ಬೋಟಾಕ್ಸ್ ಸರ್ಜರಿಯಿಂದ ಆಲಿಯಾಗೆ ಪಾರ್ಶ್ವವಾಯು- ಮುಖ ಸೊಟ್ಟಗೆ? ನಟಿ ಹೇಳಿದ್ದೇನು?

By Suchethana D  |  First Published Oct 26, 2024, 6:10 PM IST

ಬೋಟಾಕ್ಸ್ ಸರ್ಜರಿಯಿಂದ ಆಲಿಯಾ ಭಟ್​ಗೆ ಪಾರ್ಶ್ವವಾಯು ಆಗಿ ಮುಖ ಸೊಟ್ಟಗೆ ಆಗಿರೋ ನಿಜನಾ? ನಟಿ ಹೇಳಿದ್ದೇನು?
 


ಕಳೆದ ಕೆಲವು ದಿನಗಳಲ್ಲಿ ಬಾಲಿವುಡ್​ನಲ್ಲಿ ಭಾರಿ ಸದ್ದು ಮಾಡುತ್ತಿರುವ ಸುದ್ದಿ ಎಂದರೆ ನಟಿ ಆಲಿಯಾ ಭಟ್​ಗೆ ಬೋಟಾಕ್ಸ್ ಸರ್ಜರಿಯಿಂದ ಪಾರ್ಶ್ವವಾಯು ಆಗಿದ್ದು, ನಟಿಯ ಮುಖ ಸೊಟ್ಟವಾಗಿದೆ ಎನ್ನುವುದು. ಅಷ್ಟಕ್ಕೂ ಈ ಸುದ್ದಿ ಹರಡಲು ಕಾರಣ ಏನೆಂದರೆ,  ಕಾಸ್ಮೆಟಿಕ್ ಸರ್ಜನ್ ಒಬ್ಬರು ಈ ಬಗ್ಗೆ ಸಂದರ್ಶನವೊಂದರಲ್ಲಿ ನಟಿ ಆಲಿಯಾ ಕುರಿತು ಮಾತನಾಡಿದ್ದರು! ಹೌದು. ಖ್ಯಾತ ಕಾಸ್ಮೆಟಿಕ್ ಸರ್ಜನ್ ಸಾಯಿ ಗಣಪತಿ ಅವರು, ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದರು. ವಯಸ್ಸಾದರೂ ಮುಖ ಸುಕ್ಕುಗಟ್ಟದಂತೆ ಕಾಣುವುದಕ್ಕಾಗಿ ಹಲವು ನಟ-ನಟಿಯರು ಬೋಟಾಕ್ಸ್ ಸರ್ಜರಿ ಮೊರೆ ಹೋಗುವ ಬಗ್ಗೆ ಮಾತನಾಡಿದ್ದ ಅವರು, ನಟಿ ಆಲಿಯಾ ಭಟ್​ ಉದಾಹರಣೆ ಕೊಟ್ಟಿದ್ದರು.

 ‘ನೀವು ನಟಿ ಆಲಿಯಾ ಭಟ್​ರ ಇತ್ತೀಚೆಗಿನ ವಿಡಿಯೋ ನೋಡಿ. ಅದನ್ನು ನೋಡಿದರೆ ನಿಮಗೆ  ಅವರ ಮುಖಕ್ಕೆ ಪಾರ್ಶ್ವವಾಯು ಆಗಿದೆ ಎನ್ನುವುದು ತಿಳಿಯುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಈ ವಿಷಯ ತಿಳಿದುಬರುತ್ತದೆ. ಇದೇ ಕಾರಣಕ್ಕೆ ಆಲಿಯಾ  ಬಾಯಿ ಸೊಟ್ಟ ಮಾಡಿ ನಗುತ್ತಾರೆ. ಅವರು ಮೊದಲು ಹಾಗಿರಲಿಲ್ಲ. ಆಪರೇಷನ್​ ಬಳಿಕ ಹಾಗೆ ಆಗಿದೆ.  ಬಾಯಿ ಸೊಟ್ಟ ಮಾಡಿ ಮಾತನಾಡುತ್ತಾರೆ. ಅವರ ಮುಖದ ಒಂದು ಭಾಗ ಮಾತ್ರ ಸಕ್ರಿಯವಾಗಿದೆ. ಒಂದು ಭಾಗ ಸತ್ವ ಕಳೆದುಕೊಂಡಿದೆ ಎಂದಿದ್ದ ಸಾಯಿ ಗಣಪತಿ ಅವರು, ಸರ್ಜರಿ ಯಶಸ್ವಿಯಾಗದಿದ್ದರೆ ಈ ರೀತಿ ಆಗುತ್ತದೆ.   ನನ್ನ ಕೆಲ ರೋಗಿಗಳಿಗೂ ಹೀಗೆಯೇ ಆಗಿತ್ತು. ಆದರೆ ಅದನ್ನು ಸೂಕ್ತ ಚಿಕಿತ್ಸೆ ಮೂಲಕ ಸರಿಪಡಿಸಬಹುದು’ ಎಂದಿದ್ದರು.

