ಜ್ವರ ಮತ್ತು ತಲೆಸುತ್ತು, ಮತ್ತೆ ಆಸ್ಪತ್ರೆ ಸೇರಿದ ಐಶ್ವರ್ಯಾ ರಜನಿಕಾಂತ್!

Published : Mar 08, 2022, 12:40 PM ISTUpdated : Mar 08, 2022, 12:42 PM IST
ಜ್ವರ ಮತ್ತು ತಲೆಸುತ್ತು, ಮತ್ತೆ ಆಸ್ಪತ್ರೆ ಸೇರಿದ ಐಶ್ವರ್ಯಾ ರಜನಿಕಾಂತ್!

ಸಾರಾಂಶ

ವಿಚ್ಚೇದನ ನಂತರ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿರುವ ರಜನಿಕಾಂತ್ ಪುತ್ರಿ. ಸೋಷಿಯಲ್ ಮೀಡಿಯಾ ಮೂಲಕ ಆರೋಗ್ಯದ ಬಗ್ಗೆ ಅಪ್ಡೇಟ್....

ತಲೈವಾ ರಜನಿಕಾಂತ್ (Rajinikanth) ಪುತ್ರಿ ಐಶ್ವರ್ಯಾ ನಿರ್ದೇಶನ, ನಿರ್ಮಾಣದಲ್ಲಿ ಹೆಚ್ಚಿಗೆ ಗುರುತಿಸಿಕೊಂಡಿದ್ದರೂ ಪದೇ ಪದೇ ಸುದ್ದಿ ಆಗುತ್ತಿರುವುದು ವಿಚ್ಛೇದನ ಮತ್ತು ಅನಾರೋಗ್ಯದ ವಿಚಾರವಾಗಿ. ದನುಷ್‌ ಅವರಿಂದ ದೂರವಾದ ಬಳಿಕ ಐಶ್ವರ್ಯಗೆ ಕೊರೋನಾ ಸೋಂಕು ತಗುಲಿತ್ತು. ಅದಾದ ನಂತರ ಸುಸ್ತು ಎಂದು ಹೇಳುತ್ತಿದ್ದರೂ, ಕೆಲಸದಲ್ಲಿ ಬ್ಯುಸಿಯಾಗಿದ್ದರಂತೆ. ಆದರೀಗ ಮತ್ತೆ ಅನಾರೋಗ್ಯ ಅವರನ್ನು ಕಾಡುತ್ತಿದೆ. ಮತ್ತೆ ಆಸ್ಪತ್ರೆಗೆ ದಾಖಲಾಗುವಂತೆ ಆಗಿದೆ.

ಐಶ್ವರ್ಯಾ ಮಾತು:
'ಕೊರೋನಾ (Covid19) ಬರುವುದಕ್ಕೂ ಮುನ್ನ ಹಾಗೂ ನಂತರದ ಜೀವನ ಬದಲಾಗಿದೆ. ಮತ್ತೆ ಆಸ್ಪತ್ರೆ ಸೇರಿಕೊಂಡಿರುವೆ, ಜ್ವರ ಮತ್ತು ತೆಲೆಸುತ್ತಿನಿಂದ. ಇನ್ನೇನು ಎದುರಿಸಬೇಕೋ ಗೊತ್ತಿಲ್ಲ. ಆದರೆ ಈ ಸಮಯದಲ್ಲಿ ನಾನು ಡೈನಾಮಿಕ್ inspiring ಡಾಕ್ಟರ್‌ ಅನ್ನು ಭೇಟಿ ಮಾಡಿದಾಗ ಅವರ ಜೊತೆ ಸಮಯ ಕಳೆಯಬೇಕು ಅನಿಸುತ್ತದೆ. ಮಹಿಳಾ ದಿನಾಚರಣೆ ದಿನ ನಿಮ್ಮನ್ನು ಭೇಟಿ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ಇದು ನನ್ನ ಸೌಭಾಗ್ಯ,' ಎಂದು ಐಶ್ವರ್ಯಾ ಡಾ. ಪ್ರೀತಿಕಾ ಆಚಾರ್ಯ ಜೊತೆ ಫೋಟೋ ಹಂಚಿಕೊಂಡಿದ್ದಾರೆ. 

ಕಳೆದ ತಿಂಗಳು ಐಶ್ವರ್ಯಾಗೆ ಕೊರೋನಾ ಸೋಂಕು ತಗುಲಿತ್ತು. ಆಗಲೂ ಆಸ್ಪತ್ರೆಗೆ ದಾಖಲಾಗಿರುವ ಫೋಟೋ ಹಂಚಿಕೊಂಡು, 'ಎಲ್ಲಾ ರೀತಿ ಎಚ್ಚರಿಕೆ ವಹಿಸಿದರೂ, ಕೊರೋನಾ ಸೋಂಕು ತಗುಲಿದೆ. ದಯವಿಟ್ಟು ಮಾಸ್ಕ್ (Mask) ಧರಿಸಿ ಹಾಗೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ. 2022ನ ಈ ರೀತಿ ಬರ ಮಾಡಿಕೊಂಡಿರುವೆ. ಈ ವರ್ಷ ಇನ್ನು ಏನ್ ಏನು ನನಗೋಸ್ಕರ ಕಾದಿದೆ ನೋಡಬೇಕು,' ಎಂದು ಐಶ್ವರ್ಯಾ ಬರೆದುಕೊಂಡಿದ್ದರು. 

