ರಾಷ್ಟ್ರಪ್ರಶಸ್ತಿ ಗೆದ್ದ'ಡೊಳ್ಳು' ಸಿನಿಮಾ ವಿರುದ್ಧ ಆಸ್ಕರ್ ವಿಜೇತ ರಸೂಲ್ ಪೂಕುಟ್ಟಿ ಅಸಮಾಧಾನ; ಕಾರಣವೇನು?

Published : Jul 24, 2022, 11:08 AM IST
ರಾಷ್ಟ್ರಪ್ರಶಸ್ತಿ ಗೆದ್ದ'ಡೊಳ್ಳು' ಸಿನಿಮಾ ವಿರುದ್ಧ ಆಸ್ಕರ್ ವಿಜೇತ ರಸೂಲ್ ಪೂಕುಟ್ಟಿ ಅಸಮಾಧಾನ; ಕಾರಣವೇನು?

ಸಾರಾಂಶ

ಕನ್ನಡದ ಡೊಳ್ಳು ಸಿನಿಮಾಗೆ ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್ ವಿಭಾಗದಲ್ಲಿ ಪ್ರಶಸ್ತಿ ನೀಡಿದ ಬಗ್ಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವಿಜೇತ ರಸೂಲ್ ಪೂಕುಟ್ಟಿ ಅಸಮಾಧಾನ ಹೊರಹಾಕಿದ್ದಾರೆ. ಪ್ರಶಸ್ತಿ ಅನೌನ್ಸ್ ಆದ ಬೆನ್ನಲ್ಲೇ ರಸೂಲ್ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರಹಾಕಿದ್ದಾರೆ. 

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಟಕವಾಗಿದ್ದು ಕನ್ನಡಕ್ಕೆ ಈ ನಾಲ್ಕು ಪ್ರಶಸ್ತಿ ಲಭಿಸಿದೆ. ಕನ್ನಡ ಡೊಳ್ಳು ಸಿನಿಮಾ ಎರಡು ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಸ್ಯಾಂಡಲ್ ವುಡ್‌ನ ಯಶಸ್ವಿ ಸಿನಿಮಾ ನಿರ್ದೇಶಕ ಪವನ್ ಒಡೆಯರ್ ನಿರ್ಮಾಣದಲ್ಲಿ ಬಂದ ಮೊದಲ ಕನ್ನಡ ಸಿನಿಮಾ ಡೊಳ್ಳು ಅತ್ತ್ಯುತ್ತಮ ಪ್ರಾದೇಶಿಕ ಕನ್ನಡ ಸಿನಿಮಾ ಮತ್ತು ಅತ್ತ್ಯುತ್ತಮ ಆಡಿಯೋಗ್ರಫಿ (ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್) ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಅತ್ತ್ಯುತ್ತಮ ಆಡಿಯೋಗ್ರಫಿಗೆ ಜೋಬಿನ್ ಜಯನ್ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸುನಿಲ್ ಪುರಾಣಿಕ್ ಸಾರಥ್ಯದಲ್ಲಿ ಬಂದ ಡೊಳ್ಳು ಸಿನಿಮಾ ಮೂಡಿಬಂದಿದೆ. ಎರಡು ಪ್ರಶಸ್ತಿ ಗೆದ್ದು ಸಂಭ್ರಮದಲ್ಲಿರುವ ಡೊಳ್ಳು ಸಿನಿಮಾತಂಡಕ್ಕೆ ಅಭಿಮಾನಿಗಳು ಮತ್ತು ಸಿನಿ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಜಾಲಾತಣದಲ್ಲಿ ವಿಶ್ ಮಾಡುತ್ತಿದ್ದಾರೆ. ಈ ನಡುವೆ ಡೊಳ್ಳು ಸಿನಿಮಾದ ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವುದು ಅನೇಕರಿಕೆ ಅಚ್ಚರಿ ಮೂಡಿಸಿದೆ. 

 ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್ ವಿಭಾಗದಲ್ಲಿ ಪ್ರಶಸ್ತಿ ನೀಡಿದ ಬಗ್ಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವಿಜೇತ ರಸೂಲ್ ಪೂಕುಟ್ಟಿ ಅಸಮಾಧಾನ ಹೊರಹಾಕಿದ್ದಾರೆ. ಪ್ರಶಸ್ತಿ ಅನೌನ್ಸ್ ಆದ ಬೆನ್ನಲ್ಲೇ ರಸೂಲ್ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಸೌಂಡ್ ಕ್ಷೇತ್ರದ ತಜ್ಞರಾಗಿರುವ ರಸೂಲ್ ಡೊಳ್ಳು ಸಿನಿಮಾಗೆ ತಪ್ಪಾಗಿ ಪ್ರಶಸ್ತಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದು ಸಿಂಕ್ ಸೌಂಡ್ ಫಿಲ್ಮ್ ಅಲ್ಲ ಆದರೂ ಹೇಗೆ ಪ್ರಶಸ್ತಿ ಕೊಟ್ಟಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ರಸೂಲ್, 'ಸಿಂಕ್ ಸೌಂಡ್ ರೆಕಾರ್ಡಿಂಗ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗೆದ್ದಿರುವ ಸಿನಿಮಾ ಸಿಂಕ್ ಸೌಂಡ್ ಸಿನಿಮಾ ಅಲ್ಲ. ಅದು ಡಬ್ಬಿಂಗ್ ಸಿನಿಮಾವಾಗಿದೆ ಎಂದು ಚಿತ್ರದ ಮೂಲ ಸೌಂಡ್ ಡಿಸೈನರ್ ನಿತಿನ್ ಲುಕೋಸ್ ದೃಢಪಡಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ. 

