ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಡಾನ್, ಡಾನ್ 2 ಚಿತ್ರೀಕರಣದ ಸಮಯದಲ್ಲಿ ಅತ್ಯಂತ ಆಪ್ತರಾಗಿದ್ದರು. ಅವರಿಬ್ಬರು ಡೇಟಿಂಗ್‌ನಲ್ಲಿದ್ದಾರೆಂದು ಸುದ್ದಿಯಾಯ್ತು. ಇದು ಗೌರಿ ಖಾನ್ ಕೋಪಕ್ಕೆ ಕಾರಣವಾಯ್ತು.
ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಕಳ್ಳರಂತೆ ವರ್ತಿಸುತ್ತಿದ್ದರು ಮತ್ತು ಇಡೀ ಉದ್ಯಮಕ್ಕೆ ಈ ವಿಚಾರ ತಿಳಿದಿತ್ತು. ಪ್ರಿಯಾಂಕಾ ಚೋಪ್ರಾ ಯಾವಾಗಲೂ ಶಾರುಖ್ ಬಗ್ಗೆ ಅದೇನೋ ನಿಕಟತೆಯನ್ನು ಇಟ್ಟುಕೊಂಡಿದ್ದರು. ಶಾರುಖ್ ಯಾವಾಗಲೂ ಪ್ರಿಯಾಂಕರನ್ನು ತನ್ನ ಹೃದಯಕ್ಕೆ ಹತ್ತಿರವಾಗಿ ಪರಿಗಣಿಸುತ್ತಾರೆ. ಆದರೆ ಇವರಿಬ್ಬರ ಸ್ನೇಹವು 2011ರ ಸುಮಾರಿಗೆ ಪತ್ರಿಕೆಯಲ್ಲಿ ಬೇರೆಯದೇ ಸುದ್ದಿಯಾಯ್ತು.
ವರದಿಯ ಪ್ರಕಾರ, ಡಾನ್ ಸರಣಿಯ ಶೂಟಿಂಗ್ ಸಮಯದಲ್ಲಿ ಶಾರುಖ್ ಮತ್ತು ಪ್ರಿಯಾಂಕಾ ಬಹಳ ಆತ್ಮೀಯರಾದರು. ನೈಟ್‌ಕ್ಲಬ್‌ಗಳು, ಪಾರ್ಟಿಗಳು ಮತ್ತು ಈವೆಂಟ್‌ಗಳಲ್ಲಿ ಹ್ಯಾಂಗ್‌ಔಟ್ ಮಾಡುತ್ತಿದ್ದರು. ಸುತ್ತಾಡುತ್ತುದ್ದರು. ಇತ್ತೀಚೆಗೆ, ಶಾರುಖ್ ಖಾನ್ ಅವರು ಪ್ರಿಯಾಂಕಾ ಚೋಪ್ರಾ ಅವರೊಂದಿಗಿನ ಸಂಬಂಧದ ಪ್ರಶ್ನೆಗಳ ಬಗ್ಗೆ ಮಾತನಾಡಿದ್ದಾರೆ
ವೀಡಿಯೊದಲ್ಲಿ, ಕತ್ರಿನಾ ಕೈಫ್ ಜೊತೆ ಕುಳಿತಿದ್ದ ಶಾರುಖ್ ಖಾನ್ ಪ್ರಶ್ನೆಗೆ ಉತ್ತರಿಸುತ್ತಾ, ತನ್ನೊಂದಿಗೆ ಕೆಲಸ ಮಾಡಿದ ಮಹಿಳೆಯನ್ನು ಪ್ರಶ್ನಿಸಲಾಗಿದೆ ಮತ್ತು ಆಕೆಗೆ ತೋರಿಸುವ ಗೌರವವನ್ನು ತೋರಿಸದಿರುವುದು ತನಗೆ ತೊಂದರೆಯಾಗಿದೆ ಎಂದು ಹೇಳಿದರು.