2022ರ ಜನವರಿಯಲ್ಲಿ ಐಶ್ವರ್ಯಾ (Aishwarya Rajinikanth) ಮತ್ತು ಧನುಷ್ (Danush) ವಿಚ್ಛೇದನ ಪಡೆಯುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದರು. '18 ವರ್ಷಗಳಿಂದ ನಾವು ಜೊತೆಗಿದ್ದೆವು. ಸ್ನೇಹಿತರಾಗಿ, ಜೋಡಿಯಾಗಿ, ಫೊಷಕರಾಗಿ ಹಾಗೂ ವೆಲ್ ವಿಶರ್ಸ್ ಆಗಿದ್ದೆವು. ಈ ಜರ್ನಿಯಲ್ಲಿ ನಾವು ಒಟ್ಟಿಗೇ ಬೆಳೆದಿದ್ದೀವಿ. ಅರ್ಥ ಮಾಡಿಕೊಂಡಿದ್ದೀವಿ, ಅಡ್ಜೆಸ್ಟ್ ಆಗಿದ್ದೀವಿ ಹಾಗೂ ಅಡಾಪ್ಟ್ ಆಗಿದ್ದೀವಿ. ಆದರೆ ಈಗ, ಇಂದು ನಾವು ನಿಂತುಕೊಳ್ಳುತ್ತಿರುವ ಹಾದಿ ಬೇರೆ ಆಗಿವೆ. ಧನುಷ್ ಮತ್ತು ನಾನು ದಂಪತಿಯಾಗಿ ದೂರವಾಗಲು ನಿರ್ಧರಿಸಿದ್ದೀವಿ, ಈ ಸಮಯದಲ್ಲಿ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ನಾವಿಬ್ಬರೂ individuals ಆಗಿ ಬೆಟರ್ ಅಗಬೇಕು.  ನಮ್ಮ ನಿರ್ಧಾರಗಳನ್ನು ನೀವು ಗೌರವಿಸಬೇಕು ಹಾಗೂ ನಮ್ಮ ವೈಯಕ್ತಿಕ ವಿಚಾರದಲ್ಲಿ ನಮಗೆ ಪ್ರೈವೇಸಿ ಕೊಡಬೇಕು' ಎಂದು ಐಶ್ವರ್ಯ ಬರೆದುಕೊಂಡಿದ್ದರು.

ಈ ಕಾರಣಕ್ಕೆ ನಟ Danush ಮತ್ತು ಐಶ್ವರ್ಯ ಡಿವೋರ್ಸ್‌ ಪಡೆದಿದ್ದಾರೆ!

ವಿಚ್ಛೇದನ ವಿಚಾರ ಘೋಷಣೆ ಮಾಡಿದ ನಂತರವೂ ಧನುಷ್ ಮತ್ತು ಐಶ್ವರ್ಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  ಇದು ಆಕಸ್ಮಿಕವೋ, ಪ್ಲಾನ್ಡ್‌ ಯಾವುದೋ ಗೊತ್ತಿಲ್ಲ. ಆದರೆ ಸೌತ್‌ ಸಿನಿಮಾ ಸಿಟಿಯಲ್ಲಿ ಲೇಟೆಸ್ಟ್ ಡಿವೋರ್ಸ್ಡ್ ಕಪಲ್ ಹೈದರಾಬಾದ್‌ನಲ್ಲಿದ್ದಾರೆ (Hyderabad). ರಾಮೋಜಿ ರಾವ್ ಸ್ಟುಡಿಯೋಸ್‌ನಲ್ಲಿ (Ramooji Rao studio) ಬರುವ ಸಿತಾರಾ ಹೋಟೆಲ್‌ನಲ್ಲಿ ಇಬ್ಬರೂ ಭಿನ್ನ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಮೋಜಿ ರಾವ್ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡುವ ಹೆಚ್ಚಿನ ಸೆಲೆಬ್ರಿಟಿಗಳು ಇರುವ ಹೋಟೆಲ್ ಇದಾಗಿದೆ. ಧನುಷ್ ಕೆಲವು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಐಶ್ವರ್ಯ ನಾವು ನಿನ್ನೆ ಸಂಜೆ ಟಿಪ್ಸ್ ಮತ್ತು ಪ್ರೇರಣಾ ಅರೋರಾಗಾಗಿ ಲವ್‌ ಸಾಂಗ್ ನಿರ್ದೇಶಿಸಲು ತಯಾರಾಗುತ್ತಿದ್ದೆವು, ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?