'ನೀವೇ ದುಡಿದು, ನೀವೇ ತಿನ್ನಿ' ಸೋನು ಸೂದ್ ಮತ್ತೊಂದು ಮಾದರಿ ಕಾರ್ಯ

By Suvarna NewsFirst Published Dec 13, 2020, 8:52 PM IST
Highlights

ಕೊರೋನಾ ಕಾಲದಲ್ಲಿ ನಿರಂತರವಾಗಿ ಬಡವರ ಒಳಿತಿಗೆ ಶ್ರಮಿಸುತ್ತಿರುವ ಸೋನು ಸೂದ್/  ಲಾಕ್‌ಡೌನ್‌ನಿಂದಾಗಿ ಕೆಲಸದಿಂದ ಕಳೆದುಕೊಂಡವರಿಗೆ ಇ-ರಿಕ್ಷಾ/ ಪರ್ಯಾಯ ಉದ್ಯೋಗದ ಆಲೋಚನೆ ಮಾಡಿ

ಮುಂಬೈ ( ಡಿ. 13)  ಕೊರೋನಾ ಸಂಕಷ್ಟದ ಸಮಯದಲ್ಲಿ  ಕಾರ್ಮಿಕರಿಗೆ, ಬಡವರಿಗೆ ನಿರಂತರ ನೆರವು ನೀಡಿಕೊಂಡು ಬಂದಿರುವ ನಟ ಸೋನು ಸೂದ್  ಮತ್ತೊಂದು ದೊಡ್ಡ ಕೆಲಸಕ್ಕೆ ಮುಂದಾಗಿದ್ದಾರೆ.  ಲಾಕ್‌ಡೌನ್‌ನಿಂದಾಗಿ ಕೆಲಸದಿಂದ ಕಳೆದುಕೊಂಡವರಿಗೆ ಇ-ರಿಕ್ಷಾಗಳನ್ನು ನೀಡುವ ಮೂಲಕ ಮತ್ತೊಮ್ಮೆ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಈ ಬಗ್ಗೆ ವಿವರಣೆ ನೀಡಿದ್ದು ಕಾರ್ಯಕ್ರಮವನ್ನು  'ಖುದ್ ಕಾಮಾವ್, ಘರ್ ಚಲಾವ್'  ಎಂದು ಕರೆದಿದ್ದಾರೆ. ಜನರಿಂದ ದೊರೆಯುತ್ತಿರುವ ಪ್ರೀತಿಯೇ ಇಂಥ ಕೆಲಸ ಮಾಡಲು ಪ್ರೇರಣೆ ಎಂದು  ಹೇಳಿದ್ದಾರೆ.

ಅಮಿತಾಬ್ ಬಚ್ಚನ್ ರನ್ನು ಹಿಂದಿಕ್ಕಿದ ಸೋನು ಸೂದ್

ಜನರನ್ನು ಸಂಕಷ್ಟದಿಂದ ಪಾರು ಮಾಡುವುದು ಒಂದು ಕಡೆ ಆದರೆ ಅವರಿಗೆ ಪರ್ಯಾಯ ಉದ್ಯೋಗ ಸೃಷ್ಟಿ ಮಾಡಿಸುವುದು ಮುಖ್ಯವಾಗುತ್ತದೆ.   ಈ ಬಗ್ಗೆ ಸದಾ ಯೋಚನೆ ಮಾಡುತ್ತಿರುತ್ತೇನೆ ಎಂದಿದ್ದಾರೆ. 

47 ವರ್ಷದ ನಟ ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿದ್ದ ರೋಜ್ ಗಾರ್ ಮೊಬೈಲ್ ಅಪ್ಲಿಕೇಶನ್  ಸಾವಿರಾರು ಜನರಿಗೆ ನೆರವು  ನೀಡಿತ್ತು. 50,000 ಜನರಿಗೆ ಉದ್ಯೋಗ ಅವಕಾಶ ನಿರ್ಮಾಣ ಮಾಡಿತ್ತು.

ಅಗತ್ಯವಿರುವವರಿಗೆ ಸಹಾಯ ಮಾಡಲು 10 ಕೋಟಿ ರೂ.ಗಳನ್ನು  ಸಂಗರಹಕ್ಕಾಗಿ  ಮುಂಬೈನಲ್ಲಿ ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟಿದ್ದರು. ಮೇ ತಿಂಗಳಲ್ಲಿ, ದೇಶಾದ್ಯಂತ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ, ದೊಡ್ಡ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಿಕೊಟ್ಟಿದ್ದರು.

click me!