ಸಿಂಗಿಂಗ್‌ಗೆ ಅರಿಜಿತ್ ಸಿಂಗ್ 'ಗುಡ್‌ಬೈ' ಸೀಕ್ರೆಟ್; 'ಹೋದ್ಯಾ ಅಂದ್ರೆ ಇಲ್ಲ ಇನ್ನೊಂದು ಕಡೆ ಬಂದೆ' ಎಂದ ಗಾಯಕ!

Published : Jan 28, 2026, 08:59 PM IST
arijith singh

ಸಾರಾಂಶ

ಇತ್ತೀಚೆಗಷ್ಟೇ ಬಾಲಿವುಡ್‌ನ ಮಧುರ ಧ್ವನಿಯ ಮಾಂತ್ರಿಕ ಅರಿಜಿತ್ ಸಿಂಗ್ ಪ್ಲೇಬ್ಯಾಕ್ ಸಿಂಗಿಂಗ್‌ಗೆ ಗುಡ್‌ಬೈ ಹೇಳುವ ಮೂಲಕ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದರು. ಹೀಗೆ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬ ಪ್ರಶ್ನೆ ಕಾಡುತ್ತಿತ್ತು. ಈಗ ಆ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.

ಒಂದು ಬಾಗಿಲಿಂದ ಹೋಗಿ ಮತ್ತೊಂದು ಬಾಗಿಲಿಂದ ಬಂದ ಅರಿಜಿತ್ ಸಿಂಗ್!

ಇತ್ತೀಚೆಗಷ್ಟೇ ಬಾಲಿವುಡ್‌ನ ಮಧುರ ಧ್ವನಿಯ ಮಾಂತ್ರಿಕ ಅರಿಜಿತ್ ಸಿಂಗ್ (Arijit Singh) ಪ್ಲೇಬ್ಯಾಕ್ ಸಿಂಗಿಂಗ್‌ಗೆ (ಸಿನಿಮಾ ಗಾಯನ) ಗುಡ್‌ಬೈ ಹೇಳುವ ಮೂಲಕ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದರು. ಸಾವಿರಾರು ಹಿಟ್ ಹಾಡುಗಳನ್ನು ನೀಡಿದ ಗಾಯಕ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಹೀಗೆ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಈಗ ಆ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಅರಿಜಿತ್ ಕೇವಲ ವಿಶ್ರಾಂತಿಗಾಗಿ ಈ ನಿರ್ಧಾರ ತೆಗೆದುಕೊಂಡಿಲ್ಲ, ಬದಲಾಗಿ ತಮ್ಮ ದಶಕಗಳ ಕನಸೊಂದನ್ನು ನನಸು ಮಾಡಿಕೊಳ್ಳಲು ಕ್ಯಾಮರಾ ಹಿಂದೆ ನಿಲ್ಲಲು ಸಜ್ಜಾಗುತ್ತಿದ್ದಾರೆ!

ನಿರ್ದೇಶಕನ ಕ್ಯಾಪ್ ತೊಡಲಿರುವ ಅರಿಜಿತ್:

ತಾಜಾ ವರದಿಗಳ ಪ್ರಕಾರ, ಅರಿಜಿತ್ ಸಿಂಗ್ ಈಗ 'ನಿರ್ದೇಶಕ'ನಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಹೌದು, ಗಾಯಕನಾಗಿ ಜಗತ್ತನ್ನೇ ಆಳಿದ ಅರಿಜಿತ್, ಈಗ ಚಿತ್ರವೊಂದನ್ನು ನಿರ್ದೇಶಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಿನಿಮಾದ ಕಥೆ ಮತ್ತು ನಿರ್ಮಾಣದ ಕೆಲಸಗಳಿಗಾಗಿ ಅವರಿಗೆ ಹೆಚ್ಚಿನ ಸಮಯದ ಅವಶ್ಯಕತೆ ಇದೆ. ಈ ಕಾರಣಕ್ಕಾಗಿಯೇ ಅವರು ಹೊಸ ಪ್ಲೇಬ್ಯಾಕ್ ಸಿಂಗಿಂಗ್ ಅಸೈನ್‌ಮೆಂಟ್‌ಗಳನ್ನು ಒಪ್ಪಿಕೊಳ್ಳುವುದನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ. ಅರಿಜಿತ್ ಸಿಂಗ್ ಕಳೆದ ಹಲವು ವರ್ಷಗಳಿಂದ ಚಿತ್ರ ನಿರ್ದೇಶನದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು, ಆದರೆ ಗಾಯಕನಾಗಿ ಸಾಲು ಸಾಲು ಆಫರ್‌ಗಳಿದ್ದ ಕಾರಣ ಅವರಿಗೆ ಸಮಯ ಸಿಗುತ್ತಿರಲಿಲ್ಲ.

ನವಾಜುದ್ದೀನ್ ಸಿದ್ದಿಕ್ಕಿ ಪುತ್ರಿಯ ಪದಾರ್ಪಣೆ?