Tap to resize

Latest Videos

ಟಬು ಮದ್ವೆಯಾಗದೇ ಇರೋದಕ್ಕೆ ಅಜಯ್​ ದೇವಗನ್​ ಕಾರಣನಾ? ಸಂದರ್ಶನದಲ್ಲಿ ಇಬ್ಬರೂ ಹೇಳಿದ್ದೇನು?

ಇದರ ವಿಡಿಯೋ ವೈರಲ್​ ಆಗುತ್ತಲೇ ಎಲ್ಲರೂ ಆಲಿಯಾ ಕಡೆ ದೃಷ್ಟಿ ನೆಟ್ಟಿದ್ದರು. ಜೊತೆ ಆಲಿಯಾರ ಹಳೆಯ ಮತ್ತು ಹೊಸ  ಫೋಟೊ ವಿಡಿಯೋ ಸಂಚಲನ ಸೃಷ್ಟಿಸಿತ್ತು. ಆಲಿಯಾ ಭಟ್​ ನಗುವನ್ನು ತಾಳೆ ಹಾಕಿ ವೈದ್ಯರು ಹೇಳ್ತಿರೋದು ಸರಿ ಇದೆ ಎನ್ನಲು ಶುರು ಮಾಡಿದರು. ಇದಕ್ಕೆ ಈಗ ನಟಿ ಆಲಿಯಾ ಭಟ್​ ಕಿಡಿ ಕಾರಿದ್ದಾರೆ. ತೀವ್ರ ಆಕ್ರೋಶಗೊಂಡಿರುವ ಅವರು, ಈ ವೈರಲ್​ ಸುದ್ದಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನೋಡಿ, ಬ್ಯೂಟಿಗೆಂದು  ಚಿಕಿತ್ಸೆ ಮೊರೆ ಹೋಗುವವರ ಬಗ್ಗೆ ನನ್ನ ಆಕ್ಷೇಪ ಇಲ್ಲ. ಅವರ ಬಗ್ಗೆ  ಬೇಸರವೂ ಇಲ್ಲ. ಏಕೆಂದರೆ ನಿಮ್ಮ ದೇಹ ನಿಮ್ಮ ಇಷ್ಟ. ಏನು ಬೇಕಾದರೂ ಮಾಡಬಹುದು. ಅವೆಲ್ಲವೂ ಸರಿ. ಆದರೆ ನನ್ನ  ಬಗ್ಗೆ ಹಬ್ಬುತ್ತಿರುವ ಈ ಸುದ್ದಿಯಲ್ಲಿ ಮಾತ್ರ ಎಳ್ಳಷ್ಟೂ ಸತ್ಯಾಂಶ ಇಲ್ಲ ಎಂದಿದ್ದಾರೆ ನಟಿ.

