ಬೆಂಗಳೂರೋ, ಮುಂಬೈನೋ, ಕನ್ನಡತಿ ದೀಪಿಕಾ ಪಡುಕೋಣೆಗೆ ಯಾವೂರಿಷ್ಟ?

Published : Apr 10, 2025, 12:06 PM ISTUpdated : Apr 10, 2025, 12:58 PM IST
ಬೆಂಗಳೂರೋ, ಮುಂಬೈನೋ, ಕನ್ನಡತಿ ದೀಪಿಕಾ ಪಡುಕೋಣೆಗೆ ಯಾವೂರಿಷ್ಟ?

ಸಾರಾಂಶ

ದೀಪಿಕಾ ಪಡುಕೋಣೆ ಬೆಂಗಳೂರಿನಲ್ಲಿ ಬೆಳೆದರು, ಅಲ್ಲಿನ ಅನುಭವಗಳು ವಿಭಿನ್ನವೆಂದಿದ್ದಾರೆ. ಮುಂಬೈ ಅವರ ವೃತ್ತಿ ಜೀವನದ ತಾಣ. ಎರಡೂ ನಗರಗಳು ತಮ್ಮ ಜೀವನದ ಮೇಲೆ ಆಳವಾದ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ. ಬೆಂಗಳೂರು ಕುಟುಂಬವನ್ನು ನೀಡಿದರೆ, ಮುಂಬೈ ವೃತ್ತಿ ಜೀವನವನ್ನು ವಿಸ್ತರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  

ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ (Bollywood dimple queen Deepika Padukone) ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಉಪೇಂದ್ರ ಜೊತೆ ಐಶ್ವರ್ಯ ಸಿನಿಮಾ ಮೂಲಕ ತಮ್ಮ ವೃತ್ತಿ ಶುರು ಮಾಡಿದ್ದ  ನಟಿ ನಂತ್ರ ಮುಂಬೈಗೆ ಹಾರಿದ್ರು. ಒಂದಾದ್ಮೇಲೆ ಒಂದರಂತೆ ಅವಕಾಶ ಗಿಟ್ಟಿಸಿಕೊಂಡು, ಈಗ ಬಾಲಿವುಡ್ ನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ನಟಿಯರ ಪಟ್ಟಿ ಸೇರಿದ್ದಾರೆ. ದೀಪಿಕಾ ಪಡುಕೋಣೆ ಬಾಲಿವುಡ್ ನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ಮುಂಬೈನಲ್ಲಿ ನೆಲೆ ನಿಂತಿರುವ, ಆಗಾಗ ಬೆಂಗಳೂರಿಗೆ ಬಂದು ಹೋಗುವ ದೀಪಿಕಾ ಪಡುಕೋಣೆಗೆ ಅನೇಕ ಬಾರಿ ಬೆಂಗಳೂರು ಹಾಗೂ ಮುಂಬೈನಲ್ಲಿ ಯಾವುದು ಬೆಸ್ಟ್ ಎನ್ನುವ ಪ್ರಶ್ನೆ ಕೇಳಲಾಗುತ್ತೆ. ಇತ್ತೀಚಿಗೆ ದೀಪಿಕಾ ಪಡುಕೋಣೆ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಬೆಂಗಳೂರು ಹಾಗೂ ಮುಂಬೈನಲ್ಲಿ ತಮಗೆ ಯಾವ ಮಹಾನಗರಿ ಇಷ್ಟ ಎಂಬುದನ್ನು ದೀಪಿಕಾ ಪಡುಕೋಣೆ ಹೇಳಿದ್ದಾಳೆ. 

ಬೆಂಗಳೂರಿ (Bangalore)ನ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು? : ದೀಪಿಕಾ ಪಡುಕೋಣೆ  ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ನನಗೆ ಆಗಾಗ್ಗೆ ಕೇಳಲಾಗುವ ಪ್ರಶ್ನೆ, ಬೆಂಗಳೂರು ಅಥವಾ ಮುಂಬೈ? ಎಂದು ಶೀರ್ಷಿಕೆ ಹಾಕಿದ್ದಾರೆ. ವಿಡಿಯೋದಲ್ಲಿ ಬೆಂಗಳೂರಿನ ಬಗ್ಗೆ ದೀಪಿಕಾ ತಮ್ಮ ಅಭಿಪ್ರಾಯ ಹೇಳ್ತಿರೋದನ್ನು ನೀವು ಕೇಳ್ಬಹುದು.  ನಾನು ಬೆಂಗಳೂರಿಗೆ ಹಿಂತಿರುಗಿದಾಗಲೆಲ್ಲ ನನಗೆ ನನ್ನ ಮನೆಗೆ ಹಿಂತಿರುಗಿದ ಅನುಭವವಾಗುತ್ತದೆ.  ನನ್ನ ಜೀವನದ ಬಹುಭಾಗವನ್ನು ನಾನು ಇಲ್ಲಿ ಕಳೆದಿದ್ದೇನೆ.  ನಾನು ಇಲ್ಲೇ ಬೆಳೆದೆ. ನನ್ನ ಸ್ನೇಹಿತರು ಇಲ್ಲೇ ಇದ್ದಾರೆ. ನಾನು ಇಲ್ಲೇ ಓದಿದೆ. ನನ್ನ ಶಾಲೆ, ಕಾಲೇಜು, ಎಲ್ಲವೂ ಇಲ್ಲೇ ಇತ್ತು. ಇಲ್ಲಿನ ಅನುಭವಗಳು ವಿಭಿನ್ನವಾಗಿವೆ ಎಂದಿದ್ದಾರೆ.

