
ಚಿರಂಜೀವಿ ಸಿನಿಮಾದ ಹೊಸ ದಾಖಲೆ!
ಹೊಸ ವರ್ಷಾರಂಭದಲ್ಲೇ ಮೆಗಾ ಸ್ಟಾರ್ ಚಿರಂಜೀವಿ (Mega Star Chiranjeevi) ಅವರು ಇತಿಹಾಸ ಬರೆದಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಕಂಡಿದ್ದ 'ಮನ ಶಂಕರ ವರಪ್ರಸಾದ್ ಗಾರು' (Mana Shankara Varaprasad Garu) ಸಿನಿಮಾವು 15 ದಿನಗಳಲ್ಲೇ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿದೆ. ಚಿರಂಜೀವಿ ಸಿನಿಮಾ ಜೀವನದಲ್ಲಿ ಈ ಚಿತ್ರ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ.
ಅನಿಲ್ ರವಿಪುಡಿ ನಿರ್ದೇಶನದ ಈ ಸಿನಿಮಾವನ್ನು ಚಿರಂಜೀವಿ ಅಭಿಮಾನಿಗಳು ತುಂಬಾ ಇಷ್ಗಟಪಟ್ಟು ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಈ ಸಿನಿಮಾ 15 ದಿನಗಳಲ್ಲಿ 358 ಕೋಟಿ ರೂ. ಗಳಿಕೆ ಮಾಡಿದೆ. ಚಿರಂಜೀವಿ, ನಯನತಾರಾ ನಟನೆಯ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾವು ತೆಲುಗಿನಲ್ಲಿ ಮಾತ್ರ ತೆರೆಕಂಡಿದೆ. ಆದರೆ, ಮೊದಲ 15 ದಿನಗಳಿಗೆ 358 ಕೋಟಿ ರೂ. ಗಳಿಕೆ ಮಾಡಿ, ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಕರ್ನಾಟಕದಿಂದಲೇ ಈ ಸಿನಿಮಾಕ್ಕೆ 20+ ಕೋಟಿ ರೂ. ಹಣ ಗಳಿಕೆ ಆಗಿರುವುದು ಅಚ್ಚರಿ ಮೂಡಿಸಿದೆ. ಇದು ಚಿರಂಜೀವಿ ಅವರ ಕ್ರೇಜ್ ಟಾಲಿವುಡ್ ಮೀರಿಯೂ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ. ಇನ್ನು, ವರದಿಗಳ ಪ್ರಕಾರ, 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದ್ದು, ಚಿರಂಜೀವಿ ಅವರ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ.
ಚಿರಂಜೀವಿ ಟಾಪ್ 5 ಸಿನಿಮಾಗಳು ಯಾವವು?
ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಅತ್ಯಧಿಕ ಗಳಿಕೆ ಮಾಡಿದ ಟಾಪ್ 5 ಸಿನಿಮಾಗಳ ಪಟ್ಟಿ ಹೀಗಿದೆ:
'ಮನ ಶಂಕರ ವರ ಪ್ರಸಾದ್ ಗಾರು' (15 ದಿನಗಳಲ್ಲಿಯೇ) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ಸೈರಾ ನರಸಿಂಹ ರೆಡ್ಡಿ, ವಾಲೇರು ವೀರಯ್ಯ ಸಿನಿಮಾಗಳು ಪಡೆದಿವೆ. ಇನ್ನು, 'ಮನ ಶಂಕರ ವರ ಪ್ರಸಾದ್ ಗಾರು' ಸಿನಿಮಾದ ನಿರ್ಮಾಣದ ಖರ್ಚು ಬರೀ 28 ಕೋಟಿ ರೂ. ಗಳಾಗಿದ್ದು, ಸಂಭಾವನೆ, ಇನ್ನಿತರ ಖರ್ಚುಗಳು ಸೇರಿದರೆ, ಒಟ್ಟು ಮೊತ್ತ 150 ಕೋಟಿ ರೂ. ದಾಟುತ್ತದೆ. ಚಿರಂಜೀವಿ, ವಿಕ್ಟರಿ ವೆಂಕಟೇಶ್, ನಯನತಾರ ಅವರಂತಹ ಸ್ಟಾರ್ ಕಲಾವಿದರು ಇದ್ದಾಗ್ಯೂ ಬರೀ 28 ಕೋಟಿ ರೂ. ವೆಚ್ಚದಲ್ಲಿ ನಿರ್ದೇಶಕ ಅನಿಲ್ ರವಿಪುಡಿ ಸಿನಿಮಾ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಚಿರಂಜೀವಿ, ನಯನತಾರ ಜೊತೆಗೆ ವೆಂಕಿ ಗೌಡ ಎಂಬ ಅತಿಥಿ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಕ್ಯಾಥರಿನ್ ಥೆಸಾ, ಸುದೇವ್ ನಾಯರ್, ಸಚಿನ್ ಖೇಡ್ಕರ್, ಜರೀನಾ ವಹಾಬ್, ಶರತ್ ಸಕ್ಷೇನಾ, ರಘು ಬಾಬು, ಹರ್ಷ ವರ್ಧನ್, ಅಭಿನವ್ ಗೋಮಠಂ, ಹರ್ಷ ಚೆಮುಡು, ಶ್ರೀನಿವಾಸ್ ರೆಡ್ಡಿ ಮುಂತಾದವರು ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.