ನನ್ನ ಮಗನಿಗೆ ರಾಮ ಎಂದು ಹೆಸರಿಡಲಾಗದು: ಸೈಫ್ ಅಲಿಖಾನ್ ಹಳೆ ವಿಡಿಯೋ ವೈರಲ್

Published : Sep 29, 2022, 02:06 PM ISTUpdated : Sep 29, 2022, 03:58 PM IST
ನನ್ನ ಮಗನಿಗೆ ರಾಮ ಎಂದು ಹೆಸರಿಡಲಾಗದು: ಸೈಫ್ ಅಲಿಖಾನ್ ಹಳೆ ವಿಡಿಯೋ ವೈರಲ್

ಸಾರಾಂಶ

ರಣ್‌ಬೀರ್ ಕಪೂರ್ ನಂತರ ಈಗ ಸೈಫ್ ಅಲಿಖಾನ್ ಹಳೆ ವಿಡಿಯೋ ವೈರಲ್ ಆಗಿದ್ದು, ಇದು ಈಗಷ್ಟೇ ಬಿಡುಗಡೆಯಾಗಿರುವ ವಿಕ್ರಂ ವೇದಾ ಸಿನಿಮಾಕ್ಕೆ ಸಂಕಷ್ಟ ತಂದೊಡ್ಡಿದೆ. 

ಮುಂಬೈ: ಇತ್ತೀಚೆಗೆ ಬಾಲಿವುಡ್ ನಟ, ಕಪೂರ್ ವಂಶದ ಕುಡಿ ರಣಬೀರ್ ಕಪೂರ್ ಹಾಗೂ ಪತ್ನಿ ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಭಿಯಾನ ನಡೆಸಲಾಗಿತ್ತು. ಇದಕ್ಕೆ ಕಾರಣವಾಗಿದ್ದು, ರಣಬೀರ್ ಕಪೂರ್ ಹಿಂದೊಮ್ಮೆ ನೀಡಿದ ಹೇಳಿಕೆ. ರಣ್‌ಬೀರ್ ತನಗೆ ಗೋಮಾಂಸ ಇಷ್ಟ ಎಂದು ಹೇಳಿಕೆ ನೀಡುವ ಮೂಲಕ ಬಹುಕೋಟಿ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದರು. ಹಾಗಂತ ಅದು ಇತ್ತೀಚೆಗೆ ನೀಡಿದ ಹೇಳಿಕೆ ಅಲ್ಲ.  ಹಲವು ವರ್ಷಗಳ ಹಿಂದೆ ರಣ್‌ಬೀರ್ ನೀಡಿದ ಹೇಳಿಕೆ ಬ್ರಹ್ಮಾಸ್ತ್ರ ಬಿಡುಗಡೆಯ ಹೊತ್ತಿಗೆ ಮುನ್ನೆಲೆ ಬಂದು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಜನ ರಣ್‌ಬೀರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕಿ ಬ್ರಹ್ಮಾಸ್ತ್ರ ಸಿನಿಮಾ ಬಹಿಷ್ಕರಿಸುವಂತೆ ಆದೇಶಿಸಿದ್ದರು. ಈಗ್ಯಾಕೆ ಈ ವಿಚಾರ ಅಂತೀರಾ ಈಗ ರಣಬೀರ್‌ನಂತಹದ್ದೇ ಸಂದಿಗ್ಧ ಸ್ಥಿತಿಯಲ್ಲಿ ತಮ್ಮ ಹಳೆಯ ಹೇಳಿಕೆಯ ಕಾರಣಕ್ಕೆ ವಿವಾದಕ್ಕೆ ಸಿಲುಕಿದ್ದಾರೆ ನಟ ಸೈಫ್ ಅಲಿ ಖಾನ್.

