Cine World
ನಟಿ ಮೌನಿ ರಾಯ್ ಅಂದ ಈ ರೀತಿ ಹಾಳಾಗಿದ್ದಾದರೂ ಯಾಕೆ?
ಸೌಂದರ್ಯದ ಮೂಲಕವೇ ಎಲ್ಲರ ಗಮನಸೆಳೆಯುತ್ತಿದ್ದ 'ನಾಗಿನ್' ಧಾರಾವಾಹಿ ನಟಿ ಮೌನಿ ರಾಯ್ ಅವರು ಈ ಬಾರಿ ಸೌಂದರ್ಯದ ವಿಚಾರದಲ್ಲೇ ಟ್ರೋಲ್ ಆಗಿದ್ದಾರೆ.
ನಟಿಯರನ್ನು ತೆರೆ ಮೇಲೆ ಅಥವಾ ಫೋಟೋಶೂಟ್‌ನಲ್ಲಿ ನೋಡಿದಾಗ ಎಂಥ ಸೌಂದರ್ಯ ಎಂದು ಹೊಗಳುತ್ತೇವೆ. ಆದರೆ ವಾಸ್ತವ ಬೇರೆ ಇರುವುದು.
ಈ ಸೌಂದರ್ಯದ ಹಿಂದೆ ಸಹಜತೆಗಿಂತ ಜಾಸ್ತಿ ಪ್ಲಾಸ್ಟಿಕ್ ಸರ್ಜರಿಯ ಕಥೆಯೇ ಜಾಸ್ತಿ ಇರುವುದು.
ಯಾವಾಗಲೂ ಡಯೆಟ್ ಮಾಡುತ್ತ, ಸೌಂದರ್ಯವನ್ನು ಕಾಪಾಡಿಕೊಳ್ತಿದ್ದ ಮೌನಿ ರಾಯ್ ಈ ಬಾರಿ ಸರ್ಜರಿ ಮಾಡಿಸಿಕೊಂಡು ಇನ್ನಷ್ಟು ಬ್ಯೂಟಿ ಹಾಳು ಮಾಡಿಕೊಂಡಿದ್ದಾರೆ.
ಮೌನಿ ರಾಯ್ ಅವರು ಈ ಹಿಂದೆಯೇ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡು ಇಷ್ಟು ಚೆಂದ ಕಾಣಿಸ್ತಾರೆ ಎಂದು ಹೇಳುವ ವಿಡಿಯೋ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುವುದು.
ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ಮೌನಿ ರಾಯ್ ಅವರು ಭಾಗವಹಿಸಿದ್ದರು. ಅ ವೇಳೆ ಅವರ ಮುಖ ಸಂಪೂರ್ಣವಾಗಿ ಬದಲಾಗಿತ್ತು. ಇದನ್ನು ನೋಡಿ ಅನೇಕರು ಏನಾಗಿದ್ಯಪ್ಪಾ ಎಂದು ಪ್ರಶ್ನೆ ಮಾಡಿದ್ದರು.
ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಪ್ರಶ್ನೆ ಮಾಡಿದಾಗಲೂ ಕೂಡ ಅವರು ಅದನ್ನು ಅಲ್ಲಗಳೆದಿದ್ದರು. ಆಧಾರರಹಿತ ಆರೋಪ ಎಂದು ಅವರು ಹೇಳಿದ್ದರು.
ಮೌನಿ ರಾಯ್ ಫೋಟೋ ನೋಡಿ ಅನೇಕರು, "ಮತ್ತೆ ಯಾಕೆ ಸರ್ಜರಿ ಮಾಡಿಸಿಕೊಂಡರು? ಯಾಕೆ ಮುಖ ಈ ರೀತಿ ಆಗಿದೆ?" ಎಂದು ಪ್ರಶ್ನೆ ಮಾಡಿದ್ದಾರೆ.