ಈ ಮೂರು ಕ್ವಾಲಿಟಿ ಪತ್ನಿಗಿದ್ರೆ ಬದುಕು ಸ್ವರ್ಗ ಎಂದ ನಟಿ ಖುಷಿಯ ಪತಿ! ಅಯ್ಯಯ್ಯೋ ಎಂದ ಮಹಿಳೆಯರು...

ಮುಂಬೈ (Mumbai) ಬಗ್ಗೆ ದೀಪಿಕಾ ಹೇಳಿದ್ದು ಏನು? : ಇದೇ ಸಮಯದಲ್ಲಿ ದೀಪಿಕಾ ಮುಂಬೈ ಬಗ್ಗೆ ತಮಗಿರುವ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.  ಮುಂಬೈ ನನ್ನ ವೃತ್ತಿ ಜೀವನ  ಆರಂಭವಾದ ಸ್ಥಳ. ಈಗ ಮನೆಯೂ ಇಲ್ಲೇ ಇದೆ ಎಂದಿದ್ದಾರೆ. ಮುಂಬೈ ಎನರ್ಜಿ ಸಂಪೂರ್ಣ ಭಿನ್ನವಾಗಿದೆ. ಹಾಗಾಗಿ ನನಗೆ ಬೆಂಗಳೂರು ಹಾಗೂ ಮುಂಬೈನಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳೋದು ಬಹಳ ಕಷ್ಟ. ನನ್ನ 39 ವರ್ಷಗಳ ಜೀವನದ ಮೇಲೆ ಎರಡೂ ನಗರಗಳು ಆಳವಾದ ಪ್ರಭಾವ ಬೀರಿವೆ ಎಂದು ನಾನು ಭಾವಿಸುತ್ತೇನೆ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ. ಹಾಗೆಯೇ ಮುಂಬೈ ಮನೆಯನ್ನು ಸದ್ಯ ಮಿಸ್ ಮಾಡಿಕೊಳ್ತಿದ್ದೇನೆ. ಅಲ್ಲಿಗೆ ಬರಲು ವಿಶೇಷ ಇಚ್ಛಾಶಕ್ತಿ ಬೇಕು ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ. 

ಬೆಂಗಳೂರು ಸುಂದರ ಕುಟುಂಬ ನೀಡಿದೆ, ಮುಂಬೈ ನಿಮ್ಮ ಕುಟುಂಬ, ವೃತ್ತಿ ಜೀವನವನ್ನು ವಿಸ್ತರಿಸಿದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ದೀಪಿಕಾ ರೀಲ್ಸ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಅವರ ಹಳೆಯ ಹಾಗೂ ಖಾಸಗಿ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಅಪರೂಪದ ಫೋಟೋ ಶೇರ್ ಮಾಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ. ಮತ್ತೆ ಕೆಲವರು  ರೀಲ್ಸ್ ನೋಡಿ ಬೋರ್ ಆಗಿದೆ, ಬೇಗ ಸಿನಿಮಾ ಮಾಡಿ ಅಂತ ಕಮೆಂಟ್ ಮಾಡಿದ್ದಾರೆ. 

ಅತಿ ಆಸೆ ದುಃಖಕ್ಕೆ ಮೂಲ ಎನ್ನೋದು ಇದಕ್ಕೇನಾ? ಮೌನಿ ರಾಯ್‌ಗೆ ಇಂಥ

ದುವಾ ಜನನದ ನಂತ್ರ ಬ್ರೇಕ್ ತೆಗೆದುಕೊಂಡಿದ್ದ ದೀಪಿಕಾ ಪಡುಕೋಣೆ ಮತ್ತೆ ತೆರೆ ಮೇಲೆ ಬಂದಿದ್ದಾರೆ. ಪತಿ ರಣವೀರ್ ಸಿಂಗ್ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.  ದೀಪಿಕಾ ಮತ್ತು ರಣವೀರ್ ಕೊನೆಯ ಬಾರಿಗೆ ರೋಹಿತ್ ಶೆಟ್ಟಿ ಸಿನಿಮಾ ಸಿಂಘಮ್ ಅಗೇನ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ದೀಪಿಕಾ, ಲೇಡಿ ಸಿಂಘಂ ಪಾತ್ರದಲ್ಲಿ ಮಿಂಚಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!