ಹೌದು ನಟ ಸೈಫ್‌ ಅಲಿ ಖಾನ್ (Saif Ali Khan), ಈ ಹಿಂದೆ ನೀಡಿದ್ದ ಹೇಳಿಕೆಯೊಂದು ಈಗ ವೈರಲ್ ಆಗಿದ್ದು, ಇದರಿಂದ ಜನ ಸೈಫ್ ಅಲಿಖಾನ್ ಹಾಗೂ ಹೃತಿಕ್ ರೋಷನ್ (Hrithik roshan) ನಟನೆಯ ವಿಕ್ರಂ ವೇದಾ (Vikram vedha) ಸಿನಿಮಾಗೆ ಸಂಕಷ್ಟ ಎದುರಾಗಿದೆ. ಈ ಹಿಂದೆ ನಟ ಸೈಫ್ ಅಲಿ ಖಾನ್ ನೀಡಿದ ಸಂದರ್ಶನದ ವಿಡಿಯೋವೊಂದು ಈಗ ವೈರಲ್ ಆಗಿದೆ. ಅದರಲ್ಲಿ ನಟ ಸೈಫ್ ಅಲಿಖಾನ್ ನಾನು ನನ್ನ ಮಗನಿಗೆ ರಾಮ ಎಂದು ಹೆಸರಿಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಅದರಲ್ಲಿ ಸೈಫ್ ಪತ್ನಿ ಕರೀನಾ ಕೂಡ ಇದ್ದು, ತಮ್ಮ ಮಗನಿಗೆ ತೈಮೂರ್ (Taimur) ಹೆಸರಿಟ್ಟಿರುವುದಕ್ಕೆ ತನಗೆ ಖುಷಿ ಇದೆ ಎಂದು ಕರೀನಾ (Kareena Kapoor)ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. 

 

ಗೋಮಾಂಸ ತುಂಬಾ ಇಷ್ಟ; ರಣಬೀರ್ ಕಪೂರ್ ಹೇಳಿಕೆ ವೈರಲ್, 'ಬ್ರಹ್ಮಾಸ್ತ್ರ' ಬಾಯ್ಕಟ್‌ಗೆ ಒತ್ತಾಯ

ಬಾಲಿವುಡ್ ನವಾಬ, ಪಟೌಡಿ ಮನೆತನದ  ಸೈಫ್ ಅಲಿ ಖಾನ್ ತಂದೆ ಖ್ಯಾತ ಕ್ರಿಕೆಟರ್ ಮನ್ಸೂರ್ ಅಲಿ ಖಾನ್ ಪಟೌಡಿ (Mansoor Ali Khan Pataudi) ಕೂಡ ಮದುವೆಯಾಗಿದ್ದು ಹಿಂದೂವನ್ನೇ. ಬಾಲಿವುಡ್ ನಟಿ ಶರ್ಮಿಳಾ ಟಾಗೋರ್‌ (Sharmila Tagore) ಅವರನ್ನ ಮನ್ಸೂರ್ ಅಲಿ ಖಾನ್ ವಿವಾಹವಾಗಿದ್ದರು. ಇನ್ನು ನಟ ಸೈಫ್ ಅಲಿಖಾನ್ ಮೊದಲಿಗೆ ತನಗಿಂತ 9 ವರ್ಷ ಹಿರಿಯಳಾದ ನಟಿ ಅಮೃತಾರನ್ನು ಮದುವೆಯಾಗಿದ್ದರು. ಅವರೊಂದಿಗಿನ ದಾಂಪತ್ಯದಲ್ಲಿ ನಟಿ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿಖಾನ್ ಎಂಬಿಬ್ಬರು ಮಕ್ಕಳಿದ್ದಾರೆ. ನಂತರ ತನಗಿಂತ 19 ವರ್ಷ ಚಿಕ್ಕವಳಾದ ನಟಿ ಕರೀನಾಳನ್ನು ಮದುವೆಯಾದ ಸೈಫ್‌ಗೆ ತೈಮೂರು ಹಾಗೂ ಜೆಹಾಂಗೀರ್ ಎಂಬ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಸೈಫ್ ಅಲಿಖಾನ್ ಅಮ್ಮ ಹಿಂದೂ, ಇಬ್ಬರು ಪತ್ನಿಯರು ಕೂಡ ಮೂಲತಃ ಹಿಂದೂಗಳೇ. ಹೀಗಿರುವಾಗ ಮಕ್ಕಳಿಗೆ ರಾಮ (Ram) ಎಂಬ ಹೆಸರಿಡಲಾಗದು ಎಂಬ ಹೇಳಿಕೆ ಏಕೆ ಎಂಬುದು ನೆಟ್ಟಿಗರ ಪ್ರಶ್ನೆ. ಇದು ಹಳೆಯ ವಿಡಿಯೋ ಆಗಿದ್ದರೂ, ಈಗ ಸಾಕಷ್ಟು ವೈರಲ್ ಆಗುತ್ತಿದ್ದು, ವಿವಾದ ಸೃಷ್ಟಿಸಿದೆ. 

