ಇಂದು ಬಾಲಿವುಡ್ ನಟಿ ಟಬು ಅವರ ಹುಟ್ಟಿದ ದಿನ. ಅವಿವಾಹಿತೆಯೇ ಆಗಿ ಉಳಿದಿರುವ ನಟಿ ಈ ಕುರಿತು ಹೇಳಿದ್ದೇನು?
ಬಾಲಿವುಡ್‌ನ ಎವರ್‌ಗ್ರೀನ್ ನಟಿಯರಲ್ಲಿ ಒಬ್ಬರು ಟಬು. ಇಂದು ಅವರು 52ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ವಯಸ್ಸು ಇಷ್ಟಾದರೂ ಇಂದಿಗೂ ಅವರಿಗೆ ಬಾಲಿವುಡ್‌ನಲ್ಲಿ ಸಕತ್ ಡಿಮ್ಯಾಂಡ್ ಇದೆ, ಮಾತ್ರವಲ್ಲದೇ ಯಾವ ನಾಯಕನ ತಾಯಿಯಾಗಿಯೂ ನಟಿಸುವ ಕಾಲ ಬಂದಿಲ್ಲ, ನಾಯಕಿಯಾಗಿಯೇ ನಟಿಸುತ್ತಿರುವ ಹೆಮ್ಮೆ ಇವರದ್ದು. ದೃಶ್ಯಂ 2 ರಲ್ಲಿ ತಮ್ಮ ಮಗನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗುವ ಪ್ರತಿಸ್ಪರ್ಧಿಯಾಗಿ ಅವರು ಕಾಣಿಸಿಕೊಂಡರೆ ಭೂಲ್ ಭುಲೈಯಾ 2 ರಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು, ಎರಡೂ ಪಾತ್ರಗಳು ಪರಸ್ಪರ ಭಿನ್ನವಾಗಿವೆ. ಹೀಗೆ ಎಲ್ಲಾ ಪಾತ್ರಗಳಲ್ಲಿ ಟಬು ಅವರದ್ದು ಎತ್ತಿದ ಕೈ.
ಇಂತಿಪ್ಪ ನಟಿ ಇಂದಿಗೂ ಸಿಂಗಲ್. ಮದುವೆಯಾಗುವ ಗೋಜಿಗೆ ಹೋಗಲಿಲ್ಲ, ಅದರ ಆಸೆಯೂ ಅವರಿಗೆ ಇಲ್ಲವಂತೆ. ಸಿಂಗಲ್ ಆಗಿರುವುದನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಟಬುವಿಗೆ ಇಂದಿಗೂ ಖುಷಿಯಿದೆ. ಅಂದಹಾಗೆ ನಟಿ ಟಬು ಅವರ ಪೂರ್ಣ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ. ಇವರ ಚಿಕ್ಕಮ್ಮ ಶಬಾನಾ ಅಜ್ಮಿ ಬಾಲಿವುಡ್‌ನ ಪ್ರಸಿದ್ಧ ನಟಿ ಎನ್ನುವುದನ್ನು ಬಿಟ್ಟರೆ, ಯಾವುದೇ ಚಿತ್ರರಂಗದ ಬ್ಯಾಕ್‌ಗ್ರೌಂಡ್ ಇಲ್ಲದ ನಟಿ ಟಬು. ಹೈದರಾಬಾದ್‌ನಲ್ಲಿ ಹುಟ್ಟಿದ್ದ ಟಬು, ವಿದ್ಯಾಭ್ಯಾಸಕ್ಕೆಂದು ಮುಂಬೈಗೆ ಬಂದವರು. ಇಲ್ಲಿ ಅವರು ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಪಡೆದರು.
ಪ್ರಕಾಶ್ ರಾಜ್ ಮಾನಸಿಕ ಆರೋಗ್ಯಕ್ಕಾಗಿ ಕಂಗನಾ ಫ್ಯಾನ್ಸ್ ಕ್ಲಬ್ ಸೇರಬೇಕಂತೆ! ನಟಿ ಟಾಂಗ್
ಅಲ್ಲಿಯೇ ಅವರಿಗೆ ಬಣ್ಣದ ಲೋಕದ ನಂಟು ಅಂಟಿತು. 1980 ರಲ್ಲಿ 'ಬಜಾರ್' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಇದಾದ ನಂತರ 14ನೇ ವಯಸ್ಸಿನಲ್ಲಿ ‘ಹಮ್ ನೌಜವಾನ್’ ಚಿತ್ರದಲ್ಲಿ ದೇವಾನಂದ್ ಅವರ ಮಗಳಾಗಿ ಕಾಣಿಸಿಕೊಂಡರು.ನಂತರ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬೋನಿ ಕಪೂರ್ ನಿರ್ಮಾಣದ ಚಿತ್ರ 'ಪ್ರೇಮ್' ಮೂಲಕ. ಸಂಜಯ್ ಕಪೂರ್ ಈ ಚಿತ್ರದ ನಾಯಕ. ನಂತರ ಇವರಿಬ್ಬರ ಸಂಬಂಧದ ಬಗ್ಗೆ ಸಾಕಷ್ಟು ಗುಸುಗುಸು ಶುರುವಾಗಿತ್ತು. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ.