68th National Film Awards: ಕನ್ನಡಕ್ಕೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಗರಿ

ರಸೂಲ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸೌಂಡ್ ಡಿಸೈನರ್ ನಿತಿನ್,  'ರಾಷ್ಟ್ರ ಪ್ರಶಸ್ತಿ ಆಯ್ಕೆ ಮತ್ತು ಅದರ ಕಾರ್ಯವಿಧಾನಗಳ ಹಿಂದೆ ಏನು ನಡೆಯುತ್ತಿದೆ ಎಂದು ನನಗೆ ತಿಳಿದಿಲ್ಲ, ಆದರೆ ಡಬ್ ಮತ್ತು ಸಿಂಕ್ ಸೌಂಡ್ ಫಿಲ್ಮ್ ಅನ್ನು ಪ್ರತ್ಯೇಕಿಸಲು ಸಾಧ್ಯವಾಗದ ತೀರ್ಪುಗಾರರ ತೀರ್ಪಿನ ಬಗ್ಗೆ ನನಗೆ ಕರುಣೆ ಇದೆ. ಪರಿಣಿತರು ಎಂದು ಹೇಳಿಕೊಳ್ಳುತ್ತಿದ್ದಾರೆ' ಎಂದು ಹೇಳಿದ್ದಾರೆ. 

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಉತ್ತಮ ನಟ ಸೂರ್ಯ, ಅಜಯ್ ದೇವಗನ್- ನಟಿ ಅಪರ್ಣಾ ಬಾಲಮುರಳಿ

ಇದೀಗ ಈ ವಿವಾದದ ಬಗ್ಗೆ ನಿರ್ದೇಶಕ ಸುನಿಲ್ ಪರಾಣಿಕ್ ಪ್ರತಿಕ್ರಿಯೆ ನೀಡಿದ್ದಾರೆ. ರಸೂಲ್ ಪೂಕುಟ್ಟಿ ಅವರ ಸಾಧನೆ ಬಗ್ಗೆ ಗೌರವಿದೆ ಎಂದಿರುವ ಸುನಿಲ್, 'ನಮ್ಮ ಚಿತ್ರವು ಸಿಂಕ್ ಸೌಂಡ್ ಫಿಲ್ಮ್ ಎಂದು ನಾವು ಎಲ್ಲೂ ಹೇಳಿಕೊಂಡಿಲ್ಲ. ಅರ್ಜಿ ನಮೂನೆಯಲ್ಲೂ ಸಿಂಕ್ ಸೌಂಡ್ ಎಂಬ ಪದದ ಉಲ್ಲೇಖವಿಲ್ಲ. ಈ ವಿಭಾಗದ ಅಡಿಯಲ್ಲಿ ನಮಗೆ ಏಕೆ ಪ್ರಶಸ್ತಿ ನೀಡಲಾಗಿದೆ ಎಂದು ನಮಗೂ ಸ್ವಲ್ಪ ಗೊಂದಲವಿದೆ. ಆದರೆ ಡೊಳ್ಳು ಧ್ವನಿಯನ್ನು ಮರುಸೃಷ್ಟಿಸುವುದು ಎಷ್ಟು ಕಷ್ಟವಾಗಿತ್ತು, ಎಷ್ಟು ಶ್ರಮವಿತ್ತು ಎಂಬುದನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇಡೀ ಚಿತ್ರದಲ್ಲಿ ನಾವು ಮೂರ್ನಾಲ್ಕು ಪ್ರದರ್ಶನಗಳನ್ನು ಹೊಂದಿದ್ದೇವೆ. ಇದನ್ನು ಸ್ಟುಡಿಯೋ ಸೆಟಪ್‌ನಲ್ಲಿ ಮರುಸೃಷ್ಟಿಸಿಲ್ಲ. ಎಂಟರಿಂದ ಹತ್ತು ಡೊಳ್ಳು ಕಲಾವಿದರು ಪ್ರತಿ ಫ್ರೇಮ್ ಮತ್ತು ಪ್ರದರ್ಶನದ ಪ್ರತಿ ಬೀಟ್ ಅನ್ನು ಮೈದಾನದಲ್ಲಿ  ಮರುಸೃಷ್ಟಿಸಿದ್ದೇವೆ. ನಮಗೆ ಪ್ರಶಸ್ತಿ ನೀಡಲು ನಿರ್ಧರಿಸುವ ಮೊದಲು ತೀರ್ಪುಗಾರರ ಸದಸ್ಯರು ಬಹುಶಃ ಇದನ್ನೆಲ್ಲ ಪರಿಗಣಿಸಿದ್ದರು. ಆದಾಗ್ಯೂ, ನಮ್ಮದು ಸಿಂಕ್ ಸೌಂಡ್ ಫಿಲ್ಮ್ ಎಂದು ನಾವು ಎಲ್ಲೂ ಮತ್ತು ಎಂದಿಗೂ ಹೇಳಿಕೊಳ್ಳುವುದಿಲ್ಲ ಎಂದರು. 

ಈ ಬಗ್ಗೆ ರಾಷ್ಟ್ರೀಯ ಪ್ರಶಸ್ತಿ ಸಮಿತಿಯ ಅಧಿಕಾರಿಗಳು ವಿವಾದವನ್ನು ಪರಿಹರಿಸಲು ಮತ್ತು ಈ ಗೊಂದಲವನ್ನು ನಿವಾರಿಸಲು ಇನ್ನೂ ಮುಂದಾಗಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?