ನಟ ಆಯುಷ್ಮಾನ್ ಖುರಾನಾ ತಂದೆ, ಖ್ಯಾತ ಜ್ಯೋತಿಷಿ ಪಿ ಖುರಾನಾ ನಿಧನ

Published : May 19, 2023, 05:54 PM IST
ನಟ ಆಯುಷ್ಮಾನ್ ಖುರಾನಾ ತಂದೆ, ಖ್ಯಾತ ಜ್ಯೋತಿಷಿ ಪಿ ಖುರಾನಾ ನಿಧನ

ಸಾರಾಂಶ

ನಟ ಆಯುಷ್ಮಾನ್ ಖುರಾನಾ ತಂದೆ, ಖ್ಯಾತ ಜ್ಯೋತಿಷಿ ಪಿ ಖುರಾನಾ ನಿಧನರಾಗಿದ್ದಾರೆ. 

ಬಾಲಿವುಡ್ ಸ್ಟಾರ್ ಆಯುಷ್ಮಾನ್ ಖುರಾನಾ ಅವರ ತಂದೆ, ಖ್ಯಾತ ಜ್ಯೋತಿಷಿ ಪಿ ಖುರಾನಾ ಇಂದು (ಮೇ 19) ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಿ ಖುರಾನಾ ಅವರನ್ನು ಎರಡು ದಿನಗಳ ಹಿಂದೆ  ಪಂಜಾಬ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರು ತಮ್ಮ ಪತ್ನಿ ಮತ್ತು ಪುತ್ರರಾದ ಆಯುಷ್ಮಾನ್ ಮತ್ತು ಅಪರಶಕ್ತಿ ಖುರಾನಾ ಅವರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ 5.30ಕ್ಕೆ ಚಂಡೀಗಢದ ಮಣಿಮಜ್ರಾ ಸ್ಮಶಾನದಲ್ಲಿ ನೆರವೇರಲಿದೆ.

ಈ ಬಗ್ಗೆ ಖುರಾನಾ ವಕ್ತಾರರು ಅಧಿಕೃತ ಮಾಹಿತಿ ಬಹಿರಂಗ ಪಡಿಸಿದ್ದಾರೆ. 'ಆಯುಷ್ಮಾನ್ ಮತ್ತು ಅಪರಶಕ್ತಿ ಖುರಾನಾ ಅವರ ತಂದೆ, ಜ್ಯೋತಿಷಿ ಪಿ ಖುರಾನಾ ಅವರು ದೀರ್ಘಕಾಲದ ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ 10:30 ಕ್ಕೆ ಮೊಹಾಲಿಯಲ್ಲಿ ನಿಧನರಾದರು ಎಂದು ತಿಳಿಸಲು ತುಂಬಾ ದುಃಖವಾಗಿದೆ. ಈ ಸಮಯದಲ್ಲಿ ನಿಮ್ಮ ಎಲ್ಲರ ಪ್ರಾರ್ಥನೆ ಮತ್ತು ಬೆಂಬಲಕ್ಕಾಗಿ ಋಣಿಯಾಗಿದ್ದೇನೆ' ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

ಪಠಾಣ್ ಜೊತೆ ಫ್ಲರ್ಟ್ ಮಾಡ್ತಿರುವ ಪೂಜಾ; ಬ್ಯಾಕ್‌ಲೆಸ್‌ ಲೆಹಂಗಾದಲ್ಲಿ ಮಿಂಚಿದ ಈ 'ಡ್ರೀಮ್ ಗರ್ಲ್' ಯಾರು?

ತಂದೆಯನ್ನು ಕಳೆದುಕೊಂಡು ದುಃಖದಲ್ಲಿರುವ ನಟ ಆಯುಷ್ಮಾನ್ ಖುರಾನಾ ಅವರಿಗೆ ಅಭಿಮಾನಿಗಳು ಧೈರ್ಯ ತುಂಬುತ್ತಿದ್ದಾರೆ, ಸಾಂತ್ವನ ಹೇಳುತ್ತಿದ್ದಾರೆ. ಪಿ ಖುರಾನಾ ಅವರು ಜ್ಯೋತಿಷ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಉತ್ತರ ಭಾರತದಲ್ಲಿ ಜನಪ್ರಿಯರಾಗಿದ್ದರು. ಪಂಜಾಬ್‌ನ ಚಂಡೀಗಢದಿಂದ ಬಂದ ಪಿ ಖುರಾನಾ ಈ ವಿಷಯದ ಬಗ್ಗೆ ತಮ್ಮ ಜ್ಞಾನವನ್ನು ಆಧರಿಸಿ ಪುಸ್ತಕಗಳನ್ನು ಸಹ ಬರೆದಿದ್ದಾರೆ.

ಖ್ಯಾತಿಗೂ ಮುನ್ನ ಮದುವೆಯಾಗಿದ್ದ ಬಾಲಿವುಡ್‌ನ ಸ್ಟಾರ್ಸ್‌: ಈಗ ಉಳಿದಿರುವುದು ಒಂದೇ ಮದುವೆ

ತನ್ನ ತಂದೆ ಬಗ್ಗೆ ನಟ ಆಯೂಷ್ಮಾನ್ ಖುರಾನ ಈ ಹಿಂದೆ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. 'ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ಇಲ್ಲ, ಆದರೆ ನನ್ನ ತಂದೆ ನನ್ನ ಜೀವನದ ತರಬೇತುದಾರ ಮತ್ತು ಮಾರ್ಗದರ್ಶಕರಾಗಿದ್ದಾರೆ. ಅವರು ಯಾವಾಗಲೂ ನನಗೆಜನರ ನಾಡಿಮಿಡಿತವನ್ನು ಹಿಡಿ ಎಂದು ಹೇಳುತ್ತಿದ್ದರು ಮತ್ತು ನಾನು ಅದನ್ನು ಮಾಡಿದ್ದೇನೆ' ಎಂದು ಈ ಹಿಂದೆ ಹೇಳಿದ್ದರು. ಇದೀಗ ತಂದೆಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ ಬಾಲಿವುಡ್ ಸ್ಟಾರ್ ನಟ. ಖುರಾನ ನಿಧನಕ್ಕೆ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?