ಮೂರನೇ ಕಣ್ಣಿರುವ, ಮಹಾನ್ ಶಕ್ತಿ ಲಿಂಗಭೈರವಿ ದೇವಿ ಪರಮ ಭಕ್ತೆ ಸಮಂತಾ! ಈ ತಾಯಿ ಮಹಾತ್ಮೆ ಏನು?

By Suvarna NewsFirst Published May 19, 2023, 12:27 PM IST
Highlights

ಸಮಂತಾ ರುತ್‌ ಪ್ರಭು ನಟಿಯಾಗಿ ಏಳು ಬೀಳುಗಳನ್ನು ಕಂಡವರು. ವೈಯುಕ್ತಿಕ ಬದುಕಿನಲ್ಲೂ ನೋವುಂಡವರು. ಇಷ್ಟೆಲ್ಲ ನೋವುಗಳಿದ್ದರೂ ಅಷ್ಟು ಪ್ರಶಾಂತವಾಗಿರಲು ಈ ದೇವರೇ ಕಾರಣವಂತೆ. ಮೂರನೇ ಕಣ್ಣಿರುವ ಆ ಮಹಾ ಶಕ್ತಿ ಯಾರು?

ಸಮಂತಾ ರುತ್ ಪ್ರಭು ತನ್ನ ನಟನೆಯ ಮೂಲಕವೇ ದೇಶಾದ್ಯಂತ ಹವಾ ಸೃಷ್ಟಿಸಿದ ನಟಿ. ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದವರು. ಪುಷ್ಪ ಸಿನಿಮಾದ ಆ ಅಂಟಾವ ಮಾವ ಹಾಡಿಗೆ ಈ ಹಾಕಿದ ಸ್ಟೆಪ್ ವಿಶ್ವಾದ್ಯಂತ ಮಾಡಿದ ಸೌಂಡು ಸಣ್ಣದಲ್ಲ. ವರ್ಷ ಮೂವತ್ತಾರಾದರೂ, ವಿವಾಹವಾಗಿ, ಡಿವೋರ್ಸ್ ಆದರೂ ಸಮಂತಾಗಿರೋ ಬೇಡಿಕೆ ಇಳಿದಿಲ್ಲ. ಯಶೋದಾ, ಶಕುಂತಲಂನಂಥಾ ಸಿನಿಮಾಗಳು ಸಕ್ಸಸ್‌ ಕಾಣದೇ ನೆಲಕ್ಕಚ್ಚಿದವು. ಈಕೆಯ ಬಗ್ಗೆ ಕೆಟ್ಟ ಕಮೆಂಟ್‌ಗಳೂ ಬಂದವು. ಆದರೂ ಸಮಂತಾ ಈ ಬಗ್ಗೆ ತಲೆ ಕೆಡಿಸಿಕೊಂಡ ಹಾಗಿಲ್ಲ. ಕೆಲಸವನ್ನು ಖುಷಿಯಿಂದ ಪ್ರಾಮಾಣಿಕವಾಗಿ ಮಾಡಿದ್ದೇನೆ. ಕೆಲಸ ಮಾಡೋದಷ್ಟೇ ನನ್ನ ಕರ್ತವ್ಯ. ಅದಕ್ಕೆ ಸಿಗೋ ಫಲಗಳು ನನ್ನ ಕೈಯಲ್ಲಿಲ್ಲ ಅಂತ ಅಧ್ಯಾತ್ಮ ಬೆರೆಸಿ ಮಾತಾಡ್ತಾರೆ ಈ ನಟಿ.