ಇದಾದ ಬಳಿಕ ನಟಿ 'ಕಾಲಾಪಾನಿ', 'ಮಾಚಿಸ್', 'ಚಾಂದಿನಿ ಬಾರ್', 'ಮಕ್ಬೂಲ್' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದರು. ನಟಿ ಮದುವೆಯಾಗಲು ಇಚ್ಛೆ ಪಡಲಿಲ್ಲವಾದರೂ ಇವರ ಹೆಸರು ಹಲವು ಸಿನಿ ದಿಗ್ಗಜರ ಜೊತೆ ಥಳಕು ಹಾಕಿಕೊಂಡಿತ್ತು. ಮೊದಲು ಸಂಜಯ್ ಕಪೂರ್ ಅದಾದ ಬಳಿಕ, ನಿರ್ದೇಶಕ, ವಿವಾಹಿತ ಸಾಜಿದ್ ನಾಡಿಯಾಡ್ವಾಲಾ ಅವರೊಂದಿಗೆ ಕೇಳಿ ಬಂತು. ಆದರೆ ಇದು ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಬಳಿಕ ಟಬು ಹೆಸರು ಸೌತ್ ಸ್ಟಾರ್ ನಾಗಾರ್ಜುನ ಜೊತೆ ಥಳಕು ಹಾಕಿಕೊಂಡಿತ್ತು. ಸುಮಾರು 10 ವರ್ಷಗಳ ಕಾಲ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಆದರೆ ನಾಗಾರ್ಜುನ ಮದುವೆ ಬೇರೆಯವರ ಜೊತೆ ನಡೆದಾಗ ಟಬು ಮತ್ತೆ ಒಂಟಿಯಾದರು.
ಬಳಿಕ ಟಬು ಮದುವೆಯ ಬಗ್ಗೆ ಯೋಚನೆಯನ್ನೂ ಮಾಡಲಿಲ್ಲ. ಒಂಟಿಯಾಗಿರುವುದಕ್ಕೆ ತಮಗೆ ಖುಷಿ ಇದೆ ಎಂದಿರುವ ನಟಿ, ನಾನು ಒಂದು ವೇಳೆ ಮದುವೆಯಾಗಿದ್ದರೆ ಎಲ್ಲವನ್ನೂ ತ್ಯಜಿಸಬೇಕಿತ್ತು. ಕೆಲವು ನಟಿಯರು ಮದುವೆಯಾದ ಬಳಿಕ ಗಂಡ, ಸಂಸಾರ ಎಂದು ನಟನಾವೃತ್ತಿಯನ್ನು ಅನಿವಾರ್ಯವಾಗಿ ತೊರೆದಿದ್ದಾರೆ. ಇಂಥ ಅನ್ಯಾಯ ನನಗೂ ಆಗುತ್ತಿತ್ತು ಎಂದಿರುವನ ನಟಿ, ನನ್ನ ನಟನಾ ವೃತ್ತಿಯೇ ನನಗೆ ಜೀವ. ಜಗತ್ತನ್ನು ಸುತ್ತುವ ಬಯಕೆ ಇದೆ. ಆದರೆ ಒಬ್ಬ ವ್ಯಕ್ತಿಗಾಗಿ ಇವೆಲ್ಲವನ್ನೂ ತ್ಯಜಿಸುವ ಇಚ್ಛೆ ನನಗಿಲ್ಲ ಎಂದಿದ್ದಾರೆ. ಒಂಟಿತನದ ಜೀವನವನ್ನು ಸುಲಭವಾಗಿ ನಿಭಾಯಿಸಬಹುದು, ಆದರೆ ದುರ್ದೈವವಶಾತ್ ತಪ್ಪು ಸಂಗಾತಿ ಆಯ್ಕೆ ಮಾಡಿಕೊಂಡರೆ ಅದಕ್ಕಿಂತ ಭಯಾನಕ ಮತ್ತೊಂದಿಲ್ಲ. ಆದ್ದರಿಂದ ಒಂಟಿ ಜೀವನವೇ ಲೇಸು ಎಂದಿದ್ದಾರೆ. ಹಿಂದೊಮ್ಮೆ ನಟಿ, ಮದುವೆಯಿಲ್ಲದೆ ಮಗುವನ್ನು ಹೊಂದುವ ಬಗ್ಗೆ ಯೋಚಿಸಿದ್ದೇನೆ ಎಂದಿದ್ದರು.
ಶ್ರೀಕೃಷ್ಣ ದಯೆ ತೋರಿದರೆ.... ರಾಜಕೀಯ ಎಂಟ್ರಿಗೆ ನಟಿ ಕಂಗನಾ ರಣಾವತ್ ಕೊಟ್ರು ದೊಡ್ಡ ಸುಳಿವು!