ಕರಾಳ ಸತ್ಯ ಹೇಳುತ್ತೇನೆ, ಹಲವರು ಸ್ವಇಚ್ಛೆಯಿಂದ್ಲೇ ಹಾಸಿಗೆ ಹಂಚಿಕೊಳ್ತಾರೆ; ಗಾಯತ್ರಿ ಗುಪ್ತಾ!

By Shriram Bhat  |  First Published May 30, 2024, 10:57 AM IST

ಕನ್ನಡ ಸಿನಿಮಾ ಇಂಡಸ್ಟ್ರಿಯೇ ಇರಲಿ, ಅಥವಾ ಬಾಲಿವುಡ್, ತಮಿಳು, ತೆಲುಗು ಹಾಗು ಮಲಯಾಂ ಚಿತ್ರರಂಗವೇ ಇರಲಿ, ಅಲ್ಲೆಲ್ಲ ಈ ಕಾಸ್ಟಿಂಗ್ ಕೌಚ್ ಸದ್ದು ಮಾಡುತ್ತಲೇ ಇದೆ. ಅನೇಕರು ತಮ್ಮ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಕೆಲವರು ಅದನ್ನು ಅನುಭವಿಸಿ..


ಚಿತ್ರರಂಗದಲ್ಲಿ ನಡೆಯುವ ಕಾಸ್ಟಿಂಗ್ ಕೌಚ್‌ ಬಗ್ಗೆ ಈಗಾಗಲೇ ಬಹಳಷ್ದಟು ನಟಿಯರು ಮಾತನಾಡಿದ್ದಾರೆ. ಕೆಲವು ನಟರು, ನಿರ್ಮಾಪಕರು ಹಾಗೂ ನಿರ್ದೇಶಕರು ಚಾನ್ಸ್ ಕೊಡುವ ನೆಪದಲ್ಲಿ ತಮ್ಮ ಲೈಂಗಿಕ ಬಯಕೆಗಳನ್ನು ಪೂರೈಸಲು ನಟನಟಿಯರಿಗೆ ಹೇಳುವುದು ನಡೆದಿದೆ ಎನ್ನಲಾಗಿದೆ. ಅದು ನಿಜವಾಗಿಯೂ ಹಾಗೇ ಇದ್ದರೆ ಅದನ್ನು ಸಿನಿರಂಗಕ್ಕೆ ಅಂಟಿರುವ ಶಾಪವೆಂದೇ ಹೇಳಬೇಕಾಗುತ್ತದೆ. ಆದರೆ, ಅದು ಹಾಗೇ ಮಾತ್ರವೇ ಇದೆ ಎಂದೂ ಹೇಳಲು ಸಾಧ್ಯವಿಲ್ಲ ಎಂಬುದು ಇನ್ನೂ ಕೆಲವರ ಹೇಳಿಕೆಯಿಂದ ಅರ್ಥವಾಗುತ್ತದೆ. 

ಕನ್ನಡ ಸಿನಿಮಾ ಇಂಡಸ್ಟ್ರಿಯೇ ಇರಲಿ, ಅಥವಾ ಬಾಲಿವುಡ್, ತಮಿಳು, ತೆಲುಗು ಹಾಗು ಮಲಯಾಂ ಚಿತ್ರರಂಗವೇ ಇರಲಿ, ಅಲ್ಲೆಲ್ಲ ಈ ಕಾಸ್ಟಿಂಗ್ ಕೌಚ್ ಸದ್ದು ಮಾಡುತ್ತಲೇ ಇದೆ. ಅನೇಕರು ತಮ್ಮ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಕೆಲವರು ಅದನ್ನು ಅನುಭವಿಸಿ, ಇನ್ನೂ ಕೆಲವರು ಅದನ್ನು ಎದುರಿಸಿ ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ ಅಥವಾ ನಟನೆ ಬಿಟ್ಟು ತೆರಳಿದ್ದಾರೆ. ಹಾಗಿದ್ದರೆ, ನಿಜವಾಗಿಯೂ ಮನರಂಜನಾ ಉದ್ಯಮದಲ್ಲಿ ಏನು ನಡೆಯುತ್ತಿದೆ. ಈ ಬಗ್ಗೆ ಟಾಲಿವುಡ್ ನಟಿ ಗಾಯತ್ರಿ ಗುಪ್ತಾ ಮಾತನಾಡಿದ್ದಾರೆ. 

Tap to resize

Latest Videos

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ 'ಪುಷ್ಪ 2' ಕಪಲ್ ಸಾಂಗ್‌ ಬೊಂಬಾಟ್ ಅಂತಿದಾರೆ!

