Ayushmann Khurrana 25 ಕೋಟಿಯಿಂದ 15 ಕೋಟಿಗೆ ಸಂಬಳ ಇಳಿಸಿಕೊಂಡ ನಟ; ಕಾರಣ ಕೇಳಿ ಶಾಕ್ ಆಗ್ಬೇಡಿ

Published : Sep 29, 2022, 02:28 PM IST
Ayushmann Khurrana 25 ಕೋಟಿಯಿಂದ 15 ಕೋಟಿಗೆ ಸಂಬಳ ಇಳಿಸಿಕೊಂಡ ನಟ; ಕಾರಣ ಕೇಳಿ ಶಾಕ್ ಆಗ್ಬೇಡಿ

ಸಾರಾಂಶ

ಎರಡು ಫ್ಲಾಪ್‌ ಸಿನಿಮಾಗಳನ್ನು ನೀಡಿದ ನಂತರ ಸಂಬಳ ಇಳಿಸಿಕೊಂಡ ಆಯುಷ್ಮಾನ್ ಖುರಾನಾ....

ಕೊರೋನಾ ವೈರಸ್ ಭಾರತಕ್ಕೆ ಕಾಲಿಡುತ್ತಿದ್ದಂತೆ ಮೊದಲು ಪೆಟ್ಟು ತಿಂದಿದ್ದು ಬಾಲಿವುಡ್ ಚಿತ್ರರಂಗ. ಸಣ್ಣ ಪುಟ್ಟ ಕಥೆಗಳಿಗೂ 2-5 ಕೋಟಿ ಖರ್ಚು ಮಾಡುತ್ತಾರೆ. ಇನ್ನು ಸ್ಟಾರ್ ಕಾಸ್ಟಿಂಗ್‌ ಸಿನಿಮಾ ಅಂದ್ರೆ 400 ಕೋಟಿ ಕಡಿಮೆ ಏನೂ ನಡೆಯುವುದಿಲ್ಲ. ಬಿ-ಟೌನ್‌ನಲ್ಲಿ ಬಡ್ಡಿಂಗ್ ಆರ್ಟಿಸ್ಟ್‌ ಕೂಡ 20ರಿಂದ 40 ಲಕ್ಷ ಸಂಭಾವನೆ ಪಡೆಯುವ ಈ ಕಾಲದಲ್ಲಿ ಎರಡು ಫ್ಲಾಪ್‌ ಸಿನಿಮಾ ಕೊಟ್ಟು ಹೆಚ್ಚಿಗೆ ಸಂಭಾವನೆ ಕೇಳಿದ್ದರೆ ಯಾರು ಮೆಚ್ಚುತ್ತಾರೆ? ಹೀಗಾಗಿ ಆಯುಷ್ಮಾನ್ ಖುರಾನಾ ತೆಗೆದುಕೊಂಡಿರುವ ನಿರ್ಧಾರ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ....

ಬಾಲಿವುಡ್‌ನಲ್ಲಿ ಹೆಸರು ಮಾಡುತ್ತಿದ್ದಂತೆ 25 ಕೋಟಿಗೆ ಸಂಭಾವನೆ ಏರಿಸಿಕೊಂಡ ಆಯುಷ್ಮಾನ್ ಖುರಾನಾ ಅನೇಕ್ ಮತ್ತು ಚಂಡೀಗಢ ಕರೇ ಆಶಿಕಿ ಸಿನಿಮಾ ನಂತರ ಸಂಭಾವನೆ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ. ವೃತ್ತಿ ಜೀವನದಲ್ಲಿ ಇದೇ ಮೊದಲು ಆಯುಷ್ಮಾನ್ ಖುರಾನಾ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಕೊಟ್ಟಿರುವುದು. ಇಷ್ಟೇ ಸಂಭಾವನೆ ಪಡೆದು ಮತ್ತೊಂದು ಫ್ಲಾಪ್ ಕೊಟ್ಟರೆ ಬೆಳವಣಿಗೆಗೆ ಕಷ್ಟ ಆಗಬಹುದು ಎಂದು 15 ಕೋಟಿ ಸಂಭಾವನೆ, 10 ಕೋಟಿ ಸಿನಿಮಾ ಮಾಡುವ ಲಾಭದ ಮೇಲೆ ನಿರ್ಧಾರ ಮಾಡಲಾಗುತ್ತದೆ ಎನ್ನಲಾಗಿದೆ.

ಇದೀಗ ನಿರ್ದೇಶಕ ಅನುರಾಗ ಕಶ್ಯಪ್ ಸಹೋದರಿ ಅನುಭೂತಿ ನಿರ್ದೇಶನ ಮಾಡುತ್ತಿರುವ ಡಾಕ್ಟರ್ ಜಿ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ ಅಭಿನಯಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕಾಲಿ ವಿಮಾನದಲ್ಲಿ ಆಯುಷ್ಮಾನ್  ಕುಳಿತಿರುವ ಫೋಟೋ ಹಂಚಿಕೊಂಡಿದ್ದರು..ಏನಿದು ಪ್ರೈವೇಟ್‌ ಜಿಟ್‌ ಓಕೆ ಇದು ಪ್ರೈವೇಟ್ ವಿಮಾನನಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು ಆಗ ತಿಳಿದು ಬಂದ ಸತ್ಯವೇ ಬೇರೆ. ಡಾಕ್ಟರ್ ಜಿ ಸಿನಿಮಾ ಪ್ರಚಾರ ಮಾಡಲು ನಿರ್ಮಾಣ ಮಾಡಿರುವ ವಿಮಾನವಿದು ಎಂದು ತಿಳಿಯಿತ್ತು.

