Manike mage hithe; ಮನಿಕಾ ಮಗೆ ಹಿತೆ ಹಿಂದಿ ವರ್ಶನ್ ಹಾಡಿದ ಮಾಜಿ ಸಿಎಂ ಫಡ್ನವಿಸ್ ಪತ್ನಿ, ವಿಡಿಯೋ ವೈರಲ್!

By Suvarna NewsFirst Published Nov 21, 2021, 2:04 AM IST
Highlights
  • ಅತ್ಯಂತ ಜನಪ್ರಿಯವಾಗಿದೆ ಶ್ರೀಲಂಕಾದ ಮನಿಕಾ ಮಗೆ ಹಿತೆ ಹಾಡು
  • ಸಿಂಹಳಿ ಭಾಷೆಯಲ್ಲಿರುವ ಈ ಹಾಡು ಭಾರತದಲ್ಲಿ ಸೂಪರ್ ಹಿಟ್
  • ಹಿಂದಿ ಭಾಷೆಯಲ್ಲಿ ಸೂಪರ್ ಹಾಡು ಹಾಡಿದ ಫಡ್ನವಿಸ್ ಪತ್ನಿ

ಮುಂಬೈ(ನ.21): ಮನಿಕಾ ಮಗೆ ಹಿತೆ ಹಾಡು ಕೇಳದವರ ಸಂಖ್ಯೆ ಕಡಿಮೆ. ಶ್ರೀಲಂಕಾದ ಸಿಂಹಳಿ ಭಾಷೆಯಲ್ಲಿರುವ ಈ ಹಾಡು ಬಹುತೇಕ ಭಾರತೀಯರಿಗೆ ಕಂಠಪಾಠ. ಅಷ್ಟರ ಮಟ್ಟಿಗೆ ಲಂಕಾ ಹಾಡು ಭಾರತದಲ್ಲಿ ಮೋಡಿ ಮಾಡಿದೆ. ಈ ಹಾಡು ಭಾರತದ ಹಲವು ಭಾಷೆಗಳಲ್ಲಿ ಹೊರಬಂದಿದೆ. ಇದೀಗ ಹಿಂದಿ ವರ್ಶನ್ ಮನಿಕ ಮಗೆ ಹಿತೆ(manike mage hithe) ಹಾಡನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(devendra fadnavis) ಪತ್ನಿ ಅಮೃತ ಫಡ್ನವಿಸ್(Amruta Fadnavis) ಹಾಡಿದ್ದಾರೆ. ಸಣ್ಣ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಹಂಚಿಕೊಂಡಿದ್ದಾರೆ. ಇದು ಭಾರಿ ವೈರಲ್ ಆಗಿದೆ.

ವೃತ್ತಿಯಲ್ಲಿ ಬ್ಯಾಂಕಿಂಗ್(Bank) ಉದ್ಯೋಗಿಯಾಗಿರುವ ಅಮೃತ ಫಡ್ನವಿಸ್, ಗಾಯಕಿಯೂ(Singer) ಹೌದು. ಇನ್ನು ಕೇಳಬೇಕೆ. ಅತ್ಯಂತ ಸುಂದರ ಹಾಡನ್ನು ಹಿಂದಿಯಲ್ಲಿ ಹಾಡಿದ್ದಾರೆ. ಪ್ರೋಫೆಶನಲ್ ಸಿಂಗರ್‌ ಹಾಗೂ ನಟಿಯರನ್ನೇ ಮೀರಿಸುವ ಪರ್ಫಾಮೆನ್ಸ್ ನೀಡಿದ್ದಾರೆ. ದೇವೇಂದ್ರ ಫಡ್ನವಿಸ್ ಪತ್ನಿ ಅಮೃತ ಫಡ್ನಿವಿಸ್ ಹಾಡಿದ ಹಿಂದಿ ವರ್ಶನ್ ಮನಿಕ ಮಗೆ ಹಿತೆ ಹಾಡು ಇದೀಗ ಸಾಮಾಜಿತ ಜಾಲತಾಣಧಲ್ಲಿ ಭಾರಿ ಸದ್ದು ಮಾಡುತ್ತಿದೆ.

ಭೂಗತ ನಂಟಿನ ವ್ಯಕ್ತಿಗಳ ಜತೆ ನವಾಬ್‌ ಡೀಲ್‌: ಫಡ್ನವೀಸ್‌

ಅಮೃತ ಫಡ್ನವಿಸ್ ನವೆಂಬರ್ 19 ರಂದು ಇನ್‌ಸ್ಟಾಗ್ರಾಂ ಮೂಲಕ ಈ ಹಾಡಿನ ತುಣುಕನ್ನು ಪೋಸ್ಟ್ ಮಾಡಿದ್ದಾರೆ. ಕ್ಷಣಾರ್ಧದಲ್ಲಿ ಈ ಹಾಡು ವೈರಲ್ ಆಗಿದೆ. ಲೈಕ್ಸ್ ಕಮೆಂಟ್‌ಗಳಿಂದ ತುಂಬಿ ಹೋಗಿದೆ. ಹಿಂದಿ ವರ್ಶನ್ ಹಾಡಿರುವುದು ಮಾತ್ರವಲ್ಲ, ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಮೃತ, ಸದ್ಯ ರಾಜಕೀಯ ಒತ್ತಡ ಬಿಸಿ ಬಿಸಿ ವಾತಾವರಣವವನ್ನು ಈ ಹಾಡನ್ನು ಕೇಳುತ್ತಾ ತಣ್ಣಗಾಗಿಸಿ ಎಂದು ದೇವೇಂದ್ರ ಫಡ್ನವಿಸ್ ಪತ್ನಿ ಬರೆದುಕೊಂಡಿದ್ದಾರೆ.

