
ಆನೇಕಲ್ (ಜ.08): ವೀರಸಿಂಹ ರೆಡ್ಡಿ ಸಿನಿಮಾ ಚಿತ್ರೀಕರಣ ಬಳಿಕ ಭೀಮ ಸಿನಿಮಾ ಚಿತ್ರೀಕರಣ ನಡೆಯಲಿದೆ. ಇದೇ ತಿಂಗಳು 20 ನೇ ತಾರೀಖಿನಂದು ಭೀಮ ಪಸ್ಟ್ ಟೀಸರ್ ಅಂದರೆ ಭೀಮ ಸಿನಿಮಾದ ಹೀರೊ ಪಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗುವುದು. ಈ ನಡುವೆ ಎರಡು ಸಿನಿಮಾ ಅಫರ್ ಬಂದಿದ್ದು, ಭೀಮ ಸಿನಿಮಾ ಚಿತ್ರೀಕರಣ ಮುಗಿಯುವವರೆಗೆ ಬೇಡ ಎಂದಿದ್ದೆನೆ. ಬೇರೆ ಭಾಷೆಗಳಲ್ಲಿ ಅವಕಾಶ ಬಂದರು ಕನ್ನಡದಲ್ಲಿ ಹೆಚ್ಚು ನಟನೆ ಮಾಡುವುದಾಗಿ ನಟ ದುನಿಯಾ ವಿಜಯ್ ತಿಳಿಸಿದ್ದಾರೆ.
ನಟ ದುನಿಯಾ ವಿಜಿ ತೆಲುಗಿನ ವೀರಸಿಂಹರೆಡ್ಡಿ, ಕನ್ನಡದ ಭೀಮ ಸಿನಿಮಾ ಮತ್ತು ತನ್ನ ಹುಟ್ಟು ಹಬ್ಬ ಆಚರಣೆ ವಿಚಾರವನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳಲು ತನ್ನ ಹುಟ್ಟೂರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕುಂಬಾರನಹಳ್ಳಿ ಗ್ರಾಮದ ಹೆತ್ತವರ ಸಮಾಧಿ ಬಳಿ ಪತ್ರಿಕಾಗೋಷ್ಠಿಯನ್ನ ಆಯೋಜನೆ ಮಾಡಿದ್ದರು. ಸುದ್ದಿಗೋಷ್ಟಿ ಆರಂಭಕ್ಕೂ ಮೊದಲು ಹೆತ್ತವರ ಸಮಾಧಿಗಳಿಗೆ ಹೂವಿನ ಹಾರ ಸಮರ್ಪಿಸಿ ಅಶಿರ್ವಾದ ಪಡೆದ ಬಳಿಕ ಮಾತನಾಡಿ, ಗೋಪಿಚಂದ್ ನಿರ್ದೇಶನದಲ್ಲಿ ಬಾಲಯ್ಯ ಜೊತೆ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸುತ್ತಿರುವುದು ಸಂತಸದ ವಿಷಯವಾಗಿದೆ. ಸಲಗ ನಟನೆಯನ್ನು ಕಂಡು ವೀರಸಿಂಹರೆಡ್ಡಿ ಸಿನಿಮಾದ ನಿರ್ದೇಶಕರು ಸಿನಿಮಾದಲ್ಲಿ ಚಾನ್ಸ್ ನೀಡಿದ್ದಾರೆ ಎಂದರು.