ಕಳೆದ ಕೆಲ ವರ್ಷಗಳಲ್ಲಿ ಖಾಸಗಿ ಜೀವನದಲ್ಲಿ (Personal Life) ಸಾಕಷ್ಟು ನೋವುಗಳನ್ನುಂಡವರು ಸಮಂತಾ . ತೀವ್ರ ಮಾನಸಿಕ ಖಿನ್ನತೆಗೆ (Depression) ಒಳಗಾಗಿದ್ದ ಈಕೆ ಅದರಿಂದ ಆಚೆ ಬರಲು ಪಟ್ಟ ಪಾಡು ಒಂದೆರಡಲ್ಲ. ಇದರ ಜೊತೆಗೆ ಆರೋಗ್ಯ ಸಮಸ್ಯೆಗಳು (Health Issues) ಸಹ ಒಂದರ ಬಳಿಕ ಒಂದರಂತೆ ಕಾಡಿದವು. ವಿಚ್ಛೇದನದ ಬಳಿಕವಂತೂ ಸಮಂತಾ ಇನ್ನು ಮೇಲೇರಲಾರರು ಎಂದೇ ಹಲವು ಸಿನಿಮಾ ಮಂದಿ ಭಾವಿಸಿದ್ದರು. ಆದರೆ ಈ ಛಲಗಾರ್ತಿ ಹೆಣ್ಣುಮಗಳು ಮೂಗು ಮುರಿದವರೇ ಹುಬ್ಬೇರಿಸೋ ಹಾಗೆ ಹಿಂದಿನಕ್ಕಿಂತಲೂ ಗಟ್ಟಿಯಾಗಿ ಅವರು ಮೇಲೆದ್ದು ಬಂದರು. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯದಲ್ಲಿ ಈಗ ಮೊದಲಿಗಿಂತಲೂ ಗಟ್ಟಿಯಾಗಿದ್ದಾರೆ. ವೃತ್ತಿಯಲ್ಲಿ ಸಹ ಏರುಗತಿಯಲ್ಲಿದ್ದಾರೆ. ಇದಕ್ಕೆ ಸಮಂತಾರ ಸ್ವಪ್ರಯತ್ನವೇ ಕಾರಣವಾದರೂ ಆ ಸ್ವಪ್ರಯತ್ನಕ್ಕೆ ಪ್ರೇರಣೆ ಒದಗಿಸಿದ್ದು ಭಕ್ತಿ! ಸಮಂತಾ ನಂಬಿದ್ದ ಆ ತಾಯಿ. ಆ ದೇವಿ ಪವಾಡಗಳನ್ನು ಮಾಡುವವಳಲ್ಲ, ವರಗಳನ್ನು ಕರುಣಿಸುವ ಇತರ ದೇವರ ಹಾಗೂ ಅಲ್ಲ. ಬದಲಿಗೆ ಅಂತಃಶಕ್ತಿ ತುಂಬುವ ಮಹಾ ಶಕ್ತಿ.

Latest Videos

ಶ್ರೀವಲ್ಲಿ ಬಗ್ಗೆ ಮಾತಾಡಿ ವಿವಾದ ಸೃಷ್ಟಿಸಿದ್ದ ನಟಿ ಐಶ್ವರ್ಯಾ; ಕೊನೆಗೂ ಪ್ರತಿಕ್ರಿಯೆ ನೀಡಿದ ರಶ್ಮಿಕಾ ಮಂದಣ್ಣ

ಆ ದೇವಿ ಲಿಂಗ ಭೈರವಿ. ಸಮಂತಾ, ಲಿಂಗ ಭೈರವಿ ದೇವಿಯ ಆರಾಧಕಿ. ತಮ್ಮ ಮನೆಯಲ್ಲಿಯೇ ಸಣ್ಣ ಗುಡಿ ಕಟ್ಟಿ ಲಿಂಗ ಭೈರವಿಯನ್ನು ಪ್ರತಿಷ್ಠಾಪಿಸಿ ಪ್ರತಿದಿನವೂ ದೇವಿಯ ಆರಾಧನೆ ಮಾಡುತ್ತಾರೆ. ದೇವರ ಮುಂದೆ ಕೂತು ಧ್ಯಾನಸ್ಥರಾಗುತ್ತಾರೆ. ದೇವಿಯ ಸ್ತೋತ್ರಗಳನ್ನು ನಿತ್ಯ ಪಠಿಸುತ್ತಾರೆ. ಲಿಂಗ ಭೈರವಿ ದೇವಿ ಸಾಂಪ್ರದಾಯಿಕ ದೇವರುಗಳಂತಲ್ಲ. ದೈವಿಕ ಸ್ತೀತ್ವವನ್ನು ಲಿಂಗದ ರೂಪದಲ್ಲಿ ಪೂಜಿಸುವುದೇ ಲಿಂಗ ಭೈರವಿಯ ಆರಾಧನೆಯ ಉದ್ದೇಶ. ಭೈರವಿ ದೇವಿಯ ಲಿಂಗದ ರೂಪವೆಂದೂ ಹೇಳಬಹುದು. ಲಿಂಗದ ರೂಪದಲ್ಲಿನ ಏಕೈಕ ದೇವಿ ಎಂದೂ ಹೇಳಬಹುದು. ಲಿಂಗ ಭೈರವಿ ದೇವಿಯ ರೂಪ ಅನೂಹ್ಯವಾದುದು. ಲಿಂಗಕ್ಕೆ ಎರಡು ದೊಡ್ಡ ಕಣ್ಣಿನ ಜೊತೆಗೆ ಹತ್ತು ಪುಟ್ಟ ಕೈಗಳಿವೆ. ವಿಶೇಷವೆಂದರೆ ಪರಮೇಶ್ವರನಂತೆ ಈಕೆಯ ಹಣೆಯ ಮೇಲೂ ಮೂರನೇ ಕಣ್ಣಿದೆ.