ಹಣಕ್ಕಾಗಿ ರೈಲಿನಲ್ಲಿ ಹಾಡುತ್ತಿದ್ದರು ಆಯುಷ್ಮಾನ್:

ದೆಹಲಿಯಿಂದ ಮುಂಬೈ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಮಿಮಿಕ್ರಿ ಮಾಡುತ್ತಿದ್ದರು ಮತ್ತು  ಅವರು ತಮ್ಮ ಕಾಲೇಜು ದಿನಗಳಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಆಯುಷ್ಮಾನ್ ಹೇಳಿದ್ದರು.

ನಾನು ಪ್ರೈವೇಟ್‌ ವ್ಯಕ್ತಿ ಆಕೆ ಏನ್ ಬೇಕಿದ್ದರೂ ಮಾಡುತ್ತಾಳೆ; ಸೆಕ್ಸ್‌ ಬುಕ್‌ ಬರೆದ ಆಯುಷ್ಮಾನ್ ಖುರಾನಾ ಪತ್ನಿ!

ಕಾಲೇಜು ದಿನಗಳಲ್ಲಿ ನಾನು ಸಾಕಷ್ಟು ಥಿಯೇಟರ್, ಲೈವ್ ಶೋ, ಬೀದಿ ನಾಟಕಗಳನ್ನು ಮಾಡುತ್ತಿದ್ದೆ. ಹಾಗಾಗಿ ಹುಡುಗಿಯರ ಹಿಂದೆ ಓಡಲು ಹೆಚ್ಚು ಸಮಯ ಸಿಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ನಾವು ರೈಲಿನಲ್ಲಿ ಹಾಡುತ್ತಿದ್ದೆವು ಮತ್ತು ಮಿಮಿಕ್ರಿ ಮಾಡುತ್ತಿದ್ದೆವು ಎಂದು ನಾನು ಹಂಚಿಕೊಳ್ಳಲು ಬಯಸುತ್ತೇನೆ.ನನ್ನ ಕಾಲೇಜು ದಿನಗಳಲ್ಲಿ ದೆಹಲಿಯಿಂದ ಮುಂಬೈಗೆ ಹೋಗುತ್ತಿದ್ದ ‘ಪಶ್ಚಿಮ್ ಎಕ್ಸ್ ಪ್ರೆಸ್’ ಹೆಸರಿನ ರೈಲು ಇತ್ತು. ಇದರಲ್ಲಿ ನಾನು ನನ್ನ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದೆ. ಪ್ರಯಾಣಿಕರಿಗೆ ಮನರಂಜನೆ ನೀಡಲು ಈ ರೈಲಿನಲ್ಲಿ ಪ್ರತಿ ಕೋಚ್‌ಗೆ ಹೋಗುತ್ತಿದ್ದೆವು. ಅಲ್ಲಿ ಅ ಹಾಡುಗಳನ್ನು ಹಾಡುತ್ತಿದ್ದೇವು ಪ್ರಯಾಣಿಕರು ನಾವು ಸಂಗ್ರಹಿಸುವ ಹಣವನ್ನು ನಮಗೆ ನೀಡುತ್ತಿದ್ದರು' ಎಂದಿದ್ದಾರೆ.

Ayushmann Khurrana: ಎದೆ ಹಾಲು ಕುಡಿದ ಗಂಡನ ಕುರಿತು ಆಯುಷ್ಮಾನ್ ಪತ್ನಿ ಮಾತು: ಸೀಕ್ರೆಟ್ ಹೇಳಿದ ತಾಹಿರಾ

19 ಕೋಟಿಯ ಅಪಾರ್ಟ್‌ಮೆಂಟ್:

ವಿಕ್ಕಿ ಡೋನರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟ, ವಿಂಡ್ಸರ್ ಗ್ರಾಂಡೆ ರೆಸಿಡೆನ್ಸಸ್, ಲೋಖಂಡ್ವಾಲಾ ಕಾಂಪ್ಲೆಕ್ಸ್, ಅಂಧೇರಿ ವೆಸ್ಟ್‌ನಲ್ಲಿ 20 ನೇ ಮಹಡಿಯಲ್ಲಿ ಡೆವಲಪರ್ ವಿಂಡ್ಸರ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್‌ನಿಂದ 19.30 ಕೋಟಿ ರೂ.ಗೆ ಎರಡು ಘಟಕಗಳನ್ನು ಖರೀದಿಸಿದ್ದಾರೆ.ಅಪಾರ್ಟ್ಮೆಂಟ್ನ ದಾಖಲೆಯನ್ನು ನವೆಂಬರ್ 29, 2021 ರಂದು ನೋಂದಾಯಿಸಲಾಗಿದೆ. ಅಪಾರ್ಟ್ಮೆಂಟ್ನಿಂದ 96.50 ಲಕ್ಷ ರೂಪಾಯಿಗಳ ರಿಜಿಸ್ಟ್ರೇಷನ್ ಶುಲ್ಕವನ್ನು ಪಾವತಿಸಲಾಗಿದೆ ಎಂದು ದಾಖಲೆಗಳು ತೋರಿಸಿವೆ.ಅಪಾರ್ಟ್ಮೆಂಟ್ನ ಒಟ್ಟು ಗಾತ್ರವು 4,027 ಚದರ ಅಡಿಗಳು, ಇದು ನಾಲ್ಕು ಕಾರ್ ಪಾರ್ಕಿಂಗ್ನೊಂದಿಗೆ ಬರುತ್ತದೆ. ಈ ಬಗ್ಗೆ ಖುರಾನಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?