 

1.51 ನಿಮಿಷಗಳ ಹಾಡಿನ ತುಣುಕು ಭಾರಿ ಸದ್ದು ಮಾಡುತ್ತಿದೆ. ಅತ್ಯುತ್ತಮ ಗಾಯನ ಹಾಗೂ ಡ್ಯಾನ್ಸ್ ಮೂಲಕ ಮೂಲ ಹಾಡಿಗೆ ಯಾವುದೇ ಚ್ಯುತಿ ಬರದ ರೀತಿ ಹಾಡಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪತ್ನಿ ಗಾಯಕಿ ಅನ್ನೋದು ಈ ಮೂಲಕ ಎಲ್ಲರಿಗೂ ತಿಳಿದಿದೆ. ಮನಿಕ ಮಗೆ ಹಿತೆ ಹಿಂದಿ ವರ್ಶನ ಸಂಪೂರ್ಣ ಹಾಡನ್ನು ಬಿಡುಗಡೆ ಮಾಡುವಂತೆ ಹಲವುರು ಮನವಿ ಮಾಡಿದ್ದಾರೆ.  ಅಮೃತಾ ಫಡ್ನಿವಿಸ್ ಮತ್ತಷ್ಟು ಆಲ್ಬಮ್ ಹಾಡುಗಳನ್ನು ಹಾಡಬೇಕು ಎಂದು ಹಲವು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಏಕತೆಗಾಗಿ ಧ್ವನಿ ಎತ್ತಿದವರ ವಿರುದ್ಧ ತನಿಖೆ; ಮಹಾರಾಷ್ಟ್ರ ಕ್ರಮ ಖಂಡಿಸಿದ ಬಿಜೆಪಿ!

ಈ ಹಾಡಿನ ಮೂಲ ಗಾಯಕಿ ಶ್ರೀಲಂಕಾದ(Srilanka) ಯೋಹಾನಿ ದಿಲೋಕ ಡಿಸಿಲ್ವ(Yohani Diloka De Silva). ಈ ಹಾಡು ಯೂಟ್ಯೂಬ್‌ನಲ್ಲಿ 18 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. ಈ ಮೂಲಕ ಹೊಸ ಇತಿಹಾಸ ರಚಿಸಿದೆ. ಈ ಹಾಡಿನ ಮೂಲಕ ಯೋಹಾನಿ ವಿಶ್ವದಲ್ಲೇ ಜನಪ್ರಿಯರಾಗಿದ್ದಾರೆ. ಭಾರತದಲ್ಲಿ ಯೋಹಾನಿ ಬಾಲಿವುಡ್ ಸಿಂಗರ್‌ಗಿಂತ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇತ್ತೀಚಗೆ ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ನಡೆಸಿಕೊಡುವ ಬಿಗ್‌ಬಾಸ್(Big boss) ರಿಯಾಲಿಟಿ ಶೋ ಯೋಹಾನಿಯನ್ನು ಆಹ್ವಾನಿಸಿತ್ತು.

ಇದೇ ಹಾಡನ್ನು ಅಮೃತ ಫಡ್ನವಿಸ್ ಹಿಂದಿಯಲ್ಲಿ ಹಾಡಿದ್ದಾರೆ. 42 ವರ್ಷದ ಅಮೃತಾ ಫಡ್ನವಿಸ್ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಆ್ಯಕ್ಸಿಸ್ ಬ್ಯಾಂಕ್ ಉಪಾಧ್ಯಕ್ಷೆಯಾಗಿರುವ ಅಮೃತಾ, ಗಾಯಕಿಯಾಗಿಯು ಮಿಂಚಿದ್ದಾರೆ. ಕಳೆದ 17 ವರ್ಷಗಳಿಂದ ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಪತಿ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಅಮೃತಾ ಆ್ಯಕ್ಸಿಸ್ ಬ್ಯಾಂಕ್ ಉದ್ಯೋಗಿಯಾಗಿ ಮುಂದುವರಿದಿದ್ದರು.  ಶಾಲಾ ಕಾಲೇಜು ದಿನದಲ್ಲಿ ರಾಜ್ಯ ಮಟ್ಟದ ಅಂಡರ್ 16 ಟೆನಿಸ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. 

ಗಾಯಕಿಯಾಗಿಯೂ ಗುರುತಿಸಿಕೊಂಡಿರುವ ಅಮೃತ ಫಡ್ನವಿಸ್ ಈಗಾಗಲೇ  ಹಲವು ಸಿನಿಮಾಗಳಿಗೂ ಹಾಡುಗಳನ್ನು ಹಾಡಿದ್ದಾರೆ. ಹಲವು ಆಲ್ಬಮ್ ಹೊರತಂದಿರುವ ಅಮೃತ ಫಡ್ನವಿಸ್, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. 
 

click me!