Kangana Ranaut: ಶೌಚಕ್ಕೆ ಬಂಡೆಯ ಹಿಂದೆ ಹೋಗಿದ್ದೆ ಎಂದ ನಟಿ

By Suvarna News  |  First Published Mar 19, 2023, 4:11 PM IST

ಕಂಗನಾ ರಣಾವತ್​ ಅವರು ಶೂಟಿಂಗ್​ ಸ್ಪಾಟ್​ಗಳಲ್ಲಿ ಎದುರಿಸಿದ್ದ ಕಷ್ಟಗಳ ಬಗ್ಗೆ ಮಾತನಾಡಿದ್ದರೆ, ಅವರ ವ್ಯಾನಟಿ ವ್ಯಾನ್​ ಕುರಿತು ಡಿಸೈನರ್​ ಮಾತನಾಡಿದ್ದಾರೆ. ಏನದು?
 


ಇದ್ದದ್ದನ್ನು ಇದ್ದಹಾಗೆ, ಮನಸ್ಸಿಗೆ  ಕಂಡದ್ದನ್ನು ನೇರಾನೇರ ಹೇಳುವುದರಿಂದಲೇ ಕಾಂಟ್ರವರ್ಸಿ ಕ್ವೀನ್​ ಎಂದು ಹೆಸರಾಗಿರುವ ಬೋಲ್ಡ್​ ನಟಿ ಕಂಗನಾ ರಣಾವತ್ (Kangana Ranaut)​. ಅವರು ತಮ್ಮ ವ್ಯಾನಟಿ ವ್ಯಾನ್​ ಅನ್ನು ಹೇಗೆ ಡಿಸೈನ್​ ಮಾಡಿಕೊಂಡಿದ್ದಾರೆ, ಹಿಂದೆ ಶೌಚಕ್ಕೆ ಹೋಗಬೇಕಿದ್ದರೆ ಅನುಭವಿಸಿದ ಕಷ್ಟವೇನು ಎಂಬ ಬಗ್ಗೆ ಇವರ ವ್ಯಾನಟಿ ವ್ಯಾನ್​ ಡಿಸೈನರ್​ ಕೇತನ್ ರಾವಲ್ ಮಾಹಿತಿ ನೀಡಿದ್ದಾರೆ. ಚಿತ್ರ ನಟ ನಟಿಯರು ಶೂಟಿಂಗ್ ಸ್ಪಾಟ್​ನಲ್ಲಿ ವಿಶ್ರಾಂತಿ ಪಡೆಯಲು, ಮೇಕಪ್​ ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಪ್ರತ್ಯೇಕವಾದ, ಸಕಲ ಸೌಲಭ್ಯಗಳು ಇರುವ ವಾಹನವೊಂದು ಇರುವುದನ್ನು ನೀವು ನೋಡಿರಬಹುದು. ಇದಕ್ಕೆ  ವ್ಯಾನಿಟಿ ವ್ಯಾನ್ ಎಂದು ಹೇಳುತ್ತಾರೆ. ಚಿತ್ರ ನಟ ನಟಿಯರ ಅಗತ್ಯಕ್ಕೆ ತಕ್ಕಂತೆ ಅವುಗಳನ್ನು  ವಿನ್ಯಾಸಗೊಳಿಸಲಾಗುತ್ತದೆ. ಕಂಗನಾ ರಣಾವತ್​ ಸೇರಿದಂತೆ ಅಮಿತಾಭ್​ ಬಚ್ಚನ್, ಮಹೇಂದ್ರ ಸಿಂಗ್ ಧೋನಿ, ಶಾರುಖ್ ಖಾನ್‌ ಸೇರಿದಂತೆ ಹಲವು ದಿಗ್ಗಜರ ವ್ಯಾನಟಿ ವ್ಯಾನ್​ ಡಿಸೈನ್​ ಮಾಡಿದ್ದಾರೆ ಕೇತನ್​ ರಾವಲ್​. ಅವರೀಗ ನಟಿಯ ಕುರಿತು ಒಂದಿಷ್ಟು ಕುತೂಹಲದ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಬಳಿ 65 ವ್ಯಾನಿಟಿ ವ್ಯಾನ್‌ಗಳು ಇರುವುದಾಗಿ ಕೇತನ್​ ಹೇಳಿದ್ದು, ಕೆಲವೊಂದು ವಿಶೇಷ ವಿಷಯಗಳನ್ನು ತಿಳಿಸಿದ್ದಾರೆ. 

