ನಟನೆಗೆ ಗುಡ್ ಬೈ ಹೇಳ್ತಾರಂತೆ ಸೂಪರ್ ಸ್ಟಾರ್ ರಜನಿಕಾಂತ್: ಏನಾಯ್ತು ತಲೈವಾಗೆ?

By Shruthi Krishna  |  First Published May 19, 2023, 3:41 PM IST

ಸೂಪರ್ ಸ್ಟಾರ್ ರಜನಿಕಾಂತ್ ನಟನೆಗೆ ಗುಡ್ ಬೈ ಹೇಳುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 


ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಜೈಲರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಜೈಲರ್ ಸಿನಿಮಾದಲ್ಲಿ ಬೇರೆ ಬೇರೆ ಭಾಷೆಯ ಸ್ಟಾರ್ಸ್ ಕೂಡ ನಟಿಸಿದ್ದಾರೆ. ಕನ್ನಡದ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೈಲರ್ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ರಜನಿಕಾಂತ್ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೂಪರ್ ಸ್ಟಾರ್ ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ನಡುವೆ  ರಜವಿಕಾಂತ್ ಕಡೆಯಿಂದ ಬೇಸರ ಸುದ್ದಿ ವೈರಲ್ ಆಗಿದೆ. ತಲೈವಾ ನಟನೆಗೆ ಗುಡ್ ಬೈ ಹೇಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 

ರಜನಿಕಾಂತ್ ಜೈಲರ್ ಸಿನಿಮಾ ಬಳಿಕ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯ ಮೂಡಿ ಬರುತ್ತಿರುವ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೋಕೇಶ್ ಕನಗರಾಜ್ ಸಿನಿಮಾ ಬಳಿಕ ರಜನಿಕಾಂತ್ ನಿವೃತ್ತಿ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ತಮಿಳು ಸಿನಿಮಾರಂಗದಲ್ಲಿ ವೈರಲ್ ಆಗಿದೆ. ಅಂದಹಾಗೆ ರಜನಿಕಾಂತ್ ಬಗ್ಗೆ ಈ ರೀತಿಯ ಸುದ್ದಿ ವೈರಲ್ ಆಗಲು ಕಾರಣವಾಗಿದ್ದು ನಿರ್ದೇಶಕ ಮಿಸ್ಕಿನ್ ಹೇಳಿದ ಮಾತು. ಲೋಕೇಶ್ ಕನಗರಾಜ್ ಅವರ ಜೊತೆಗಿನ ಸಿನಿಮಾವೇ ರಜನಿಕಾಂತ್ ಅವರ ಕೊನೆಯ ಸಿನಿಮಾ ಆಗಲಿದೆ ಎಂದು ಹೇಳಿದ್ದಾರೆ. ಈ ಮಾತು ಈಗ ಸಂಚಲನ ಸೃಷ್ಟಿ ಮಾಡಿದೆ. 

ಅಲ್ಲು ಅರ್ಜುನ್, ಪ್ರಭಾಸ್ ರಿಂದ ಸಮಂತಾವರೆಗೆ: ಈ ದಕ್ಷಿಣ ತಾರೆಯರ ಐಷಾರಾಮಿ ಮನೆಗಳ ಬೆಲೆ ಎಷ್ಟು ಗೊತ್ತಾ?

Tap to resize

Latest Videos

ನಿರ್ದೇಶಕ ಮಿಸ್ಕಿನ್ ಹೇಳಿದ ಮಾತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಆದರೆ ರಜನಿಕಾಂತ ಅಭಿಮಾನಿಗಳು ಇದನ್ನು ನಂಬಲು ರೆಡಿಸ ಇಲ್ಲ. ಸೂಪರ್ ಸ್ಟಾರ್ ಅವರನ್ನು ತೆರೆಮೇಲೆ ನೋಡದೆ ಇರಲು ಅಭಿಮಾನಿಗಳಿಗೆ ಸಾಧ್ಯನೆ ಇಲ್ಲ. ಹಾಗಾಗಿ ಇದು ಸುಳ್ಳು ಸುದ್ದಿ ಎಂದು ಹೇಳುತ್ತಿದ್ದಾರೆ. ರಜನಿಕಾಂತ್ ಇಂಥ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಭಿಮಾನಿಗಳು ಮಾದಿಸುತ್ತಿದ್ದಾರೆ. ಅಲ್ಲದೆ ಇಂಥ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಸ್ವತಃ ರಜನಿಕಾಂತ್ ಅವರೇ ಹೇಳುವವರೆಗೂ ಇದನ್ನೆಲ್ಲ ನಂಬಲ್ಲ ಎಂದು ಹೇಳುತ್ತಿದ್ದಾರೆ. 

Lal Salaam: ರಜನಿಕಾಂತ್ ಪೋಸ್ಟರ್ ಹಿಗ್ಗಾಮುಗ್ಗಾ ಟ್ರೋಲ್; ನಿರ್ದೇಶನದಿಂದ ಮಗಳನ್ನು ತೆಗೆದಾಕಿ ಎಂದ ಫ್ಯಾನ್ಸ್

ನಟ ರಜನಿಕಾಂತ್ 171ನೇ ಸಿನಿಮಾಗೆ ಲೋಕೇಶ್ ಕಗರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದು ಮಿಸ್ಕಿನ್ ಹೇಳಿದ್ದಾರೆ. 72 ವರ್ಷ ನಟ ಸೂಪರ್‌ಸ್ಟಾರ್ ಅವರ ಮುಂದಿನ ಚಿತ್ರ ಜೈಲರ್ ಆಗಸ್ಟ್ 10ಕ್ಕೆ ರಿಲೀಸ್ ಆಗುತ್ತಿದೆ. ನೆಲ್ಸನ್ ದಿಲೀಪ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಮಗಳು ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಸಿನಿಮಾದಲ್ಲೂ ನಟಿಸಿದ್ದು ವಿಭಿನ್ನ ಗೆಟಪ್ ನಲ್ಲಿ ರಜನಿಕಾಂತ್ ಮೋಡಿ ಮಾಡಿದ್ದಾರೆ. 

click me!