ಜ.12ರಂದು 'ವೀರ ಸಿಂಹ ರೆಡ್ಡಿ' ಬಿಡುಗಡೆ: ದುನಿಯಾ ವಿಜಯ್- ಬಾಲಯ್ಯ ಏಟು- ಎದಿರೇಟು
ಟಾಲಿವುಡ್‌ನಲ್ಲಿ ಭರ್ಜರಿ ಸ್ವಾಗತ: ಟಾಲಿವುಡ್ ನಲ್ಲಿ ನನ್ನನ್ನು ಅದ್ಭುತವಾಗಿ ಅಲ್ಲಿನ ಜನರು ಸ್ವಾಗತಿಸಿದ್ದಾರೆ. ಅದನ್ನು ಕನ್ನಡಿಗರು, ಬಾಲಯ್ಯನ ಅಭಿಮಾನಿಗಳಿಗೆ ತಿಳಿಸಲು ಇಷ್ಟಪಡುತ್ತೆನೆ. ಬಾಲಯ್ಯ ಎಂದರೆ ಒಂದು ವರ್ಣಿಸಲಾಗದ ಶಕ್ತಿ. ವೀರಸಿಂಹ ರೆಡ್ಡಿ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಭರವಸೆ ವ್ಯಕ್ತಪಡಿಸಿದ ವಿಜಿ ಬಾಲಯ್ಯರವರ ಜೊತೆ ಸೆಟ್ನಲ್ಲಿನ ಒಡನಾಟದ ಬಗ್ಗೆ ನೆನಪಿಸಿಕೊಂಡಿದ್ದು, ಬಾಲಯ್ಯ ಮಗುವಿನಂತಿರ್ತಾರೆ, ದುನಿಯಾ ವಿಜಿಗಾರು ಎಂದು ಪ್ರೀತಿಯಿಂದ ಕರೆಯುತ್ತಾರೆ. ಹಾಗಾಗಿ ಸಣ್ಣ ಮಕ್ಕಳಿಂದ ದೊಡ್ಡವರು ಸಹ ಜೈಜೈ ಬಾಲಯ್ಯ ಅಂತಾರೆ ಎಂದು ಟಾಲಿವುಡ್ ಸ್ಟಾರ್ ಬಾಲಕೃಷ್ಣ ಬಗ್ಗೆ ದುನಿಯಾ ವಿಜಯ್ ಹೊಗಳಿದರು.
ಕೋವಿಡ್ ಕಾರಣ ಜನ್ಮದಿನಾಚರಣೆ ಇರಲಿಲ್ಲ: ಅಂದಹಾಗೆ ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಹುಟ್ಟು ಹಬ್ಬ ಆಚರಿಸಿರಲಿಲ್ಲ. ಇದೇ ಮೊದಲ ಬಾರಿಗೆ ತಂದೆ ತಾಯಿ ಇಲ್ಲದೆ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದೇನೆ. ಅವರು ಇಲ್ಲ ಎನ್ನುವ ಭಾವನೆ ಇಲ್ಲ. ಹಾಗಾಗಿ ತಂದೆ ತಾಯಿಗಳ ಸಮಾಧಿ ಬಳಿ ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಲು ನಿರ್ಧರಿಸಿದ್ದೆನೆ. ಅಭಿಮಾನಿಗಳು ನನ್ನ ಹುಟ್ಟೂರಾದ ಕುಂಬಾರನಹಳ್ಳಿಗೆ ಆಗಮಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಪಾನಿಪುರಿ ಕಿಟ್ಟಿ ಪ್ರಕರಣ: ದುನಿಯಾ ವಿಜಯ್‌ಗೆ ಪೊಲೀಸ್ ನೋಟಿಸ್
ತಂದೆ-ತಾಯಿ ನೆನಪು: ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ಗೆ ಹೆಜ್ಜೆ ಇಟ್ಟಿರುವ ನಟ ದುನಿಯಾ ವಿಜಯ್ ಇಂತಹ ಸಂಧರ್ಭದಲ್ಲಿ ತಂದೆ- ತಾಯಿ ಜೊತೆ ಇರಬೇಕಿತ್ತು ಎಂದು ಅವರನ್ನ ನೆನಪಿಸಿಕೊಂಡರು. ಅವರ ಸಮಾಧಿಯ ಬಳಿಯೇ ಪತ್ರಿಕಾಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದು, ಬರ್ತಡೇ ಸೆಲೆಬ್ರೇಷನ್ಗೆ ಅಭಿಮಾನಿಗಳನ್ನ ಸ್ವಾಗತಿಸಿದ್ದಾರೆ. ಇದರಿಂದ ಅಭಿಮಾನಿಗಳು ಸಹ ನೆಚ್ಚಿನ ನಟನ ಬರ್ತಡೇ ದಿನಕ್ಕಾಗಿ ಎದುರು ನೋಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.