ಕಂಗನಾ ರಣಾವತ್ ಅವರ ವ್ಯಾನಿಟಿ ವ್ಯಾನ್ (Vanity Van), ಸಿನಿ ಇಂಡಸ್ಟ್ರಿಯಲ್ಲಿ ಇದುವರೆಗೆ ಅತ್ಯಂತ ದುಬಾರಿ ವ್ಯಾನಿಟಿ ವ್ಯಾನ್ ಎನ್ನುತ್ತಾರೆ  ಕೇತನ್. 'ಕಂಗನಾ ರಣಾವತ್​ ಅವರು ತಮ್ಮ ವ್ಯಾನಿಟಿ ವ್ಯಾನ್‌ಗೆ ಸಾಂಪ್ರದಾಯಿಕ ಲುಕ್​ ಇರಬೇಕು ಎಂದು ಹೇಳಿದ್ದರು.  ಅದು ತಮ್ಮ  ಮನೆಯಂತೆಯೇ ಕಾಣಬೇಕೆಂದು ಅವರು ಬಯಸಿದ್ದರು. ಅದರಂತೆಯೇ ಅವರ ವ್ಯಾನಟಿ ವ್ಯಾನ್​ ಡಿಸೈನ್​ ಮಾಡಲಾಗಿದೆ' ಎಂದಿದ್ದಾರೆ ಕೇತನ್​. ಕೇತನ್ ಪ್ರಕಾರ, ಕಂಗನಾ ಅವರು ಈ ವಾಹನದೊಳಗೆ ಅದ್ಭುತ ಸೋಫಾಗಳ ಡಿಸೈನ್​ ಮಾಡಿಸಿದ್ದಾರೆ. ಅದನ್ನು ಅಲ್ಲಿಯೇ ಕೆತ್ತಲಾಗಿದೆ.  ಒರಿಜಿನಲ್ ಮರಗಳಿಂದ ಖುರ್ಚಿಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಮನೆಯಲ್ಲಿ ಇರುವಂತೆಯೇ ಅವಕಾಶ ಕಲ್ಪಿಸಲಾಗಿದೆ.  ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ನಟಿಯ ಅಗತ್ಯಕ್ಕೆ ತಕ್ಕಂತೆ ವ್ಯಾನಿಟಿ ವ್ಯಾನ್  ಕಸ್ಟಮೈಸ್ ಮಾಡಲಾಗಿದೆ ಎನ್ನುತ್ತಾರೆ.

Tap to resize

Latest Videos

Kangana Ranaut: ಅನುಮತಿ ಇಲ್ದೇ ಬಂದ್ರೆ ಶೂಟ್​ ಮಾಡ್ತೀನಿ ಎಂದ ನಟಿ!

ನೇಹಾ ಧೂಪಿಯಾ ಅವರ 'ನೋ ಫಿಲ್ಟರ್ ವಿತ್ ನೇಹಾ' ಕಾರ್ಯಕ್ರಮಕ್ಕೆ ಕಂಗನಾ ರಣಾವತ್​ ಅವರು ಆಗಮಿಸಿದ್ದಾಗ  ಅವರು ತಮ್ಮ ಸಮಸ್ಯೆಯನ್ನು ಬಹಿರಂಗಪಡಿಸಿದ್ದರು. ಇದಾದ ನಂತರ ಅವರು ತಮ್ಮ ವ್ಯಾನಿಟಿ ವ್ಯಾನ್​ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದ್ದಾರೆ. ಅರುಣಾಚಲ ಪ್ರದೇಶಕ್ಕೆ  'ರಂಗೂನ್' ಚಿತ್ರದ ಚಿತ್ರೀಕರಣಕ್ಕೆ ಹೋದಾಗ ಅಲ್ಲಿ ರೆಸ್ಟೋರೆಂಟ್‌ಗಳು ಅಥವಾ ವಿಶ್ರಾಂತಿ ಕೊಠಡಿಗಳು ಇರಲಿಲ್ಲ. ಆಗ  ಅವರು ಶೌಚಾಲಯಕ್ಕೆ ಬಂಡೆಗಳ ಹಿಂದೆ ಹೋಗಬೇಕಾಗಿತ್ತು. ಅಂಥ ಕೆಟ್ಟ ವ್ಯವಸ್ಥೆ ಇತ್ತು ಎಂದಿದ್ದಾರೆ. ಆದ್ದರಿಂದ ತಮ್ಮ ವ್ಯಾನಿಟಿ ವ್ಯಾನ್​ ಅನ್ನು ತಾವೇ ಡಿಸೈನ್​ ಮಾಡಲು ಡಿಸೈಡ್​ ಮಾಡಿದ್ದ ನಟಿಯೀಗ ಅದ್ಭುತ ವಾಹನ ಹೊಂದಿದ್ದಾರೆ. ಈ ಕುರಿತು  ಕೇತಲ್ ರಾವಲ್ ಕೂಡ ಮಾಹಿತಿ ನೀಡಿದ್ದಾರೆ. ಕಂಗನಾ ಅವರ  ವ್ಯಾನಿಟಿ ವ್ಯಾನ್ ಅನ್ನು ಅಗತ್ಯ ಬಿದ್ದರೆ ಶಾರುಖ್ ಖಾನ್ ಕೂಡ ಬಳಸುತ್ತಾರಂತೆ. ಇದಕ್ಕೆ ಕಾರಣ,  ಎಸ್‌ಆರ್‌ಕೆ ಅವರ ವ್ಯಾನಿಟಿ ವ್ಯಾನ್ ದೊಡ್ಡದಾಗಿದೆ ಆದ್ದರಿಂದ ಅವರು ಎಲ್ಲೆಡೆ ಹೋಗಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಕಂಗನಾ ಅವರ ವಾಹನವನ್ನೇ ಶಾರುಖ್​ ಬಳಸುವುದು ಇದೆ.  

