'ಅಯ್ಯಪ್ಪನುಮ್ ಕೋಶಿಯುಮ್' ನಟಿಯನ್ನು ಕೂಡಿ ಹಾಕಿ ಟೆಲಿಕಾಂ ಸಿಬ್ಬಂದಿಯಿಂದ ಅಸಭ್ಯ ವರ್ತನೆ; ದೂರು ದಾಖಲು

Published : Oct 08, 2022, 10:46 AM IST
 'ಅಯ್ಯಪ್ಪನುಮ್ ಕೋಶಿಯುಮ್' ನಟಿಯನ್ನು ಕೂಡಿ ಹಾಕಿ ಟೆಲಿಕಾಂ ಸಿಬ್ಬಂದಿಯಿಂದ ಅಸಭ್ಯ ವರ್ತನೆ; ದೂರು ದಾಖಲು

ಸಾರಾಂಶ

ಸಿಮ್ ತರಲು ಹೋಗಿದ್ದ ಮಲಯಾಳಂನ ಖ್ಯಾತ ನಟಿ ಅನ್ನಾ ರಾಜನ್ ಅವರನ್ನು ಖಾಸಗಿ ಟೆಲಿಕಾಂ ಕಂಪೆನಿಯ ಸಿಬ್ಬಂದಿ ಶೋ ರೂಮ್​ನಲ್ಲಿ ಕೂಡಿ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ. ಅಲುವಾದಲ್ಲಿರುವ ಟೆಲಿಕಾಂ ಶೋ ರೂಮ್​ಗೆ ಡೂಪ್ಲಿಕೇಟ್ ಸಿಮ್​ ಖರೀದಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. 

ಸಿಮ್ ತರಲು ಹೋಗಿದ್ದ ಮಲಯಾಳಂನ ಖ್ಯಾತ ನಟಿ ಅನ್ನಾ ರಾಜನ್ ಅವರನ್ನು ಖಾಸಗಿ ಟೆಲಿಕಾಂ ಕಂಪೆನಿಯ ಉದ್ಯೋಗಿಯೊಬ್ಬರು ಶೋ ರೂಮ್​ನಲ್ಲಿ ಕೂಡಿ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ. ಅಲುವಾದಲ್ಲಿರುವ ಟೆಲಿಕಾಂ ಶೋ ರೂಮ್​ಗೆ ಡೂಪ್ಲಿಕೇಟ್ ಸಿಮ್​ ಖರೀದಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಬಗ್ಗೆ ನಟಿ ಅನ್ನಾ ರಾಜನ್ ದೂರು ದಾಖಲಿಸಿದ್ದಾರೆ. ನಕಲಿ ಸಿಮ್ ಖರೀದಿಸಲು ಶೋ ರೂಮ್​ಗೆ ಹೋಗಿದ್ದ ವೇಳೆ ಅಲ್ಲಿನ ಉದ್ಯೋಗಿಯೊಬ್ಬರು ಶೋ ರೂಮ್​ನ ಶಟರ್​ ಎಳೆದು ನನ್ನನ್ನು ಕೂಡಿ ಹಾಕಿದರು. ಅಲ್ಲದೇ ನನ್ನ ಜೊತೆ ಅನುಚಿತವಾಗಿ ವರ್ತಿಸಿದರು. ಅಲ್ಲದೆ  ಈ ವೇಳೆ ನಾನು ಪ್ರಶ್ನಿಸಿದಾಗ ಬೆದರಿಕೆಯೊಡ್ಡಿದ್ದರು ಎಂದು ಅನ್ನಾ ರಾಜನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಟೆಲಿಕಾಂ ಸಿಬ್ಬಂದಿಯನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ನಟಿ ಆತನ ಭವಿಷ್ಯದ ದೃಷ್ಟಿಯಿಂದ ಕ್ಷಮಿಸಿದ್ದಾರೆ. ಪೊಲೀಸ್ ಸ್ಟೇಷನ್ ನಲ್ಲಿ ವಿಚಾರಣೆ ಬಳಿಕ ಮಾತನಾಡಿದ ನಟಿ ಅನ್ನಾ ರಾಜನ್,  'ಈ ದೂರಿನ ಬಳಿಕ ಅಲುವಾ ಪೊಲೀಸ್ ಠಾಣೆಗೆ ಟೆಲಿಕಾಂ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದ್ದು, ಈ ವೇಳೆ ಆತ ನನ್ನನಲ್ಲಿ ಕ್ಷಮೆಯಾಚಿಸಿದ್ದಾನೆ. ಆತನ ಭವಿಷ್ಯದ ದೃಷ್ಟಿಯಿಂದ  ನಾನು ಪ್ರಕರಣವನ್ನು ಕೈ ಬಿಟ್ಟಿದ್ದೇನೆ' ಎಂದು ಅನ್ನಾ ಹೇಳಿದರು. 

ಸಿನಿಮಾ ಪ್ರಚಾರ ವೇಳೆ ಲೈಂಗಿಕ ದೌರ್ಜನ್ಯ; ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಅನುಭವ ಬಿಚ್ಚಿಟ್ಟ ಇಬ್ಬರು ನಟಿಯರು

ಅಂದಹಾಗೆ ಈ ಪ್ರಕರಣ  ಇತ್ಯರ್ಥವಾದ ಬಳಿಕ ಬೆಳಕಿಗೆ ಬಂದಿದೆ.  ಆದರೆ ಅನುಚಿತವಾಗಿ ವರ್ತಿಸಿದ ಸಿಬ್ಬಂದಿಯ ಭವಿಷ್ಯದ ದೃಷ್ಟಿಯಿಂದ ಆತನ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಟಿ ಅನ್ನಾ ರಾಜನ್ ನಿರಾಕರಿಸಿದ್ದಾರೆ. 

ಪತ್ರಕರ್ತೆಗೆ ನಿಂದನೆ; 'ಹೋಮ್' ಸಿನಿಮಾ ಖ್ಯಾತಿಯ ನಟ ಶ್ರೀನಾಥ್ ಭಾಸಿ ಅರೆಸ್ಟ್

ನಟಿ ಅನ್ನ ರಾಜನ್ ಬಗ್ಗೆ ಹೇಳುವುದಾದರೆ, ಅಂಗಮಾಲಿ ಡೈರೀಸ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಅನ್ನಾ, ವೇಲಿಪಂದತಿ ಪುಸ್ತಕಂ, ಲೋನಪ್ಪಂತೆ, ಮಧುರ ರಾಜ, ಹೆವೆನ್, ರಂದು, ಅಯ್ಯಪ್ಪನುಮ್ ಕೋಶಿಯುಮ್ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅನ್ನಾ ರಾಜನ್ ಇಡುಕ್ಕಿ ಬ್ಲಾಸ್ಟರ್ಸ್, ತಲನಾರಿಝಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು ಅನ್ನಾ ರಾಜನ್ ಶೂಟಿಂಗ್ ನಲ್ಲಿ  ಬ್ಯುಸಿಯಾಗಿದ್ದಾರೆ.  

   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?