ಅರಿಜಿತ್ ನಿರ್ದೇಶಿಸಲಿರುವ ಚೊಚ್ಚಲ ಸಿನಿಮಾದ ಬಗ್ಗೆ ಕೇಳಿಬರುತ್ತಿರುವ ಮತ್ತೊಂದು ರೋಚಕ ಸುದ್ದಿ ಎಂದರೆ, ಈ ಚಿತ್ರದ ಮೂಲಕ ಬಾಲಿವುಡ್‌ನ ಶ್ರೇಷ್ಠ ನಟ ನವಾಜುದ್ದೀನ್ ಸಿದ್ದಿಕ್ಕಿ (Nawazuddin Siddiqui) ಅವರ ಪುತ್ರಿ ಶೋರಾ ಸಿದ್ದಿಕ್ಕಿ (Shora Siddiqui) ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರಂತೆ. ಶೋರಾ ಸಿದ್ದಿಕ್ಕಿ ಅವರ ನಟನಾ ಕೌಶಲದ ಬಗ್ಗೆ ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಗುಸುಗುಸು ಆರಂಭವಾಗಿದೆ. ಕಳೆದ ವರ್ಷ ನವಾಜುದ್ದೀನ್ ಸಿದ್ದಿಕ್ಕಿ ಅವರು ತಮ್ಮ ಮಗಳು ನಟನೆಯ ದೃಶ್ಯವೊಂದನ್ನು ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋ ನೋಡಿದ ನೆಟ್ಟಿಗರು, ಶೋರಾ ಅವರಲ್ಲಿ ತಂದೆಯಂತೆಯೇ ಅದ್ಭುತ ನಟನಾ ಪ್ರತಿಭೆ ಇದೆ ಎಂದು ಹೊಗಳಿದ್ದರು. ಈಗ ಅರಿಜಿತ್ ಸಿಂಗ್ ಅವರಂತಹ "ಕ್ರಿಯೇಟಿವ್ ಜೀನಿಯಸ್" ಕೈಯಲ್ಲಿ ಶೋರಾ ಲಾಂಚ್ ಆಗುತ್ತಿರುವುದು ಕುತೂಹಲ ಮೂಡಿಸಿದೆ.

ಒಂದು ವರ್ಷದ ಸುದೀರ್ಘ ವಿರಾಮ:

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಅರಿಜಿತ್ ಸಿಂಗ್ ಈ ಸಿನಿಮಾದ ಕೆಲಸಗಳಿಗಾಗಿ ಸುಮಾರು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಗಾಯನದಿಂದ ದೂರವಿರಲಿದ್ದಾರೆ. "ಅವರು ಈ ಪ್ರಾಜೆಕ್ಟ್ ಬಗ್ಗೆ ತುಂಬಾ ಪ್ಯಾಶನೇಟ್ ಆಗಿದ್ದಾರೆ. ಇದು ಅವರಿಗೆ ಕೇವಲ ಒಂದು ಬ್ರೇಕ್ ಅಲ್ಲ, ಬದಲಾಗಿ ಅವರ ಕನಸಿನ ಯೋಜನೆ. ಸಿನಿಮಾದ ಪ್ರಿ-ಪ್ರೊಡಕ್ಷನ್ ಮತ್ತು ಶೂಟಿಂಗ್ ಕೆಲಸಗಳಿಗೆ ಅವರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ" ಎಂದು ಆಪ್ತ ಮೂಲಗಳು ತಿಳಿಸಿವೆ.

ಅರಿಜಿತ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, "ಇಷ್ಟು ವರ್ಷಗಳ ಕಾಲ ಒಬ್ಬ ಕೇಳುಗನಾಗಿ ನನಗೆ ಅಪಾರ ಪ್ರೀತಿಯನ್ನು ನೀಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಇನ್ನು ಮುಂದೆ ನಾನು ಯಾವುದೇ ಹೊಸ ಪ್ಲೇಬ್ಯಾಕ್ ಸಿಂಗಿಂಗ್ ಕೆಲಸಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಇದು ಒಂದು ಅದ್ಭುತ ಪಯಣವಾಗಿತ್ತು" ಎಂದು ಬರೆದುಕೊಂಡಿದ್ದರು. ಈಗ ಅವರು ನಿರ್ದೇಶಕನಾಗಿ ಮರಳಿ ಬರುತ್ತಿರುವುದು ಅಭಿಮಾನಿಗಳಿಗೆ ಒಂದು ಕಡೆ ಬೇಸರ ತಂದಿದ್ದರೂ, ಮತ್ತೊಂದು ಕಡೆ ಅವರ ಹೊಸ ಪ್ರತಿಭೆಯನ್ನು ನೋಡಲು ಕಾತರರಾಗಿದ್ದಾರೆ.

ಒಟ್ಟಾರೆಯಾಗಿ, ಸಂಗೀತ ಲೋಕದ ಧ್ರುವತಾರೆಯಾಗಿದ್ದ ಅರಿಜಿತ್ ಸಿಂಗ್, ಈಗ ಬೆಳ್ಳಿಪರದೆಯ ಮೇಲೆ ಯಾವ ರೀತಿ ಕಮಾಲ್ ಮಾಡಲಿದ್ದಾರೆ ಮತ್ತು ನವಾಜುದ್ದೀನ್ ಪುತ್ರಿಯ ನಟನೆ ಹೇಗೆ ಮೂಡಿಬರಲಿದೆ ಎಂಬುದು ಸದ್ಯದ ಬಿಗ್ ಅಪ್‌ಡೇಟ್ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚಿರಂಜೀವಿ ಸಿನಿಮಾಗಳಲ್ಲೇ ಅತೀ ಹೆಚ್ಚು ಗಳಿಕೆ, 'ಮನ ಶಂಕರ ವರಪ್ರಸಾದ್ ಗಾರು' ಮ್ಯಾಜಿಕ್‌ಗೆ ಟಾಲಿವುಡ್ ಶಾಕ್!
ಈ ಚೆಂದದ ನಟನ ಕಥೆ ಮುಗಿಯಿತಾ? ಮೆಟ್ರೋ ನಿಲ್ದಾಣದಲ್ಲಿ ನಿಂತರೂ ಕಣ್ಣೆತ್ತಿಯೂ ನೋಡಲಿಲ್ಲ ಜನರು!