ಅಂದಹಾಗೆ, ಬಾಲಿವುಡ್‌ನಲ್ಲಿ ವ್ಯಾನಿಟಿ ವ್ಯಾನ್ ಪರಿಕಲ್ಪನೆ ಬಂದದ್ದು ಮತ್ತು ಅದನ್ನು  ಮೊದಲು ಪರಿಚಯಿಸಿದ್ದು ನಟಿ ಪೂನಂ ಧಿಲ್ಲೋನ್ (Poonam Dhillon). ಅವರ ವ್ಯಾನಿಟಿ ವ್ಯಾನ್ ಅನ್ನು ಅನಿಲ್ ಕಪೂರ್, ಅಮಿತಾಭ್​ ಬಚ್ಚನ್ ಮತ್ತು ಶ್ರೀದೇವಿ ಬಿಡುಗಡೆ ಮಾಡಿದ್ದರು. 2021 ರಲ್ಲಿ, ಪೂನಂ ಅದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.  'ನಾನು ನನ್ನ ಮೇಕಪ್ ವ್ಯಾನಿಟಿ ವ್ಯಾನ್ ಅನ್ನು ಪ್ರಾರಂಭಿಸಿದಾಗ, ನಾನು ಚಲನಚಿತ್ರೋದ್ಯಮದಲ್ಲಿ ಇತಿಹಾಸವನ್ನು ಸೃಷ್ಟಿಸುತ್ತಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ಅನೇಕ ಕಲಾವಿದರು ವ್ಯಾನಿಟಿ ವ್ಯಾನ್ ಪರಿಕಲ್ಪನೆಯನ್ನು ಪರಿಚಯಿಸಿದ್ದಕ್ಕಾಗಿ ನನ್ನನ್ನು ಮೆಚ್ಚಿದರು ಮತ್ತು ಧನ್ಯವಾದಗಳು' ಎಂದಿದ್ದಾರೆ ನಟಿ ಪೂನಂ. ಪೂನಂ ಅವರು ಹೊರಾಂಗಣ ಚಿತ್ರೀಕರಣಕ್ಕೆ ಹೋಗುವಾಗ ಬಟ್ಟೆ ಬದಲಾಯಿಸಲು, ಶೌಚಾಲಯಕ್ಕೆ (Toilet) ಹೋಗಲು ಮತ್ತು ಆಹಾರ ತಿನ್ನಲು ಸ್ಥಳವಿಲ್ಲ ಎಂದು ಹೇಳಿದ್ದರು. ಅವರ ಪ್ರಕಾರ, ಕಲಾವಿದರು ಬಿಸಿಲು ಮತ್ತು ಹೊಲಸುಗಳ ನಡುವೆ ಸೆಟ್‌ಗಳಲ್ಲಿ ಸಮಯ ಕಳೆಯಬೇಕಾಗಿತ್ತು. ಆದ್ದರಿಂದ ಇಂಥದ್ದೊಂದು ವಾಹನ ಇದ್ದರೆ ಚೆನ್ನಾಗಿತ್ತು ಎಂಬ ಕಲ್ಪನೆಯಿಂದ ಇದನ್ನು ಪರಿಚಯಸಿದ್ದು, ಅದೀಗ ಹೊಸ ಹೊಸ ರೂಪ ಪಡೆಯುತ್ತಿದೆ. 

ನಾಯಕನಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಬಾಲಿವುಡ್​ ನಟಿಯರಿವರು!

 

click me!