 ನನ್ನದು ಸೊಟ್ಟ ನಗೆ, ವಿಚಿತ್ರ ರೀತಿಯ ಮಾತುಗಾರಿಕೆ ಎಂದೆಲ್ಲ ಸೋಷಿಯಲ್​ ಮೀಡಿಯಾದಲ್ಲಿ ಹೇಳಲಾಗುತ್ತಿದೆ ಎಂದು ಖಾರವಾಗಿಯೇ ನುಡಿದಿರುವ ನಟಿ,  ಒಬ್ಬ ವ್ಯಕ್ತಿಯ ಶರೀರದ ಕುರಿತು ಹೀಗೆಲ್ಲ ಮಾತನಾಡಲು ನಿಮಗೆ ನಾಚಿಕೆ ಆಗಲ್ವಾ? ಹೀಗೆ ಮಾತನಾಡಲು ಹೇಗೆ ಸಾಧ್ಯ? ಇಂಥ ಸೂಕ್ಷ್ಮ ವಿಮರ್ಶೆ ವಿಮರ್ಶೆ ಮಾಡುವಾಗ ನಿಮಗೆ ಏನೂ ಅನ್ನಿಸುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಸಾಲದು ಎನ್ನುವುದಕ್ಕೆ ಈ ಸುಳ್ಳುಗಳಿಗೆ ‘ಸೈಂಟಿಫಿಕ್’ ವ್ಯಾಖ್ಯಾನ ಬೇರೆ ಎಂದು ವೈದ್ಯರು ವಿರುದ್ಧದ ಕೆಂಡಾಮಂಡಲ ಆಗಿದ್ದಾರೆ.  ನನಗೆ ಪಾರ್ಶ್ವವಾಯು ಆಗಿದೆಯೇ? ನೀವೇನು ತಮಾಷೆ ಮಾಡುತ್ತಿದ್ದೀರಾ? ಇಂಥ ಒಂದು ಗಂಭೀರ ಹೇಳಿಕೆಯನ್ನು ಯಾವುದೇ ಸಾಕ್ಷಿ, ವಿಚಾರಣೆ ಇಲ್ಲದೆ ಹೇಗೆ ನೀಡಲು ಸಾಧ್ಯ ಎಂದು ನಟಿ ಪ್ರಶ್ನಿಸಿದ್ದಾರೆ.  

ಧಾರವಾಡದ ಯುವತಿ ದೇಹ ಹೊಕ್ಕ ಎಂಟು ಆತ್ಮ: ಕೂದಲು ಒರೆಸುವಾಗ ನಡೆದ ಭಯಾನಕ ಘಟನೆ ವಿವರಿಸಿದ ಘೋಸ್ಟ್​ ಹಂಟರ್​

‘ಇಂಥ ಇಲ್ಲಸಲ್ಲದ ಹೇಳಿಕೆ ನೀಡುವುದು  ಜನಪ್ರಿಯತೆ ಮತ್ತು ಕ್ಲಿಕ್ ಬೇಟೆಗೆ ಎನ್ನುವುದ ನನಗೆ ಗೊತ್ತು. ನಿಮಗೆ ಬೇರೆಯವರ ಬಗ್ಗೆ ಕೆಟ್ಟಿದ್ದಾಗಿ ಮಾತನಾಡಿ  ಹಣ ಮಾಡುವ ಖಯಾಲಿ.  ಇದರಿಂದ  ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೀರಿ. ಮಹಿಳೆಯ ದೇಹ, ಮುಖ, ಖಾಸಗಿ ಜೀವನ, ಅವರ ಉಬ್ಬು-ತಗ್ಗುಗಳ ಬಗ್ಗೆ ಚರ್ಚೆ ಮಾಡುವ ಹೀನ ಮನಸ್ಥಿತಿ ನಿಮ್ಮದಾ ಎಂದಿರುವ ನಟಿ, ಇದರ ಬಗ್ಗೆ ನಾವು ದನಿ ಎತ್ತಲೇ ಬೇಕಿದೆ. ನಮ್ಮ ದೇಹ ವಿಮರ್ಶೆಯ, ಚರ್ಚೆಯ ವಸ್ತು ಆಗಿಬಿಟ್ಟಿರುವುದು ವಿಚಿತ್ರವಾಗಿದೆ ಎಂದಿದ್ದಾರೆ.  ವ್ಯಕ್ತಿಗಳ ಭಿನ್ನತೆಯನ್ನು, ವ್ಯಕ್ತಿತ್ವವನ್ನು ನಾವು ಸಂಭ್ರಮಿಸಬೇಕಿದೆ, ಅದರ ಹೊರತಾಗಿ ಹೀಗೆ ಜಡ್ಜ್​ಮೆಂಟಲ್ ಆಗುವುದು ವಿಮರ್ಶೆ, ಟೀಕೆ ಮಾಡುವುದು ಹಾನಿಕಾರಕ, ಅದು ಸಾಕಾಗಿ ಹೋಗಿದೆ’ ಎಂದಿದ್ದಾರೆ ಆಲಿಯಾ.
 

click me!