ಪ್ರಸ್ತುತ ಸೈಫ್ ಅಲಿ ಖಾನ್, ಹೃತಿಕ್ ರೋಷನ್ ಜೊತೆ ವಿಕ್ರಂ ವೇದಾ ಸಿನಿಮಾದಲ್ಲಿ ಅಭಿನಯಿಸಿದ್ದು, ಥಿಯೇಟರ್‌ಗಳಲ್ಲಿ ಓಡುತ್ತಿದೆ. ಇದೇ ಸಂದರ್ಭದಲ್ಲಿ ಸೈಫ್ ಅಲಿ ಖಾನ್ ಈ ರೀತಿಯ ಹೇಳಿಕೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆಯನ್ನು ಇರಿಸಿಕೊಂಡು ವಿಕ್ರಂ ವೇದಾ ಸಿನಿಮಾವನ್ನು ಬಹಿಷ್ಕರಿಸುವಂತೆ ಅಭಿಯಾನ ಆರಂಭವಾಗಿದೆ. 

Brahmastra Twitter Review: ರಣಬೀರ್-ಆಲಿಯಾ ಚಿತ್ರಕ್ಕೆ ಡಿಸಾಸ್ಟರ್, ಹಾರಿಬಲ್ ಎಂದ ನೆಟ್ಟಿಗರು

ಒಟ್ಟಿನಲ್ಲಿ ಈ ಡಿಜಿಟಲ್ ಯುಗದಲ್ಲಿ ಆಡಿದ ಪ್ರತಿ ಮಾತುಗಳು ರೆಕಾರ್ಡ್‌ ಆಗಿ ಉಳಿಯುತ್ತಿದ್ದು, ಸೆಲೆಬ್ರಿಟಿಗಳು, ಸಿನಿಮಾ ನಟರು ರಾಜಕಾರಣಿಗಳು ಪ್ರತಿಯೊಂದು ನಡೆಯನ್ನು ಬಹಳ ಎಚ್ಚರಿಕೆಯಿಂದ ಇಡುವಂತೆ ಮಾಡಿದೆ. ಹಳೆಯ ವಿಡಿಯೋಗಳು ಯಾವಾಗ ಹೇಗೆ ಬಂದು ಅನಾಹುತ ಸೃಷ್ಟಿಸಬಹುದು ಅದರ ಪರಿಣಾಮ ಏನಾಗಬಹುದು ಎಂದು ಊಹಿಸಿಕೊಳ್ಳಲು ಸಾಧ್ಯವಾಗದಷ್ಟರ ಮಟ್ಟಿಗೆ ಅದು ಪರಿಣಾಮ ಬೀರುತ್ತಿದೆ ಎಂಬುವುದಕ್ಕೆ ಈ ಎರಡು ಘಟನೆಗಳು ಸಾಕ್ಷಿಯಾಗಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?