ಗಾಯತ್ರಿ ಅವರು ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ಫಿದಾ ಚಿತ್ರದಲ್ಲಿ ಅವರು ಸಾಯಿ ಪಲ್ಲವಿ ತಂಗಿಯಾಗಿ ನಟಿಸಿ ಗಮನ ಸೆಳೆದಿದ್ದಾರೆ. ಅಮರ್ ಅಕ್ಬರ್ ಅಂತೋನಿ, ಬುರ್ಕಕಥಾ, ಐಸ್‌ಕ್ರೀಂ 2, ದುಬೈ ರಿಟರ್ನ್, ಪ್ರೇಮಕಥಾ, ಸೀತಾ ಆನ್‌ ದಿ ರೋಡ್, ಕಿಸ್ ಕಿಸ್ ಬ್ಯಾಂಗ್ ಬ್ಯಾಂಗ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ವಲ್ಪ ಕಾಲದ ಗ್ಯಾಪ್ ಬಳಿಕ, ಇದೀಗ ಅವರು ದಯಾ ವೆಬ್ ಸರಣಿಯೊಂದರಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಅವರು ಶೋಷಣೆಗೆ ಒಳಗಾಗಿರುವ ಸಂತ್ರಸ್ತೆಯ ಪಾತ್ರದಲ್ಲಿ ನಟಿಸಿದ್ದಾರೆ.

ರವಿಚಂದ್ರನ್ 'ರಾಮಾಚಾರಿ'ಗೆ ಡೇಟ್ಸ್ ಕೊಡದೇ ಸತಾಯಿಸಿದ್ದರೇ ಮಾಲಾಶ್ರೀ?

ಅದೇ ಬೇಸ್‌ ಮೇಲೆ ಅವರು ಸೆನ್ಸೆಟಿವ್ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದಾರೆ. ನಾನು ಈ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಹೋರಾಟ ಮಾಡಿದಾಗ ಯಾರೂ ಅದನ್ನು ಬೆಂಬಲಿಸಿರಲಿಲ್ಲ. ಆದರೆ, ಬಳಿಕ ಹಲವರು ಈ ಅನುಭವ ಹೇಳಿಕೊಂಡಾಗ ಅದನ್ನು ಗಂಭೀರವಾಗಿ ಪರಿಗಣಿಸಿ ತೆಲುಗು ಉದ್ಯಮ ಅದಕ್ಕೆ ಸ್ಪಂದಿಸಿ ಸಮಿತಿ ರಚನೆ ಮಾಡಿದೆ. ಹಲವರಿಗೆ ಅದೊಂದು ವೇದಿಕೆಯಾಗಿ ಅವರು ತಮ್ಮ ಅಳಲು ತೋಡಿಕೊಂಡರು.

ಹಿಮಾಲಯಕ್ಕೆ ಹೊರಟ ರಜನಿಕಾಂತ್ ಮಾಧ್ಯಮಕ್ಕೆ ಹೇಳಿದ್ದೇನು? ಅಚ್ಚರಿ ಹೇಳಿಕೆ ವೈರಲ್!

ಆದರೆ, ಈಗಲೂ ಕಾಸ್ಟಿಂಗ್ ಕೌಚ್ ಇದೆ ಎಂದು ನಾನು ಬಲವಾಗಿ ಹೇಳುತ್ತೇನೆ. ಆದರೆ, ಬಹಳಷ್ಟು ಜನರು ಅದನ್ನು ಸ್ವಇಚ್ಛೆಯಿಂದಲೇ ಮಾಡುತ್ತಿದ್ದಾರೆ. ಕೆಲವರು ಅಗತ್ಯಕ್ಕಾಗಿ, ಇನ್ನೂ ಕೆಲವರು ಚಟಕ್ಕಾಗಿ ಮಾಡುತ್ತಿದ್ದಾರೆ. ಆದರೆ, ಅವರಲ್ಲೂ ಕೆಲವರು ಮುಗ್ಧ ಹುಡುಗಿಯರು ಇದ್ದಾರೆ' ಎಂದಿದ್ದಾರೆ ನಟಿ ಗಾಯತ್ರಿ. 

ಭೂಗತಲೋಕದ ಜತೆ ನಟಿ ನಗ್ಮಾಗೆ ಲಿಂಕ್; ಅಸಲಿಗೆ ಏನಾಗ್ತಿದೆ ಈ ಒಂಟಿ ನಟಿಯ ಕಥೆ?

ಇದೇ ವೇಳೆ 'ನಾನು ಖಿನ್ನತೆಗೆ ಒಳಗಾಗಿದ್ದೂ ಅಲ್ಲದೇ ಸದ್ಯ ಸಂಧಿವಾತ ರೋಗದಿಂದ ಬಳಲುತ್ತಿದ್ದೇನೆ. ನನ್ನ ಚಿಕಿತ್ಸೆಗೆ 12 ಲಕ್ಷ ರೂ. ಅಗತ್ಯವಿದೆ. ಆದರೆ, ಈಗ ನನ್ನ ಬಳಿ ಕೇವಲ 1.5 ಲಕ್ಷ ರೂಪಾಯಿ ಇದೆ. ಯಾರಾದರೂ ಸಹೃದಯವಂತ ದಾನಿಗಳು ತಮಗೆ ಸಹಾಯ ಮಾಡುವಂತೆ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ವಿನಂತಿಸಿಕೊಂಡಿದ್ದಾರೆ. ಆದರೆ, ಅವರು ಹೇಳಿರುವ ಕಾಸ್ಟಿಂಗ್ ಕೌಚ್ ಸಂಗತಿಯೀಗ ಟಾಲಿವುಡ್‌ ಸಿನಿರಂಗದಲ್ಲಿ ಭಾರೀ ಸೆನ್ಸೆಷನ್ ಕ್ರಿಯೇಟ್ ಮಾಡಿದೆ. 
 

click me!