
ಈಗಷ್ಟೆ ಬಣ್ಣದ ಲೋಕದಲ್ಲಿ ಹೆಸರು ಮಾಡುತ್ತಿದ್ದ ನಟಿ ಆರ್ಯ ಬ್ಯಾನರ್ಜಿ ಡಿಸೆಂಬರ್ 12ರಂದು ಕೋಲ್ಕತಾ ನಿವಾಸದಲ್ಲಿ ಅನುಮಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದರು. ನಟಿ ಆರ್ಯ ಸಾವಿನ ರಹಸ್ಯ ಬೆನ್ನಟ್ಟಿದ ಪೊಲೀಸರು ಸಾವಿಗೆ ಕಾರಣ ಪತ್ತೆ ಹಚ್ಚುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಚಾರದ ಬಗ್ಗೆ ಕ್ರೈಂ ಜಂಟಿ ಅಧಿಕಾರಿ ಮುರಳೀಧರ್ ಶರ್ಮಾ ಮಾಹಿತಿ ನೀಡಿದ್ದಾರೆ.
ಖಾಲಿ ಮನೆಯಲ್ಲಿ ಒಂಟಿ ಜೀವನ: ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಬಾಲಿವುಡ್ ನಟಿ
ಕೋಲ್ಕತಾ ನಿವಾಸದಲ್ಲಿ ತಮ್ಮ ಸಾಕು ನಾಯಿಯ ಜೊತೆ ವಾಸವಿದ್ದರು ಆರ್ಯ. ಬೆಳಗ್ಗೆ ಕೆಲಸದವರು ಬಂದಾಗ ಬಾಗಿಲು ತೆಗೆಯದ ಕಾರಣ ಅಪಾರ್ಟ್‌ಮೆಂಟ್ ಮಾಲೀಕರಿಗೆ ತಿಳಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ರಕ್ತದ ಮಡುವಿನಲ್ಲಿ ಶವ ಕಂಡು ಶಾಕ್ ಆಗಿದ್ದಾರೆ. ತಕ್ಷಣವೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಪೊಲೀಸ್ ಅಧಿಕಾರಿ ಮುರಳೀಧರ್ ಶರ್ಮಾ ನೀಡಿರುವ ಮಾಹಿತಿ ಪ್ರಕಾರ ಆರ್ಯ liver cirrhosisನಿಂದ ಬಳಲುತ್ತಿದ್ದರು. ವಿಪರೀತ ಮದ್ಯಪಾನ ಸೇವಿಸಿರುವ ಕಾರಣ ಮೂಗು ಹಾಗೂ ಬಾಯಿನಿಂದ ರಕ್ತ ಹೊರ ಬಂದಿದ್ದು, ಸಾವು ಸಂಭವಿಸಿದೆ ಎಂದಿದ್ದಾರೆ.
ಇತ್ತೀಚೆಗಷ್ಟೇ ನಡೆದಿತ್ತು ನಿಶ್ಚಿತಾರ್ಥ: ನಟಿ ಚೈತ್ರಾ ಆತ್ಮಹತ್ಯೆ ಬಗ್ಗೆ ಭಾವೀ ವರ ಹೇಳಿದ್ದಿಷ್ಟು
ಅರ್ಯ ಸದಾ ಒಬ್ಬಂಟಿಯಾಗಿರಲು ಇಷ್ಟ ಪಡುತ್ತಿದ್ದರು. ಅಕ್ಕಪಕ್ಕದ ಮನೆಯವರ ಜೊತೆಗೂ ಮಾತನಾಡುತ್ತಿರಲಿಲ್ಲ. ಅಲ್ಲದೇ ಸದಾ ಊಟವನ್ನು ಆನ್‌ಲೈನ್‌ನಲ್ಲಿಯೇ ತರಿಸಿಕೊಳ್ಳುತ್ತಿದ್ದರು, ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಮಾಹಿತಿ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.