ನನ್ನೊಂದಿಗೆ ಕೆಲಸ ಮಾಡಿದ ಮಹಿಳೆಯನ್ನು ಜೊತೆಗೆ ನನ್ನನ್ನೂ ಪ್ರಶ್ನಿಸಲಾಗಿದೆ ಮತ್ತು ಎಲ್ಲೋ ಕೆಳಮಟ್ಟದಲ್ಲಿ ಕಾಣಲಾಗಿದೆ. ನಾನು ಅವಳಿಗೆ ಅಥವಾ ಎಲ್ಲಾ ಮಹಿಳೆಯರಿಗೆ ತೋರಿಸುವ ಗೌರವವನ್ನು ಆಕೆಗೆ ತೋರಿಸಲಾಗುತ್ತಿಲ್ಲ ಎಂಬ ವಿಚಾರವು ನನಗೆ ಗೊಂದಲದ ಸಂಗತಿಯಾಗಿದೆ. ಇದು ಸ್ವಲ್ಪ ಅಗೌರವ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಶಾರುಖ್ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದರು. ನಾನು ಈ ಬಗ್ಗೆ ಅತ್ಯಂತ ವಿಷಾದ ವ್ಯಕ್ತಪಡಿಸುತ್ತೇನೆ. ಕ್ಷಮಿಸಿ ಎಂದು. ಕ್ಷಮೆ ಎಂದರೆ ಇದು ನೇರವಾಗಿ ನಾನು ಮಾಡಿದ ಯಾವುದಕ್ಕೂ ಕಾರಣವಲ್ಲ ಆದರೆ ಆಕೆ ನನ್ನ ಸ್ನೇಹಿತೆ. ಅವಳು ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬಳು, ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದಾಳೆ ಮತ್ತು ಯಾವಾಗಲೂ ಇರುತ್ತಾಳೆ ಎಂದರು. ಆದರೆ ಇಷ್ಟೆಲ್ಲ ಹೇಳುವಾಗ ಪ್ರಿಯಾಂಕ ಹೆಸರು ಉಲ್ಲೇಖಿಸಿಲ್ಲ.
ಅದೇ ಸಂದರ್ಶನದಲ್ಲಿ, ಶಾರುಖ್ ಪ್ರಿಯಾಂಕಾ ಅವರ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೂಪರ್‌ಸ್ಟಾರ್ ಪ್ರಿಯಾಂಕಾ ಚೋಪ್ರಾರನ್ನು ಸೌಂದರ್ಯ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭೇಟಿಯಾದುದನ್ನು ನೆನಪಿಸಿಕೊಂಡರು, ತಮ್ಮ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ದಿನದಿಂದ ಸಾಧನೆಯನ್ನು ಪ್ರಾರಂಭಿಸಿದರು ಎಂದು ಹೇಳಿದ್ದರು.
ಅವಳು ಮಿಸ್ ಇಂಡಿಯಾ ಅಥವಾ ವಿಶ್ವ ಸುಂದರಿ ಕಿರೀಟವನ್ನು ಗೆದ್ದಾಗ ಪುಟ್ಟ ಹುಡುಗಿ, ನನಗೆ ನೆನಪಿಲ್ಲ. ನಾವು ಉತ್ತಮ ಸ್ನೇಹಿತರಾಗಿ ಪರದೆಯ ಮೇಲೆ ಕೆಲವು ಉತ್ತಮ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ನಾನು ಇನ್ನು ಯೋಚಿಸುವುದು ಅತ್ಯಂತ ದುರದೃಷ್ಟಕರ ಮತ್ತು ದುಃಖಕರವಾಗಿದೆ. ನಿಮಗೆ ಗೊತ್ತಾ, ಸ್ನೇಹವನ್ನು ಅಪವಿತ್ರಗೊಳಿಸಲಾಗುತ್ತದೆ ಎಂದಿದ್ದಾರೆ.
ಇವರಿಬ್ಬರೂ ಉತ್ತಮ ಸ್ನೇಹಿತರೆಂದು ಸುತ್ತುತ್ತಿದ್ದಾಗ ಶಾರುಖ್ ಮತ್ತು ಪತ್ನಿ ಗೌರಿ ಖಾನ್ ಗೆ ವಿಚಾರ ಗೊತ್ತಾಯ್ತು. 2013 ರಲ್ಲಿ ಪ್ರಿಯಾಂಕ ಮತ್ತು ಶಾರುಖ್ ಸೀಕ್ರೆಟ್ ಆಗಿ ಮದುವೆಯಾಗಿದ್ದಾರೆಂದೇ ಸುದ್ದಿಯಾಯ್ತು. ಹೀಗಾಗಿ ಶಾರುಖ್ ಖಾನ್ ಗೆ ಪತ್ನಿ ಗೌರಿ ವಾರ್ನ್ ಮಾಡಿ ಇನ್ನೆಂದೂ ಆಕೆಯೊಂದಿಗೆ ನಟಿಸಬಾರದು ಎಂದು ಷರತ್ತು ವಿಧಿಸಿದರು. ಮಾತ್ರವಲ್ಲ ಶಾರುಕ್ ಪತ್ನಿಯ ಕ್ಲೋಸ್ ಪ್ರೆಂಡ್ಸ್ ಗಳಾದ ಕರಣ್ ಜೋಹಾರ್ ಮತ್ತು ಇತರರು ಪ್ರಿಯಾಂಕರನ್ನು ಸಂಪೂರ್ಣವಾಗಿ ದೂರ ಇಟ್ಟರು. ಇದಾದ ನಂತರ ಪ್ರಿಯಾಂಕ ಮತ್ತು ಶಾರುಖ್ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಮತ್ತೆಂದೂ ಜೊತೆಯಾಗಿ ನಟಿಸಿಲ್ಲ.