್ ಯೂ ಮೀಟೂ ಐಲವ್ ಯೂ ಮೀಟೂ ಇದ್ದನೇ ಹೇಳ್ತಿದ್ದ ಎಂದಿದ್ದಾರೆ. 

ಇತ್ತ ಕಾರ್ತಿಕ್ ಆರ್ಯನ್ ಅವರು ತಮ್ಮ ಪ್ರೇಮ ಸಂಬಂಧ, ಡೇಟಿಂಗ್ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ನಟ, ಈ ಹಿಂದೆ ಬಾಲಿವುಡ್ ನಟಿಯರಾದ ಅನನ್ಯಾ ಪಾಂಡೆ, ಜಾನ್ವಿ ಕಪೂರ್, ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಕಾರಣಕ್ಕೆ ಸುದ್ದಿಯಲ್ಲಿದ್ದರು. ಅದರಲ್ಲೂ ನಟಿ ಸಾರಾ ಅಲಿ ಖಾನ್ ಆತನ ಜೊತೆ ನಟಿಸುವುದಕ್ಕೂ ಮೊದಲು ತನಗೆ ಕಾರ್ತಿಕ್ ಆರ್ಯನ್ ಮೇಲ ಕ್ರಶ್ ಇತ್ತು ಎಂಬ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆದರೆ ಕಾರ್ತಿಕ್ ಆರ್ಯನ್ ಮಾತ್ರ ತಮ್ಮ ಲವ್ ಅಫೇರ್‌ ಬಗ್ಗೆ ಎಲ್ಲೂ ಸಾರ್ವಜನಿಕವಾಗಿ ಒಪ್ಪಿಕೊಂಡು ಇಲ್ಲ, ನಿರಾಕರಿಸಿಯೂ ಇಲ್ಲ. ಆದರೆ ಕಳೆದ ಜೂನ್‌ನಲ್ಲಿ ನಟ ತಾನು ಯಾರೊಂದಿಗೂ ಡೇಟಿಂಗ್ ಮಾಡ್ತಿಲ್ಲ ಎಂದು ಹೇಳಿಕೊಂಡಿದ್ದರು.

ಆದರೆ ಈಗ ನಟಿ ವಿದ್ಯಾ ಬಾಲನ್ ಅವರು ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋದಲ್ಲಿ ಕಾರ್ತಿಕ್ ಆರ್ಯನ್ ಬಂಡವಾಳ ಬಯಲು ಮಾಡಿದ್ದಾರೆ. ಆತ ಸಿನಿಮಾ ಸೆಟ್‌ನಲ್ಲಿ ಯಾರೊಂದಿಗೂ ಸದಾ ಮಾತನಾಡುತ್ತಲೇ ಇರುತ್ತಿದ್ದ. ಈ ವೇಳೆ ಕಾರ್ತಿಕ್ ಆರ್ಯನ್ ನಾಚಿಕೆಯಿಂದ ಬ್ಲಶ್ ಆಗುವುದನ್ನು ವೀಡಿಯೋದಲ್ಲಿ ಕಾಣಬಹುದು. ಕಪಿಲ್ ಶರ್ಮಾ ಶೋದ ಈ ಪ್ರೋಮೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಆದರೆ ಅವರೆಲ್ಲೂ ಕಾರ್ತಿಕ್ ಆರ್ಯನ್ ಹೊಸ ಪ್ರೇಮಿ ಯಾರು ಎಂಬುದನ್ನು ರಿವೀಲ್ ಮಾಡಿಲ್ಲ,  ಆದರೆ ವಿದ್ಯಾ ಬಾಲನ್ ಅವರ ಮಾತುಗಳು ಕಾರ್ತಿಕ್ ಆರ್ಯನ್ ದಂಗಾಗುವಂತೆ ಮಾಡಿವೆ. ಅಲ್ಲದೇ ನಟಿ ಆಕೆಯ ಹೆಸರೇನು ಎಂದು ಕಾರ್ತಿಕ್ ಆರ್ಯನ್ ಬಳಿ ಕೇಳಿದ್ದು, ಈ ವೇಳೆ ನಟ ಉತ್ತರಿಸದೇ ನಾಚಿ  ನೀರಾಗಿದ್ದಾರೆ.  ಆದರೆ ಈ ಶೋದಲ್ಲಿ ಕಾರ್ತಿಕ್ ಆರ್ಯನ್ ತಮ್ಮ ಪ್ರೇಯಸಿಯ ಹೆಸರು ಹೇಳಿದ್ದಾರೋ ಇಲ್ಲವೋ ಎಂಬುದು ಕಪಿಲ್ ಶರ್ಮಾ ಶೋ ಪ್ರಸಾರವಾದ ನಂತರವಷ್ಟೇ ಗೊತ್ತಾಗಲಿದೆ. 

ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ತೃಪ್ತಿ ದಿಮ್ರಿ ನಟನೆಯ ಈ ಭೂಲ್ ಭುಲಯ್ಯ-3 ಸಿನಿಮಾವೂ ನವಂಬರ್ 1 ರಂದು ಬಿಡುಗಡೆಯಾಗಲಿದೆ. ಇದೇ ದಿನ ರೋಹಿತ್ ಶೆಟ್ಟಿ ಅವರ ಸಿಂಗಮ್ ಅಗೇನ್ ಬಿಡುಗಡೆಯಾಗಲಿದೆ. ಇದರಲ್ಲಿ ಅಜಯ್ ದೇವಗನ್, ಕರೀನಾ ಕಪೂರ್, ಅರ್ಜುನ್ ಕಪೂರ್, ಅಕ್ಷಯ್ ಕುಮಾರ್ ,ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾವು ಊಟಕ್ಕಾಗೇ ಮದುವೆಗೆ ಹೋಗ್ತೇವೆ, ಕರಣ್ ಜೋಹರ್ ಮದುವೆಗೆ ಹೋದ್ರೂ ಊಟ ಮಾಡಲ್ಲ, ಕಾರಣ ?!
ಉಸಿರು ಬಿಗಿದಿಟ್ಟುಕೊಂಡು ನೋಡುವಂತಹ Serial Killer ಚಿತ್ರಗಳು Don't Miss It