* ಆರ್ಯನ್ ಸೇರಿ ಇತರರಿಂದ ವ್ಯಾಪಾರಕ್ಕಾಗಿ ಡ್ರಗ್ಸ್ ಸಂಗ್ರಹಕ್ಕೆ ಸಾಕ್ಷ್ಯ ಇಲ್ಲ
* ಆರ್ಯನ್‌ನಿಂದ ವ್ಯಾಪಾರಕ್ಕಾಗಿ ಡ್ರಗ್ಸ್ ಸಂಗ್ರಹಕ್ಕೆ ಸಾಕ್ಷ್ಯ ಇಲ್ಲ!
* ಇವರ ಮಧ್ಯೆ ಸಂಚು ನಡೆದಿದೆ ಎಂಬುದಕ್ಕೂ ಪುರಾವೆಯಿಲ್ಲ
* ಬಾಂಬೆ ಹೈಕೋರ್ಟ್‌ನ ಜಾಮೀನು ಆದೇಶದಲ್ಲಿ ಉಲ್ಲೇಖ
ಮುಂಬೈ(ನ.21): ಮಾದಕ ದ್ರವ್ಯ ಪ್ರಕರಣ ಸಂಬಂಧ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Shah Rukh Khan Son Aryan Khan) , ಅರ್ಬಾಜ್ ಮರ್ಚಂಟ್ ಮತ್ತು ಮುನ್‌ಮೂನ್ ಧಮೇಚಾ ಅವರಿಗೆ ಜಾಮೀನು ನೀಡಿದ್ದ ಬಾಂಬೆ ಹೈಕೋರ್ಟ್ (Bombay High Court), ಅದರ ವಿಸ್ತೃತ ವಿವರಣೆಯನ್ನು ಶನಿವಾರ ಬಿಡುಗಡೆ ಮಾಡಿದೆ. 14 ಪುಟಗಳ ಈ ಜಾಮೀನಿನ ಆದೇಶದಲ್ಲಿ ಆರ್ಯನ್ ಖಾನ್ ಸೇರಿ ಮೂವರು ವ್ಯಾಪಾರಕ್ಕಾಗಿ ಡ್ರಗ್ಸ್ ಸಂಗ್ರಹಿಸಿದ್ದಾರೆ ಎಂಬ ಆರೋಪಕ್ಕೆ ಸಾಕ್ಷ್ಯ ಇಲ್ಲ ಎಂದು ಹೇಳಿದೆ.
ಅಲ್ಲದೆ ಮಾದಕ ವಸ್ತು ಪ್ರಕರಣದಲ್ಲಿ ಆರ್ಯನ್, ಮುನ್‌ಮೂನ್ ಧಮೇಚಾ ಮತ್ತು ಅರ್ಬಾಜ್ ಮರ್ಚಂಟ್ ಮಧ್ಯೆ ಸಂಚು ನಡೆದಿದೆ ಎಂಬುದಕ್ಕೂ ಪೂರಕ ಸಾಕ್ಷಿ ಇಲ್ಲ ಎಂದು ಜಾಮೀನು (Bail) ಆದೇಶದಲ್ಲಿ ಉಲ್ಲೇಖಿಸಲಾಗಿದೆ.
undefined
‘ಈ ಮೂವರು ಒಂದೇ ಕ್ರೂಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಕಾರಣಕ್ಕೆ ಅವರು ವ್ಯಾಪಾರದ ಉದ್ದೇಶಕ್ಕೆ ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡಿದ್ದರು ಎಂದು ಹೇಳಲಾಗದು. ಅಲ್ಲದೆ ಈ ಮೂವರ ವಾಟ್ಸಾಪ್ ಚಾಟಿಂಗ್‌ನಲ್ಲೂ ಆಕ್ಷೇಪಾರ್ಹ ಅಂಶಗಳು ಕಂಡುಬಂದಿಲ್ಲ’ ಎಂದು ನ್ಯಾಯಾಲಯ ಹೇಳಿದೆ.
ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ (Rave Party) ಪ್ರಕರಣದಲ್ಲಿ ಅ.2ರಂದು ಬಂಧನವಾಗಿದ್ದ ಆರ್ಯನ್ ಖಾನ್ ಸೇರಿ ಮೂವರಿಗೆ ಅ.28ರಂದು ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.
ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಪಿ ಕೈವಾಡ: ಬಿಜೆಪಿ
ಮಹಾರಾಷ್ಟ್ರದಲ್ಲಿ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದ್ದು, ಇದೀಗ ಎನ್‌ಸಿಪಿ ನಾಯಕರ ಮೇಲೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.
‘ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸೇರಿದಂತೆ ಎನ್‌ಸಿಪಿ ನಾಯಕರ ಆಪ್ತನಾದ ಸುನೀಲ್ ಪಾಟೀಲನೇ ಮಾಸ್ಟರ್‌ಮೈಂಡ್’ ಎಂದು ಬಿಜೆಪಿ ನಾಯಕ ಮೋಹಿತ್ ಭಾರತೀಯ ಆರೋಪಿಸಿದ್ದಾರೆ.
‘ಪ್ರಕರಣದ ಸಾಕ್ಷಿ ಹಾಗೂ ಕೇಸು ಮುಚ್ಚಿ ಹಾಕಲಿ ಶಾರುಖ್ ಕಡೆಯಿಂದ 50 ಲಕ್ಷ ರು. ಪೀಕಿದ ಆರೋಪ ಹೊತ್ತಿರುವ ಕಿರಣ್ ಗೋಸಾವಿಯು ಸುನೀಲ್ ಪಾಟೀಲನ ಆಪ್ತ. ಕ್ರೂಸ್ ಮೇಲೆ ಎನ್‌ಸಿಬಿ ದಾಳಿ ನಡೆಯುವ ಮೊದಲು ಅ.1ರವರೆಗೂ ಸುನೀಲ್ ಪಾಟೀಲನು ಗೋಸಾವಿ ಸಂಪರ್ಕದಲ್ಲಿದ್ದ, ಈ ಎಲ್ಲ ಪಿತೂರಿಯ ಸೂತ್ರಧಾರ ಅವನೇ. ಕೇಸು ಮುಚ್ಚಿಹಾಕಲು ಶಾರುಖ್ ಖಾನ್‌ರಿಂದ ಹಣ ಪೀಕಲು ಇವರು ಈ ಷಡ್ಯಂತ್ರ ರೂಪಿಸಿದರಬಹುದು’ ಎಂದು ಮೋಹಿತ್ ಆರೋಪಿಾ್ದರೆ.