ಭೈರವಿಯ ಕೃಪೆಗೆ ಪಾತ್ರರಾದವರಿಗೆ ಜೀವನ(Life), ಮರಣ (Death), ಬಡತನ (Poverty) ಅಥವಾ ವೈಫಲ್ಯದ (Failures) ಚಿಂತೆ ಅಥವಾ ಭಯ(Fear) ಕಾಡುವುದಿಲ್ಲವಂತೆ. ಈ ಎಲ್ಲ ಪ್ರಾಪಂಚಿಕ ಭಯಗಳಿಂದ ಅವರು ಹೊರಗೆ ಬರುತ್ತಾರೆ ಎಂಬ ನಂಬಿಕೆ ಈ ದೇವಿಯ ಭಕ್ತರದು.

ಲಿಂಗ ಭೈರವಿಯು ದೈವಿಕ ಸ್ತ್ರೀತ್ವದ ಅಭಿವ್ಯಕ್ತಿ. ಕೊಯಂಬತ್ತೂರಿನ ವೆಲ್ಲಿಯಂಗಿರಿ ತಪ್ಪಲಿನಲ್ಲಿ ಈ ಮಹಾಶಕ್ತಿಯ ದೇವಾಲಯವಿದೆ. ಶಕ್ತಿಯುತ, ವರ್ಣರಂಜಿತ, ಮಾನವೀಯತೆ, ತಾಯಿಯಂತಹ ಗುಣಗಳುಳ್ಳ ಲಿಂಗ ಭೈರವಿ ಪೂರ್ಣ ಪ್ರಮಾಣದ ಸಂಪೂರ್ಣ ಮಹಿಳೆ. ಈಕೆ ಏಕಕಾಲದಲ್ಲಿ ಉಗ್ರಳೂ ಮತ್ತು ಕರುಣಾಮಯಿಯೂ ಹೌದು ಎನ್ನುತ್ತಾರೆ ಸದ್ಗುರು. ಅವರೇ ಹೇಳಿರುವಂತೆ ನೀವು ಲಿಂಗ ಭೈರವಿಯ ಭಕ್ತರಾಗಿ ಇರಬೇಕೆಂದೇನೂ ಇಲ್ಲ. ನಿಮಗೆ ಆಕೆಯ ಮೇಲೆ ನಂಬಿಕೆ ಇರಬೇಕೆಂದೇನೂ ಇಲ್ಲ. ನೀವು ಆಕೆಯ ಧನಾತ್ಮಕತೆಯ (positivity) ಬಗ್ಗೆ ಯೋಚಿಸಿ, ಆ ಧನಾತ್ಮಕತೆ ನಿಮ್ಮ ಜೀವನದಲ್ಲಿ ಪ್ರವೇಶಿಸಿದರೆ ಹೇಗಿರಬಹುದೆಂದು ಯೋಚಿಸಿರಿ ಸಾಕು ನೀವು ಆಕೆಯ ಭಕ್ತರಾಗುತ್ತೀರಿ ಎಂದಿದ್ದಾರೆ.

'ದಿ ಕೇರಳ ಸ್ಟೋರಿ'ಯಲ್ಲಿ ಶಿವನನ್ನು ಗೇಲಿ ಮಾಡಿದ ಮಹಿಳೆ; ಸದ್ಗುರುವಿನ ಹಳೆಯ ಉತ್ತರ ವೈರಲ್

ಸಮಂತಾ ಮಾತ್ರವೇ ಅಲ್ಲ ನಟಿ ತಮನ್ನಾ ಸಹ ಲಿಂಗ ಭೈರವಿಯ ಪರಮ ಭಕ್ತೆ. ಇತ್ತೀಚೆಗಷ್ಟೆ ಇಶಾ ಫೌಂಡೇಶನ್‌ನಲ್ಲಿ ಲಿಂಗ ಭೈರವಿಯ ವಿಶೇಷ ಪೂಜೆ(Pooja)ಯಲ್ಲಿ ನಟಿ ಸಮಂತಾ ಭಾಗವಹಿಸಿದ್ದರು.

'ಎಲ್ಲರ ಬದುಕಲ್ಲೂ ಏಳುಬೀಳುಗಳು ಸಹಜ(Normal). ನೋವು, ಭಯಗಳೆಲ್ಲ ಸಹಜ. ಅವನ್ನು ಧೈರ್ಯವಾಗಿ ಅಂತಃಕರಣದಿಂದ ಎದುರಿಸುವ ಶಕ್ತಿಯನ್ನು ಈ ತಾಯಿ ನನಗೆ ನೀಡುತ್ತಾಳೆ' ಎನ್ನುತ್ತಾರೆ ಸಮಂತಾ.

click me!